• Home
 • »
 • News
 • »
 • trend
 • »
 • ಹ್ಯೂಸ್ಟನ್‍ನಲ್ಲಿ ಕಾಣೆಯಾಗಿರುವ ಹುಲಿ ಪತ್ತೆಗೆ 3.5 ಲಕ್ಷ ಬಹುಮಾನ ಘೋಷಿಸಿರುವ “ಟೈಗರ್ ಕಿಂಗ್” ಖ್ಯಾತಿಯ ಕ್ಯಾರೊಲ್ ಬಾಸ್ಕಿನ್

ಹ್ಯೂಸ್ಟನ್‍ನಲ್ಲಿ ಕಾಣೆಯಾಗಿರುವ ಹುಲಿ ಪತ್ತೆಗೆ 3.5 ಲಕ್ಷ ಬಹುಮಾನ ಘೋಷಿಸಿರುವ “ಟೈಗರ್ ಕಿಂಗ್” ಖ್ಯಾತಿಯ ಕ್ಯಾರೊಲ್ ಬಾಸ್ಕಿನ್

carolebaskincat / Instagram | representative image of tiger (Reuters).

carolebaskincat / Instagram | representative image of tiger (Reuters).

ಟೈಗರ್ ಕಿಂಗ್ ಸರಣಿಯ ಪ್ರಮುಖ ಪಾತ್ರಧಾರಿ, ಬಾಸ್ಕಿನ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಹೇಳಿರುವ ಪ್ರಕಾರ, ಸದ್ಯ ಹುಲಿ ಯಾರ ಬಳಿ ಇರುವುದೋ ಅವರಿಗೆ ಈ ಬಹುಮಾನ ಸೇರುತ್ತದೆ.

 • Share this:

  ಬಿಗ್ ಕ್ಯಾಟ್ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಓ ಹಾಗೂ ನೆಟ್‍ಫ್ಲಿಕ್ಸ್‌ನ ಟೈಗರ್ ಕಿಂಗ್ ಸರಣಿಯ ಸ್ಟಾರ್, ಕ್ಯಾರೊಲ್ ಬಾಸ್ಕಿನ್, ಕಳೆದ ವಾರಾಂತ್ಯದಲ್ಲಿ ಕಾಣೆಯಾಗಿದ್ದ ಬಂಗಾಳದ ಹುಲಿಯನ್ನು ಹುಡುಕಿ ಕೊಟ್ಟವರಿಗೆ 5000 ಅಮೆರಿಕನ್ ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಹುಲಿ ಕೊನೆಯದಾಗಿ , ಟೆಕ್ಸಾಸ್‍ನ ಪಶ್ಚಿಮ ಹ್ಯೂಸ್ಟನ್‍ನಲ್ಲಿರುವ ಮನೆಯೊಂದರ ಅಂಗಳದಲ್ಲಿ ಸೋಮವಾರ ಬೆಳಗ್ಗೆ ಓಡಾಡುತ್ತಿರುವುದು ಕಂಡುಬಂದಿತ್ತು. ‘ಇಂಡಿಯಾ’ ಎಂದು ಗುರುತಿಸಲಾಗುವ ಈ ಹುಲಿಯನ್ನು, ಸಂಬಂಧಪಟ್ಟ ಅಧಿಕಾರಿಗಳಿಗೆ ತಂದೊಪ್ಪಿಸಿದರೆ, ಬಹುಮಾನ ನೀಡುವುದಾಗಿ ಬಾಸ್ಕಿನ್ ಹೇಳಿದ್ದಾರೆ.


  ಟೈಗರ್ ಕಿಂಗ್ ಸರಣಿಯ ಪ್ರಮುಖ ಪಾತ್ರಧಾರಿ, ಬಾಸ್ಕಿನ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಹೇಳಿರುವ ಪ್ರಕಾರ, ಸದ್ಯ ಹುಲಿ ಯಾರ ಬಳಿ ಇರುವುದೋ ಅವರಿಗೆ ಈ ಬಹುಮಾನ ಸೇರುತ್ತದೆ. ಆದರೆ ಆ ವ್ಯಕ್ತಿಯು, ಗ್ಲೋಬಲ್ ಫೇಡರೇಶನ್ ಆಫ್ ಅನಿಮಲ್ ಸ್ಯಾಂಕ್ಚುರೀಸ್‍ನಿಂದ ಮಾನ್ಯತೆ ಪಡೆದಿರುವ ಅಭಯಾರಣ್ಯಕ್ಕೆ ಹುಲಿಯನ್ನು ಬಿಡುಗಡೆ ಮಾಡಬೇಕು ಎಂದು ಬಾಸ್ಕಿನ್ ಷರತ್ತು ಹಾಕಿದ್ದಾರೆ. ಈ ಹುಲಿಯನ್ನು ಹಿಡಿದು ಕಾನೂನು ಬಾಹಿರ ಕಳ್ಳಸಾಗಾಣೆಯಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸೇರಿ ಕೆಲಸ ಮಾಡುವುದಾಗಿ ಅವರು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.


  ಕಾಣೆಯಾಗಿರುವ ಬಂಗಾಳದ ಹುಲಿ, ಪಶ್ಚಿಮ ಹ್ಯೂಸ್ಟನ್‍ನ ವಸತಿ ಪ್ರದೇಶದಲ್ಲಿ ಭಾನುವಾರ ಅಡ್ಡಾಡುತ್ತಿರುವುದು ಕಂಡು ಬಂದಿತ್ತು. “ಹುಲಿ ಕತ್ತಿನಲ್ಲಿ ಪಟ್ಟಿ ಇತ್ತು” ಮತ್ತು ಅದು ಅಲ್ಲಿನ ನಿವಾಸಿಗಳನ್ನು ದುರುಗುಟ್ಟಿಕೊಂಡು ನೋಡುತ್ತಿತ್ತು. ಆಗ ಕೆಲವು ಆಸುಪಾಸಿನ ಕೆಲವು ಮಂದಿ ತಮ್ಮಲ್ಲಿದ್ದ ಬಂದೂಕುಗಳನ್ನು ಹಿಡಿದುಕೊಂಡು ಬೀದಿಗೆ ಬರಲು ಪ್ರಾರಂಭಿಸಿದರು ಎಂದು ಭಯಭೀತರಾಗಿದ್ದ ಪ್ರತ್ಯಕ್ಷದರ್ಶಿಯೊಬ್ಬರು, ಹ್ಯೂಸ್ಟನ್ ಪೊಲೀಸ್ ಕಮಾಂಡ್ ಸೆಂಟರ್‌ನ ಅಧಿಕಾರಿಗಳಿಗೆ ತಿಳಿಸಿದ್ದಾರೆ.


  ಶಸ್ತ್ರಸಜ್ಜಿತ ಅಧಿಕಾರಿಯೊಬ್ಬರು ಹುಲಿಯೊಂದಿಗೆ ಮುಖಾಮುಖಿಯಾಗಿರುವ ವಿಡಿಯೋವೊಂದನ್ನು ಅಲ್ಲಿನ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಹುಲಿ ಮನೆಯೊಂದರ ಮುಂಭಾಗದ ಹುಲ್ಲುಹಾಸಿನ ಮೇಲೆ ಕುಳಿತಿದೆ. ಬಳಿಕ ಆ ಹುಲಿಯನ್ನು ವಿಕ್ಟರ್ ಹೂಗೊ ಕೇವಾಸ್ ಎಂಬ ವ್ಯಕ್ತಿ ತನ್ನ ಎಸ್‍ಯುವಿ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾನೆ. ವಿಕ್ಟರ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿರುವ ಕೊಲೆ ಆರೋಪಿಯಾಗಿದ್ದು, ಹುಲಿಯನ್ನು ಎಲ್ಲಿಗೆ ಕೊಂಡೊಯ್ದಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಸಿಎನ್‍ಎನ್ ವರದಿ ಮಾಡಿದೆ. “ನನಗೆ ಹುಲಿ ಮತ್ತು ಅದರ ಸುತ್ತಮುತ್ತ ಇರುವ ಜನರ ಬಗ್ಗೆ ತುಂಬಾ ಚಿಂತೆಯಾಗಿದೆ” ಎಂದು ಬಾಸ್ಕಿನ್ ಸಿಎನ್‍ಎನ್ ಜೊತೆ ತನ್ನ ಆತಂಕವನ್ನು ಹಂಚಿಕೊಂಡಿದ್ದಾರೆ.


  ಹುಲಿಯ ಕಣ್ಣುಗಳನ್ನು ನೇರವಾಗಿ ದಿಟ್ಟಿಸುತ್ತಾ, ನಿಧಾನವಾಗಿ ಹಿಂದೆ ಸರಿಯುವ ಮೂಲಕ ಸಹಾಯಕ ಆಧಿಕಾರಿ ಸರಿಯಾದ ಕೆಲಸವನ್ನು ಮಾಡಿದ್ದಾರೆ ಎಂದಿರುವ ಬಾಸ್ಕಿನ್, ಹುಲಿಯನ್ನು ಕೊಲ್ಲದೆ ಇರುವುದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.
  ವರದಿಯ ಪ್ರಕಾರ, ಹುಲಿ ಪ್ರಕರಣ ನಡೆದ ನಂತರ, ಕೇವಾಸ್ ಬಂಧನದಿಂದ ತಪ್ಪಿಸಿಕೊಳ್ಳಲೆಂದು 50,000 ಅಮೆರಿಕನ್ ಡಾಲರ್ ಮೊತ್ತದ ಬಾಂಡನ್ನು ಬುಧವಾರ ನೀಡಿದ್ದಾನೆ. ಅದೇ ದಿನ, ಅವನ ಪರ ವಕೀಲ ಮೈಕೆಲ್ ಎಲಿಯೆಟ್ ತನ್ನ ಕಕ್ಷಿದಾರ ಹುಲಿಯ ಮಾಲೀಕರಲ್ಲ, ಮತ್ತು ಅವರು ಅದರ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.


  ಹ್ಯೂಸ್ಟನ್ ಪೋಲಿಸ್ ವಿಭಾಗ ಹುಲಿಯ ಪತ್ತೆ ಕಾರ್ಯವನ್ನು ಮುಂದುವರೆಸಿದ್ದು, “ತನಿಖೆ ಮುಂದುವರೆದಿದೆ” ಎಂದು ತನ್ನ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

  First published: