Viral News: ಹಸಿವು ಏನೇನು ಮಾಡಿಸುತ್ತೆ ನೋಡಿ..! ತಿನ್ನೋದಕ್ಕೆಂದೇ ಕಂಟಿನ್ಯೂ 16 ದಿನ ಡೇಟ್ ಮಾಡಿದ್ಲು

ನಿಮ್ಮ ಪರ್ಸ್ ಖಾಲಿಯಾಯ್ತು, ಇನ್ನೂ ಸ್ವಲ್ಪ ದಿನ ದೂಡಲೇಬೇಕು ಎಂದಾದಾಗ ನೀವೇನು ಮಾಡುತ್ತೀರಿ? ಸ್ನೇಹಿತರಲ್ಲೋ, ಆತ್ಮೀಯರಲ್ಲೋ ಚಿಕ್ಕದೊಂದು ಎಮೌಂಟ್ ಸಾಲ ಪಡೆಯುತ್ತೀರಿ. ಆದರೆ ಈ ಹುಡುಗಿ ಮಾಡಿದ್ದೇನು ನೋಡಿ

ಊಟಕ್ಕಾಗಿ ಡೇಟಿಂಗ್

ಊಟಕ್ಕಾಗಿ ಡೇಟಿಂಗ್

  • Share this:
ವಿದೇಶಗಳಲ್ಲಿ ಡೇಟಿಂಗ್ ಆ್ಯಪ್ ಬಳಸಿದಷ್ಟು ಭಾರತೀಯರು ಬಳಸುವುದಿಲ್ಲ. ಆದರೆ ಫಾರಿನ್​ನಲ್ಲಿ ಇದು ತುಂಬಾ ಕಾಮನ್. ಬೇಕೆಂದಾಗ ಡೇಟಿಂಗ್ ಆ್ಯಪ್ (Dating App) ಬಳಸೋದು ಬಿಡೋದು ಅವರವರ ಇಷ್ಟ. ಬಹಳಷ್ಟು ಜನರು ಒಂಟಿತನ ಕಳೆಯಲು, ಸುಂದರವಾಗಿ ದಿನ ಕಳೆಯಲು, ಸಂಗಾತಿಗಾಗಿ ಡೇಟ್ ಮಾಡುತ್ತಾರೆ. ಆದರೆ ಈಕೆಯಂತಹ ಉದ್ದೇಶ ಬಹುಶಃ ಬೇರೆ ಯಾರಿಗೂ ಇರದು. ಡೇಟಿಂಗ್ ಆ್ಯಪ್ ಡೌನ್​ಲೋಡ್ ಮಾಡುವಾಗ ಈಕೆಗೆ ಸ್ಪಷ್ಟ ಉದ್ದೇಶವಿತ್ತು. ಆಕೆಯ ಉದ್ದೇಶ ಸಾಧಿಸಿದ್ದಾಳೆ ಕೂಡಾ. ಒಂದು ರೀತಿಯಲ್ಲಿ ಈಕೆ ಮಾಡಿದ್ದು ತಪ್ಪು ಎನ್ನುವಂತಿದ್ದರೂ ಬಹಳಷ್ಟು ಜನರು ಈಕೆಯನ್ನು ಸ್ಮಾರ್ಟ್​ ಹುಡುಗಿ (Smart Girl) ಎಂದು ಹೊಗಳಿದ್ದಾರೆ. ಅಷ್ಟಕ್ಕೂ ಈಕೆ ಮಾಡಿದ್ದೇನು ಗೊತ್ತಾ?

ಲಕ್ಷುರಿ ಹೊಟೇಲ್ ರೆಸ್ಟೋರೆಂಟ್‌ಗಳಲ್ಲಿ (restaurant) ತಿನ್ನೋಕೆ ಈಕೆ ಡೇಟಿಂಗ್ ಮಾಡೋ ಐಡಿಯಾ ಮಾಡಿದ್ದಾಳೆ. ಈ ಮೂಲಕ ಡೇಟ್‌ಗೆ ಬಂದ ಹುಡುಗರ ದುಡ್ಡಲ್ಲಿ ಬೇಕಾಬಿಟ್ಟಿ ತಿಂದಿದ್ದಾಳೆ.

16 ದಿನ 16 ಜನರೊಂದಿಗೆ ಟೇಟ್

ಮೆಕಾಲ್ ಬ್ರಾಕ್ ಎಂಬಾಕೆಗೆ ಮೂರು ಹೊತ್ತು ತಿನ್ನಲು ಆಹಾರ ಖರೀದಿಸಲು ದುಡ್ಡಿರಲ್ಲಿಲ್ಲ. ಹೀಗಾಗಿ ಆಕೆ ಈ ಉಪಾಯವನ್ನು ಅನುಸಿರಿದ್ದಾಗಿ ಹೇಳಿಕೊಂಡಿದ್ದಾಳೆ. ಕಾಲೇಜಿನಲ್ಲಿ ಊಟಕ್ಕೆ ಹಣವಿಲ್ಲದೇ ಹೋದಾಗ ನಾನು ಡೇಟಿಂಗ್ ಆಪ್‌ಗೆ ಹೋಗಿದ್ದೆ ಮತ್ತು 16 ದಿನಗಳ ಕಾಲ ನಾನು ಸತತವಾಗಿ 16 ಡಿನ್ನರ್ ಡೇಟ್‌ (Dinner Date)ಗಳನ್ನು ಹೊಂದಿದ್ದೆ ಎಂದು ಅವರು ಟಿಕ್‌ಟಾಕ್ ವೀಡಿಯೊದಲ್ಲಿ ಹೇಳಿದ್ದಾರೆ.

ಎಂಥಾ ಐಡಿಯಾ ಗುರು..!

ಅನೇಕರು ಅವಳನ್ನು ಜೀನಿಯಸ್ ಎಂದು ಕರೆದರೆ, ಇತರರು ಫ್ರೀಯಾಗಿ ಊಟ ಮಾಡಬಹುದು ಎಂಬ ಕಾರಣಕ್ಕೆ ಡೇಟಿಂಗ್ ಮಾಡಲು ಪುರುಷರನ್ನು ಬಳಸಿಕೊಂಡಿದ್ದಾಗಿ ಆಕೆಯನ್ನು ದೂರಿದ್ದಾರೆ.

ಈ ರೀತಿ ಸಂಬಂಧ ಮಿಸ್​ಯೂಸ್ ಮಾಡಬಾರದು ಅಂತಿದ್ದಾರೆ ಜನ

ಒಬ್ಬ ಬಳಕೆದಾರರು, ಸಂಬಂಧವನ್ನು ವ್ಯವಹಾರ ಮಾಡುವುದು ಸರಿಯಲ್ಲೆ ಎಂದಿದ್ದಾರೆ. ಇನ್ನು ಕೆಲವರು ಡೇಟಿಂಗ್ ಮೂಲಕ ಬಿಟ್ಟಿ ತಿನ್ನುತ್ತಿದ್ದ ಮಹಿಳೆಯ ನಡೆಗೆ ಎ ಯೂನಿವರ್ಸಲ್ ಲೈಫ್ ಹ್ಯಾಕ್ ಎಂದು ಬರೆದಿದ್ದಾರೆ. ಮೂರನೆಯ ಬಳಕೆದಾರರು ಇದೊಂದು ಅದ್ಭುತ ಪ್ರತಿಭೆ ಎಂದು ಹೇಳಿದ್ದಾರೆ. ಕೆಲವೊಬ್ಬರು ಮಹಿಳೆ ಡೇಟಿಂಗ್‌ಗೆ ಅಹಾರ ತಿನ್ನಲು ಹೋಗುತ್ತಿದ್ದುದ್ದು ತುಂಬಾ ಚೀಪ್‌ ಆದ ವರ್ತನೆ ಎಂದು ಟೀಕಿಸಿದ್ದಾರೆ.

ಆದರೂ ಬಿಡಿ, ಹೀಗೊಂದು ಕ್ರಿಯೇಟಿವ್ ಐಡಿಯಾ ಅಷ್ಟು ಬೇಗ ಸಿಗಲ್ಲ. ಈಕೆ ಜೀನಿಯಸ್ ಎನ್ನುವುದರಲ್ಲಿ ತಪ್ಪೇ ಇಲ್ಲ.

ಇದನ್ನೂ ಓದಿ: Hajj Pilgrims: ಈ ವರ್ಷ ವಿದೇಶಿ ಯಾತ್ರಾರ್ಥಿಗಳಿಗೆ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಅನುಮತಿ; Conditions Apply

ಕೂದಲಿನ ಬಣ್ಣಕ್ಕೆ 40 ಸಾವಿರ ಉಳಿಸಿದ್ದ ಯುವತಿ!

ಈ ಮಹಿಳೆ ತಮ್ಮ ಕಪ್ಪು ಕೂದಲನ್ನು ಗೋಲ್ಡನ್ ಕಲರ್ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕಾಗಿಯೇ ಬಹಳ ದಿನಗಳಿಂದ ಹಣ ಉಳಿಸುತ್ತಾ ಬಂದಿದ್ದರು. ದೀರ್ಘ ಸಮಯದ ಉಳಿತಾಯದಿಂದ ಮಹಿಳೆ ಒಟ್ಟು 40 ಸಾವಿರ ರೂಪಾಯಿ ಉಳಿಸಿದ್ದರು. ತಾವು ಅಂದುಕೊಂಡಂತೆ ಹಣ ಉಳಿಸಿದ ಮೇಲೆ ಕೂದಲಿನ ಬಣ್ಣ ಬದಲಿಸಿಕೊಳ್ಳಲು ಸಮೀಪದ ಬ್ಯೂಟಿ ಪಾರ್ಲರ್ ಗೆ ತೆರಳಿದ್ದರು.

ಬ್ಯೂಟಿ ಪಾರ್ಲರ್ ಗೆ ತೆರಳಿದ ಯುವತಿ ತನಗೆ ಹೇಗೆ ಮತ್ತು ಯಾವ ರೀತಿಯ ಬಣ್ಣ ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಳು. ಅದರಂತೆ ಬ್ಯೂಟಿಶಿಯನ್ ಸಹ ಬಣ್ಣ ಹಚ್ಚಿದ್ದರು. ಕೊನೆಗೆ ರಿಸಲ್ಟ್ ನೋಡಿದಾಗ ಯುವತಿ ಗಳಗಳನೇ ಕಣ್ಣೀರು ಹಾಕಿದ್ದಾಳೆ. ಈ ಘಟನೆ ನಡೆದಿದ್ದು ನ್ಯೂಯಾರ್ಕ್ ನಲ್ಲಿ. ಯುವತಿಯ ಹೆಸರು ಲೀನಾ. ತನ್ನ ಕೂದಲಿನ ಬಣ್ಣ ಹೇಗೆ ಬದಲಾಯ್ತು ಎಂದು ಟಿಕ್ ಟಾಕ್ ನಲ್ಲಿ ಹೇಳಿಕೊಂಡಿದ್ದಾಳೆ. ತಾನು ದೀರ್ಘ ಸಮಯದಲ್ಲಿ ಉಳಿಸಿದ ಹಣ ಹೇಗೆ ಖರ್ಚು ಆಯ್ತು ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Siblings Day 2022: ಇಂದು ಒಡಹುಟ್ಟಿದವರ ದಿನ, ಈ ಅದ್ಭುತ ಸಂಬಂಧವನ್ನು ಸಂಭ್ರಮಿಸೋಣ

ನಾನು ನನ್ನ ನೈಸರ್ಗಿಕ ಕಪ್ಪು ಕೂದಲನ್ನು ಗೋಲ್ಡನ್ ಕಲರ್ ಆಗಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ಬಹಳ ದಿನದಿಂದ ಹಣ ಸೇರಿಸುತ್ತಾ ಬಂದಿದ್ದೆ. ಕೂದಲಿನ ಬಣ್ಣ ಬದಲಿಸುವ ಹಿನ್ನೆಲೆ ಸಮೀಪದ ಸಲೂನ್ ಗೆ ತೆರಳಿದ್ದೆ. ಅಲ್ಲಿಯ ಸಿಬ್ಬಂದಿಗೂ ನನ್ನ ಕೂದಲಿನ ಬಗ್ಗೆ ವಿವರವಾಗಿ ಹೇಳಿದ್ದೆ. ಆದ್ರೆ ಸಿಬ್ಬಂದಿಯ ಎಡವಟ್ ನಿಂದಾಗಿ ನನ್ನ ಕಣ್ಣಲ್ಲಿ ನೀರು ಬಂತು ಎಂದು ದುಃಖ ಹಂಚಿಕೊಂಡಿದ್ದಾರೆ.
Published by:Divya D
First published: