ಇಡೀ ವಿಮಾನದಲ್ಲಿ ಒಬ್ಬಳೇ ಪ್ರಯಾಣಿಕಳು: ಜೊತೆಗಿದ್ದರು ಏಳು ಮಂದಿ..!

ವಿಮಾನದ ಸಮಯ ಬೆಳಿಗ್ಗೆ ಇದ್ದರಿಂದ ಬೇಗನೆ ತೆರಳಿದ್ದೆ. ಅಲ್ಲದೆ ನಾನು ಬಿಜಿನೆಸ್ ಕ್ಲಾಸ್ ಸೀಟು ಟಿಕೆಟ್ ಪಡೆದುಕೊಂಡಿದ್ದೆ. 

zahir | news18
Updated:January 3, 2019, 9:19 PM IST
ಇಡೀ ವಿಮಾನದಲ್ಲಿ ಒಬ್ಬಳೇ ಪ್ರಯಾಣಿಕಳು: ಜೊತೆಗಿದ್ದರು ಏಳು ಮಂದಿ..!
ಲೌಸಾ
zahir | news18
Updated: January 3, 2019, 9:19 PM IST
ಪ್ರಯಾಣದ ವೇಳೆ ಯಾವುದೇ ಗೊಂದಲ ಗೊಜಲುಗಳಿಲ್ಲದೇ ಪ್ರಯಾಣಿಸಬೇಕೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅಂತಹ ಅವಕಾಶ ಯಾರಿಗೆ ಬರುತ್ತದೆ ಹೇಳಿ. ಏಕೆಂದರೆ ಬಸ್​, ರೈಲುಗಳಲ್ಲಿ ಸದಾ ಪ್ರಯಾಣಿಕರು ಜಿನುಗುಡುತ್ತಿರುತ್ತಾರೆ. ಹಾಗೆಯೇ ವಿಮಾನದಲ್ಲಿ ಒಂದು ಟಿಕೆಟ್​ ಸಿಗಲು ಕೂಡ ವಾರಗಳ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಟಿಕೆಟ್​ ಲಭಿಸುವುದಿಲ್ಲ. ಅಂತದ್ರಲ್ಲಿ ಫಿಲಿಪ್ಪೀನ್ಸ್​ ಮಹಿಳೆಯೊಬ್ಬರು ವಿಮಾನದಲ್ಲಿ ಯಾವುದೇ ಗೊಂದಲವಿಲ್ಲದೆ  ಪ್ರಯಾಣಿಸಿದ್ದಾರೆ. ಅದು ಕೂಡ ಏಕಾಂಗಿಯಾಗಿ ಎಂಬುದು ವಿಶೇಷ.

ಡಿಸೆಂಬರ್​ 24 ರಂದು ಲೌಸಾ ಎರಿಸ್ಫೆ ಎಂಬ ಮಹಿಳೆಯು ವಿಮಾನದ ಪ್ರಯಾಣಕ್ಕೆ ಟಿಕೆಟ್​ ಬುಕ್ ಮಾಡಿದ್ದರು. ಡಾವೋ ನಗರದಿಂದ ಮನೀಲಾಗೆ ಪ್ರಯಾಣಿಸಬೇಕಿದ್ದ ಲೌಸಾ ಫಿಲಿಪ್ಪೀನ್ಸ್ ಏರ್​ಲೈನ್ಸ್​ ಏರಿದ್ದರು. ಆದರೆ ವಿಮಾನದಲ್ಲಿ ನೋಡಿದರೆ ಎಲ್ಲೆಲ್ಲೂ ಖಾಲಿ ಖಾಲಿ. ಇದನ್ನು ವಿಚಾರಿಸಿದಾಗ ಗೊತ್ತಾಗಿದ್ದು, ವಿಮಾನದಲ್ಲಿ ಸಹಪ್ರಯಾಣಿಕರಿಲ್ಲ ಎಂಬ ಸತ್ಯ.

ಇದನ್ನೂ ಓದಿ: ಜಿಯೋ ಭರ್ಜರಿ ಗಿಫ್ಟ್​: ಇಂದಿನಿಂದಲೇ 5 ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್​ ವೀಕ್ಷಿಸಿ

ಒಬ್ಬರೇ ಪ್ರಯಾಣಿಕಳು ಇದ್ದರೂ ಫಿಲಿಪ್ಪೀನ್ಸ್ ಏರ್​ಲೈನ್ಸ್​ ತನ್ನ ಸೇವೆಯನ್ನು ಮೊಟಕು ಗೊಳಿಸಲಿಲ್ಲ ಎಂಬುದೇ ಮತ್ತೊಂದು ವಿಶೇಷ. ಈ ವೇಳೆ ಲೌಸಾ ಅವರ ಸಹಾಯಕ್ಕಾಗಿ ಏಳು ಮಂದಿ ಸಿಬ್ಬಂದಿಯನ್ನು ಕೂಡ ನೇಮಿಸಲಾಗಿತ್ತು. ಈ ಸಂತೋಷದ ಘಳಿಗೆಯನ್ನು ವಿಮಾನ ಸಿಬ್ಬಂದಿಗಳೊಂದಿಗೆ ಹಂಚಿಕೊಂಡ ಲೌಸಾ, ಅದರ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!
ವಿಮಾನದ ಸಮಯ ಬೆಳಿಗ್ಗೆ ಇದ್ದರಿಂದ ಬೇಗನೆ ತೆರಳಿದ್ದೆ. ಅಲ್ಲದೆ ನಾನು ಬಿಜಿನೆಸ್ ಸೀಟು ಟಿಕೆಟ್ ಪಡೆದುಕೊಂಡಿದ್ದೆ.  ನನ್ನೊಂದಿಗೆ ಸಹ ಪ್ರಯಾಣಿಕರು ಇರುತ್ತಾರೆ ಎಂದೇ ಭಾವಿಸಿದ್ದೆ. ಆದರೆ ನಾನು ಫೋನ್ ನೋಡುತ್ತಿರುವಾಗ ವಿಮಾನದ ಸಿಬ್ಬಂದಿ ಬಾಗಿಲು ಬಂದ್ ಮಾಡಿದ್ದರು. ಈ ಸಂದರ್ಭದಲ್ಲಿ ಸುತ್ತಲೂ ನೋಡಿದರೆ ವಿಮಾನದಲ್ಲಿ ಯಾವ ಪ್ರಯಾಣಿಕರೂ ಇರಲಿಲ್ಲ. ಹೀಗಾಗಿ ಮಳೆ ಬರುತ್ತಿರುವುದರಿಂದ ವಿಮಾನದ ಬಾಗಿಲು ಮುಚ್ಚಿದ್ದೀರಾ ಎಂದು ಪ್ರಶ್ನಿಸಿದೆ. ಈ ಸಂದರ್ಭದಲ್ಲೇ ಗೊತ್ತಾಗಿದ್ದು, ನಾನೊಬ್ಬಳೇ ಪ್ರಯಾಣಿಸುತ್ತಿರುವುದಾಗಿ ಎಂದು ಲೌಸಾ ಎರಿಸ್ಪೆ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 2000 ರೂಪಾಯಿ ನೋಟ್ ಮುದ್ರಣ ನಿಲ್ಲಿಸಿದ ಸರ್ಕಾರ, ಮುಂದೇನು?
Loading...


ಒಟ್ಟಿನಲ್ಲಿ ಬಸ್​ ಅಥವಾ ರೈಲಿನಲ್ಲಿ ಒಂದು ಸೀಟು ಸಿಕ್ಕರೆ ಸಾಕು ಎಂಬಂತೆ ಪ್ರಯಾಣಕ್ಕೆ ಹೊರಡುವವರ ಮಧ್ಯೆ ಲೌಸಾ ರಾಣಿಯಂತೆ ಏಳು ಸಹಾಯಕಿರೊಂದಿಗೆ ಪ್ರಯಾಣಿಸಿದ್ದಾಳೆ. ಇಂತಹದೊಂದು ಅವಕಾಶ ಪಡೆದಿರುವುದು ಲೌಸಾ ಅವರ ಅದೃಷ್ಟ ಎನ್ನಲೇಬೇಕು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ