Footwear: ಈ ಗ್ರಾಮದಲ್ಲಿ ಅಪ್ಪಿತಪ್ಪಿ ಚಪ್ಪಲಿ ಹಾಕಿ ಓಡಾಡಿದ್ರೆ ಶಿಕ್ಷೆ ಗ್ಯಾರೆಂಟಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾನ್ಯವಾದ ಮನೆಗೆ ಸಂಬಂಧಪಟ್ಟಿದ್ದ ಆಚರಣೆ ಆಗಿರಬಹುದು ಅಥವಾ ದೇವರಿಗೆ ಸಂಬಂಧಪಟ್ಟಂತಹ ಆಚರಣೆ ಆಗಿರಬಹುದು. ಇವತ್ತಿಗೂ ನಮ್ಮ ದೇಶದಲ್ಲಿ ಬಹುತೇಕ ಕುಟುಂಬಗಳು ತಮ್ಮ ಮನೆ ಲಕ್ಷ್ಮಿ ದೇವರನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ, ಇದರಿಂದಾಗಿ ಅನೇಕ ಜನರು ತಮ್ಮ ಮನೆಯ ಒಳಗೆ ಮತ್ತು ದೇವಾಲಯಗಳಲ್ಲಿ ಪಾದರಕ್ಷೆಗಳನ್ನು ಧರಿಸುವುದಿಲ್ಲ.

ಮುಂದೆ ಓದಿ ...
  • Share this:

ನಮ್ಮ ಭಾರತ (India) ದೇಶದಲ್ಲಿ ಇಂದಿಗೂ ಜನರು ತಮ್ಮ ಸಂಸ್ಕೃತಿ ಮತ್ತು ಕೆಲವು ಅಧ್ಯಾತ್ಮಿಕ ನಂಬಿಕೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಎಂದು ಹೇಳುವುದಕ್ಕೆ ಅನೇಕ ಉದಾಹರಣೆಗಳು ಮತ್ತು ಸಾಕ್ಷಿಗಳು ಪ್ರತಿದಿನ ನಮ್ಮ ಕಣ್ಮುಂದೆನೇ ನಡೆಯುತ್ತಿರುತ್ತವೆ. ಹಳ್ಳಿಗಳ (Villages) ಕಡೆಗೆ ಹೋದರೆ ಇವತ್ತಿಗೂ ನಾವು ಆ ಪೂರ್ವಜರ ಆಚರಣೆಗಳು ಮತ್ತು ನಂಬಿಕೆಗಳ ಪರಿಪಾಲನೆಯನ್ನು ನೋಡಬಹುದು. ಅದು ಸಾಮಾನ್ಯವಾದ ಮನೆಗೆ ಸಂಬಂಧಪಟ್ಟಿದ್ದ ಆಚರಣೆ ಆಗಿರಬಹುದು ಅಥವಾ ದೇವರಿಗೆ (God) ಸಂಬಂಧಪಟ್ಟಂತಹ ಆಚರಣೆ ಆಗಿರಬಹುದು. ಇವತ್ತಿಗೂ ನಮ್ಮ ದೇಶದಲ್ಲಿ ಬಹುತೇಕ ಕುಟುಂಬಗಳು (Families) ತಮ್ಮ ಮನೆ ಲಕ್ಷ್ಮಿ ದೇವರನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ, ಇದರಿಂದಾಗಿ ಅನೇಕ ಜನರು ತಮ್ಮ ಮನೆಯ ಒಳಗೆ ಮತ್ತು ದೇವಾಲಯಗಳಲ್ಲಿ (Temple) ಪಾದರಕ್ಷೆಗಳನ್ನು (Footwear) ಧರಿಸುವುದಿಲ್ಲ.


ಶೂ, ಚಪ್ಪಲಿ ಹಾಕೋ ಹಾಗೆ ಇಲ್ಲ
ಇನ್ನೂ ನಗರಗಳ ವಿಷಯಕ್ಕೆ ಬಂದರೆ ಅನೇಕ ಜನರು ಮನೆಯಲ್ಲಿಯೇ ಚಪ್ಪಲಿ ಧರಿಸಿಕೊಂಡು ಓಡಾಡುವುದನ್ನು ನಾವು ನೋಡುತ್ತೇವೆ. ದೇವಸ್ಥಾನಗಳಲ್ಲಿ ಮಾತ್ರ ಚಪ್ಪಲಿಯನ್ನು ಹೊರಗೆ ಬಿಟ್ಟು ಹೋಗುತ್ತಾರೆ. ನಿಮಗೆ ತಿಳಿದಿದೆಯೇ, ತಮಿಳುನಾಡಿನಲ್ಲಿ ಒಂದು ಸ್ಥಳವಿದೆ, ಅಲ್ಲಿ ಇಡೀ ಹಳ್ಳಿಯಲ್ಲಿಯೇ ಶೂ ಮತ್ತು ಚಪ್ಪಲಿಗಳನ್ನು ಹಾಕಿಕೊಂಡು ಹೋಗುವಂತಿಲ್ಲವಂತೆ. ಹೌದು.. ಆ ಹಳ್ಳಿಗೆ ನೀವು ಹೋದರೆ ಬರಿಗಾಲಿನಲ್ಲಿಯೇ ಹಳ್ಳಿ ತುಂಬಾ ಓಡಾಡಬೇಕಂತೆ. ಇಲ್ಲಿ ಚಪ್ಪಲಿ ಮತ್ತು ಶೂ ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಜನರು ಬರಿಗಾಲಿನಲ್ಲಿ ಪ್ರಯಾಣಿಸಬೇಕಾಗುತ್ತದೆ.


ಪಾದರಕ್ಷೆ ಧರಿಸಿದರೆ ಶಿಕ್ಷೆ
ವೆಲ್ಲಗವಿ ಗ್ರಾಮವು ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಇಲ್ಲಿ, ಯಾರಾದರೂ ಯಾವುದೇ ಪಾದರಕ್ಷೆಗಳನ್ನು ಧರಿಸಿರುವುದು ಕಂಡು ಬಂದರೆ, ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಅಂತೆ. ನೂರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತವೆ. ಅವರಿಗೆ ರಸ್ತೆಗಳಿಲ್ಲ ಮತ್ತು ಈ ಹಳ್ಳಿಯನ್ನು ತಲುಪಲು ಕಷ್ಟಕರವಾದ ದಾರಿಯನ್ನು ಹಾದು ಬರಬೇಕಾಗುತ್ತದೆ.


ಇದನ್ನೂ ಓದಿ: Vet Doctor: ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದು ಮದುವೆ ಮಾಡಿಸಿದ ಜನ


ಚಪ್ಪಲಿ ಧರಿಸದೇ ಇರಲು ಕಾರಣವೇನು ಗೊತ್ತಾ?
ಗ್ರಾಮದ ಪ್ರವೇಶದ್ವಾರದಲ್ಲಿ ಒಂದು ದೊಡ್ಡ ಮರವಿದೆ, ಅಲ್ಲಿ ಅನೇಕ ಜನರು ಪೂಜಿಸುತ್ತಾರೆ. ನಿವಾಸಿಗಳ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ನಿಮ್ಮ ಕಾಲಿನಲ್ಲಿ ಏನನ್ನೂ ಧರಿಸಲು ನಿಮಗೆ ಅನುಮತಿಸಲಾಗುವುದಿಲ್ಲ. ಹಳ್ಳಿಗರು ತಮ್ಮ ಇಡೀ ಗ್ರಾಮವೇ ದೇವರ ಮನೆಯಂತೆ ನೋಡುತ್ತಾರೆ ಮತ್ತು ಆದ್ದರಿಂದ ಹೊರಗೆ ಎಷ್ಟೇ ಬಿಸಿಲು ಇದ್ದರೂ ಯಾರೂ ಕೂಡ ಚಪ್ಪಲಿ ಅಥವಾ ಬೂಟುಗಳನ್ನು ಧರಿಸುವಂತಿಲ್ಲ. ಯಾರಾದರೂ ಈ ನಂಬಿಕೆಗೆ ವಿರುದ್ಧವಾಗಿ ಹೋದರೆ, ಅವರ ದೇವತೆ ಕೋಪಗೊಳ್ಳುತ್ತಾರೆ ಎಂದು ಅಲ್ಲಿನ ಜನರು ನಂಬುತ್ತಾರೆ.


ಆದರೆ ಬೇಸಿಗೆಯ ಉತ್ತುಂಗದ ಮಧ್ಯಾಹ್ನಗಳಲ್ಲಿ ತುಂಬಾನೇ ವಯಸ್ಸಾದ ಜನರಿಗೆ ಈ ನಿಯಮದಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಗ್ರಾಮದಲ್ಲಿರುವ ಮನೆಗಳ ನಡುವೆ ಮತ್ತು ಗ್ರಾಮದ ಕೊನೆಯಲ್ಲಿ ಸೇರಿ 25ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಒಂದೇ ಒಂದು ಸಣ್ಣ ಚಹಾ ಮತ್ತು ಸರಬರಾಜು ಅಂಗಡಿ ಇದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಅಗತ್ಯಗಳಿಗಾಗಿ ಹತ್ತಿರದ ಪಟ್ಟಣಕ್ಕೆ ಪ್ರಯಾಣಿಸಬೇಕಾಗುತ್ತದೆ.


ಇನ್ನೂ ಅನೇಕ ನಿರ್ಬಂಧಗಳು
ಈ ಗ್ರಾಮದಲ್ಲಿ ಇದೊಂದೇ ಅಲ್ಲ, ಇನ್ನೂ ಅನೇಕ ನಿರ್ಬಂಧಗಳಿವೆ ನೋಡಿ. ಇಡೀ ಗ್ರಾಮವು ಸಂಜೆ 7 ಗಂಟೆಗೆ ನಿದ್ರೆ ಮಾಡುತ್ತದೆ. ಯಾರಿಗೂ ಜೋರಾಗಿ ಮಾತನಾಡಲು, ಸಂಗೀತವನ್ನು ಕೇಳಲು ಅಥವಾ ಯಾವುದೇ ದೊಡ್ಡ ಸ್ಪೀಕರ್ ಗಳನ್ನು ಊರಿನಲ್ಲಿ ಹಾಕಲು ಅನುಮತಿಸಲಾಗುವುದಿಲ್ಲ. ಅಂತಹ ನಿರ್ಬಂಧಗಳ ಹೊರತಾಗಿಯೂ, ಗ್ರಾಮದ ಜನರು ತುಂಬಾನೇ ಸಂತೋಷವಾಗಿದ್ದಾರೆ ಮತ್ತು ಒಳ್ಳೆಯ ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Bride and Groom: ಮದುವೆಯಲ್ಲಿ ವಧು ವರರ ಬೆಂಕಿಯ ಸಾಹಸಮಯ ಎಂಟ್ರಿ! ವಿಡಿಯೋ ವೈರಲ್


ಏಕಾಂತವನ್ನು ಹುಡುಕುತ್ತಿರುವ ಜನರಿಗೆ ಈ ಗ್ರಾಮವು ಸ್ವರ್ಗವಾಗಿದೆ ಮತ್ತು ಪ್ರತಿಯೊಬ್ಬ ಚಾರಣಿಗನ ಕನಸು ಇಲ್ಲಿ ನನಸಾಗುತ್ತದೆ. ರಸ್ತೆ ಸಂಪರ್ಕವಿಲ್ಲದ ಕಾರಣ, ಗ್ರಾಮವನ್ನು ತಲುಪುವ ಮಾರ್ಗವು ಚಾರಣದ ಮೂಲಕವಾಗಿದೆ. ಈ ಗ್ರಾಮಕ್ಕೆ ತಲುಪಲು ನೀವು ಕೊಡೈಕೆನಾಲ್ ನಿಂದ ಹೋಗಬಹುದು ಮತ್ತು ನೀವು ಆ ರಾತ್ರಿ ಅಲ್ಲಿಯೇ ಟೆಂಟ್ ನಲ್ಲಿ ಉಳಿಯಲು ಬಯಸದಿದ್ದರೆ ಅಲ್ಲಿಂದ ಅದೇ ಮಾರ್ಗದಲ್ಲಿ ಹಿಂತಿರುಗಬೇಕಾಗುತ್ತದೆ.

top videos
    First published: