• Home
  • »
  • News
  • »
  • trend
  • »
  • Viral News: ಆಫೀಸ್ ರಾಜಕೀಯ ಬೇಡವೇ ಬೇಡ ಅಂತ ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡ ಮಹಿಳೆ!

Viral News: ಆಫೀಸ್ ರಾಜಕೀಯ ಬೇಡವೇ ಬೇಡ ಅಂತ ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡ ಮಹಿಳೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸ್ಮಶಾನದ ಹೆಸರು ಕೇಳಿದರೆನೇ ಅನೇಕ ಜನರು ಬೆಚ್ಚಿ ಬೀಳುತ್ತಾರೆ, ಆದರೆ ಈ 22 ವರ್ಷದ ಟ್ಯಾನ್ ಎಂಬ ಮಹಿಳೆ ಕೆಲಸ ಮತ್ತು ಜೀವನದ ಒಂದು ಸಮತೋಲನವನ್ನು ಸಾಧಿಸಲು ಮತ್ತು ಕಚೇರಿ ರಾಜಕೀಯದಿಂದ ದೂರವಿರಲು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಎಷ್ಟೋ ಜನರಿಗೆ ಅವರ ಕಚೇರಿಗಳಲ್ಲಿ(Office) ಒಳಗೊಳಗೆ ನಡೆಯುವ ರಾಜಕೀಯ(Inner Politics) ಅಂದ್ರೆ ಮನಸ್ಸಿಗೆ ತುಂಬಾನೇ ಕಿರಿಕಿರಿ ಅಂತ ಅನ್ನಿಸುತ್ತದೆ. ಇನ್ನೂ ಕೆಲವರಿಗೆ ಇದೆಲ್ಲವನ್ನೂ ನೋಡಿಕೊಂಡು, ಸಹಿಸಿಕೊಂಡು ಹೋಗುವ ಗುಣವಿರುತ್ತೆ. ಕೆಲವೊಬ್ಬರಿಗೆ ಆ ರೀತಿಯ ಕಿರಿಕಿರಿಗಳು ಮತ್ತು ಚಿಕ್ಕಪುಟ್ಟ ವಿಷಯಗಳಿಗೆ ರಾಜಕೀಯ ಮಾಡೋದೆಲ್ಲಾ ಇಷ್ಟವಾಗುವುದಿಲ್ಲ. ಆದ್ದರಿಂದಲೇ ಅನೇಕರು ತಮ್ಮ ಕಚೇರಿಯಲ್ಲಿನ ಕೆಲಸದ ವಾತಾವರಣ(Atmosphere) ಇಷ್ಟವಾಗದೆ, ಕೆಲಸಕ್ಕೆ ರಾಜೀನಾಮೆ(Resignation) ಕೊಟ್ಟು ಬೇರೆ ಕಂಪನಿ(Company)ಯಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಾರೆ.


ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ಮಹಿಳೆಯೊಬ್ಬರು ಆಫೀಸಿನಲ್ಲಿ ನಡೆಯುವ ರಾಜಕೀಯ ತನಗೆ ಬೇಡವೇ ಬೇಡ ಅಂತ ಹೇಳಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸ ಕೆಲಸವೊಂದನ್ನು ಹುಡುಕಿಕೊಂಡಿದ್ದಾಳೆ. ಅರೇ ಕೆಲಸ ಬಿಟ್ಟು, ಇನ್ನೊಂದು ಕೆಲಸ ಹುಡುಕಿಕೊಳ್ಳುವುದರಲ್ಲಿ ಏನಿದೆ ವಿಶೇಷತೆ ಅಂತ ನೀವು ಅಂದುಕೊಳ್ಳಬಹುದು. ಈ ಸ್ಟೋರಿ ಪೂರ್ತಿಯಾಗಿ ಓದಿ ನಿಮಗೆ ಅರ್ಥವಾಗುತ್ತದೆ.


ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡ ಚೀನೀ ಮಹಿಳೆ


ಸ್ಮಶಾನದ ಹೆಸರು ಕೇಳಿದರೆನೇ ಅನೇಕ ಜನರು ಬೆಚ್ಚಿ ಬೀಳುತ್ತಾರೆ, ಆದರೆ ಈ 22 ವರ್ಷದ ಟ್ಯಾನ್ ಎಂಬ ಮಹಿಳೆ ಕೆಲಸ ಮತ್ತು ಜೀವನದ ಒಂದು ಸಮತೋಲನವನ್ನು ಸಾಧಿಸಲು ಮತ್ತು ಕಚೇರಿ ರಾಜಕೀಯದಿಂದ ದೂರವಿರಲು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಚೀನೀ ವಿಶ್ವವಿದ್ಯಾನಿಲಯದ ಪದವೀಧರೆ ತನ್ನ ಒಂದು ಪೋಸ್ಟ್ ನಿಂದ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದ್ದಾರೆ.


ಟ್ಯಾನ್ ತನ್ನ ಶಾಂತವಾಗಿರುವ ಕೆಲಸದ ಸ್ಥಳದ ವೀಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಕಳೆದ ವಾರ ಟಿಕ್‌ಟಾಕ್ ಚೀನೀ ಆವೃತ್ತಿಯಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಪಶ್ಚಿಮ ಚೀನಾದ ಚಾಂಗ್‌ಕಿಂಗ್ ಮುನಿಸಿಪಾಲಿಟಿಯಲ್ಲಿನ ಪರ್ವತ ಪ್ರದೇಶದ ಸ್ಮಶಾನವನ್ನು ತೋರಿಸುತ್ತದೆ.


ಇದನ್ನೂ ಓದಿ: Father-Daughter Love: ಕೆಲಸಕ್ಕಿಂತ ಮಗಳೇ ಮುಖ್ಯ ಎಂದ ತಂದೆ! ಇದಲ್ಲವೇ ಅಪ್ಪನ ಪ್ರೀತಿ


"ಒಬ್ಬ ಸ್ಮಶಾನ ಕಾವಲುಗಾರನ ಕೆಲಸದ ವಾತಾವರಣವನ್ನು ನಾನು ನಿಮಗೆ ತೋರಿಸುತ್ತೇನೆ. ಇದು ಸರಳ ಮತ್ತು ಶಾಂತಯುತವಾದ ಕೆಲಸವಾಗಿದ್ದು, ಇಲ್ಲಿ ಬೆಕ್ಕುಗಳು ಮತ್ತು ನಾಯಿಗಳು ಮತ್ತು ಇಂಟರ್ನೆಟ್ ಮಾತ್ರ ಇವೆ" ಎಂದು ಟ್ಯಾನ್ ಹೇಳಿದ್ದಾರೆ.


ತನ್ನ ಹೊಸ ಕೆಲಸದ ಬಗ್ಗೆ ಏನ್ ಹೇಳ್ತಾರೆ ನೋಡಿ ಟ್ಯಾನ್


ಟ್ಯಾನ್ ತನ್ನ ಕೆಲಸವನ್ನು "ಆರಂಭಿಕ ನಿವೃತ್ತಿಯ ಜೀವನ" ಎಂದು ಬಣ್ಣಿಸಿದ್ದಾರೆ ಎಂದು ಪೋರ್ಟಲ್ ವರದಿ ಮಾಡಿದೆ. ಅವಳ ಕೆಲಸವು ವಿರಾಮದ ಸಮಯ, ಸುಂದರವಾದ ನೋಟ, ಕಚೇರಿ ರಾಜಕೀಯದಿಂದ ಮುಕ್ತವಾದ ಪರಿಸರವನ್ನು ನೀಡುತ್ತದೆ. "ನಾನು ಇಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ತಮಾಷೆಯಾಗಿ ನನ್ನನ್ನು 'ಸ್ಮಶಾನ ರಕ್ಷಕಿ' ಎಂದು ಕರೆದುಕೊಳ್ಳುತ್ತೇನೆ” ಎಂದು ಹೇಳಿದರು.


ಇನ್ನೂ ಸ್ಮಶಾನದಲ್ಲಿ ಅವಳ ಕೆಲಸ ಏನೆಂದರೆ, ಮೃತದೇಹದ ಜೊತೆಗೆ ಬಂದಿರುವ ಜನರನ್ನು ಬರಮಾಡಿಕೊಳ್ಳುವುದು, ಸಮಾಧಿಯ ಸ್ಥಳವನ್ನು ಅವರಿಗೆ ನೀಡುವುದು ಮತ್ತು ಸತ್ತವರ ಸಂಬಂಧಿಕರ ಪರವಾಗಿ ಸಮಾಧಿಗಳನ್ನು ಗುಡಿಸುವುದು ಮತ್ತು ಸ್ವಚ್ಚವಾಗಿರಿಸುವುದು ಎಂದು ವೆಬ್‌ಸೈಟ್ ವೊಂದು ತಿಳಿಸಿದೆ.


ಈ ಕೆಲಸಕ್ಕೆ ಟ್ಯಾನ್ ಗೆ ಎಷ್ಟು ಸಂಬಳ ಸಿಗುತ್ತೆ ಗೊತ್ತೇ?


ಟ್ಯಾನ್ ವಾರದಲ್ಲಿ ಆರು ದಿನ ಬೆಳಿಗ್ಗೆ 8.30 ರಿಂದ ಸಂಜೆ 5 ರವರೆಗೆ ಕೆಲಸ ಮಾಡುತ್ತಾರೆ ಮತ್ತು ಎರಡು ಗಂಟೆಗಳ ಊಟದ ವಿರಾಮವನ್ನುಸಹ ಅವರು ಮಧ್ಯಾಹ್ನದ ಹೊತ್ತಿನಲ್ಲಿ ಪಡೆಯುತ್ತಾರೆ. ಅವರು ತಿಂಗಳಿಗೆ ಸುಮಾರು 4,000 ಯುವಾನ್ ಎಂದರೆ ಭಾರತೀಯ ಮೌಲ್ಯದಲ್ಲಿ ಅದು 45,766 ರೂಪಾಯಿ ಸಂಬಳವನ್ನು ಗಳಿಸುತ್ತಾರೆ.


ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ಯಾನ್ ಬಗ್ಗೆ ತುಂಬಾನೇ ಕಾಳಜಿ ವಹಿಸಿ ಕಾಮೆಂಟ್ ಮಾಡಿದ್ದಾರೆ. "ಅಂತಹ ಕೆಲಸವನ್ನು ಹಿಂದಿನ ದಿನಗಳಲ್ಲಿ ದುರದೃಷ್ಟಕರವೆಂದು ಪರಿಗಣಿಸಲಾಗಿತ್ತು, ಆದರೆ ಆಧುನಿಕ ಜನರಿಗೆ ಶಾಂತಿಯುತವಾಗಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: Animal Extinction: 550 ಮಿಲಿಯನ್ ವರ್ಷಗಳ ಹಿಂದೆ ಪ್ರಾಣಿಗಳ ಅಳಿವಿಗೆ ಕಾರಣವಾಯ್ತು ಈ ಅಂಶ!


ಇನ್ನೊಬ್ಬರು "ನಾನು ಈ ಕೆಲಸವನ್ನು ಇಷ್ಟಪಡುತ್ತೇನೆ. ನೀವು ಜನರೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ ಮತ್ತು ಯಾವುದೇ ಕಚೇರಿಯ ರಾಜಕೀಯವಿಲ್ಲ" ಎಂದು ಬರೆದಿದ್ದಾರೆ.


"ಇದು ಕೇವಲ ಒಂದು ಸಾಮಾನ್ಯವಾದ ಕೆಲಸವಾಗಿದ್ದು, ನಾನು ಸಾಮಾನ್ಯವೆಂದು ಭಾವಿಸುವುದನ್ನು ಮಾಡುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಜೀವನದ ಬಗ್ಗೆ ನನಗೆ ತೃಪ್ತಿಯಿದೆ ಮತ್ತು ನಾನು ಈ ಕೆಲಸದಲ್ಲಿಯೇ ಮುಂದುವರೆಯುತ್ತೇನೆ" ಎಂದು ಹೇಳಿದರು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು