ಈ ಸಾಕು ಪ್ರಾಣಿಗಳ ತುಂಟಾಟವನ್ನು ನೋಡುವುದೇ ಒಂದು ಚೆಂದ, ಏನೇ ಚೇಷ್ಟೆ ಮಾಡಿದರೂ ತುಂಬಾ ಮುದ್ದಾಗಿ ಕಾಣುತ್ತದೆ. ಕೆಲವೊಂದು ಸಾಕು ಪ್ರಾಣಿಗಳು ನಾವು ಕಲಿಸಿದಂತೆ ಕಲಿಯುತ್ತವೆ ಮತ್ತು ಅವುಗಳು ಸಹ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂದು ಸದಾ ಗಮನಿಸುತ್ತಿರುತ್ತವೆ ಎಂದರೆ ತಪ್ಪಾಗಲಾರದು. ಈ ಸಾಕು ಪ್ರಾಣಿಗಳಲ್ಲಿ ನಾಯಿಮರಿಗಳು ತುಂಬಾನೇ ಚೂಟಿ ಆಗಿರುತ್ತವೆ ಮತ್ತು ಏನನ್ನಾದರೂ ಹೇಳಿಕೊಟ್ಟರೆ ತಕ್ಷಣಕ್ಕೆ ಅದನ್ನು ಅನುಕರಣೆ ಮಾಡಿ ತೋರಿಸುತ್ತವೆ.
ಸಾಮಾನ್ಯವಾಗಿ ನಾವೆಲ್ಲಾ ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ನಮಗೆ ಪರಿಚಯವಿರುವವರು ಯಾರಾದರೂ ನಮಗೆ ಎದುರಾದರೆ ಅವರಿಗೆ ಒಂದು ನಮಸ್ಕಾರ ಹೇಳಿ ಮುಂದೆ ಹೋಗುತ್ತೇವೆ.
ತುಂಬಾ ಹತ್ತಿರದವರು ಇದ್ದರೆ ಅವರನ್ನು ಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸುತ್ತೇವೆ. ಆದರೆ, ಇಲ್ಲಿ ಸಾಕು ನಾಯಿಮರಿಯೊಂದು ಯಾವುದೇ ನಾಯಿಯು ತನ್ನ ಎದುರಿಗೆ ಬರುವುದನ್ನು ಕಂಡರೆ ಸಾಕು ಅದನ್ನು ಪ್ರೀತಿಯಿಂದ ಮನುಷ್ಯರಂತೆ ಅಪ್ಪಿಕೊಂಡು ತನ್ನ ಪ್ರೀತಿ ವ್ಯಕ್ತಪಡಿಸುತ್ತದೆ.
ಲಂಡನ್ನಲ್ಲಿರುವ ವೆಲ್ಷ್ ಟೆರಿಯರ್ ತಳಿಯ ನಾಯಿಮರಿಯ ಹೆಸರು ‘ಡಕ್’ ಆಗಿದ್ದು, ಈ ಸಾಕು ನಾಯಿಮರಿಯೊಂದು ತನ್ನ ಮನೆಯ ಒಡೆಯನೊಂದಿಗೆ ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಬೇರೆ ನಾಯಿ ಕಂಡರೆ ಸಾಕು ತಕ್ಷಣ ತನ್ನ ಕಾಲುಗಳ ಮೇಲೆ ಎದ್ದು ನಿಂತು ಮನುಷ್ಯರಂತೆ ಅಪ್ಪಿಕೊಂಡು ತನ್ನ ಪ್ರೀತಿ ವ್ಯಕ್ತಪಡಿಸುತ್ತದೆ. ಈ ನಾಯಿಮರಿಯ ಮುದ್ದಾದ ಸನ್ನೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮನೆಮಾತಾಗಿದೆ.
ತನ್ನ ಎದುರಿಗೆ ಬರುವಂತಹ ಬೇರೆ ನಾಯಿಯನ್ನು ಅಪ್ಪಿಕೊಂಡ ನಂತರವೇ ಈ ನಾಯಿ ಮುಂದಿನ ಹೆಜ್ಜೆ ಇಡುತ್ತದೆ. ಈ ಪುಟ್ಟ ನಾಯಿಯ ಸ್ವಭಾವವು ತುಂಬಾ ಸ್ನೇಹಪರವಾಗಿದೆ. ನಾಯಿಯ ಒಡೆಯ ಜೇಮ್ಸ್ ಕ್ವಿರ್ಕ್ “ಡಕ್ ಹೊರಗೆ ಹೋಗಿ ಉದ್ಯಾನದಲ್ಲಿ ತನ್ನ ಸ್ನೇಹಿತರನ್ನು ಭೇಟಿಯಾಗಲು ಇಷ್ಟಪಡುತ್ತಾನೆ. ಅವನು ಅವರೊಂದಿಗೆ ಆಟ ಆಡಲು ಬಯಸುತ್ತಾನೆ. ಅವನು ತನ್ನ ಯಾವುದೇ ಸ್ನೇಹಿತರನ್ನು ಭೇಟಿಯಾದಾಗಲೆಲ್ಲಾ, ಅವರನ್ನು ಅಪ್ಪಿಕೊಂಡು ಮುದ್ದು ಮಾಡಲು ಬಯಸುತ್ತಾನೆ” ಎಂದು ಹೇಳಿದ್ದಾರೆ.
This is Simba and Cooper. They’re finally fully vaccinated. Hugging for the first time in over a year. Both 14/10 heartwarming as h*ck pic.twitter.com/rm8KUne0tp
— WeRateDogs® (@dog_rates) April 15, 2021
ಅನೇಕ ಬಾರಿ, ಡಕ್ ನೇರವಾಗಿ ಹೋಗಿ ಬೇರೆ ನಾಯಿಗಳನ್ನು ಅಪ್ಪಿಕೊಂಡಾಗ ಡಕ್ನ ಈ ಒಂದು ಸ್ನೇಹಪೂರ್ವಕ ಭಾವನೆ ಅರ್ಥಮಾಡಿಕೊಳ್ಳಲು ವಿಫಲವಾಗುತ್ತವೆ. ಅಷ್ಟೇ ಅಲ್ಲ, ಪುಟ್ಟ ನಾಯಿಮರಿ ದೊಡ್ಡ ನಾಯಿಗಳನ್ನೂ ತಬ್ಬಿಕೊಳ್ಳಲು ಬಯಸುತ್ತದೆ ಮತ್ತು ಇದು ಬೇರೆ ಬೇರೆ ತಳಿಯ ನಾಯಿ ಅಂತಲೂ ಲೆಕ್ಕಿಸದೆ ಹೋಗಿ ತಬ್ಬಿಕೊಳ್ಳುತ್ತದೆ ಎಂದು ಜೇಮ್ಸ್ ಹೇಳಿದ್ದಾರೆ.
ಜೇಮ್ಸ್ ತನ್ನ ನಾಯಿ ಮರಿಯ ಪ್ರೀತಿಯ ಸ್ವಭಾವ ನೋಡಿ ಅವರು ಅದನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಾರೆ ಮತ್ತು ಡಕ್ ಸಹ ತನ್ನ ಒಡೆಯನೊಂದಿಗೆ ಎಲ್ಲಾ ಕಡೆ ಹೋಗಲು ಮತ್ತು ಹೊಸ ಹೊಸ ಜನರನ್ನು ಭೇಟಿಮಾಡಲು ಇಷ್ಟಪಡುತ್ತದೆ. ಈ ನಾಯಿಮರಿ ಇತರೆ ಪ್ರಾಣಿಗಳನ್ನು ಭೇಟಿ ಮಾಡಿದ ಮತ್ತು ಪ್ರೀತಿಯಿಂದ ಅಪ್ಪಿಕೊಂಡ ಅನೇಕ ಫೋಟೋಗಳಿವೆ ಎಂದು ಜೇಮ್ಸ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ