• Home
  • »
  • News
  • »
  • trend
  • »
  • ಮೂವರೂ ಗೆಳೆತಿಯರಿಗೆ 100ನೇ ಬರ್ತ್​​​ಡೇ ಸಂಭ್ರಮ.. ಇದಕ್ಕೂ ಮುನ್ನ ಮಾಡಿದ ಕೆಲಸ ನಿಜಕ್ಕೂ ಮೆಚ್ಚುವಂತದ್ದು

ಮೂವರೂ ಗೆಳೆತಿಯರಿಗೆ 100ನೇ ಬರ್ತ್​​​ಡೇ ಸಂಭ್ರಮ.. ಇದಕ್ಕೂ ಮುನ್ನ ಮಾಡಿದ ಕೆಲಸ ನಿಜಕ್ಕೂ ಮೆಚ್ಚುವಂತದ್ದು

ಜೀವದ ಗೆಳೆತಿಯರ ಬರ್ತ್​​​​ಡೇ ಸಂಭ್ರಮ

ಜೀವದ ಗೆಳೆತಿಯರ ಬರ್ತ್​​​​ಡೇ ಸಂಭ್ರಮ

ಆಚ್ಚರಿ ಎಂದರೆ  ಮೂವರು ಸ್ನೇಹಿತರು ಒಟ್ಟಿಗೆ 100 ನೇ ವರ್ಷಗೆ ಕಾಲಿಟ್ಟಿದ್ದಾರೆ. ಈ ಆಚರಣೆಯನ್ನು ಕೇಕ್‌ ಕಟ್‌ ಮಾಡುವ ಮೂಲಕ ಹಾಗೂ ಶಾಂಪೇನ್ ನೊಂದಿಗೆ ಆಚರಿಸಿಕೊಂಡಿದ್ದಾರೆ.ಅಮೆರಿಕದ ಹಿರಿಯ ನಾಗರಿಕರ ಸಮುದಾಯು ಆ ಮೂವರು ಸ್ನೇಹಿತರ ಫೋಟೋವನ್ನು ಸಾಮಾಜಿಕ ಮಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

    ಅಮೆರಿಕದಲ್ಲಿ ಒಟ್ಟಿಗೆ ವಾಸಿಸುತ್ತಿರುವ ಮೂವರು ಸ್ನೇಹಿತರು ಇತ್ತೀಚೆಗೆ ತಮ್ಮ 100 ನೇ ಜನ್ಮದಿನವನ್ನು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್ ಪ್ರದೇಶದ ಸಮುದಾಯ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಆಚ್ಚರಿ ಎಂದರೆ  ಮೂವರು ಸ್ನೇಹಿತರು ಒಟ್ಟಿಗೆ 100 ನೇ ವರ್ಷಗೆ ಕಾಲಿಟ್ಟಿದ್ದಾರೆ. ಈ ಆಚರಣೆಯನ್ನು ಕೇಕ್‌ ಕಟ್‌ ಮಾಡುವ ಮೂಲಕ ಹಾಗೂ ಶಾಂಪೇನ್ ನೊಂದಿಗೆ ಆಚರಿಸಿಕೊಂಡಿದ್ದಾರೆ.ಅಮೆರಿಕದ ಹಿರಿಯ ನಾಗರಿಕರ ಸಮುದಾಯು ಆ ಮೂವರು ಸ್ನೇಹಿತರ ಫೋಟೋವನ್ನು ಸಾಮಾಜಿಕ ಮಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರಲ್ಲಿ ಮೂವರು ಸ್ನೇಹಿತರು ಅಲಂಕರಿಸಿದ ಗೋಡೆಯ ಮುಂದೆ ಮತ್ತು ಬೃಹತ್‌ ಕೇಕ್‌ನ ಎದುರುಗಡೆ ನಿಂತುಕೊಂಡು ಹರ್ಷದಿಂದ ಕುಣಿಯುತ್ತಿದ್ದರು ಅವರ ಆ ಸುಂದರ ಫೋಟೋವನ್ನು ನೋಡೋದೆ ಕಣ್ಣಿಗೆ ಹಬ್ಬವಾಗಿತ್ತು.


    ಸಮುದಾಯವು ಹಂಚಿಕೊಂಡ ಫೋಟೋ ಶೀರ್ಷಿಕೆಯಲ್ಲಿ, ಸಮುದಾಯವು ಮೂವರು ಮಹಿಳೆಯರನ್ನು ರುತ್, ಲೋರೆನ್ ಮತ್ತು ಎಡಿತ್ ಎಂದು ಸೂಚಿಸಿದೆ. 100ನೇ ವರ್ಷದ ಅನುಭವನ್ನು ಕುರಿತು ಸಮುದಾಯದ ಮಂದಿ ಆ ಮೂವರನ್ನು ಕೇಳಿದಾಗ ಅವರಲ್ಲಿ ಒಬ್ಬರಾದ, ಎಡಿತ್ ಹುಟ್ಟಿ ಬೆಳೆದದ್ದು ಬ್ರೂಕ್ಲಿನ್‌ನಲ್ಲಿ, ಅಲ್ಲಿ ನಾನು ನನ್ನ ತಂದೆಯ ಪೀಠೋಪಕರಣ ವ್ಯವಹಾರವನ್ನು ನಡೆಸಲು ಸಹಾಯ ಮಾಡಿದೆ, “ಅದು ನನಗೆ ಸಂತೋಷವನ್ನು ನೀಡಿದೆ” ಎಂದು ಹೇಳಿದರು ಮತ್ತು ಕುರುಡು ಮತ್ತು ವಿಶೇಷ ಶಿಕ್ಷಣ ಬ್ರೈಲ್ ನಿವೃತ್ತ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ರುತ್‌ "ಹೃದಯಕ್ಕೆ ತುಂಬ ಸಂತೋಷವಾಗುತ್ತಿದೆ " ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


    ಈ ಆಚರಣೆಯ ಬಗ್ಗೆ ಸುಮಾರು 40 ಪ್ರಮುಖ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ, ಇದು ಲೋರೆನ್ ಅವರಿಗೆ "ಸೆಲೆಬ್ರಿಟಿಗಳ ರೀತಿಯ ಭಾವನೆಯನ್ನು ನೀಡುವ ಸಲುವಾಗಿ" ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿವೆ ಎಂದು ತಿಳಿದುಬಂದಿದೆ! ಪೀಪಲ್ ನಿಯತಕಾಲಿಕೆಯ ಇತ್ತೀಚಿನ ಸಂಚಿಕೆಯ ಪ್ರಕಾರ, ಆಚರಣೆಯು ಜೂನ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ, ಮತ್ತು ಈ ಮಹಿಳೆಯರು ಪ್ರತ್ಯೇಕವಾದ ಜನ್ಮದಿನಗಳನ್ನು ಹೊಂದಿದ್ದಾರೆ ಎಂದು ಪೀಪಲ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯು ವರದಿ ಮಾಡಿದೆ.


    "ನಾವು ಕೆಲವು ತಿಂಗಳು ಸಾಂಕ್ರಾಮಿಕದಿಂದಾಗಿ ಮನೆಯಲ್ಲಿ ಬಂಧಿತರಾಗಿದ್ದಾಗ, ಅದು ನಿಜವಾಗಿಯೂ ಭಯಾನಕವಾಗಿದೆ, ಆದರೆ ಇದು ಅಗತ್ಯವಾಗಿತ್ತು" ಎಂದು ಆಟಗಾರ್ತಿ ಲೋರೆನ್ ಮಾಧ್ಯಮಗಳಿಗೆ ತಿಳಿಸಿದರು. "ನಾನು ಈಗ ತುಂಬಾ ಮುಕ್ತಳಾಗಿರುವೆ, ನಾನು ಇನ್ನೂ ಜೀವಂತವಾಗಿದ್ದೇನೆ ಎಂಬುದು ನನಗೆ ಖುಷಿಯನ್ನು ನೀಡಿದೆ. ಲೋರೆನ್ ನಗರದ ಮೆಟ್ರೋಪಾಲಿಟನ್ ಒಪೇರಾ ಕಾಯಿರ್‌ನ ಮೆಝೊ ಸೊಪ್ರಾನೊ ಆಗಿ 20 ವರ್ಷಗಳು ಕಾರ್ಯನಿರ್ವಹಿಸಿ ನಿವೃತ್ತರಾದರು. ನಂತರ ಟೆನಿಸ್ ಆಡಲು ಪ್ರಾರಂಭಿಸಿದರು, ತಮ್ಮ 90 ರ ಹರೆಯದಲ್ಲೂ ಟಿನಿಸ್‌ ಅಭ್ಯಾಸ ಮುಂದುವರಿಸಿದ ತಮ್ಮ ಅನುಭವನ್ನು ಮಾಧ್ಯಗಳೊಂದಿಗೆ ಖುಷಿ ಖುಷಿಯಿಂದ ಹಂಚಿಕೊಂಡರು.




    ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ, ಮೂವರು ಮಹಿಳೆಯರಿಗೆ "ಜನ್ಮದಿನದ ಶುಭಾಶಯಗಳು" ಎಂದು ಹಾರೈಸಿದ್ದಾರೆ."ಈ ಸುಂದರ ಮಹಿಳೆಯರಿಗೆ ಜನ್ಮದಿನದ ಶುಭಾಶಯಗಳು" ಎಂದು ಸೋನಮ್ ಗೋತ್ರ ಕಾಮೆಂಟ್‌ ಮಾಡಿದ್ದಾರೆ. "ದೇವರು ಅವರನ್ನು ಸಾಕಷ್ಟು ಪ್ರೀತಿಯಿಂದ ಆಶೀರ್ವದಿಸುತ್ತಾನೆ" ಎಂದು "ಥಾರ್" ಎಂಬ ಬಳಕೆದಾರಹೆಸರು ಹೊಂದಿರುವ ವ್ಯಕ್ತಿಯು ಕಾಮೆಂಟ್‌ ಮಾಡಿದ್ದಾರೆ.


    "ಓಂ, ಅವರಿಗೆ ಜನ್ಮದಿನದ ಶುಭಾಶಯಗಳು!" "ಲಿಜ್ಬ್ರೆಂಟಾರ್ಟ್" ಎಂಬ ಬಳಕೆದಾರ ಹೆಸರಿನೊಂದಿಗೆ ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಆಟ್ರಿಯಾ ಸೀನಿಯರ್ ಲಿವಿಂಗ್ ಸಮುದಾಯವು "ಈ ಸ್ಮಾರಕ ಕ್ಷಣವನ್ನು ಆಚರಿಸಲು ಸಂತೋಷವಾಗಿದೆ ಮತ್ತು ಪ್ರತಿಯೊಬ್ಬರಿಗೂ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದೆ" ಎಂದು ಕಾಮೆಂಟ್‌ ಮಾಡಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು