• Home
  • »
  • News
  • »
  • trend
  • »
  • Certificate: ಮಹಿಳೆಯ ಜನನ ಪ್ರಮಾಣಪತ್ರ ಉದ್ದವೆಷ್ಟು ಗೊತ್ತೇ? ಶಾಕ್‌ ಆಗ್ತೀರಾ..

Certificate: ಮಹಿಳೆಯ ಜನನ ಪ್ರಮಾಣಪತ್ರ ಉದ್ದವೆಷ್ಟು ಗೊತ್ತೇ? ಶಾಕ್‌ ಆಗ್ತೀರಾ..

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈಕೆಯ ಜನನ ಪ್ರಮಾಣ ಪತ್ರವೇ ಸುಮಾರು 2 ಅಡಿ ಉದ್ದವಿದ್ದು, ಆಕೆಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 1019 ಅಕ್ಷರಗಳಿವೆ ಅಂತೆ

  • Share this:

ಸಾಮಾನ್ಯವಾಗಿ ನಮ್ಮ ನಿಮ್ಮೆಲ್ಲರ ಜನನ ಪ್ರಮಾಣ ಪತ್ರವು(Birth Certificate) ಒಂದು ಎ4 ಆಕಾರದ (Alphabet) ಪುಟದಷ್ಟು ಉದ್ದವಿರುತ್ತದೆ ಮತ್ತು ಅದರಲ್ಲಿರುವ ನಮ್ಮ ನಿಮ್ಮ ಹೆಸರುಗಳು ಅಬ್ಬಬ್ಬಾ ಎಂದರೆ 10 ರಿಂದ 15 ಅಕ್ಷರಗಳಿರುತ್ತವೆ (Characters) . ಅನೇಕ ಜನರು ತಮ್ಮ ಪೂರ್ಣ ಹೆಸರುಗಳನ್ನು ಜನನ ಪ್ರಮಾಣ ಪತ್ರಗಳಲ್ಲಿ ಹಂಚಿಕೊಳ್ಳದಿರಲು ನಿರ್ಧರಿಸುತ್ತಾರೆ, ಏಕೆಂದರೆ ಅದು ತುಂಬಾ ಉದ್ದವಾಗುತ್ತದೆ ಮತ್ತು ಇದು ಎಲ್ಲರಿಗೂ ಓದಲು ಸ್ವಲ್ಪ ಕಷ್ಟವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಈ ಜನನ ಪ್ರಮಾಣ ಪತ್ರದ ಬಗ್ಗೆ, ಅದರಲ್ಲಿರುವ ಹೆಸರಿನ ಬಗ್ಗೆ ಮತ್ತು ಅದರಲ್ಲಿರುವ ಅಕ್ಷರಗಳ (Number of Letters) ಸಂಖ್ಯೆಯ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಎಂದು ನಿಮಗೆ (Wondering) ಆಶ್ಚರ್ಯವಾಗಬಹುದು.


2 ಅಡಿ ಉದ್ದದ ಹೆಸರು
ಇಲ್ಲಿ ನಾವು ನಿಮಗೆ ಒಂದು ಸ್ವಾರಸ್ಯಕರವಾದ ಘಟನೆಯ ಬಗ್ಗೆ ಹೇಳುತ್ತೇವೆ ಕೇಳಿ. ಇಲ್ಲೊಬ್ಬ ಮಹಿಳೆಯ ಹೆಸರು ಎಷ್ಟು ಉದ್ದವಿದೆ ಎಂದರೆ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ, ಈಕೆಯ ಜನನ ಪ್ರಮಾಣ ಪತ್ರವೇ ಸುಮಾರು 2 ಅಡಿ ಉದ್ದವಿದ್ದು, ಆಕೆಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 1019 ಅಕ್ಷರಗಳಿವೆ ಅಂತೆ! ಇದನ್ನು ನೀವು ನಂಬುವುದು ಸ್ವಲ್ಪ ಕಷ್ಟವೇ ಆಗಬಹುದು.


ಇದನ್ನೂ ಓದಿ: Guinness World Record: ಒಂದೂವರೆ ಸಾವಿರ ವಾಷಿಂಗ್ ಮಷೀನ್​ನಿಂದ ವಿಶ್ವದಾಖಲೆ!


ಕೆಲವು ವಿಶಿಷ್ಟ ಹೆಸರುಗಳು ನಿಜವಾಗಿಯೂ ನೆಚ್ಚಿನ ವಸ್ತುಗಳು, ಸ್ಥಳಗಳು, ಆಹಾರ, ಚಲನಚಿತ್ರಗಳು, ಬಣ್ಣಗಳು, ಜನರು ಅಥವಾ ಘಟನೆಗಳಿಂದ ಪ್ರೇರಿತವಾಗಿರಬಹುದು ಮತ್ತು ಅವುಗಳು ಸ್ವಲ್ಪ ಉದ್ದವಾಗಿರುತ್ತವೆ ಎಂದು ಹೇಳಬಹುದು. ಆದರೆ ಈ ಮಹಿಳೆಯ ಹೆಸರು ಮಾತ್ರ ತುಂಬಾನೇ ದೀರ್ಘವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಏನು ಬರೆಸಿದ್ದಾರೆ ಗೊತ್ತೇ
1984 ರಲ್ಲಿ ಸಾಂಡ್ರಾ ವಿಲಿಯಮ್ಸ್ ಅವರು ತಾಯಿಯಾದಾಗ, ಅವಳು ತನ್ನ ಮಗಳಿಗೆ ಸಾಮಾನ್ಯವಾದ ನಾಲ್ಕು ಅಥವಾ ಮೂರು ಅಕ್ಷರಗಳನ್ನು ಒಳಗೊಂಡಿರುವಂತಹ ಹೆಸರು ಇಡುವುದಕ್ಕೆ ಆಲೋಚನೆ ಮಾಡಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಅವರು ಎಲ್ಲಾ ಮಕ್ಕಳ ಹೆಸರಿನಂತೆ ಸಾಮಾನ್ಯ ಹೆಸರನ್ನು ತನ್ನ ಮಗಳಿಗೆ ಇಡದೇ, ತಮ್ಮ ಮಗಳ ಜನನ ಪ್ರಮಾಣ ಪತ್ರದಲ್ಲಿ 'ರೋಶಾಂಡಿಯಾಟೆಲ್ಲಿನೆಶಿಯಾಯುನ್ನೆವೆಶೆಂಕ್ ಕೊಯಾನಿಸ್ಕ್ವಾಟ್ಸಿಯುತ್ ವಿಲಿಯಮ್ಸ್' ಎಂದು ಬರೆಸಿದ್ದರು.


ಸಾಂಡ್ರಾ ವಿಲಿಯಮ್ಸ್ ಅವರ ಮಗು 12ನೇ ಸೆಪ್ಟೆಂಬರ್ 1984 ರಂದು ಜನಿಸಿತು. ಆದರೆ ಅವಳಿಗೆ ಬಹಳ ಉದ್ದವಾದ ಹೆಸರನ್ನು ನೀಡಿದ ಕೇವಲ ಮೂರು ವಾರಗಳ ನಂತರ, ಸಾಂಡ್ರಾ ಮತ್ತು ಅವಳ ಪತಿ ಒಂದು ತಿದ್ದುಪಡಿಯನ್ನು ಸಲ್ಲಿಸಿದರು, ಅದು ಹೆಸರನ್ನು 1,019 ಅಕ್ಷರಗಳನ್ನು ದೀರ್ಘಗೊಳಿಸಿತು. ಇವಳ ಮಧ್ಯದ ಹೆಸರಿನಲ್ಲಿ ಸುಮಾರು 36 ಅಕ್ಷರಗಳಿದ್ದವು.


ಚೊಕ್ಕದಾಗಿ ಜೇಮಿ ಅಂತ ಕರೆಯೋದು
ಇಷ್ಟು ಉದ್ದದ ಹೆಸರನ್ನು ಯಾರು ತಾನೇ ಕರೆಯುತ್ತಾರೆ ಹೇಳಿ? ಈ ಹುಡುಗಿಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇವಳನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ಜೇಮಿ ಎಂದು ಕರೆಯುತ್ತಾರೆ. ಆದರೆ ಈಕೆ 2 ಅಡಿ ಉದ್ದದ ವಿಭಿನ್ನವಾಗಿ ಕಾಣುವ ಜನನ ಪ್ರಮಾಣ ಪತ್ರವನ್ನು ಹೊಂದಿದ್ದಾಳೆ. ಈ ಹೆಸರು ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದೆ. ಸಾಂಡ್ರಾ ಅವರು 1997 ರಲ್ಲಿ ಪ್ರಸಿದ್ಧ ಓಪ್ರಾ ಅವರೊಂದಿಗೆ ಮಾತನಾಡುತ್ತಾ “ಆಗ ಜೇಮಿಗೆ ಕೇವಲ 12 ವರ್ಷ ವಯಸ್ಸಾಗಿತ್ತು. ಹೊಸದಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಲು ನಾನು ಏನಾದರೂ ವಿಭಿನ್ನವಾಗಿ ಮಾಡಬೇಕಾಗಿತ್ತು. ಅವಳ ಹೆಸರು ತುಂಬಾ ವಿಭಿನ್ನವಾಗಿರಬೇಕೆಂದು ನಾನು ಯೋಚಿಸಿ ಹೀಗೆ ಬರೆಸಿದೆ ಮತ್ತು ಅದು ಇಂದು ಗಿನ್ನೆಸ್ ಪುಸ್ತಕದಲ್ಲಿ ಇದೆ" ಎಂದು ಸಾಂಡ್ರಾ ಓಪ್ರಾಗೆ ಹೇಳಿದರು.


ಇದನ್ನೂ ಓದಿ: Guinness World Records: ತನ್ನ ಗಡ್ಡದಿಂದಲೇ 63 ಕೆಜಿ ತೂಕದ ಮಹಿಳೆಯನ್ನು ಎತ್ತಿ ಗಿನ್ನಿಸ್ ದಾಖಲೆ ನಿರ್ಮಿಸಿದ ಭೂಪ..!


ಒಮ್ಮೆ ದಾಖಲೆಯನ್ನು ಮುರಿದ ನಂತರ, ಟೆಕ್ಸಾಸ್ ತನ್ನ ಕಾನೂನನ್ನು ಬದಲಾಯಿಸಬೇಕಾಯಿತು, ಇದರಿಂದ ಮಕ್ಕಳಿಗೆ ಜನನ ಪ್ರಮಾಣ ಪತ್ರದಲ್ಲಿರುವ ಹೆಸರಿನ ಪೆಟ್ಟಿಗೆಯೊಳಗೆ ಹೊಂದಿಕೊಳ್ಳುವ ಹೆಸರನ್ನು ಮಾತ್ರ ನೀಡಬಹುದು ಎಂದು ಹೇಳಿತು.

Published by:vanithasanjevani vanithasanjevani
First published: