ನಮಗೆ ಕಾಡಿನಲ್ಲಿರುವ ಪ್ರಾಣಿಗಳ (Wild Animals) ಚಲನ-ವಲನಗಳನ್ನು ಬಲು ಹತ್ತಿರದಿಂದ ನೋಡುವಂತಹ ಆಸೆ, ಕುತೂಹಲ ಇದ್ದೇ ಇರುತ್ತದೆ ಹಾಗೂ ಆ ಆಸೆಯನ್ನು ಈಡೇರಿಸುವ ಒಂದು ಚಟುವಟಿಕೆ ಎಂದರೆ ಸಫಾರಿ (Safari) ಎನ್ನಬಹುದು. ಇನ್ನು ಈ ಸಫಾರಿ ಎನ್ನುವುದು ಎರಡು ಪ್ರಕಾರಗಳಲ್ಲಿ ಆಸ್ವಾದಿಸಬಹುದಾಗಿದ್ದು ಒಂದು ದಟ್ಟ ಕಾಡಿನ ಜಂಗಲ್ (Forest) ಸಫಾರಿ ಆಗಿದ್ದರೆ ಇನ್ನೊಂದು ಮೃಗಾಲಯದಲ್ಲಿ (Zoo) ಏರ್ಪಡಿಸಲಾಗುವ ಸಣ್ಣ ಪ್ರಮಾಣದ ಸಫಾರಿ ಎನ್ನಬಹುದು. ಕಾಡಿಗೆ ಅಥವಾ ಮೃಗಾಲಯಕ್ಕೆ ಹೋದಾಗ ಅಲ್ಲಿ ಸಫಾರಿಗೆ ಅಂತ ಒಂದು ತೆರೆದ ಜೀಪಿನಲ್ಲಿ (Open Jeep) ಅಥವಾ ಒಂದು ಮಿನಿ ಬಸ್ ನಲ್ಲಿ (Mini Bus) ಪ್ರವಾಸಿಗರನ್ನ (Tourist) ಕರೆದುಕೊಂಡು ಹೋಗುವುದನ್ನು ನಾವು ನೋಡಿರುತ್ತೇವೆ.
ಕೆಲವೊಮ್ಮೆ ಆ ಪ್ರಾಣಿಗಳು ಕಾಡಿನಿಂದ ಹೊರಗೆ ಬಯಲು ಪ್ರದೇಶದಲ್ಲಿ ಅಡ್ಡಾಡುತ್ತಿದ್ದರೆ, ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಇಲ್ಲವಾದರೆ ಸಫಾರಿ ಬರೀ ತೆರೆದ ಜೀಪಿನಲ್ಲಿ ಅಥವಾ ಮಿನಿ ಬಸ್ನಲ್ಲಿ ಕುಳಿತುಕೊಂಡು ಕಾಡಿನಲ್ಲಿ ಹಾಗೆ ಒಂದು ರೌಂಡ್ ಹೊಡೆದ ಹಾಗೆ ಆಗುತ್ತದೆ ಅಷ್ಟೇ.
ತುಂಬಾ ಹತ್ತಿರಕ್ಕೆ ಕಾಡು ಪ್ರಾಣಿಗಳು ಬರೋದು ಕಡಿಮೆ
ಅದಕ್ಕೆ ಎಷ್ಟೋ ಬಾರಿ ಪ್ರವಾಸಿಗರು ಅಲ್ಲಿರುವ ಸಫಾರಿ ವಾಹನ ಓಡಿಸುವವರನ್ನು ಯಾವ ಯಾವ ಪ್ರಾಣಿಗಳಿವೆ? ಪ್ರಾಣಿಗಳು ಕಾಣುತ್ತವೆಯೇ? ಪ್ರಾಣಿಗಳನ್ನು ಹತ್ತಿರದಿಂದ ನೋಡಬಹುದೇ? ಅಂತೆಲ್ಲಾ ಪ್ರಶ್ನೆಗಳನ್ನು ಕೇಳುವುದನ್ನು ನಾವು ನೋಡುತ್ತೇವೆ.
ಆದರೆ ಕೆಲವೊಮ್ಮೆ ಪ್ರಾಣಿಗಳು ಸಫಾರಿ ವಾಹನದಿಂದ ತುಂಬಾನೇ ದೂರದಲ್ಲಿ ಕಾಣ ಸಿಗುತ್ತವೆ. ಆದರೆ ಸಫಾರಿ ವಾಹನದ ತುಂಬಾ ಹತ್ತಿರಕ್ಕೆ ಕಾಡು ಪ್ರಾಣಿಗಳು ಬಂದ ಉದಾಹರಣೆ ಬಲು ಕಡಿಮೆ.
ಸಫಾರಿ ವಾಹನದ ತುಂಬಾ ಹತ್ತಿರಕ್ಕೆ ಬಂದ ಹುಲಿ..
ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ ಸಫಾರಿ ವಾಹನದ ತುಂಬಾ ಹತ್ತಿರಕ್ಕೆ ಹುಲಿಯೊಂದು ಕ್ಷಣ ಮಾತ್ರದಲ್ಲಿ ಪೊದೆಯಿಂದ ಹೊರಬಂದಿದೆ.
ಸಫಾರಿ ವಾಹನದ ಹತ್ತಿರಕ್ಕೆ ಹುಲಿಯೊಂದು ಅಪಾಯಕಾರಿಯಾಗಿ ಸಮೀಪಿಸುತ್ತಿರುವ ವೀಡಿಯೋ ಪ್ರವಾಸಿಗರ ಬೇಜವಾಬ್ದಾರಿ ವರ್ತನೆಯ ಬಗ್ಗೆ ಮಾತಾಡುವಂತೆ ಮಾಡಿದೆ ನೋಡಿ. ಐಎಫ್ಎಸ್ ಅಧಿಕಾರಿ ಸುರೇಂದರ್ ಮೆಹ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಹುಲಿ ಕಾಡಿಗೆ ಹಿಂದಿರುಗುವ ಮೊದಲು ವಾಹನದ ಬಳಿಗೆ ಬಂದಿರುವುದನ್ನು ತೋರಿಸುತ್ತದೆ.
"ಕೆಲವೊಮ್ಮೆ, ಹುಲಿ ವೀಕ್ಷಣೆಗಾಗಿ ನಮ್ಮ ಅತಿಯಾದ ಉತ್ಸುಕತೆಯು ವನ್ಯಜೀವಿಗಳ ಜೀವನದಲ್ಲಿನ ಅತಿಕ್ರಮಣವಲ್ಲದೆ ಬೇರೇನೂ ಅಲ್ಲ" ಎಂದು ಮೆಹ್ರಾ ಅವರು ತಮ್ಮ ವೀಡಿಯೋಗೆ ಶೀರ್ಷಿಕೆಯೊಂದರಲ್ಲಿ ಬರೆದಿದ್ದಾರೆ ಮತ್ತು ಅದನ್ನು ಪೋಸ್ಟ್ ಮಾಡಿದ್ದಾರೆ.
Sometimes, our ‘too much’ eagerness for ‘Tiger sighting’ is nothing but intrusion in their Life…🐅#Wilderness #Wildlife #nature #RespectWildlife #KnowWildlife #ResponsibleTourism
Video: WA@susantananda3 @ntca_india pic.twitter.com/B8Gjv8UmgF
— Surender Mehra IFS (@surenmehra) November 27, 2022
ಹುಲಿಯ ಹತ್ತಿರಕ್ಕೆ ವಾಹನ ತೆಗೆದುಕೊಂಡು ಹೋಗಲು ಹೇಳಿದ ಪ್ರವಾಸಿಗರು
ಕಾಡಿನ ಬದಿಯಲ್ಲಿ ಸಫಾರಿ ವಾಹನವೊಂದು ನಿಂತಿರುವುದನ್ನು ವಿಡಿಯೋದ ಪ್ರಾರಂಭದಲ್ಲಿ ನೋಡಬಹುದು. ಕೆಲವು ಜನರು ದೂರದಲ್ಲಿ ಪೊದೆಯಲ್ಲಿ ಅಡಗಿ ನಿಂತ ಹುಲಿಯ ಹತ್ತಿರ ಹೋಗುವಂತೆ ಚಾಲಕನನ್ನು ಕೇಳುತ್ತಿದ್ದಾರೆ.
ಆ ಕ್ಷಣದಲ್ಲಿ ನೋಡ ನೋಡುತ್ತಿದ್ದಂತೆಯೇ ಆ ಹುಲಿ ಪೊದೆಯಿಂದ ಘರ್ಜಿಸುತ್ತಾ ಹೊರಕ್ಕೆ ಓಡಿ ಬಂದಿದೆ.
23 ಸಾವಿರಕ್ಕೂ ಅಧಿಕ ವೀಕ್ಷಣೆ
ಹುಲಿ ವಾಹನದ ಹತ್ತಿರಕ್ಕೆ ಬಂದು ಸಫಾರಿಗೆ ಅಂತ ಬಂದವರತ್ತ ಕಣ್ಣು ಹಾಯಿಸುತ್ತದೆ. ಪ್ರವಾಸಿಗರು ತಕ್ಷಣವೇ ಜೋರಾಗಿ ಕಿರುಚಲು ಪ್ರಾರಂಭಿಸುತ್ತಾರೆ ಮತ್ತು ಅಂತಿಮವಾಗಿ ಆ ಹುಲಿ ಕಾಡಿನೊಳಗೆ ಓಡಿ ಹೋಗುತ್ತದೆ.
ಇದನ್ನೂ ಓದಿ: Viral News: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!
ಈ ವಿಡಿಯೋವನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಕ್ಲಿಪ್ 23,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 800 ಕ್ಕೂ ಹೆಚ್ಚು ಲೈಕ್ ಗಳನ್ನು ಸಂಗ್ರಹಿಸಿದೆ ಮತ್ತು ಈ ಪೋಸ್ಟ್ ಅನೇಕ ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಜನರನ್ನು ಮತ್ತಷ್ಟು ಪ್ರೇರೇಪಿಸಿದೆ.
ಪ್ರವಾಸಿಗರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಹೀಗೆ
"ಪ್ರವಾಸಿಗರು ನಿರಂತರವಾಗಿ ಮಾತಾಡುವುದು, ಕಿರುಚುವುದು ತುಂಬಾನೇ ಕೆಟ್ಟದಾಗಿದೆ - ಅವರು ಸುಮ್ಮನಿರುವುದಿಲ್ಲ" ಎಂದು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
"ನಿಜ" ಎಂದು ಮೆಹ್ರಾ ಅವರು ಅದನ್ನು ಒಪ್ಪಿದ್ದಾರೆ. ಇನ್ನೊಬ್ಬರು "ಸರಿಯಾಗಿಯೇ ಹೇಳಿದಿರಿ, ಪ್ರವಾಸೋದ್ಯಮ ಇಲಾಖೆಯು ಇದನ್ನೆಲ್ಲಾ ನಿಯಂತ್ರಿಸಬೇಕು ಮತ್ತು ಸಂದರ್ಶಕರಿಗೆ ಪ್ರಾಣಿಗಳ ಬಗ್ಗೆ ಗೌರವದಿಂದ ಇರುವಂತೆ ಕಟ್ಟುನಿಟ್ಟಾಗಿ ಹೇಳಬೇಕು" ಎಂದು ಹೇಳಿದರು.
ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?
"ಪ್ರವಾಸಿಗರಿಗೂ ಸಹ ಕೆಲವು ನಡವಳಿಕೆಯ ಮಾರ್ಗಸೂಚಿಗಳನ್ನು ಅಳವಡಿಸುವುದು ಮುಖ್ಯ" ಎಂದು ಮೂರನೆಯ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ