Raksha Bandhan: ಬಂದೇ ಬಿಡ್ತು ಅಣ್ಣ-ತಂಗಿಯರ ನೆಚ್ಚಿನ ರಕ್ಷಾ ಬಂಧನ, ಎರಡು ದಿನ ಬಂದಿದೆಯೇ ಈ ಹಬ್ಬ?

ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ ಮತ್ತು ರಕ್ಷಣೆಯನ್ನು ಕೇಳುತ್ತಾರೆ. ಅದಕ್ಕೆ ರಕ್ಷಾ ಬಂಧನ ಎಂದು ಹೆಸರು. ತಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಈ ವರ್ಷದ ರಕ್ಷಾ ಬಂಧನಕ್ಕೆ ಎರಡು ದಿನಾಂಕಗಳನ್ನು ನೀಡಲಾಗಿದೆ. ಆಗಸ್ಟ್ 11 ಮತ್ತು ಆಗಸ್ಟ್ 12. ಕೆಲವರು 11 ರಂದು ಹಬ್ಬ ಆಚರಿಸಿದರೆ, ಕೆಲವರು 12 ರಂದು ಆಚರಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತ (India)ವು ತನ್ನ ಹಬ್ಬಗಳು, ಸಂಪ್ರದಾಯಗಳಿಂದ ಹೆಸರು ವಾಸಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಣ್ಣ (Brother)-ತಂಗಿ (Sister)ಯರ ಬಾಂಧವ್ಯಕ್ಕೆ ಮೀಸಲಾದ ಹಬ್ಬ ಬರಲಿದೆ. ರಕ್ಷಾ ಬಂಧನದಂದು, ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ ಮತ್ತು ರಕ್ಷಣೆಯನ್ನು ಕೇಳುತ್ತಾರೆ. ಅದಕ್ಕೆ ರಕ್ಷಾ ಬಂಧನ (Raksha Bandhan) ಎಂದು ಹೆಸರು. ತಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಈ ವರ್ಷದ ರಕ್ಷಾ ಬಂಧನಕ್ಕೆ ಎರಡು ದಿನಾಂಕಗಳನ್ನು ನೀಡಲಾಗಿದೆ. ಆಗಸ್ಟ್ 11 ಮತ್ತು ಆಗಸ್ಟ್ (August) 12. ಕೆಲವರು 11 ರಂದು ಹಬ್ಬ ಆಚರಿಸಿದರೆ, ಕೆಲವರು 12 ರಂದು ಆಚರಿಸುತ್ತಿದ್ದಾರೆ. ಈಗ, ಜ್ಯೋತಿಷ್ಯದ ಪ್ರಕಾರ ರಕ್ಷಾ ಬಂಧನವನ್ನು ಯಾವಾಗ ಆಚರಿಸಬೇಕು ಎಂಬುದನ್ನು ನೋಡೋಣ.

    ಹಬ್ಬದ ದಿನ ಮತ್ತು ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
    ಹಿಂದೂ ಧರ್ಮದ ಎಲ್ಲಾ ಉಪವಾಸಗಳು ಮತ್ತು ಹಬ್ಬಗಳನ್ನು ಪಂಚಾಂಗದ ದಿನಾಂಕಗಳ ಆಧಾರದ ಮೇಲೆ ಆಚರಿಸಲಾಗುತ್ತದೆ ಎಂದು ಕಾಶಿಯ ಜ್ಯೋತಿಷಿ ಚಕ್ರಪಾಣಿ ಭಟ್ ಹೇಳುತ್ತಾರೆ. ಬಹುತೇಕ ಉಪವಾಸಗಳು ಮತ್ತು ಹಬ್ಬಗಳಲ್ಲಿ ಉದಯತೀತಿಗೆ ಮನ್ನಣೆ ಇದೆ. ಅದರ ಆಧಾರದ ಮೇಲೆ ಭಾರತದಲ್ಲಿ ಉಪವಾಸ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅನೇಕ ಬಾರಿ, ದಿನಾಂಕ, ಪೂಜೆಯ ಮುಹೂರ್ತ, ಚಂದ್ರನ ಉಪಸ್ಥಿತಿ, ಪ್ರದೋಷ ಕಾಲ ಇತ್ಯಾದಿಗಳನ್ನು ಸಹ ಪರಿಗಣಿಸಲಾಗುತ್ತದೆ.

    ಆಗಸ್ಟ್ 11 ಅಥವಾ 12 ರಂದು ರಕ್ಷಾ ಬಂಧನ?
    ರಕ್ಷಾ ಬಂಧನದ ಹಬ್ಬವನ್ನು ಶ್ರಾವಣ ಪೂರ್ಣಿಮೆಯ ದಿನಾಂಕದಂದು ಆಚರಿಸಲಾಗುತ್ತದೆ. ಈಗ ಶ್ರಾವಣ ಪೂರ್ಣಿಮಾ ತಿಥಿ ಯಾವಾಗ? ಕಾಶಿ ವಿಶ್ವನಾಥ ಋಷಿಕೇಶ ಪಂಚಾಂಗದ ಪ್ರಕಾರ, ಶ್ರಾವಣ ಪೂರ್ಣಿಮಾ ತಿಥಿಯು ಆಗಸ್ಟ್ 11 ರಂದು ಬೆಳಿಗ್ಗೆ 09:34ಕ್ಕೆ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 05:58 ಕ್ಕೆ ಕೊನೆಗೊಳ್ಳುತ್ತದೆ. ಆಗಸ್ಟ್ 12 ರಂದು ಸೂರ್ಯೋದಯದ ಸಮಯದಲ್ಲಿ ಭಾದ್ರಪದ ಮಾಸದ ಪ್ರತಿಪದ ತಿಥಿ, ಆದ್ದರಿಂದ ಶ್ರಾವಣ ಪೂರ್ಣಿಮಾ ತಿಥಿಯನ್ನು ಆಗಸ್ಟ್ 12 ರಂದು ಪರಿಗಣಿಸಲಾಗುವುದಿಲ್ಲ.

    ಇದನ್ನೂ ಓದಿ: Best Indian Toys: ಪಿಎಂ ಮೋದಿ ಹೇಳಿದ ಭಾರತದಲ್ಲೇ ತಯಾರಿಸಿದ ಮಕ್ಕಳ ಆಟಿಕೆ ಇಲ್ಲಿ ಸಿಗುತ್ತೆ!

    ಆಗಸ್ಟ್ 11 ರಂದು ಶ್ರಾವಣ ಪೂರ್ಣಿಮಾ ತಿಥಿ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನ ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದು ಉತ್ತಮ.

    2 ದಿನ ಏಕೆ ಎಂದು ಗೊಂದಲವಾ?
    ಕಾಶಿಯ ಜ್ಯೋತಿಷಿ ಚಕ್ರಪಾಣಿ ಭಟ್ ಅವರ ಪ್ರಕಾರ, ಕಾಶಿ ಅಥವಾ ಉಜ್ಜಯಿನಿಯ ಪಂಚಾಂಗವು ದಿನಾಂಕಗಳನ್ನು ಲೆಕ್ಕಾಚಾರ ಮಾಡಲು ಏಕೈಕ ಮಾನ್ಯತೆಯಾಗಿದೆ. ಈಗ ಅನೇಕ ಸ್ಥಳಗಳಲ್ಲಿ, ಜನರು ಆನ್‍ಲೈನ್ ಪಂಚಾಂಗ ಅಥವಾ ಇತರ ಪಂಚಾಂಗಗಳಿಂದ ದಿನಾಂಕಗಳನ್ನು ಲೆಕ್ಕ ಹಾಕುತ್ತಾರೆ. ಕಾಶಿ ಅಥವಾ ಉಜ್ಜಯಿನಿಯ ಪಂಚಾಂಗ ಮತ್ತು ಇತರ ಪಂಚಾಂಗಗಳಲ್ಲಿ ಆರಂಭ ಮತ್ತು ಅಂತ್ಯದ ದಿನಾಂಕಗಳಲ್ಲಿ ವ್ಯತ್ಯಾಸವಿದ್ದು, ಹಬ್ಬ ಹರಿದಿನಗಳ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

    ಇದನ್ನೂ ಓದಿ: Elephant Viral Video: ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಮೂಕಪ್ರಾಣಿ, ರಭಸದ ನೀರಿನ ವಿರುದ್ಧ ಕೊನೆಗೂ ಗೆದ್ದ ಬೀಗಿದ ಆನೆ! 

    ಸೂರ್ಯೋದಯದ ಪ್ರಮಾಣಿತ ಎಣಿಕೆಯು ಆ ಪಂಚಾಂಗಗಳಲ್ಲಿರುವ ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ. ಪ್ರತಿ ನಗರ ಅಥವಾ ಸ್ಥಳದ ಸೂರ್ಯೋದಯದ ಅವಧಿಯಲ್ಲಿ ವ್ಯತ್ಯಾಸವಿದೆ. ನೀವು ಉಪವಾಸ ಮತ್ತು ಹಬ್ಬದ ದಿನಾಂಕವನ್ನು ನೋಡಬೇಕಾದಾಗ, ಕಾಶಿ ಅಥವಾ ಉಜ್ಜಯಿನಿಯ ಪಂಚಾಂಗವನ್ನು ನೋಡಿ.

    ರಾಖಿ ಕಟ್ಟಲು ಶುಭ ಸಮಯವೇ?
    ಆಗಸ್ಟ್ 11 ರಂದು, ರಕ್ಷಾ ಬಂಧನದ ದಿನ, ಭದ್ರಾ, ಬೆಳಿಗ್ಗೆ 09.34 ಕ್ಕೆ ಪ್ರಾರಂಭವಾಗಿ 04.26 ಕ್ಕೆ ಕೊನೆಗೊಳ್ಳುತ್ತದೆ. ಭದ್ರ ನಂತರವೇ ರಾಖಿ ಕಟ್ಟಬೇಕು. ರಾಖಿ ಕಟ್ಟುವ ಶುಭ ಮುಹೂರ್ತವು ಆಗಸ್ಟ್ 11 ರಂದು ಸಂಜೆ 04:26 ಕ್ಕೆ ಕೊನೆಗೊಳ್ಳುತ್ತಿದೆ. ಮರುದಿನ ಆಗಸ್ಟ್ 12 ರಂದು ಬೆಳಿಗ್ಗೆ 05:58 ರ ಒಳಗೆ ರಾಖಿ ಕಟ್ಟಬಹುದು.

    ಏನೇ ಆಗಲಿ ಸಹೋದರರಿಗೆ ರಾಖಿ ಕಟ್ಟಿ ನಿಮ್ಮ ಬಂಧವನ್ನು ಗಟ್ಟಿ ಮಾಡಿಕೊಳ್ಳಿ. ಎಂದೆಂದಿಗೂ ಇರಲಿ ನಿಮ್ಮ ಅನುಬಂಧ. ರಕ್ಷಾ ಬಂಧನ ಗ್ರ್ಯಾಂಡ್ ಆಗಿ ಆಚರಿಸಿ.
    Published by:Savitha Savitha
    First published: