Twitterನಲ್ಲಿ ಬೆಂಗಳೂರು, ದೆಹಲಿಯ ಬಾಡಿಗೆ ಮನೆಗಳ ಕುರಿತು ನಡಿದಿದೆ ಭಾರಿ Debate!

House for rent: ಈ ಹಿನ್ನೆಲೆ ಅದಿತಿ ಚೋಪ್ರಾರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮುಂಬೈ ನಿವಾಸಿಯೊಬ್ಬರು, ಮುಂಬೈನಲ್ಲಿ ಈ ಬಾಡಿಗೆಗೆ ಕೇವಲ ಶೌಚಾಲಯ ಮಾತ್ರ ಸಿಗುತ್ತದೆ ಎಂದು ಬೇಸರದಿಂದ ಟ್ವೀಟ್‌ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೆಹಲಿ, ಮುಂಬೈ ಮತ್ತು(Mumbai and Bangalore) ಬೆಂಗಳೂರಿನಂತಹ ಮೂರು ಮಹಾನಗರಗಳ (Metropolitan) ನಡುವೆ ಸಾಕಷ್ಟು ವ್ಯತ್ಯಾಸಗಳು ಇವೆ. ಮನೆ ಬಾಡಿಗೆ, ಕಟ್ಟಡಗಳ ಬಾಡಿಗೆ, ಆಹಾರ ವಸ್ತುಗಳ ಬೆಲೆ, ಜನರು ತಿನ್ನುವ ಆಹಾರ, ಮೂಲಸೌಕರ್ಯಗಳು, (Infrastructure) ಜನರ ವರ್ತನೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತದೆ. ಈ ಹಿನ್ನೆಲೆ ಈ ಮೂರು ಮಹಾನಗರಗಳ ಅರ್ಹತೆ ಮತ್ತು ಕೆಡುಕುಗಳನ್ನು ಚರ್ಚಿಸುವ (Discussing) ಅನೇಕ ಪೋಸ್ಟ್‌ಗಳಿವೆ. ಇದೇನೂ ಹೊಸ ವಿಷಯವಲ್ಲ ಬಿಡಿ. ಪ್ರತಿಯೊಂದು ನಗರವು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ, ಅಲ್ಲಿ ಜನರು ತಮ್ಮ ನಗರದ ಹೆಮ್ಮೆ ಮತ್ತು ಸಂಸ್ಕೃತಿಗಾಗಿ ನಿಲ್ಲುತ್ತಾರೆ.

ಫ್ಲಾಟ್‌ಗಳ ಹಂಚಿಕೆ

ಈ ಮಧ್ಯೆ, ಬೆಂಗಳೂರಿನ ನಿವಾಸಿಗಳು ಟ್ವಿಟ್ಟರ್‌ ಪೋಸ್ಟ್‌ಗಳ ಮೂಲಕ ಫ್ಲಾಟ್‌ಮೇಟ್‌ಗಳನ್ನು ಕಂಡುಹಿಡಿಯಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅಲ್ಲಿ ಬಳಕೆದಾರರು ಗ್ರಾಹಕರನ್ನು ಆಕರ್ಷಿಸಲು ಕೆಲವು ನಿಜವಾದ ಬೆರಗುಗೊಳಿಸುವ ಫ್ಲಾಟ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. @aditichoprax ಹೆಸರಿನ ಟ್ವಿಟ್ಟರ್‌ ಬಳಕೆದಾರರು ತಾನು ಫ್ಲಾಟ್‌ಮೇಟ್‌ಗಳನ್ನು ಹುಡುಕುತ್ತಿದ್ದೇನೆ. ತಾನು 4bhk ಡ್ಯುಪ್ಲೆಕ್ಸ್‌ನಲ್ಲಿದ್ದು, ನೈಸರ್ಗಿಕ ಬೆಳಕು, ಟೆರೇಸ್‌ ಅನ್ನೂ ಹೊಂದಿದೆ. ಬಾಡಿಗೆ - 17.5 ಸಾವಿರ ರೂ., ಠೇವಣಿ - 75 ಸಾವಿರ ರೂ. ಎಂದು ಟ್ವೀಟ್‌ ಅನ್ನು ಹಂಚಿಕೊಂಡಿದ್ದಾರೆ.

ಅವರ ಈ ಟ್ವೀಟ್ ಇಲ್ಲಿದೆ ನೋಡಿ..

ಬಳಿಕ, ಮತ್ತೊಬ್ಬರು @anervoussystem ಎಂಬ ಮಹಿಳೆ ಬೆಂಗಳೂರಿನ ಬೆನ್ಸನ್‌ ಟೌನ್‌ನಲ್ಲಿ 4 ಬೆಡ್‌ರೂಂನ ಮನೆಗೆ ಫ್ಲಾಟ್‌ಮೇಟ್‌ ಬೇಕಾಗಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಬಾಡಿಗೆ 13 ಸಾವಿರ ರೂ., ಡೆಪಾಸಿಟ್ - 70 ಸಾವಿರ ರೂ. ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:  Twitter: ಟ್ವೀಟ್ ಮಾಡೋಕೆ ಟೈಪ್ ಮಾಡಬೇಕಿಲ್ಲ, ಧ್ವನಿ ಬಳಸಿ ಟ್ವೀಟ್ ಮಾಡುವ ಹೊಸಾ ಆಪ್ಶನ್ ಬಂದಿದೆ..ಆಡಿಯೋ ಟ್ವೀಟ್ ಮಾಡೋದು ಹೀಗೆ.

ಈ ಮೇಲಿನ ಪೋಸ್ಟ್‌ಗಳಲ್ಲಿನ ಬಾಡಿಗೆ ಮತ್ತು ಡೆಪಾಸಿಟ್‌ಗಳನ್ನು ಮುಂಬೈಗರು ತ್ವರಿತವಾಗಿ ಗಮನಿಸಿದರು. ಮೆಟ್ರೋಪಾಲಿಟನ್‌ ನಗರ ಹಾಗೂ ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈ ಹೆಚ್ಚಿನ ಬಾಡಿಗೆಗೆ ಕುಖ್ಯಾತವಾಗಿರುವ ನಗರ ಎಂದು ಹೇಳಲಾಗುತ್ತದೆ.

ಈ ಹಿನ್ನೆಲೆ ಅದಿತಿ ಚೋಪ್ರಾರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮುಂಬೈ ನಿವಾಸಿಯೊಬ್ಬರು, ಮುಂಬೈನಲ್ಲಿ ಈ ಬಾಡಿಗೆಗೆ ಕೇವಲ ಶೌಚಾಲಯ ಮಾತ್ರ ಸಿಗುತ್ತದೆ ಎಂದು ಬೇಸರದಿಂದ ಟ್ವೀಟ್‌ ಮಾಡಿದ್ದಾರೆ.

Looking for female flatmates to share a beautiful 4bhk duplex in HSR with! Natural light & the porch + terrace have me hooked! 🤩 It’s a deal of deals!

Rent: 17.5k
Deposit: 75k


Pls RT & help us find interesting folks to share a roof with! #flatmate @peakbengaluru pic.twitter.com/ojnRdNZHMA

— Aditi Chopra (@aditichoprax) January 21, 2022ಅಲ್ಲದೆ,@anervoussystem ಎಂಬ ಮಹಿಳೆಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌ ಮರ್ಚೆಂಟ್‌ ಎಂಬ ಟ್ವೀಟಿಗ, ಈ ಬಾಡಿಗೆ ದರ ಕೇವಲ ಹಾಸಿಗೆಗಾ, ಲೈನನ್‌ಗಾ ಅಥವಾ ಯಾವುದಕ್ಕೆ..? ಸರಿಯಾದ ಮಾಹಿತಿ ಕಳಿಸಿ ಎಂದು ಅಷ್ಟು ಕಡಿಮೆ ಬಾಡಿಗೆ ದರ ನಿಗದಿಪಡಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದು ನಂತರ ಕೆಲವು ಉಲ್ಲಾಸದ ಮೀಮ್‌ಗಳಾಗಿ ಮಾರ್ಪಟ್ಟಿದೆ, ಅವುಗಳನ್ನು ಇಲ್ಲಿ ನೋಡಿ..

ಬೆಂಗಳೂರಿನ ಬಾಡಿಗೆ ದರಗಳನ್ನು ನೋಡಿದರೆ ಮುಂಬೈ ಜನತೆ ಕಣ್ಣೀರಿಡುತ್ತಾರೆ ಎನ್ನುವಂತಹ ಮೀಮ್ಸ್ ಸೃಷ್ಟಿಯಾಗಿದೆ.

ತಾಜ್‌ಮಹಲ್‌ನ ಫೋಟೋ ಹಾಕಿರುವ ಟ್ವೀಟಿಗರೊಬ್ಬರು, ಬೆಂಗಳೂರಿನಲ್ಲಿರುವ ಈ ಮ್ಯಾನ್ಷನ್‌ ಏರ್‌ಪೋರ್ಟ್‌ನಿಂದ 24 ಗಂಟೆಗಳಷ್ಟು ದೂರವಿದೆ. ಈ ಬಂಗಲೆಗೆ ಫ್ಲ್ಯಾಟ್‌ಮೇಟ್‌ಗಳನ್ನು ಹುಡುಕುತ್ತಿದ್ದೇನೆ. ಬಾಡಿಗೆ - 2 ಸಾವಿರ ರೂ., ಡೆಪಾಸಿಟ್ - 10 ಸಾವಿರ ರೂ. ಎಂದು ಟ್ವೀಟ್‌ ಮಾಡಿದ್ದಾರೆ.

ಮತ್ತೊಬ್ಬರು, ಅರಮನೆಯೊಂದರ ಫೋಟೋ ಹಾಕಿ, ಬೆಂಗಳೂರಿನಲ್ಲಿರುವ ಈ ಸುಂದರ ಮನೆಗೆ ಫ್ಲ್ಯಾಟ್‌ಮೇಟ್‌ಗಳು ಬೇಕಾಗಿದ್ದಾರೆ. ಈ ಹಿಂದೆ ಬಾಡಿಗೆಗಿದ್ದವರು ಲಂಡನ್‌ಗೆ ಹೋಗಿದ್ದಾರೆ. ಈ ಮನೆಯ ಬಾಡಿಗೆ - 4 ಸಾವಿರ ರೂ., ಡೆಪಾಸಿಟ್ - 20 ಸಾವಿರ ರೂ. ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: `ಬ್ರಹ್ಮಾಸ್ತ್ರ’ ಸಿನಿಮಾ ಬಗ್ಗೆ ಕನ್ನಡದಲ್ಲೇ ಟ್ವೀಟ್​ ಮಾಡಿದ ಆಲಿಯಾ ಭಟ್​: ನಮ್ಮ ನಟಿಗೆ ಜಂಭ ಎಂದ ಕನ್ನಡಿಗರು!

ಇದೇ ರೀತಿ, ಹಲವರು ಬೇರೆ ಬೇರೆ ನಗರಗಳ, ವಿದೇಶಿ ಸ್ಥಳಗಳ ಫೋಟೋ ಎಲ್ಲ ಹಾಕಿ ಇದು ಬೆಂಗಳೂರಿನದ್ದು, ಬಾಡಿಗೆ ಇಷ್ಟು ಎಂದೆಲ್ಲ ಮೀಮ್ಸ್‌ಗಳನ್ನು ಸೃಷ್ಟಿಸಿದ್ದಾರೆ.

ನಂತರ, ‘ಬೆಂಗಳೂರು ವರ್ಸಸ್ ಬಾಂಬೆ’ ನಡುವಿನ ಈ ಟ್ವೀಟ್‌ ಚರ್ಚೆಗೆ ಧುಮುಕಿದ್ದಾರೆ. ಇನ್ನು, ಮುಂಬೈ ಜನರ ಬೇಸರ, ಹೆಚ್ಚು ಬಾಡಿಗೆ ದರ ಎಂಬ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದ ರಾಷ್ಟ್ರ ರಾಜಧಾನಿಯ ಜನತೆ ಈ ಎರಡು ನಗರಗಳಿಗೆ ಹೋಲಿಸಿದರೆ ದೆಹಲಿ NCR ನ ಹಲವಾರು ನಿವಾಸಿಗಳು ಅದಕ್ಕಿಂತಲೂ ಕಡಿಮೆ ಬಾಡಿಗೆ ಪಾವತಿಸುತ್ತಿರುವುದಾಗಿ ಸೂಚಿಸಿದರು.

ಇನ್ನೊಬ್ಬ ಬಳಕೆದಾರರು ನೆಟ್ಟಿಗರ ಎಲ್ಲಾ ವಾದಗಳನ್ನು ಒಂದೇ ಟೇಬಲ್‌ನಲ್ಲಿ ಒಟ್ಟುಗೂಡಿಸಿದ್ದಾರೆ. ಈ ಮೇಲಿನ ಟ್ವೀಟ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು..?
Published by:vanithasanjevani vanithasanjevani
First published: