Viral News: ಒಂದೆಡೆ ಸೇರಿದ ಮೂರು ನಾಗರಹಾವುಗಳು, ಇಲ್ಲಿದೆ ನೋಡಿ ಬಲು ಅಪರೂಪದ ದೃಶ್ಯ!

Viral News: ಈ ಅಪರೂಪದ ವೈರಲ್ ಆದ ದೃಶ್ಯವು ಮಹಾರಾಷ್ಟ್ರದಲ್ಲಿ 3 ನಾಗರಹಾವುಗಳು ಒಂದೆಡೆ ಸೇರಿರುವ ಫೋಟೋ ನಿಜಕ್ಕೂ ನೆಟ್ಟಿಗರನ್ನು ಭಯ ಬೀಳಿಸಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ಒಂದೆಡೆ ಸೇರಿದ ಮೂರು ನಾಗರಹಾವುಗಳು

ಒಂದೆಡೆ ಸೇರಿದ ಮೂರು ನಾಗರಹಾವುಗಳು

  • Share this:

ಸಾಮಾನ್ಯವಾಗಿ ನಾವು ಒಂದು ಉದ್ದ(Long)ನೆಯ ನಾಗರಹಾವLong Cobra)ನ್ನು ನೋಡಿರುತ್ತೇವೆ, ಹೆಚ್ಚೆಂದರೆ ಎರಡು ತಲೆ(Double Head)ಯುಳ್ಳ ಹಾವನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಬಲು ಅಪರೂಪದ ದೃಶ್ಯವಿದೆ ನೋಡಿ. ಅದೇನಪ್ಪಾ ಅಪರೂಪದ ದೃಶ್ಯ ಅಂತೀರಾ? ಇಲ್ಲಿ ಒಂದಲ್ಲ, ಎರಡಲ್ಲ ಒಂದೇ ಬಾರಿಗೆ ಮೂರು ನಾಗರಹಾವುಗಳು ಒಟ್ಟಿಗೆ ಇರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral) ಆಗಿರುವ ಈ ಫೋಟೋದಲ್ಲಿ ನೋಡಬಹುದಾಗಿದೆ. ಇತ್ತೀಚೆಗೆ ಈ ನಾಗರಹಾವುಗಳ ಫೋಟೋಗಳು ಮತ್ತು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡಬಹುದು. ಹೌದು, ಪ್ರಾಣಿಗಳಲ್ಲಿಯೇ ಹಾವುಗಳ ಫೋಟೋ ಮತ್ತು ವಿಡಿಯೋಗಳು ನೆಟ್ಟಿಗರನ್ನು ಸುಲಭವಾಗಿ ತನ್ನೆಡೆಗೆ ಆಕರ್ಷಿಸುತ್ತದೆ ಎಂದರೆ ತಪ್ಪಾಗಲಾರದು.


ಮೂರು ನಾಗರಹಾವುಗಳು ಒಂದೇ ಫ್ರೇಮ್​ನಲ್ಲಿ!

ಭಾರತೀಯ ಕಾಡುಗಳಲ್ಲಿ ಇಂತಹ ಅನೇಕ ವೈವಿಧ್ಯಮಯ ಪ್ರಾಣಿಗಳನ್ನು ನಾವು ನೋಡಬಹುದು. ಡಿಜಿಟಲ್ ಮಾಧ್ಯಮದ ಯುಗವು ಜಗತ್ತನ್ನು ತುಂಬಾನೇ ಹತ್ತಿರಕ್ಕೆ ತಂದಿರುವುದರಿಂದ, ಅಂತಹ ಸಮಯದಲ್ಲಿ ಪ್ರಾಣಿಗಳ ವಿಡಿಯೋಗಳು ಮತ್ತು ಫೋಟೋಗಳು ಜನರಿಗೆ ಹೆಚ್ಚಾಗಿ ನೋಡಲು ಸಿಗುತ್ತಿವೆ. ಈ ಅಪರೂಪದ ವೈರಲ್ ಆದ ದೃಶ್ಯವು ಮಹಾರಾಷ್ಟ್ರದಲ್ಲಿ 3 ನಾಗರಹಾವುಗಳು ಒಂದೆಡೆ ಸೇರಿರುವ ಫೋಟೋ ನಿಜಕ್ಕೂ ನೆಟ್ಟಿಗರನ್ನು ಭಯ ಬೀಳಿಸಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅಮರಾವತಿ ಜಿಲ್ಲೆಯ ಹರಿಸಲ್ ಅರಣ್ಯದಲ್ಲಿ ಒಂದು ಮರದ ತೊಗಟೆಗೆ 3 ನಾಗರಹಾವುಗಳನ್ನು ಸುತ್ತಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.






ವೈರಲ್​ ಆದ ಅಪರೂಪದ ಫೋಟೋ!

ಟಿವಿ ಮಾಧ್ಯಮದ ವರದಿಯ ಪ್ರಕಾರ, ಹಾವುಗಳನ್ನು ರಕ್ಷಿಸಿ ಅವುಗಳನ್ನು ಕಾಡಿನಲ್ಲಿ ಬಿಟ್ಟ ನಂತರ ತೆಗೆದುಕೊಂಡು ಇಂಡಿಯನ್ ವೈಲ್ಡ್ ಲೈಫ್ ಎಂಬ ಫೇಸ್‌ಬುಕ್ ಗುಂಪಿನಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಫೋಟೋಗಳಲ್ಲಿ ಒಂದನ್ನು ಮಾತ್ರ ಐಎಫ್‌ಎಸ್ ಅಧಿಕಾರಿ ನಂದಾ ನವೆಂಬರ್ 16ರಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ " ಮೂರು ನಾಗರಹಾವುಗಳು ಒಂದೇ ಸಮಯದಲ್ಲಿ ನಿಮ್ಮನ್ನು ಆಶೀರ್ವದಿಸಿದಾಗ" ಎಂದು ಶೀರ್ಷಿಕೆ ನೀಡಿದ್ದಾರೆ. ಐಎಫ್‌ಎಸ್ ಅಧಿಕಾರಿ ನಂದಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿನ ‘ಸುಸಾಂತ ನಂದಾ ಐಎಫ್‌ಎಸ್’ ಎಂಬ ಅವರ ಪುಟದಲ್ಲಿ ಹಂಚಿಕೊಂಡ ಈ 3 ನಾಗರಹಾವುಗಳ ಅಪರೂಪದ ಫೋಟೋಗೆ ಶೀಘ್ರದಲ್ಲಿಯೇ ಸುಮಾರು 3881 ಜನರು ಇಷ್ಟಪಟ್ಟಿದ್ದು, 352 ಜನರು ಈ ಫೋಟೋವನ್ನು ಮರು ಟ್ವೀಟ್ ಮಾಡಿದ್ದಾರೆ.


ಇದನ್ನು ಓದಿ :ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ಯಾ? ಹೀಗೆ ಮಾಡಿ, ಒಂದೂ ಇರಲ್ಲ..! 

ಫೋಟೋ ನೋಡಿ ಶಾಕ್ ಆದ ನೆಟ್ಟಿಗರು!

ಸಾಮಾಜಿಕ ಮಾಧ್ಯಮದಲ್ಲಿ ಈ ಅಪರೂಪದ ಫೋಟೋ ನೋಡಿದ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯಚಕಿತರಾದದ್ದಂತೂ ನಿಜವಾದ ಸಂಗತಿ. ಇದನ್ನು ನೋಡಿದ ಒಬ್ಬ ಬಳಕೆದಾರರು "ದೂರದಿಂದ ತುಂಬಾನೇ ಸುಂದರವಾದ ದೃಶ್ಯ, ಆದರೆ ಹತ್ತಿರ ಹೋದರೆ ಹೆದರಿಕೆಯಿಂದ ಬೆವರು ಬರುವುದು ಖಂಡಿತ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು"ಓಹ್! ಇದು ನೋಡಲು ಸುಂದರವಾಗಿ ಮತ್ತು ಭಯಂಕರ ಸಹ ಆಗಿದೆ. ಬಹುತೇಕ ಇದು ದೈವಿಕ" ಎಂದು ಬರೆದಿದ್ದಾರೆ. "ಈ ಅಪರೂಪದ ಫೋಟೋವನ್ನು ಪ್ರದರ್ಶನಕ್ಕೆ ಇಡಲೇಬೇಕು, ಅಲ್ಲವೇ?" ಎಂದು ಕೇಳಿದ್ದಾರೆ.


ಇದನ್ನು ಓದಿ : ಬಾಗಿಲು ತೆಗೆದರೆ ಮೈಮೇಲೇ ಹಾರುತ್ತೆ ದೈತ್ಯ ಜೇಡ, ಗಾಬರಿಬಿದ್ದು ಓಡಿ ಹೋಗ್ತಿದ್ದಾರೆ ಜನ!

ಇನ್ನೂ ಈ ರೀತಿಯ ಫೋಟೋಗಳನ್ನು ಹಿಂದೆದೂ ನೋಡಿರಲು ಸಾಧ್ಯವಿಲ್ಲ. ಇಂಥಹ ಫೋಟೋ ನೋಡಿದ್ದು, ಬಹಳ ಖುಷಿಯಾಗಿದೆ ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.
Published by:Vasudeva M
First published: