• Home
  • »
  • News
  • »
  • trend
  • »
  • ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಫ್ರೀಯಾಗಿ ಜರ್ನಿ ಮಾಡಬಹುದು! ಸಟ್ಲೆಜ್ ನದಿಯನ್ನೂ ನೋಡಬಹುದು!

ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಫ್ರೀಯಾಗಿ ಜರ್ನಿ ಮಾಡಬಹುದು! ಸಟ್ಲೆಜ್ ನದಿಯನ್ನೂ ನೋಡಬಹುದು!

ರೈಲು

ರೈಲು

ದೇಶದಲ್ಲಿ ಒಂದು ನಿರ್ದಿಷ್ಟ ರೈಲು 73 ವರ್ಷಗಳಿಂದ ಉಚಿತವಾಗಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದೆ ಎಂದರೆ ನೀವು ನಂಬಲೇಬೇಕು. ಇದು ವಿಶ್ವದಲ್ಲಿಯೇ ಉಚಿತ ಸೇವೆಯನ್ನೊದಗಿಸುವ ರೈಲು ಎಂಬ ಮನ್ನಣೆಗೂ ಪಾತ್ರವಾಗಿದೆ.

  • Trending Desk
  • 3-MIN READ
  • Last Updated :
  • Share this:

ಕಡಿಮೆ ಬಜೆಟ್ ಸುಖಕರ ಪ್ರಯಾಣಕ್ಕೆ(Journey) ಹೆಸರುವಾಸಿಯಾಗಿರುವುದೇ ರೈಲ್ವೇ ಪ್ರಯಾಣವಾಗಿದೆ. ಮನೆಮಂದಿಯೆಲ್ಲಾ ಆರಾಮವಾಗಿ ಪ್ರಯಾಣ ಮಾಡಬೇಕು ಎಂದಾದರೆ ರೈಲೇ(Train) ಬೆಸ್ಟ್ ಎಂಬುದು ಹೆಚ್ಚಿನ ಭಾರತೀಯ ಕುಟುಂಬಗಳ ಮಾತು. ಅನುಕೂಲಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆ ರೈಲು ಉತ್ತಮ ಎಂಬುದು ಹೆಚ್ಚಿನವರ ಅಭಿಮತವಾಗಿದೆ.


ಕೈಗೆಟಕುವ ದರದಲ್ಲಿ ರೈಲು ಪ್ರಯಾಣ


ರೈಲು ಪ್ರಯಾಣದ ದರ ನೀವು ಪ್ರಯಾಣಿಸುವ ಸ್ಥಳ ಹಾಗೂ ಆಯ್ಕೆಮಾಡುವ ಪ್ರಯಾಣ ವರ್ಗ ಎಂದರೆ ಸ್ಲೀಪರ್, ಎಸಿ, ಜನರಲ್ ಹೀಗೆ ಕೋಚ್‌ಗಳನ್ನು ಆಧರಿಸಿ ಬೇರೆ ಬೇರೆಯಾಗಿರುತ್ತದೆ. ಒಟ್ಟಿನಲ್ಲಿ ಕೈಗೆಟಕುವ ದರದಲ್ಲೇ ನೀವು ರೈಲು ಪ್ರಯಾಣವನ್ನು ಆಯ್ದುಕೊಳ್ಳಬಹುದು. ಆದರೆ ನಿಮಗೆ ರೈಲು ಪ್ರಯಾಣದ ಕುರಿತ ಇನ್ನೊಂದು ಸೋಜಿಗದ ವಿಚಾರವನ್ನು ಹೇಳುತ್ತಿದ್ದೇವೆ ಕೇಳಿ.


ಈ ರೈಲಿಗೆ ನೀವು ಟಿಕೆಟ್ ತೆಗೆದುಕೊಳ್ಳೋದೇ ಬೇಡ


ದೇಶದಲ್ಲಿ ಒಂದು ನಿರ್ದಿಷ್ಟ ರೈಲು 73 ವರ್ಷಗಳಿಂದ ಉಚಿತವಾಗಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದೆ ಎಂದರೆ ನೀವು ನಂಬಲೇಬೇಕು. ಇದು ವಿಶ್ವದಲ್ಲಿಯೇ ಉಚಿತ ಸೇವೆಯನ್ನೊದಗಿಸುವ ರೈಲು ಎಂಬ ಮನ್ನಣೆಗೂ ಪಾತ್ರವಾಗಿದೆ.


ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಬಹುದು


ಕಳೆದ 73 ವರ್ಷಗಳಿಂದ ಭಾಕ್ರಾ ನಂಗಲ್ ರೈಲಿಗೆ ಒಂದು ನಯಾಪೈಸೆ ನೀಡದೇ ಪ್ರಯಾಣಿಕರು ಪ್ರಯಾಣ ನಡೆಸುತ್ತಿದ್ದಾರೆ. ಭಾಕ್ರಾ ಬಿಯಾಸ್ ಮ್ಯಾನೇಜ್ಮೆಂಟ್ ರೈಲ್ವೇ ಬೋರ್ಡ್ ಈ ರೈಲಿನ ಕಾರ್ಯಾಚರಣೆಯನ್ನು ನಡೆಸುತ್ತಿದೆ.


ಇದನ್ನೂ ಓದಿ: Viral Video: ಹುಲಿ ಘರ್ಜಿಸೋದು ಗೊತ್ತು, ಆದ್ರೆ ಸೀನೋದು ಗೊತ್ತಾ? ಟೈಗರ್ ಆ್ಯಕ್ಶಿ ಅಂದ್ರೆ ಹೇಗಿರುತ್ತೆ ಅಂತ ನೀವೇ ನೋಡಿ!


ಈ ರೈಲು ಹಿಮಾಚಲ ಪ್ರದೇಶ/ಪಂಜಾಬ್ ಗಡಿಯಲ್ಲಿ ಭಾಕ್ರಾ ಮತ್ತು ನಂಗಲ್ ನಡುವೆ ಸಂಚರಿಸುತ್ತದೆ. ಶಿವಾಲಿಕ್ ಬೆಟ್ಟಗಳ ಮೂಲಕ 13 ಕಿಲೋಮೀಟರ್ ಸಾಗುವಾಗ ರೈಲು ಸಟ್ಲೆಜ್ ನದಿಯನ್ನು ದಾಟುತ್ತದೆ. ಪ್ರಯಾಣಿಕರಿಗೆ ಈ ಆನಂದದಾಯಕ ರೈಲು ಪ್ರಯಾಣಕ್ಕೆ ಯಾವುದೇ ಶುಲ್ಕವಿಲ್ಲ ಎಂದರೆ ಇದು ಆನಂದದ ವಿಚಾರವಲ್ಲದೆ ಮತ್ತಿನ್ನೇನು.


ರೈಲು ಪ್ರಯಾಣವನ್ನು ನಂಬಿಕೊಂಡಿರುವ ಪ್ರಯಾಣಿಕರು


ಈ ರೈಲನ್ನು ಸುಮಾರು 300 ಪ್ರಯಾಣಿಕರು ಆಶ್ರಯಿಸಿದ್ದಾರೆ ಹಾಗೂ ನಿತ್ಯವೂ ಪ್ರಯಾಣಿಸುತ್ತಾರೆ. 25 ಹಳ್ಳಿಗಳ ಜೀವನಾಡಿಯಾಗಿ ಈ ರೈಲು ಕಾರ್ಯನಿರ್ವಹಿಸುತ್ತದೆ. 13 ಕಿಲೋಮೀಟರ್ ರೈಲು ಪ್ರಯಾಣದಲ್ಲಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮತ್ತು ವಿವಿಧ ಕೆಲಸದ ಕ್ಷೇತ್ರಗಳ ಕಾರ್ಮಿಕರು ಭಾಗಿಯಾಗುತ್ತಾರೆ.


ಭಾಕ್ರಾ ಮತ್ತು ನಂಗಲ್ ನಡುವಿನ ರೈಲು ಮಾರ್ಗವು 1948 ರಲ್ಲಿ ಪೂರ್ಣಗೊಂಡಿತು. ಭಾಕ್ರಾ-ನಂಗಲ್ ಅಣೆಕಟ್ಟನ್ನು ನಿರ್ಮಿಸುವ ಸ್ಥಳೀಯರು ಮತ್ತು ಕಾರ್ಮಿಕರ ಪ್ರಯಾಣಕ್ಕಾಗಿ ಈ ರೈಲು ಸೇವೆಯನ್ನು ಆರಂಭಿಸಲಾಯಿತು. ಇದು ವಿಶ್ವದ ಅತಿ ಹೆಚ್ಚು ನೇರ ಗುರುತ್ವಾಕರ್ಷಣೆಯ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಣೆಕಟ್ಟಿನ ನಿರ್ಮಾಣವನ್ನು 1963 ರಲ್ಲಿ ಪೂರ್ಣಗೊಳಿಸಲಾಯಿತು.


ಈ ರೈಲಿನಲ್ಲಿ ಟಿಟಿ ಕೂಡ ಇಲ್ಲ


ವರ್ಷಗಳಲ್ಲಿ ಪ್ರವಾಸಿಗರಿಗೆ ಹಾಗೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ದರ ಪಾವತಿಸದೆ ಪ್ರಯಾಣಿಸುವ ಅವಕಾಶವನ್ನೊದಗಿಸಿದೆ. ಈ ರೈಲಿನಲ್ಲಿ ಟಿಟಿ ಕೂಡ ಇಲ್ಲ ಎಂಬುದು ಇನ್ನೊಂದು ವಿಶೇಷವಾಗಿದೆ.


60 ವರ್ಷಗಳ ಹಳೆಯ ಇಂಜಿನ್ ಇನ್ನೂ ಬಳಕೆಯಲ್ಲಿದೆ


ರೈಲ್ ಅನ್ನು ಸ್ಟೀಮ್ ಎಂಜಿನ್‌ನೊಂದಿಗೆ ಚಲಾಯಿಸಲಾಗುತ್ತಿತ್ತು ಆದರೆ 1953 ರಲ್ಲಿ ಅಮೆರಿಕಾದಿಂದ ಮೂರು ಎಂಜಿನ್‌ಗಳನ್ನು ರೈಲಿಗೆ ಅಳವಡಿಸಲಾಯಿತು. ಅಂದಿನಿಂದ, ಭಾರತೀಯ ರೈಲ್ವೆಯು ಎಂಜಿನ್‌ನ 5 ರೂಪಾಂತರಗಳನ್ನು ಬಿಡುಗಡೆ ಮಾಡಿದೆ, ಆದರೆ ಈ ವಿಶಿಷ್ಟ ರೈಲಿನ 60 ವರ್ಷಗಳ ಹಳೆಯ ಎಂಜಿನ್ ಇನ್ನೂ ಬಳಕೆಯಲ್ಲಿದೆ.


ಬೋಗಿ ಹಾಗೂ ಸೀಟು ಅತಿವಿಶಿಷ್ಟವಾದುದು


ರೈಲಿನ ಬೋಗಿಗಳು ಕೂ ಅತ್ಯಂತ ವಿಶಿಷ್ಟವಾಗಿದ್ದು ಕರಾಚಿಯಲ್ಲಿ ಬೋಗಿಗಳನ್ನು ನಿರ್ಮಿಸಲಾಗಿದೆ. ಬ್ರಿಟೀಷರ ಕಾಲದ ಓಕ್ ಮರದಿಂದ ರೈಲಿನೊಳಗಿನ ಸೀಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ಗಂಟೆಗೆ 18 ರಿಂದ 20 ಲೀಟರ್‌ಗಳ ಇಂಧನ ಅಗತ್ಯವಿದ್ದರೂ ರೈಲನ್ನು ಉಚಿತವಾಗಿ ಚಲಾಯಿಸಲು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ನಿರ್ಧರಿಸಿದೆ.
ಶುಲ್ಕರಹಿತವಾಗಿ ಇರಿಸಲು ನಿರ್ಧಾರ


ವೆಚ್ಚಗಳ ಕಾರಣದಿಂದಾಗಿ, ಭಾಕ್ರಾ ಬಿಯಾಸ್ ಮ್ಯಾನೇಜ್‌ಮೆಂಟ್ ಬೋರ್ಡ್ (BBMB) ಈ ಹಿಂದೆ 2011 ರಲ್ಲಿ ಉಚಿತ ಸೇವೆಯನ್ನು ಕೊನೆಗೊಳಿಸಲು ಪರಿಗಣಿಸಿತ್ತು. ಆದರೆ ರೈಲಿನ ಪ್ರಯಾಣದಿಂದ ಆದಾಯ ಮಾತ್ರವಲ್ಲದೆ ಇನ್ನಷ್ಟು ಅಂಶಗಳಿಗೆ ಮಹತ್ವದ್ದಾಗಿದೆ ಎಂಬುದನ್ನು ಮಂಡಳಿ ಅರಿತುಕೊಂಡಿತು ತದನಂತರ ಪ್ರಯಾಣವನ್ನು ಶುಲ್ಕರಹಿತವಾಗಿ ಇರಿಸುವ ನಿರ್ಣಯಕ್ಕೆ ಬಂದಿತು.

Published by:Latha CG
First published: