• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Nike Brand: 400 ವರ್ಷಗಳ ಹಳೆಯ ಪೇಂಟಿಂಗ್‌ನಲ್ಲಿದೆ ನೈಕ್‌ ಬ್ರ್ಯಾಂಡ್‌ನ ಟಿಕ್ ಮಾರ್ಕ್‌! ವೈರಲ್‌ ಆಯ್ತು ಫೋಟೋ

Nike Brand: 400 ವರ್ಷಗಳ ಹಳೆಯ ಪೇಂಟಿಂಗ್‌ನಲ್ಲಿದೆ ನೈಕ್‌ ಬ್ರ್ಯಾಂಡ್‌ನ ಟಿಕ್ ಮಾರ್ಕ್‌! ವೈರಲ್‌ ಆಯ್ತು ಫೋಟೋ

ವೈರಲ್ ಆದ ಫೋಟೋ

ವೈರಲ್ ಆದ ಫೋಟೋ

ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ನೈಕ್​ ಬ್ರ್ಯಾಂಡನ್ನು ಧರಿಸುತ್ತಾರೆ. ಇತ್ತೀಚಿನ ಒಂದು ವೈರಲ್‌ ಫೋಟೋದಲ್ಲಿ 400 ವರ್ಷಗಳಷ್ಟು ಹಳೆಯದಾದ ಪೇಂಟಿಂಗ್‌ನಲ್ಲಿ 'ನೈಕ್ ಶೂ'ಗಳ ಮಾರ್ಕ್‌' ಒಂದು ವೈರಲ್‌ ಆಗಿದೆ.

  • Share this:

ಬಟ್ಟೆ, ಶೂ, ಮತ್ತಿತ್ತರ ವಸ್ತುಗಳ ಟಾಪ್‌ ಬ್ರ್ಯಾಂಡ್‌ಗಳಲ್ಲಿ ಮೊದಲಿಗೆ ನಿಲ್ಲುವುದೇ ನೈಕ್/ನೈಕಿ (Nike).‌ ಸ್ಪೋರ್ಟ್ಸ್‌ ಶೂ ಆಗಲಿ, ಬಟ್ಟೆಯಾಗಲಿ ಎಲ್ಲವನ್ನೂ ಗ್ರಾಹಕರಿಗೆ (Customer) ಒದಗಿಸುವ ಬ್ರ್ಯಾಂಡ್‌ ಇಂದು ಮೊನ್ನೆಯದಲ್ಲ. ಹಲವು ವರ್ಷಗಳ ಹಿಂದೆ ಸ್ಥಾಪಿತವಾದ ಬ್ರ್ಯಾಂಡ್‌ಗೆ ಇನ್ನೂ ಬೇಡಿಕೆ ಕಿಂಚಿತ್ತು ಕುಂದಿಲ್ಲ. ಹಲವು ಗ್ರಾಹಕರನ್ನು ಸೆಳೆದಿರುವ ಈ ಬ್ರ್ಯಾಂಡ್‌ ಉತ್ಪನ್ನಗಳು (Brand Product) ಇಂದು ಜಗತ್ಪ್ರಸಿದ್ಧವಾಗಿವೆ.


ವೈರಲ್‌ ಆಯ್ತು 400 ವರ್ಷಗಳ ಫೋಟೋ, ಶೂ ಮೇಲಿನ ಮಾರ್ಕ್‌ ನೋಡಿ ನೆಟ್ಟಿಗರು ಕಂಗಾಲು


ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಬ್ರ್ಯಾಂಡನ್ನು ಧರಿಸುತ್ತಾರೆ. ಇತ್ತೀಚಿನ ಒಂದು ವೈರಲ್‌ ಫೋಟೋದಲ್ಲಿ 400 ವರ್ಷಗಳಷ್ಟು ಹಳೆಯದಾದ ಪೇಂಟಿಂಗ್‌ನಲ್ಲಿ 'ನೈಕ್ ಶೂ'ಗಳ ಮಾರ್ಕ್‌ ಒಂದು ವೈರಲ್‌ ಆಗಿದೆ. ಹೌದು, ಈ ವೈರಲ್‌ ಫೋಟೋದಲ್ಲಿದ್ದ ಶೂಗಳ ಮೇಲಿನ ರೈಟ್‌ ಮಾರ್ಕ್‌ ಅನ್ನು ಗುರುತಿಸಿ ಜನ ಅಚ್ಚರಿಯ ಜೊತೆ ಗೊಂದಲಕ್ಕೊಳಗಾಗಿದ್ದಾರೆ.


ಫಿಯೋನಾ ಫೋಸ್ಕೆಟ್ (57) ಎಂಬ ಪ್ರವಾಸಿಗರೊಬ್ಬರು ತನ್ನ ಮಗಳು ಹಾಲಿ, (23) ರೊಂದಿಗೆ ಲಂಡನ್ ಗ್ಯಾಲರಿಗೆ ಭೇಟಿ ನೀಡಿದಾಗ ಈ ಫೋಟೋವನ್ನು ಗುರುತಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ತನ್ನ ಯಶಸ್ಸಿನ ಶ್ರೇಯಸ್ಸನ್ನು ತಂದೆ ಹಾಗೂ ಪತಿಗೆ ಸಲ್ಲಿಸಿದ ಸುಧಾಮೂರ್ತಿ!


ಪೇಂಟಿಂಗ್‌ನಲ್ಲಿ ಏನಿದೆ?


17ನೇ ಶತಮಾನದಲ್ಲಿ ಡಚ್ ಮಾಸ್ಟರ್ ಫರ್ಡಿನಾಂಡ್ ಬೋಲ್ ಎಂಟು ವರ್ಷದ ಹುಡುಗನ ಚಿತ್ರವನ್ನು ಬಿಡಿಸಿದ್ದಾರೆ. ಈ ಚಿತ್ರದಲ್ಲಿರುವಂತೆ ಎಂಟು ವರ್ಷದ ಬಾಲಕ ಗೋಳವನ್ನು ಹಿಡಿದುಕೊಂಡು ಮುಂಭಾಗದಲ್ಲಿ ನಿಂತಿರುವುದನ್ನು ನೋಡಬಹುದು.


ಪಕ್ಕದಲ್ಲಿ ಟೇಬಲ್‌, ಕುರ್ಚಿ ಸಹ ಇವೆ. ಗೋಳವನ್ನು ಕೆಂಪು ಬಟ್ಟೆಯಿಂದ ಮುಚ್ಚಿದ ಟೇಬಲ್‌ ಮೇಲೆ ಇರಿಸಲಾಗಿದ್ದು, ಆತ ಅದನ್ನು ಹಿಡಿದುಕೊಂಡು ನಿಂತಿದ್ದಾನೆ. ಫರ್ಡಿನಾಂಡ್ ಬೋಲ್ ಸುಂದರವಾಗಿ ಬಾಲಕನ ಚಿತ್ರವನ್ನು ಚಿತ್ರಿಸಿದ್ದು, ಅಲ್ಲಿ ಆ ಹುಡುಗ ಕಪ್ಪು ಜಾಕೆಟ್ ಮತ್ತು ಕೇಪ್, ಬಿಳಿ ಶರ್ಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವಂತೆ ಚಿತ್ರಿಸಿದ್ದಾನೆ.


ವೈರಲ್ ಆದ ಫೋಟೋ


400 ವರ್ಷಗಳ ಹಳೆಯ ಪೇಟಿಂಗ್‌ನಲ್ಲಿದೆ ನೈಕ್‌ ಬ್ರ್ಯಾಂಡ್‌ನ ರೈಟ್‌ ಮಾರ್ಕ್‌


ಚಿತ್ರಕಲೆಯಲ್ಲಿರುವ ಹುಡುಗ ಫ್ರೆಡ್ರಿಕ್ ಸ್ಲುಸ್ಕೆನ್, ಕಲಾವಿದನ ಹೆಂಡತಿಯ ಎರಡನೇ ಸೋದರಸಂಬಂಧಿ ಎಂದು ಹೇಳಲಾಗಿದೆ. ಸದ್ಯ ಈ ಫೋಟೋ ಗಮನ ಸೆಳೆದಿರುವುದು ಶೂ ಮೇಲಿನ ನೈಕ್‌ ಬ್ರ್ಯಾಂಡ್‌ನ ರೈಟ್‌ ಮಾರ್ಕ್‌ ಮೇಲೆ ಎನ್ನಬಹುದು. ನೀವು ಸಹ ಬೂಟುಗಳನ್ನು ಹತ್ತಿರದಿಂದ ನೋಡಿದರೆ ಶೂನಲ್ಲಿ ಬಿಳಿ ಟಿಕ್ ಅನ್ನು ಅಂದರೆ ನೈಕ್‌ ಲೋಗೋವನ್ನು ಹೋಲುವ ಗುರುತನ್ನು ಗಮನಿಸಬಹುದು.


ಸದ್ಯ ಫಿಯೋನಾ ಫೋಸ್ಕೆಟ್ ಹಂಚಿಕೊಂಡ ಈ ಪೇಟಿಂಗ್‌ ಫೋಟೋ ಎಲ್ಲರ ಗಮನ ಸೆಳೆದಿದ್ದು, ಶೂ ಮೇಲೆ ನೈಕ್‌ ಗುರುತನ್ನು ಕಂಡು ಆಶ್ವರ್ಯಚಕಿತರಾಗಿದ್ದಾರೆ. ನನ್ನ ಮಗಳಿಗೆ ಈ ಪೇಟಿಂಗ್‌ ತೋರಿಸಿ ನಾನೂ ಸಹ ಗೊಂದಲಕ್ಕೊಳಗಾದೇ, ನೈಕ್‌ ಬ್ಯ್ರಾಂಡ್‌ನ ಹಾದಿ ಎಂದು ಭಾವಿಸಿದೆ ಎಂದು ಫಿಯೋನಾ ಫೋಸ್ಕೆಟ್ ಹೇಳಿದ್ದಾರೆ. ಈ ಫೋಟೋ ವೈರಲ್‌ ಆಗುತ್ತಿದ್ದಂತೆ ನ್ಯಾಷನಲ್ ಗ್ಯಾಲರಿಯ ವಕ್ತಾರರು, "ಈ ಚಿತ್ರವು ನಮ್ಮ ಸಂದರ್ಶಕರಲ್ಲಿ ಇಷ್ಟೊಂದು ಹಿಟ್ ಆಗಿರುವುದು ನಮಗೆ ಸಂತೋಷ ತಂದಿದೆ" ಎಂದು ಹೇಳಿದರು.


ನೈಕ್‌ ಬ್ಯ್ರಾಂಡ್‌ ಬಗ್ಗೆ ಕಿರು ಮಾಹಿತಿ


ನೈಕ್‌ ಇಂಕ್‌ ಒಂದು ಅಮೇರಿಕನ್ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು ಅದು ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ವಿಶ್ವಾದ್ಯಂತ ಮಾರ್ಕೆಟಿಂಗ್ ಮತ್ತು ಪಾದರಕ್ಷೆಗಳು, ಉಡುಪುಗಳು, ಉಪಕರಣಗಳು, ಪರಿಕರಗಳು ಮತ್ತು ಸೇವೆಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ.




ಕಂಪನಿಯು ಪೋರ್ಟ್‌ಲ್ಯಾಂಡ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಒರೆಗಾನ್‌ನ ಬೀವರ್ಟನ್ ಬಳಿ ಕೇಂದ್ರ ಕಚೇರಿಯನ್ನು ಹೊಂದಿದೆ. ಇದು ಅಥ್ಲೆಟಿಕ್ ಬೂಟುಗಳು ಮತ್ತು ಉಡುಪುಗಳ ವಿಶ್ವದ ಅತಿದೊಡ್ಡ ಪೂರೈಕೆದಾರ ಮತ್ತು ಕ್ರೀಡಾ ಸಲಕರಣೆಗಳ ಪ್ರಮುಖ ತಯಾರಕರಾಗಿದ್ದು , 2022ರ ಆರ್ಥಿಕ ವರ್ಷದಲ್ಲಿ US$46 ಶತಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ.


ಕಂಪನಿಯು ಜನವರಿ 25, 1964ರಂದು ಬಿಲ್ ಬೋವರ್ಮನ್ ಮತ್ತು ಫಿಲ್ ನೈಟ್ರಿಂದ "ಬ್ಲೂ ರಿಬ್ಬನ್ ಸ್ಪೋರ್ಟ್ಸ್" ಎಂದು ಸ್ಥಾಪಿಸಲ್ಪಟ್ಟಿತು ಮತ್ತು ಅಧಿಕೃತವಾಗಿ ಮೇ 30, 1971 ರಂದು ನೈಕ್‌ ಇಂಕ್‌ ಆಗಿ ಹೊರಹೊಮ್ಮಿತು.. ನೈಕ್‌ ತನ್ನದೇ ಆದ ಬ್ರ್ಯಾಂಡ್‌ನ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

top videos
    First published: