Viral Video: ನಾನು ಯಾರಿಗೂ ಕಡಿಮೆ ಇಲ್ಲ... ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಪುಟ್ಟ ಹುಡುಗಿಯ ವಿಡಿಯೋ ನೋಡಿ

ವೈರಲ್ ವಿಡಿಯೋದಲ್ಲಿ ಅಬ್ರಿಯಾನಾ ಗುಲಾಬಿ ಬಣ್ಣದ ಉಡುಪನ್ನು ಧರಿಸಿ ರ‍್ಯಾಂಪ್‌ನಲ್ಲಿ ತುಂಬಾ ಸ್ಟೈಲಿಶ್ ಆಗಿ ನಡೆದು ಬಂದಿರುವುದನ್ನು ನಾವು ಕಾಣಬಹುದು. ಅವಳು ಸೊಂಟದ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡು, ದೊಡ್ಡ ಮಾಡೆಲ್‌ಗಳಂತೆ ಸ್ಟೈಲ್ ಆಗಿ ನಡೆದುಕೊಂಡು ಬಂದಿರುವುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ

ಅಬ್ರಿಯಾನಾ

ಅಬ್ರಿಯಾನಾ

  • Share this:

ಪುಟ್ಟ ಮಕ್ಕಳು ಏನೇ ಮಾಡಿದರೂ ಅದು ತುಂಬಾ ಮುದ್ದಾಗಿ ಕಾಣುತ್ತದೆ, ಆ ವಯಸ್ಸೇ ಹಾಗೆ ಮಕ್ಕಳ ಪ್ರತಿಯೊಂದು ತೊದಲ ಮಾತು, ಮಾಡುವ ಸ್ಟೈಲ್, ತುಂಟಾಟಗಳು ಎಲ್ಲವೂ ತುಂಬಾ ಮುದ್ದಾಗಿ ನಮಗೆ ಕಾಣಿಸುತ್ತಿರುತ್ತದೆ. ಹಾಗೆಯೇ ಇಲ್ಲಿ ಒಬ್ಬ ಪುಟ್ಟ ಹುಡುಗಿ ಸಹ ತಾನು ಯಾರಿಗಿಂತ ಕಮ್ಮಿಯಿಲ್ಲ ಅಂತ, ದೊಡ್ಡದಾದ ರ‍್ಯಾಂಪ್ ಮೇಲೆ ಸ್ಟೈಲಿಶ್ ಆಗಿ ನಡೆದುಕೊಂಡು ಬಂದದ್ದು ತುಂಬಾ ಜನರನ್ನು ಈ ವೀಡಿಯೋ ತುಣುಕನ್ನು ಒಮ್ಮೆಯಾದರೂ ತಪ್ಪದೆ ನೋಡುವಂತೆ ಮಾಡಿರುವುದಂತೂ ನಿಜ.ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವಂತಹ ವಿಡಿಯೋ ತುಣುಕನ್ನು ಸುಮಾರು 18 ಮಿಲಿಯನ್ ಜನರು ನೋಡಿದ್ದು, ಸಾಮಾನ್ಯ ವಿಷಯ ಅಲ್ಲವೇ ಅಲ್ಲ. ಈ ವಿಡಿಯೋವನ್ನು ಛಾಯಾಗ್ರಾಹಕರಾದ ಕ್ರಿಸ್ಟನ್ ವೀವರ್ ಎಂಬಾಕೆ ತಮ್ಮ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಚಿಕ್ಕ ಹುಡುಗಿಯ ಹೆಸರು ಅಬ್ರಿಯಾನಾ ಅಂತ ಗೊತ್ತಾಗಿದ್ದು, ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ 18 ಮಿಲಿಯನ್ ಜನರು ನೋಡಿದ್ದಾರೆ.


ವೈರಲ್ ವಿಡಿಯೋದಲ್ಲಿ ಅಬ್ರಿಯಾನಾ ಗುಲಾಬಿ ಬಣ್ಣದ ಉಡುಪನ್ನು ಧರಿಸಿ ರ‍್ಯಾಂಪ್‌ನಲ್ಲಿ ತುಂಬಾ ಸ್ಟೈಲಿಶ್ ಆಗಿ ನಡೆದು ಬಂದಿರುವುದನ್ನು ನಾವು ಕಾಣಬಹುದು. ಅವಳು ಸೊಂಟದ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡು, ದೊಡ್ಡ ಮಾಡೆಲ್‌ಗಳಂತೆ ಸ್ಟೈಲ್ ಆಗಿ ನಡೆದುಕೊಂಡು ಬಂದಿರುವುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ ಮತ್ತು ಅಲ್ಲಿದ್ದವರು ಇದನ್ನು ನೋಡಿ ತುಂಬಾ ಆನಂದಿಸಿದ್ದಾರೆ. ತುಂಬಾ ಆತ್ಮವಿಶ್ವಾಸದಿಂದ ರ‍್ಯಾಂಪ್‌ನಲ್ಲಿ ಸೂಪರ್ ಮಾಡೆಲ್‌ಗಳನ್ನು ಅನುಕರಣೆ ಮಾಡಿದ್ದನ್ನು ನೋಡಬಹುದಾಗಿದೆ.


''ಇದು ಟಿಕ್‌ಟಾಕ್‌ನಲ್ಲಿ ನಾನು ಹಂಚಿಕೊಂಡ ವೀಡಿಯೋವಾಗಿದ್ದು, ವೈರಲ್ ಆಗಿದೆ. ಬಹಳಷ್ಟು ಜನರು ಇದನ್ನು ಹಂಚಿಕೊಳ್ಳುತ್ತಿದ್ದಾರೆ, ಹಾಗಾಗಿ ನೀವು ಅದನ್ನು ನನಗೆ ಕ್ರೆಡಿಟ್ ಇಲ್ಲದೆ ನೋಡಿದರೆ ನನಗೆ ಟ್ಯಾಗ್ ಮಾಡಿ" ಎಂದು ಕ್ರಿಸ್ಟನ್ ವಿಡಿಯೋ ಹಂಚಿಕೊಳ್ಳುತ್ತಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.


“ಇದು ಪ್ರಸ್ತುತ ಟಿಕ್‌ಟಾಕ್‌ನಲ್ಲಿ ಸುಮಾರು 18 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ ಮತ್ತು ಅದು ಈ ರೀತಿಯಲ್ಲಿ ವೈರಲ್ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಆದರೆ ಅಬ್ರಿಯಾನಾ ತನ್ನ ನಡಿಗೆಯಿಂದ ಎಲ್ಲರನ್ನೂ ಸಂತೋಷಪಡಿಸುತ್ತಿರುವುದಕ್ಕೆ ನನಗೆ ತುಂಬಾ ಆನಂದವಾಗಿದೆ. ಅವಳು ವಿಶ್ವದಲ್ಲಿಯೇ 2021ನೇ ವರ್ಷದ ಪರಿಪೂರ್ಣ ಪುಟ್ಟ ಮಗು," ಎಂದು ಕ್ರಿಸ್ಟನ್ ಬರೆದುಕೊಂಡಿದ್ದಾರೆ.


ಟಿಕ್‌ಟಾಕ್‌ನಲ್ಲಿ ವೈರಲ್ ಆದ ನಂತರ, ವಿಡಿಯೋವನ್ನು ಕ್ರಿಸ್ಟನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅದರಲ್ಲಿಯೂ 44 ಸಾವಿರ ವೀಕ್ಷಣೆಗಳನ್ನು ಪಡೆದಿದೆ.


ಒಟ್ಟಿನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ತುಂಬಾ ಖುಷಿಪಟ್ಟಿದ್ದಾರೆ. "ಇದು ಬಹಳ ಮುದ್ದಾಗಿದೆ” ಎಂದು ಒಬ್ಬರು ಬರೆದಿದ್ದಾರೆ. "ಅವಳು ತನ್ನ ಉಡುಗೆಯನ್ನು ತೋರಿಸುವ ಕೌಶಲ್ಯ ಅದ್ಭುತವಾಗಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ. "ನಾನು ಇದುವರೆಗೂ ನೋಡಿದ ವಿಡಿಯೊಗಳಲ್ಲಿ ಇದು ತುಂಬಾ ಸುಂದರವಾದ ವಿಡಿಯೋ ಆಗಿದೆ" ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.


First published: