ಟ್ವಿಟರ್‌ನಲ್ಲಿ 90ರ ದಶಕದ ಮದುವೆಯ ನೆನಪುಗಳನ್ನು ಮತ್ತೆ ನೆನಪಿಸುವ ಪೋಸ್ಟ್ ಒಂದು ಗಮನ ಸೆಳೆದಿದೆ. ಮದುವೆಗಳಲ್ಲಿ ಮುಖ್ಯ ಆಕರ್ಷಣೆ ಏನಿರುತ್ತದೆ? ಮೊದಲನೆಯದ್ದು ವಧು ಮತ್ತು ವರ. ಎರಡನೆಯದ್ದು? ಊಟ. ಮದುವೆಯ ಊಟವನ್ನು ಸವಿಯದೆ ಇರಲು ಬಯಸುವವರು ಯಾರೂ ಇರಲಿಕ್ಕಿಲ್ಲ. ಹಿಂದಿನಿಂದಲೂ ಮದುವೆಗಳು ಈಗಿರುವಂತೆಯೇ ಇದ್ದವೇ? ಇಲ್ಲ. ಭಾರತದಲ್ಲಿ ರೀತಿ ನೀತಿಗಳು ವರ್ಷಗಳು ಕಳೆದಂತೆ ಬದಲಾಗುತ್ತಾ ಬಂದಿವೆ. ಭಾರತೀಯ ಅದ್ಧೂರಿ ಮದುವೆಗಳಲ್ಲಿ, ಮದುವೆ ಮನೆಯ ಅಲಂಕಾರದಿಂದ ಹಿಡಿದು, ಮದುಮಗಳ ಅಲಂಕಾರದ ವರೆಗೆ ಎಲ್ಲವೂ ಇನ್ನಷ್ಟು ಮೇಲ್ದರ್ಜೆಗೆ ಏರಿದೆ. ಈಗಂತೂ ಅವು ಹೆಚ್ಚು ಸ್ಟೈಲಿಷ್ ಮತ್ತು ಫ್ಯಾಷನೇಬಲ್ ಆಗಿದೆ. ಮದುವೆಗಳಲ್ಲಿ ಬದಲಾವಣೆಗೊಳ್ಳುತ್ತಾ ಬಂದಿರುವ ಇನ್ನೊಂದು ವಿಭಾಗವೆಂದರೆ ಊಟದ ವಿಭಾಗ. ಈ ದಿನಗಳಲ್ಲಿ ಎಲ್ಲಾ ರಿಸೆಪ್ಶನ್ ಪಾರ್ಟಿಗಳಲ್ಲಿ ಚಾಟ್ ಮತ್ತು ನೂಡಲ್ಸ್‌ನಿಂದ ಹಿಡಿದು ಬಿರಿಯಾನಿ, ಚಿಕನ್ ಕರಿಯವರೆಗೆ ವೈವಿಧ್ಯಮಯ ಬಫೆ ಊಟದ ಆಯ್ಕೆಗಳು ಲಭ್ಯ ಇರುತ್ತವೆ. ನಮಗಿಷ್ಟ ಬಂದದ್ದನ್ನು ನಾವಲ್ಲಿ ತಿನ್ನಬಹುದು. ಆದರೆ 90ರ ದಶಕದಲ್ಲಿ ಈ ರೀತಿ ಇರಲಿಲ್ಲ. ಕುಳಿತು ಊಟ ಮಾಡುವ ವ್ಯವಸ್ಥೆ ಇರುತಿತ್ತು. ಅತಿಥಿಗಳಿಗೆ ಗುಂಪಾಗಿ ಬಡಿಸುವ ವ್ಯವಸ್ಥೆ ಇತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಊಟದ ಆಯ್ಕೆ ಇರಲಿಲ್ಲ ಮತ್ತು ಊಟಕ್ಕಿಂತ ಮೊದಲು ಒಂದು ಮೆನು ಕಾರ್ಡ್ ಅಥವಾ ಭೋಜನ ಪಟ್ಟಿ ನೀಡಲಾಗುತ್ತಿತ್ತು. ನೀವು 90ರ ದಶಕದಲ್ಲಿ ಹುಟ್ಟಿದವರಾಗಿದ್ದರೆ, ನಿಮಗೆ ಇದು ಖಂಡಿತಾ ನೆನಪಿರುತ್ತದೆ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಇತ್ತೀಚೆಗೆ, ಟ್ವಿಟರ್‌ನಲ್ಲಿ 90ರ ದಶಕದ ಮದುವೆಯ ನೆನಪುಗಳನ್ನು ಮತ್ತೆ ನೆನಪಿಸುವ ಪೋಸ್ಟ್ ಒಂದು ಗಮನ ಸೆಳೆದಿದೆ. 1990ರಲ್ಲಿ ನಡೆದ ಬಂಗಾಲಿ ಮದುವೆಯೊಂದರ ಮೆನು ಕಾರ್ಡ್ ಫೋಟೋವನ್ನು ಹೊಂದಿರುವ ಆ ಪೋಸ್ಟನ್ನು @SadMandalorian ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಹಾಕಿದ್ದಾರೆ. “ ಓಹ್ ಮೈ ಗಾಡ್, ನನ್ನ ಸಂಬಂಧಿ, ನನ್ನ ಹೆತ್ತವರ ಮದುವೆಯ ಮೆನು ಕಾರ್ಡನ್ನು ಹುಡುಕಿ ತೆಗೆದಿದ್ದಾನೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆ ಫೋಟೋದಲ್ಲಿ ಇರುವ ಮೆನು ಕಾರ್ಡ್‍ನಲ್ಲಿ , ಒಂದು ಸಸ್ಯಹಾರಿ ಊಟದ ವಿಭಾಗ ಮತ್ತು ಒಂದು ಮಾಂಸಹಾರಿ ಊಟದ ವಿಭಾಗ ಇದೆ. ಸಸ್ಯಹಾರಿ ವಿಭಾಗದಲ್ಲಿ, ರಾಧ ಬಲ್ಲವಿ, ಧಮ್ ಆಲೂ, ವೆಜ್ ಕಟ್ಲೆಟ್, ವೆಜ್ ಫ್ರೈಡ್‍ರೈಸ್, ಮಟರ್ ಪನೀರ್, ಚಟ್ನಿ, ಹಪ್ಪಳ, ಸಂದೇಶ್ , ಕಮಲಭೋಗ್ , ಪಾನ್ ಇದ್ದರೆ, ಮಾಂಸಹಾರಿ ವಿಭಾಗದಲ್ಲಿ ರಾಧಬಲ್ಲವಿ, ಧಮ್ ಆಲೂ, ಸಲಾಡ್, ಫಿಶ್ ಬಟರ್ ಫ್ರೈ,ಚಿಲ್ಲಿ ಫಿಶ್, ವೆಜ್ ಫ್ರೈಡ್‍ರೈಸ್, ಚಿಕನ್ ರೆಜಾಲಾ, ಚಟ್ನಿ, ಹಪ್ಪಳ, ಕಮಲಭೋಗ್ ,ಸಂದೇಶ್ , ಐಸ್‍ಕ್ರೀಂ ಮತ್ತು ಪಾನ್ ಇದೆ. ಆಹಾ ಬಾಯಲ್ಲಿ ನೀರು ಬರುತ್ತಿದೆಯೇ? ಹಳೆಯ ಮದುವೆ ಊಟದ ನೆನಪುಗಳು ಮರುಕಳಿಸಿದವೇ? ನಿಮ್ಮಂತೆಯೇ ಬಹಳಷ್ಟು ಟ್ವಿಟ್ಟರ್ ಬಳಕೆದಾರರು 90ರ ದಶಕದ ಮದುವೆಗಳನ್ನು ನೆನಪಿಸಿಕೊಂಡಿದ್ದಾರೆ.
“ಈ ಮೆನು ಕಾರ್ಡ್ ಇಂದಿಗೂ ಸಾಧಾರಣ ಮಟ್ಟದ ಬಂಗಾಲಿ ಮದುವೆಗಳಲ್ಲಿ ಸಾಮಾನ್ಯ” ಎಂದು ಒಬ್ಬರೆ ಬರೆದುಕೊಂಡರೆ, “ಮಾಂಸಹಾರಿಗಳು, ಆದರೆ ಎರಡೂ ರೀತಿಯ ಆಹಾರಗಳನ್ನು ತಿನ್ನುತ್ತಾರೆ# ಗೆಲುವು” ಎಂದು ಮತ್ತೊಬ್ಬರು ಈ ಮದುವೆ ಮೆನು ಕಾರ್ಡ್ ಪೋಸ್ಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಬಂಗಾಲಿ ಮದುವೆಯ ಮೆನುಗಳು ಫನ್ನಿಯಾಗಿರುತ್ತವೆ” ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ