• Home
  • »
  • News
  • »
  • trend
  • »
  • ಮೆಡಿಟರೇನಿಯನ್ ನೀರಿನ ಆಳದಲ್ಲಿ ನಿರ್ಮಾಣವಾಗಿದೆ ಪುಟ್ಟ ಗುಡಿಸಲು; ಅಳಿವಿನಂಚಿನಲ್ಲಿರುವ ಮೀನುಗಳಿಗೆ ಇದು ನೈಸರ್ಗಿಕ ನರ್ಸರಿ..!

ಮೆಡಿಟರೇನಿಯನ್ ನೀರಿನ ಆಳದಲ್ಲಿ ನಿರ್ಮಾಣವಾಗಿದೆ ಪುಟ್ಟ ಗುಡಿಸಲು; ಅಳಿವಿನಂಚಿನಲ್ಲಿರುವ ಮೀನುಗಳಿಗೆ ಇದು ನೈಸರ್ಗಿಕ ನರ್ಸರಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶೇ. 98 ರಷ್ಟು ಸಣ್ಣ ಮೀನುಗಳು ಬಂದರಿನಲ್ಲಿ ಸಾಯುತ್ತವೆ. ಈ ಹಿನ್ನೆಲೆಯಲ್ಲಿ, ಎಕೋಶಿಯನ್ ಬಯೋ ಹಟ್‌ ಮೂಲಕ ಸಣ್ಣ ಮೀನುಗಳಿಗೆ ಕೃತಕ ಆವಾಸಸ್ಥಾನಗಳನ್ನು ಕಲ್ಪಿಸಿಕೊಟ್ಟಿದೆ. ನಿರಾಶ್ರಿತ ಸಣ್ಣ ಮೀನುಗಳ ಸಂಖ್ಯೆ ಕಡಿಮೆಯಾದರೆ ಮೀನುಗಳ ಸಂಕುಲವೇ ಇಲ್ಲವಾಗಬಹುದು. ಅದು ಸಮುದ್ರದಿಂದ ಹಿಡಿದು ಎಲ್ಲದರ ಮೇಲೂ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಚಿಕ್ಕ ಮೀನುಗಳಿಗೆ ಬಯೋ ಹಟ್‌ನಲ್ಲಿ ಆಹಾರವನ್ನು ಕೂಡ ಒದಗಿಸಿ ಕಾಪಾಡಲಾಗುತ್ತಿದೆ.

ಮುಂದೆ ಓದಿ ...
  • Share this:

    ಮನುಷ್ಯ ಎಲ್ಲೇ ಕಾಲಿಟ್ರೂ ಅಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ ಅನ್ನೋದನ್ನ ಇವತ್ತಿನ ಕೊರೊನಾ ಕಾಲಘಟ್ಟ ಮತ್ತೆ ಮತ್ತೆ ನೆನಪಿಸುತ್ತಿದೆ. ಭೂಮಿಯ ಮೇಲೆ ಮೋಜು ಅನುಭವಿಸಿ ಈಗ ಸಮುದ್ರದ ಆಳದಲ್ಲೂ ಸುಖವನ್ನು ಹುಡುಕುತ್ತಾ ಅಲ್ಲಿನ ಜೀವಿಗಳಿಗೆ ಮಾರಕವಾಗುತ್ತಿದ್ದಾನೆ ಮಾನವ. ಈ ರೀತಿ ಮಾನವನ ಚಟುವಟಿಕೆಯಿಂದ ದುಷ್ಟ ಪರಿಣಾಮ ಅನುಭವಿಸುತ್ತಿರುವ ಸಮುದ್ರ ಆವಾಸ ಸ್ಥಾನಗಳಲ್ಲಿ ಮೆಡಿಟರೇನಿಯನ್ ಕೂಡ ಒಂದು.


    ಇದು ನಿರ್ದಿಷ್ಟ ಪರಿಸರ ಸಮುದಾಯಕ್ಕೆ ಸಂಬಂಧಿಸಿದ ಆವಾಸಸ್ಥಾನದ ಪ್ರದೇಶ. ಇಲ್ಲಿ ಅಳಿವಿನ ಅಂಚಿನಲ್ಲಿರುವ ಮೀನುಗಳನ್ನು ಬಯೋ ಹಟ್ ನಿರ್ಮಿಸಿ ಸಂರಕ್ಷಿಸಲು ಎಕೋಶಿಯನ್ ಮುಂದಾಗಿದೆ. ಮೊನಾಕೊ ಬಂದರಿನಲ್ಲಿ ನಿರ್ಮಿಸಲಾಗಿದ್ದು, ಎನ್‌ಜಿಒ ಎನರ್ಜಿ ಅಬ್ಸರ್ವರ್ ಸೊಲ್ಯೂಷನ್ಸ್‌ನ ಸಹಭಾಗಿತ್ವದಲ್ಲಿ ಗ್ರಹ ರಕ್ಷಣೆಗೆ ಮುಂದಾಗಿದೆ. ಶೇ. 98 ರಷ್ಟು ಸಣ್ಣ ಮೀನುಗಳು ಬಂದರಿನಲ್ಲಿ ಸಾಯುತ್ತವೆ. ಈ ಹಿನ್ನೆಲೆಯಲ್ಲಿ, ಎಕೋಶಿಯನ್ ಬಯೋ ಹಟ್‌ ಮೂಲಕ ಸಣ್ಣ ಮೀನುಗಳಿಗೆ ಕೃತಕ ಆವಾಸಸ್ಥಾನಗಳನ್ನು ಕಲ್ಪಿಸಿಕೊಟ್ಟಿದೆ. ನಿರಾಶ್ರಿತ ಸಣ್ಣ ಮೀನುಗಳ ಸಂಖ್ಯೆ ಕಡಿಮೆಯಾದರೆ ಮೀನುಗಳ ಸಂಕುಲವೇ ಇಲ್ಲವಾಗಬಹುದು. ಅದು ಸಮುದ್ರದಿಂದ ಹಿಡಿದು ಎಲ್ಲದರ ಮೇಲೂ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಚಿಕ್ಕ ಮೀನುಗಳಿಗೆ ಬಯೋ ಹಟ್‌ನಲ್ಲಿ ಆಹಾರವನ್ನು ಕೂಡ ಒದಗಿಸಿ ಕಾಪಾಡಲಾಗುತ್ತಿದೆ.


    ಹಗಲಿನ ವೇಳೆ ಚಂದ್ರನ ಮೇಲೆ ಹಾದು ಹೋದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಚಿತ್ರ ಸೆರೆಹಿಡಿದ ಆ್ಯಸ್ಟ್ರೋ ಫೋಟೋಗ್ರಾಫರ್‌..!


    ಮೆಡಿಟರೇನಿಯನ್ ಮಾನವನ ಅತಿ ಚಟುವಟಿಕೆಗಳ ತಾಣಕ್ಕೆ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲೇ ಹೆಚ್ಚು ಕಲುಷಿತಗೊಂಡಿರುವ ಸಮುದ್ರವಾಗಿದೆ. ಇದು ಸಂಪೂರ್ಣವಾಗಿ ಭೂಮಿಯಿಂದ ಆವೃತವಾಗಿದೆ ಎಂಬ ಕಾರಣದಿಂದಾಗಿ, ಇಲ್ಲಿ ನೀರಿನ ನವೀಕರಣದ ಚಕ್ರವು 30 ವರ್ಷ ಸಮಯವನ್ನು ತೆಗೆದುಕೊಳ್ಳುವುದು. ಇನ್ನೂ ಇಲ್ಲಿನ ಬಂದರುಗಳ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಇಲ್ಲಿ ಮರಿ ಮೀನುಗಳಿಗೆ ಪೋಷಣೆ ದಕ್ಕದೇ, ಸರಿಯಾದ ಆಶ್ರಯ ಸಿಗದೇ ಮೀನುಗಳು ದೊಡ್ಡದಾಗಿ ಬೆಳೆಯುವ ಮುಂಚೆಯೇ ಸಾವನ್ನಪ್ಪುತ್ತಿದೆ. ಇಲ್ಲಿ ಮೀನುಗಳ ಮರಣ ಪ್ರಮಾಣ ಶೇಕಡಾ 95 ರಷ್ಟಿದೆ.


    ಬಯೋ ಹಟ್ಸ್ ಎಂಬುದು ಲೋಹದಿಂದ ರಚನೆಯಾಗಿದೆ. ಇಲ್ಲಿ ಸಣ್ಣ ಮೀನುಗಳನ್ನು ದೈತ್ಯ ಪರಭಕ್ಷಕ ಜೀವಿಗಳಿಂದ ರಕ್ಷಿಸಲಾಗುತ್ತದೆ. ಇಲ್ಲಿ ಮೀನುಗಳಿಗೆ ಆಹಾರ ಲಭ್ಯವಿದ್ದು, ಇಲ್ಲಿ ಸಮುದ್ರ ಸಸ್ಯಗಳನ್ನು ಸಹ ಬೆಳೆಯಲಾಗುತ್ತದೆ. ಅಲ್ಲದೇ ಮೀನುಗಳು ಸಹ ಅಗತ್ಯವಾದ ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ರೀತಿಯಾಗಿ, ಬಯೋ ಹಟ್ ನರ್ಸರಿಯಾಗಿ ಕಾರ್ಯನಿರ್ವಹಿಸುವುದಲ್ಲದೇ ಸಣ್ಣ ಮೀನುಗಳು ಪ್ರಾಪ್ತ ವಯಸ್ಸನ್ನು ತಲುಪಿ ಸಬಲವಾಗಲು ನೆರವಾಗುತ್ತವೆ. ಸಣ್ಣ ಮೀನುಗಳು ಗುಡಿಸಿಲಿನಲ್ಲಿ 4 - 6 ತಿಂಗಳು ಕಳೆದ ನಂತರ ದೊಡ್ಡವಾಗುತ್ತವೆ. ಆ ನಂತರ ಅವು ತಮ್ಮ ಜೀವನವನ್ನು ನೋಡಿಕೊಳ್ಳಲು ಸಮರ್ಥವಾಗುತ್ತದೆ. 2015 ರಿಂದ, 25 ಫ್ರೆಂಚ್ ಬಂದರುಗಳು ಬಯೋ ಹಟ್ಸ್‌ ನಿಂದ ಆವೃತ್ತವಾಗಿದ್ದು ಸಮುದ್ರ ಪ್ರಭೇದಗಳ ಸಂರಕ್ಷಣೆಗೆ ಬದ್ಧವಾಗಿವೆ.


    ಎನರ್ಜಿ ಅಬ್ಸರ್ವರ್! ಮೊದಲ ಹೈಡ್ರೋಜನ್-ಚಾಲಿತ, ಕಡಿಮೆ ಹೊರಸೂಸುವ ಹಡಗಿನ ಹೆಸರು. ಪರಿಸರ ಪರಿವರ್ತನೆಗೆ ಪ್ರಯೋಗಾಲಯವಾಗಿ ಸೇವೆ ಸಲ್ಲಿಸುವ ಕಾರ್ಯ ಇದರದ್ದಾಗಿದೆ. ಇದು ಗಾಳಿ ಮತ್ತು ಶಬ್ಧ ಮಾಲಿನ್ಯವಿಲ್ಲದೇ ಸಮುದ್ರವನ್ನು ದಾಟುವ ಶಕ್ತಿಯನ್ನು ಹೊಂದಿದೆ. ಆ ಮೂಲಕ ಸಮುದ್ರ ಜೀವಿಗಳಿಗೆ ಯಾವುದೇ ತೊಂದರೆ ಉಂಟು ಮಾಡದೇ ಸಾಗರಗಳನ್ನು ದಾಟುತ್ತಾ, ಎನರ್ಜಿ ಅಬ್ಸರ್ವರ್ ಹೆಚ್ಚು ಸಾಮರಸ್ಯದ ಜಗತ್ತಿಗೆ ಕೆಲಸ ನಿರ್ವಹಿಸುವ ಮಹಾನ್ ವ್ಯಕ್ತಿಗಳನ್ನು ಭೇಟಿ ಮಾಡಲು ಮುಂದಾಗಿದೆ.

    Published by:Latha CG
    First published: