Cooking: ಒಂದಲ್ಲ, ಎರಡಲ್ಲ ಬರೋಬ್ಬರಿ 426 ಬಗೆಯ ಖಾದ್ಯ ತಯಾರಿಸಿದ್ದಾರೆ ಈಕೆ, ಎಲ್ಲಾ ನೆಂಟರಿಗಾಗಿ!

ಇಲ್ಲೊಬ್ಬ 30 ವರ್ಷದ ಮಹಿಳೆ ಬರೋಬ್ಬರಿ 426 ವಿವಿಧ ಅಡುಗೆಗಳನ್ನು ಮುಂಚಿತವಾಗಿ ತಯಾರಿಸುವ ಮೂಲಕ ಎಲ್ಲ ಗೃಹಿಣಿಯರು ಬಾಯಿ ಮೇಲೆ ಬೆರಳಿಡುವ ಹಾಗೆ ಮಾಡಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಪಡುವ ವಿಚಾರವೇ ಆಗಿದೆ. ಈ ಮಹಿಳೆಯ ಕತೆ ಈಗ ಇಂಟರ್‌ನೆಟ್‌ ನಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

426 ಬಗೆಯ ಖಾದ್ಯ ತಯಾರಿಸಿಟ್ಟ ಮಹಿಳೆ

426 ಬಗೆಯ ಖಾದ್ಯ ತಯಾರಿಸಿಟ್ಟ ಮಹಿಳೆ

  • Share this:

ಗೃಹಿಣಿಯರಿಗಂತೂ ಪ್ರತಿದಿನ ಮೂರು ಹೊತ್ತು ಅಡುಗೆ (Cook) ಮಾಡುವುದು ಒಂದು ಹರಸಾಹಸದ ಕೆಲಸವಾಗಿರುತ್ತದೆ. ದಿನನಿತ್ಯ ಯೋಚಿಸಿ ಯೋಚಿಸಿ ಅಡುಗೆ ಮಾಡಿ ಮನೆ ಮಂದಿಗೆ ಬಡಿಸುವಷ್ಟರಲ್ಲಿ ಮಹಿಳೆಯರು (women) ಸುಸ್ತಾಗುವುದು ನಿಜ ಸಂಗತಿ ಆಗಿದೆ. ಅಡುಗೆ ಮಾಡುವವರು ಮುಂಚಿತವಾಗಿ ಯಾವ ಅಡುಗೆ ಮಾಡಬೇಕೆಂದು ನಿರ್ಧರಿಸಿ ಆನಂತರ ಆ ಅಡುಗೆಯನ್ನು ತಯಾರಿಸುತ್ತಾರೆ.  ಆದರೂ ಸಹ ಅಡುಗೆಯನ್ನು ಸ್ವಲ್ಪ ವೇಗವಾಗಿ ಅಥವಾ ಮುಂಚಿತವಾಗಿ ತಯಾರಿಸಬಹುದಾದರೆ  ಕೆಲವು ಅಡುಗೆ ತಂತ್ರಗಳನ್ನು (Cooking techniques) ಬಳಸುವುದು ಹೀಗೆ ಅನೇಕ ವಿಧಾನಗಳನ್ನು ಅಡುಗೆ ತಯಾರಿಕೆಯಲ್ಲಿ ಬಳಸುವುದರಿಂದ ನೀವು ವೇಗವಾಗಿ ಅಡುಗೆ ಮಾಡಿ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸಬಹುದು. ಇದು ಸಾಮಾನ್ಯ ಗೃಹಿಣಿಯರ ಕತೆಯಾಯಿತು.


426 ವಿವಿಧ ಅಡುಗೆಗಳನ್ನು ಮುಂಚಿತವಾಗಿ ತಯಾರಿಸಿದ ಮಹಿಳೆ 
ಇಲ್ಲೊಬ್ಬ 30 ವರ್ಷದ ಮಹಿಳೆ ಬರೋಬ್ಬರಿ 426 ವಿವಿಧ ಅಡುಗೆಗಳನ್ನು ಮುಂಚಿತವಾಗಿ ತಯಾರಿಸುವ ಮೂಲಕ ಎಲ್ಲ ಗೃಹಿಣಿಯರು ಬಾಯಿ ಮೇಲೆ ಬೆರಳಿಡುವ ಹಾಗೆ ಮಾಡಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಪಡುವ ವಿಚಾರವೇ ಆಗಿದೆ. ಈ ಮಹಿಳೆಯ ಕತೆ ಈಗ ಇಂಟರ್‌ನೆಟ್‌ ನಲ್ಲಿ ಸಕತ್‌ ವೈರಲ್‌ ಆಗುತ್ತಿದೆ.


ಈ ಮಹಿಳೆ ಯುಎಸ್‌ ನ ಇಂಡಿಯಾನಾದಲ್ಲಿ ವಾಸಿಸುವ 30 ವರ್ಷ ವಯಸ್ಸಿನ ಕೆಲ್ಸಿ ಶಾ ಆಗಿದ್ದಾರೆ. ಇವರು ಇತ್ತೀಚೆಗೆ ತಾವು ಮುಂಚಿತವಾಗಿ ತಯಾರಿಸಿದ ಬರೋಬ್ಬರಿ 426 ಅಡುಗೆಗಳ ಕುರಿತು ಅದರ ಅನುಭವದ ಕುರಿತು ಇಂಟರ್‌ನೆಟ್‌ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡರು. ಇವರ ವಿಷಯ ತಿಳಿದ ನೆಟ್ಟಗರು ದಿಗ್ಭ್ರಮೆಗೊಂಡಿದ್ದಾರೆ.


ಅತ್ಯುತ್ತಮ ಊಟದ ಪ್ರೆಪ್ಪರ್
ಸುದ್ದಿ ವೆಬ್‌ಸೈಟ್‌ ಮಿರರ್ ಪ್ರಕಾರ “ಈ ತಾಯಿಯನ್ನು 'ಅತ್ಯುತ್ತಮ ಊಟದ ಪ್ರೆಪ್ಪರ್' ಎಂದು ಕರೆಯಲಾಗುತ್ತಿದೆ. ಅವರ ಅದ್ಭುತವಾದ ಊಟವನ್ನು ತಯಾರಿಸುವ ಅವರ ಕೌಶಲ್ಯಕ್ಕೆ ತುಂಬು ಹೃದಯದ ಧನ್ಯವಾದಗಳು. ಶಾ ಅವರು ಈಗಾಗಲೇ ಮೂರು ತಿಂಗಳಲ್ಲಿ ಒಟ್ಟು 426 ವಿವಿಧ ತರಹದ ಊಟಗಳನ್ನು ಸಿದ್ಧಪಡಿಸಿದ್ದಾರೆ. ಈ ಊಟಗಳು ಅವರ ಕುಟುಂಬವನ್ನು 8 ತಿಂಗಳ ಕಾಲ ಎರಡು ಹೊತ್ತಿನ ಹಸಿವನ್ನು ನೀಗಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ.
ಇದನ್ನೂ ಓದಿ:  YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

2017 ರಲ್ಲಿ ಯುಸ್‌ ಯ ಇಂಡಿಯಾನಾದ ಬೇರೆ ಸ್ಥಳಕ್ಕೆ ಅವಳು ಮತ್ತು ಅವಳ ಪತಿ ಸ್ಥಳಾಂತರಗೊಂಡ ನಂತರ ಮೂರು ಮಕ್ಕಳ ತಾಯಿಯಾಗಿರುವ ಇವರು ಹೆಚ್ಚು ಆರೋಗ್ಯ ಪ್ರಜ್ಞೆಯನ್ನು ಹೊಂದಿದ್ದಳು ಮತ್ತು ತನ್ನ ಆಹಾರವನ್ನು ಸಂರಕ್ಷಿಸಲು ಆರಂಭಿಸಿದಳು. ನಾವು ನಮ್ಮ ತೋಟದ ಮನೆ ಇರುವ ಸ್ಥಳಕ್ಕೆ ಹೋದಾಗ, ನಿಧಾನವಾದ ಜೀವನಶೈಲಿಯಿಂದ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಕಲಿತೆ. ನಾವು ಏನನ್ನು ಸೇವಿಸುತ್ತೇವೆ, ಅದು ಎಲ್ಲಿಂದ ಬರುತ್ತದೆ ಎಂಬ ಮಾಹಿತಿಗಳನ್ನು ತಿಳಿಯಲು ಬಯಸಿದೆ” ಎಂದು ಅವರು ಹೇಳಿದರು.


ಈ ಸಂರಕ್ಷಿಸುವ ಕೌಶಲ್ಯ ಲಕ್ಡೌನ್ ಸಮಯದಲ್ಲಿ ಸಹಾಯ ಮಾಡಿತ್ತಂತೆ
ಕೆಲ್ಸಿ ಶಾ ಉಪ್ಪಿನಕಾಯಿ ಮತ್ತು ತಾಜಾ ಉತ್ಪನ್ನಗಳನ್ನು ಸಂರಕ್ಷಿಸಲು ಮತ್ತು ಹೆಚ್ಚು ಕಾಲ ಉಳಿಯುವಂತೆ ಮಾಡಲು ಘನೀಕರಣದಂತಹ ಸಂರಕ್ಷಣೆಯ ವಿವಿಧ ತಂತ್ರಗಳನ್ನು ಕಲಿಯಲು ಸ್ವತಃ ತರಬೇತಿ ಪಡೆದರು. ಇದು ನಿಜಕ್ಕೂ ಒಂದು ಕೌಶಲ್ಯ ಮತ್ತು ಸಾಕಷ್ಟು ಸಮಯ ಮತ್ತು ತಾಳ್ಮೆ ತೆಗೆದುಕೊಳ್ಳುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆಹಾರವಿಲ್ಲದೆ ಪರದಾಡುತ್ತಿರುವ ಸಮಯದಲ್ಲಿ ಈ ಸಂರಕ್ಷಿಸುವ ಕೌಶಲ್ಯವು ಅವರಿಗೆ ಬಹಳಷ್ಟು ಸಹಾಯ ಮಾಡಿತು ಎಂದು ಅವರು ಹೇಳಿದರು.ತಾಜಾ ಆಹಾರ ಸ್ವಾನ್ ಮಾಡಲು ಇವರು ಏನು ಮಾಡುತ್ತಿದ್ದರು ನೋಡಿ
ತರಕಾರಿಗಳನ್ನು ತಾಜಾವಾಗಿ ಸೇವಿಸಬೇಕೆಂದು ಅವರು ಅದರ ಕುರಿತು “ನಾನು ಟೊಮ್ಯಾಟೊ ಸಿಪ್ಪೆಯನ್ನು ತೆಗೆದು ಬಳಸುತ್ತೇನೆ ಮತ್ತು ಅವುಗಳನ್ನು ಒಣಗಿಸಿ ಬಳಕೆ ಮಾಡುವುದರಿಂದ ಊಟಕ್ಕೆ ಸೇರಿಸಬಹುದಾದ ಪುಡಿಯನ್ನು ತಯಾರಿಸಬಹುದು. ನನ್ನ ಅಡುಗೆ ಡಬ್ಬಿಯಲ್ಲಿ ರೆಡಿಮೇಡ್ ಟೊಮೆಟೊ ಸಾಸ್ ಮತ್ತು ಕತ್ತರಿಸಿದ ಟೊಮೆಟೊಗಳನ್ನು ಶೇಖರಿಸಿ ಇರಿಸಿದ್ದೇನೆ. ಇದರಿಂದ ಮತ್ತೆ ಮತ್ತೆ ಟೊಮ್ಯೊಟೊ ತರುವುದು ತಪ್ಪುತ್ತದೆ. ಹೀಗೆ ತರಕಾರಿ ಮತ್ತು ಹಣ್ಣುಗಳನ್ನು ಶೇಖರಿಸಿ ಇಟ್ಟಿರುತ್ತೆನೆ” ಎಂದು ಶಾ ಹೇಳಿದರು.


ಇದನ್ನೂ ಓದಿ:  Viral Video: ಅಳುತ್ತಿರುವ ಮಗುವನ್ನು ಮುದ್ದಾಡಿದ ಏರ್ ಇಂಡಿಯಾ ಸಿಬ್ಬಂದಿ! ಎಷ್ಟು ಕ್ಯೂಟ್ ಆಗಿದೆ ಈ ವಿಡಿಯೋ

ಹೀಗೆಯೇ ಈ ದಂಪತಿಗಳು ಸಾಧ್ಯವಾದಷ್ಟು ತಾಜಾ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಂಡಿದ್ದರು. ಅವರು ಹಿಟ್ಟು ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಸ್ಥಳೀಯ ಸೂಪರ್‌ಮಾರ್ಕೆಟ್‌ನಿಂದ ತರುತ್ತಾರೆ. ಆದ್ದರಿಂದ ಅಕ್ಕಿ ಮತ್ತು ಹಿಟ್ಟಿನಂತಹ ಪದಾರ್ಥಗಳನ್ನು ತರಲು ನಾವು ಪ್ರತಿ ಎರಡು ವಾರಗಳಿಗೊಮ್ಮೆ ಸೂಪರ್‌ ಮಾರ್ಕೆಟ್‌ಗೆ ಹೋಗುತ್ತೇವೆ ಎಂದು ಅವರು ಹೇಳಿದರು.

Published by:Ashwini Prabhu
First published: