ಇದು ಹೊಸ ಐಡಿಯಾ, ಸೂಕ್ಷ್ಮವಾಗಿ ಗಮನಿಸಿ ಇಲ್ಲದಿದ್ರೆ ನಿಮಗೂ ಗೊತ್ತಾಗಲ್ಲ!

ಈ ಹಿಂದೆ ಗೇಬ್ರಿಯಲ್​ನ ಇಯರ್​ಫೋನ್​ಗಳನ್ನು ತನ್ನ ಮುದ್ದಿನ ಬೆಕ್ಕು ಕಡಿದು ಹಾಕಿತ್ತು. ಹೀಗಾಗಿಯೇ ತಾನು ದುಬಾರಿ ಏರ್​ಪೋಡ್​ಗಳನ್ನು ಖರೀದಿಸಿದೆ.

zahir | news18
Updated:January 31, 2019, 10:48 PM IST
ಇದು ಹೊಸ ಐಡಿಯಾ, ಸೂಕ್ಷ್ಮವಾಗಿ ಗಮನಿಸಿ ಇಲ್ಲದಿದ್ರೆ ನಿಮಗೂ ಗೊತ್ತಾಗಲ್ಲ!
@Twitter
zahir | news18
Updated: January 31, 2019, 10:48 PM IST
ದುನಿಯಾ ಸಖತ್ ಕಾಸ್ಟ್ಲಿ. ಅದರಲ್ಲೂ ಆ್ಯಪಲ್​ ಕಂಪೆನಿಯ​ ಉತ್ಪನ್ನಗಳು ಸ್ವಲ್ಪ ಜಾಸ್ತಿನೇ ದುಬಾರಿ. ಕೆಲ ವರ್ಷಗಳಿಂದ ಸಾಕಷ್ಟು ಸದ್ದು ಮಾಡಿರುವ ಆ್ಯಪಲ್​ ಏರ್​ಪಾಡ್ಸ್​ ವೈರ್​ಲೆಸ್​ ಎಂಬುದು ಯಾರಿಗೂ ಹೇಳಬೇಕಿಲ್ಲ. ಮೊದಲೇ ಇಯರ್​ ಫೋನ್​ ಇಟ್ಟ ಜಾಗದಲ್ಲಿರುವುದಿಲ್ಲ. ಇನ್ನು ವಯರ್​ಲೆಸ್​ ಇಯರ್​ ಫೋನ್​ ಎಲ್ಲಿರುತ್ತೆ ಹೇಳಿ. ಹೀಗಾಗಿಯೇ ತನ್ನ ದುಬಾರಿ ಇಯರ್​ ಫೋನ್​ ಮಿಸ್ ಆಗಬಾರದೆಂದು ಯುವತಿಯೊಬ್ಬಳು ಸಖತ್ ಐಡಿಯಾ ಕಂಡುಕೊಂಡಿದ್ದಾರೆ.

ವರ್ಜಿನಿಯಾ ಮೂಲದ ಗೇಬ್ರಿಯಲ್​ ತನ್ನ ಇಯರ್​ ಫೋನ್​ ಕಳೆದು ಹೋಗದಂತೆ ಅದನ್ನೇ ಕಿವಿಯೋಲೆ ಮಾಡಿಕೊಂಡಿದ್ದಾಳೆ. ಏರ್​ಪೋಡ್​ ಇಯರ್​ ಫೋನ್ ತುಸು ದುಬಾರಿಯಾಗಿರುವುದರಿಂದ ಇದನ್ನು ಮಿಸ್​ ಆಗದಂತೆ ನೋಡಿಕೊಳ್ಳಬೇಕು. ಇದಕ್ಕೇನು ಮಾಡುವುದು ಎಂದು ಯೋಚಿಸಿದಾಗ ಗೇಬ್ರಿಯಲ್​ ತಲೆಯಲ್ಲಿ ಇಂತಹದೊಂದು ಪ್ಲ್ಯಾನ್ ಹೊಳೆದಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್​ ಗ್ಯಾಲಕ್ಸಿ S10: ವಿಶ್ವದ ಮೊದಲ ಸಾವಿರ GB ಮೊಬೈಲ್

22 ರ ಹರೆಯದ ಗೇಬ್ರಿಯಲ್​ ತನ್ನ ಏರ್​ಪೋಡ್​ ಚಾರ್ಜ್​ ಮಾಡಿದ ಬಳಿಕ ಕಿವಿಯೋಲೆಯನ್ನಾಗಿಸುತ್ತಾರೆ. ತನಗೆ ಬೇಕಾದಾಗ ಅಲ್ಲಿಂದಲೇ ಕಿವಿಗಿಟ್ಟುಕೊಳ್ಳುತ್ತಾರೆ. ಇದರಿಂದ ಇಯರ್ ಫೋನ್​ ಎಲ್ಲಿ ಎಂದು ಹುಡುಕುವ ಸಮಸ್ಯೆ ಗೇಬ್ರಿಯಲ್​ಗಿಲ್ಲ. ತನ್ನ ಹೊಸ ಐಡಿಯಾವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಗೇಬ್ರಿಯಲ್, ಇಂತಹದೊಂದು ಉಪಾಯ ಮಾಡಲು ಒಂದು ಕಾರಣವಿದೆ ಎಂದು ತಿಳಿಸಿದ್ದಾರೆ.


Loading...


ಈ ಹಿಂದೆ ಗೇಬ್ರಿಯಲ್​ನ ಇಯರ್​ಫೋನ್​ಗಳನ್ನು ತನ್ನ ಮುದ್ದಿನ ಬೆಕ್ಕು ಕಡಿದು ಹಾಕಿತ್ತು. ಹೀಗಾಗಿಯೇ ತಾನು ದುಬಾರಿ ಏರ್​ಪೋಡ್​ಗಳನ್ನು ಖರೀದಿಸಿದೆ. ಇದು ಕೂಡ ಮಿಸ್​ ಆದರೆ ಮತ್ತದೇ ತೊಂದರೆಯಲ್ವಾ? ಇದಕ್ಕಾಗಿ ಉಪಾಯ ಮಾಡಿ ಇಯರ್​ ರಿಂಗ್ಸ್ ಮಾಡಿಕೊಂಡೆ ಎಂದಿದ್ದಾರೆ. ಒಟ್ಟಿನಲ್ಲಿ ಗೇಬ್ರಿಯಲ್​ನ ಈ ಐಡಿಯಾದಿಂದ ಪ್ರೇರಿತರಾಗಿ ಮೊಬೈಲ್​ ಕಂಪೆನಿಗಳು ಇಯರ್​ ರಿಂಗ್​ ಮಾದರಿಯಲ್ಲಿ ಇಯರ್​ ಫೋನ್​ ಅನ್ನು ಬಿಡುಗಡೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ: ಚಂಬಲ್ ಚಿತ್ರದ ಟ್ರೇಲರ್ ರಿಲೀಸ್: ಮತ್ತೆ ಹುಟ್ಟಿ ಬಂದ ಖಡಕ್​ ಅಧಿಕಾರಿ ಡಿ.ಕೆ ರವಿ?

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ