• Home
 • »
 • News
 • »
 • trend
 • »
 • Video Viral: ಹುಲಿಯೊಂದಿಗೆ ವಾಕಿಂಗ್​ ಹೊರಟ ಮಾಲೀಕ; ಆಮೇಲೆ ಏನಾಯ್ತು ಗೊತ್ತಾ?

Video Viral: ಹುಲಿಯೊಂದಿಗೆ ವಾಕಿಂಗ್​ ಹೊರಟ ಮಾಲೀಕ; ಆಮೇಲೆ ಏನಾಯ್ತು ಗೊತ್ತಾ?

ಹುಲಿಯಂತೆ ಕಾಣುವ ಶ್ವಾನ

ಹುಲಿಯಂತೆ ಕಾಣುವ ಶ್ವಾನ

ಇಲ್ಲೊಬ್ಬ ವ್ಯಕ್ತಿ ಹುಲಿಯನ್ನು ಕರೆದುಕೊಂಡು ವಾಕಿಂಗ್​ ಹೋಗುತ್ತಿದ್ದಾನೆ. ಹಾಗಾದರೆ ಇದನ್ನು ನೋಡಿದ ಜನರೆಷ್ಟು ಗಾಬರಿಯಾಗಬೇಕಿಲ್ಲ!.

 • Share this:

  ಹುಲಿಯೊಂದು ಕಾಡಿನಿಂದ ನಾಡಿಗೆ ಬಂದಿದೆ ಎಂಬ ಸುದ್ದಿ ತಿಳಿದರೆ ಸಾಕು ಜನ ಗಾಯರಿಯಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹುಲಿಯನ್ನು ಕರೆದುಕೊಂಡು ವಾಕಿಂಗ್​ ಹೋಗುತ್ತಿದ್ದಾನೆ. ಹಾಗಾದರೆ ಇದನ್ನು ನೋಡಿದ ಜನರೆಷ್ಟು ಗಾಬರಿಯಾಗಬೇಕಿಲ್ಲ!. ನೀವಂದು ಕೊಂಡಹಾಗೆ ಜನ ಗಾಬರಿಯಾಗಿಲ್ಲ. ಬದಲಾಗಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಕಾರಣ ಅದು ಹುಲಿಯಲ್ಲ.. ಹುಲಿಯಂತಿರುವ ಶ್ವಾನ!


  ಹೌದು. ಇಂತಹದೊಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ನೋಡಲು ದೂರದಿಂದ ಹುಲಿಯಂತೆ ಕಂಡರು ಹತ್ತಿರ ಬಂದ ನಂತರ ಅದು ಶ್ವಾನವೆಂದು ಜನರಿಗೆ ಅರಿವಾಗಿದೆ. ಮಾಲೀಕ ಶ್ವಾನದ ಅವತಾರವನ್ನು ಬದಲಿಸಿ ಹುಲಿಯ ಹಾಗೆಯೇ ಕಾಣುವಂತೆ ಮಾಡಿದ್ದಾನೆ.
  ಮಾಲೀಕ ಶ್ವಾನಕ್ಕೆ ಕಿತ್ತಳೆ ಮತ್ತು ಬಿಳಿಯ ಬಣ್ಣವನ್ನು ಬಳಿದು ಹುಲಿಯಂತೆ ಕಾಣುವ ಹಾಗೆ ಮಾಡಿದ್ದಾನೆ. ಚೀನಾದ ಬೀದಿಯಲ್ಲಿ ಈ ಹುಲಿಯ ಬಣ್ಣವನ್ನು ಹೊಂದಿರುವ ಶ್ವಾನವನ್ನು ವಾಕಿಂಗ್​ ಕರೆದುಕೊಂಡು ಹೋಗುವಾಗ ಅನೇಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

  Published by:Harshith AS
  First published: