Viral Video: ಯೂಟ್ಯೂಬ್ ಹಂಚಿಕೊಂಡ ಬಾಲಕಿಯ Dance ವಿಡಿಯೋಗೆ ಮನಸೋತ ನೆಟ್ಟಿಗರು! 

Alysa Gutierrez-Sierra ನೃತ್ಯ ನಿಜಕ್ಕೂ ಅಮೋಘವಾಗಿದೆ. ಈ ಬಾಲಕಿಯ ನೃತ್ಯದ ವಿಡಿಯೋ ಕಂಡ ಸಾಕಷ್ಟು ಮಂದಿ ನೆಟ್ಟಿಗರು ಮೂಕ ವಿಸ್ಮಿತರಾಗಿದ್ದಾರೆ. ಅವರು ನೃತ್ಯ ಮಾಡುವಾಗ ಅವರ ಮುಖದಿಂದ ಹೊರಹೊಮ್ಮುವ ಭಾವನೆಗಳು ಎಷ್ಟು ಸುಂದರವಾಗಿದೆ. ಒಟ್ಟಿನಲ್ಲಿ ಬಾಲಕಿಯ ಪ್ರತಿ ಹೆಜ್ಜೆಯೂ ನೋಡುಗರನ್ನು ಬೆರಗುಗೊಳಿಸಿದ್ದು ಮಾತ್ರ ನಿಜ.

ವೈರಲ್ ವಿಡಿಯೋಗೆ 200 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ

ವೈರಲ್ ವಿಡಿಯೋಗೆ 200 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ

  • Share this:
ಕಿತ್ತಳೆ ಬಣ್ಣದ ಜರ್ಕಿನ್ ಕಪ್ಪುಬಣ್ಣದ ಸ್ಲೀವ್ ಲೆಸ್ ಸ್ಕಿನ್ ಫಿಟ್ ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಬಾಲಕಿಯೊಬ್ಬಳು ಮಾಡಿರುವ ವಿಡಿಯೋ ನೋಡಿ ನೆಟಿಗ್ಗರು ಮೂಕವಿಸ್ಮಿತರಾಗಿದ್ದಾರೆ. ಅವರು ಹೆಜ್ಜೆ, ದೇಹ –ಕೈ ಕಾಲುಗಳನ್ನು ಬಳುಕಿಸುವ ರೀತಿಗೆ ಫಿದಾ ಆಗಿದ್ದಾರೆ. ಸೆಪ್ಟೆಂಬರ್ 26 ರಂದು ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಆಗಿದ್ದು, Alysa Gutierrez-Sierra ಅವರ ಡ್ಯಾನ್ಸ್ ಕ್ಲಿಪ್  200 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ ಮತ್ತು ನೂರಾರು ಕಾಮೆಂಟ್‍ಗಳನ್ನು ಗಳಿಸಿದೆ. ಪುನಃ ಪುನಃ ಈಕೆಯ ನೃತ್ಯದ ವಿಡಿಯೋ ಶೇರ್ ಆಗುತ್ತಲೇ ಇದೆ. ಯೂಟ್ಯೂಬ್‍ನ ಅಧಿಕೃತ ಇನ್‍ಸ್ಟಾಗ್ರಾಂ ಪುಟದಿಂದ ಹಂಚಿಕೊಳ್ಳಲ್ಪಟ್ಟ ಕ್ಲಿಪ್, ಅಲಿಸಾಳ ನೃತ್ಯದ ಭಂಗಿಗೆ ಮತ್ತು ಸಾಟಿಯಿಲ್ಲದ ಶಕ್ತಿಗೆ ಮಾರು ಹೋಗಿದ್ದು, ಇದು ಆಕೆಯ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಕೊಂಡಾಡಿದ್ದಾರೆ.

Alysa Gutierrez-Sierra ನೃತ್ಯ ನಿಜಕ್ಕೂ ಅಮೋಘವಾಗಿದೆ. ಅಲಿಸಾ ಚಾನಲ್‍ನಲ್ಲಿ ಪೆರ್ಟೊ ರಿಕನ್-ಪೆರುವಿಯನ್ ಕುಟುಂಬ ಜೀವನದ ಬಗ್ಗೆ ಸ್ನೇಹಿತರು ಮತ್ತು ವ್ಲಾಗ್‍ಗಳೊಂದಿಗೆ ನೃತ್ಯ ವೀಡಿಯೊಗಳನ್ನು ನೋಡಿ ಎಂದು ಯೂಟ್ಯೂಬ್ ಹೇಳಿದೆ. ಈ ಬಾಲಕಿಯ ನೃತ್ಯದ ವಿಡಿಯೋ ಕಂಡ ಸಾಕಷ್ಟು ಮಂದಿ ನೆಟ್ಟಿಗರು ಮೂಕ ವಿಸ್ಮಿತರಾಗಿದ್ದಾರೆ. ಅವರು ನೃತ್ಯ ಮಾಡುವಾಗ ಅವರ ಮುಖದಿಂದ ಹೊರಹೊಮ್ಮುವ ಭಾವನೆಗಳು ಎಷ್ಟು ಸುಂದರವಾಗಿದೆ. ಒಟ್ಟಿನಲ್ಲಿ ಬಾಲಕಿಯ ಪ್ರತಿ ಹೆಜ್ಜೆಯೂ ನೋಡುಗರನ್ನು ಬೆರಗುಗೊಳಿಸಿದ್ದು ಮಾತ್ರ ನಿಜ.


View this post on Instagram


A post shared by YouTube (@youtube)


ಈ ವಿಡಿಯೋ ನೋಡಿದ ನೆಟ್ಟಿಗರು, ವಿವರಿಸಲು ಅಸಾಧ್ಯವಾದುದು ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಯೂ ಟ್ಯೂಬ್ ಚಾನಲ್ ಸುರಕ್ಷಿತವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಈಕೆ ಯಾರ ಮಗು. ಈಕೆಯ ತಾಯಿ ಬಂದು ಶಿಪ್ ಯಾರ್ಡ್‍ನಿಂದ ನಿಮ್ಮ ಮಗುವನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಮಗದೊಬ್ಬರು, ಈಕೆ ನೃತ್ಯವನ್ನು ಬೇರೆಯವರಿಗೆ ಕಲಿಸಬಹುದೇ ಎಂದು ಕೇಳಿದ್ದಾರೆ. ನನಗೆ ನಿನ್ನ ಕಂಡರೆ ಹೆಮ್ಮೆ, ಅದ್ಭುತ ಎಂದಿದ್ದಾರೆ. ಅಲಿಸಾ ದ ಸ್ಟಾರ್ ಎಂಬ ಆಕೆಯ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಆಕೆಯ ಇನ್ನಷ್ಟು ಅದ್ಭುತ ನೃತ್ಯಗಳನ್ನು ನಾವು ನೋಡಬಹುದಾಗಿದೆ.

ಇದನ್ನೂ ಓದಿ: ನಾ ಮುಟ್ಟಿದೆಲ್ಲ ಚಿನ್ನ ಎನ್ನುತ್ತಿದ್ದಾರೆ Bigg Boss Kannada ಸೀಸನ್ 8ರ ವಿನ್ನರ್​ Manju Pavagada

ಯೂಟ್ಯೂಬ್ ಸಾಮಾನ್ಯವಾಗಿ ಅನನ್ಯ ಮತ್ತು ಸೃಜನಶೀಲ ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ. ಅದು ನೋಡುಗರನ್ನು ಬೆರಗುಗೊಳಿಸುತ್ತದೆ ಅಥವಾ ಕೆಲವೊಮ್ಮೆ ದಿಗ್ಭ್ರಮೆಗೊಳಿಸುತ್ತದೆ.
View this post on Instagram


A post shared by YouTube (@youtube)


ಸರಿ, ಸೆಪ್ಟೆಂಬರ್ 28 ರಂದು, ಇದು ಕ್ಲಿಪ್ ಅನ್ನು ಹಂಚಿಕೊಂಡಿದೆ, ವಿಶೇಷವಾಗಿ ನೀವು ಶ್ವಾನ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಇಲ್ಲಿ, ಒಂದೆರಡು ನಾಯಿಮರಿಗಳು ಚೆಂಡಿನ ಹಳ್ಳಕ್ಕೆ ಜಿಗಿಯುತ್ತಿರುವ ವಿಡಿಯೋ ಜನರ ಮನಸ್ಸನ್ನು ಕದ್ದಿದೆ.

ಇದನ್ನೂ ಓದಿ: Ravi Bala Sharma: ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿ ಡ್ಯಾನ್ಸಿಂಗ್ ದಾದಿಯ ಹೊಸ ವಿಡಿಯೋ..!

ಒಂದು ದೊಡ್ಡದಾದ ಬಾಕ್ಸಿನಲ್ಲಿ ಬಣ್ಣ ಬಣ್ಣದ ಚೆಂಡುಗಳನ್ನು ತುಂಬಿಸಲಾಗಿದೆ. ಆ ಬಾಕ್ಸಿನ ಮುಂದೆ ನಿಂತ ಸುಮಾರು 6 ರಿಂದ8 ನಾಯಿಗಳು ಒಂದಾದ ಮೇಲೆ ಒಂದರಂತೆ ಬಣ್ಣದ ಚೆಂಡಿಗಳಿರುವ ಬಾಕ್ಸ್‌ಗೆ ಜಿಗಿದು ಓಡುತ್ತವೆ. ನಾಯಿಗಳ ಓಟ ನೋಡಿ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಶೇರ್ ಆಗಿದ್ದು, ಈಗಾಗಲೇ 17 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಯೂಟ್ಯೂಬ್​ನಲ್ಲಿ ಈ ಬಾಲಕಿಯ ಹವಾ ಆದರೆ, ಇನ್‍ಸ್ಟಾಗ್ರಾಂನಲ್ಲಿ ಡ್ಯಾನ್ಸಿಂಗ್​ ದಾದಿಯದ್ದೇ ಸುದ್ದಿ. ತನ್ನ ಡ್ಯಾನ್ಸ್ ವಿಡಿಯೋಗಳ ಮೂಲಕ ಜನಪ್ರಿಯರಾಗಿರುವ 63 ವರ್ಷದ ಡ್ಯಾನ್ಸಿಂಗ್​ ದಾದಿ ರವಿ ಬಾಲಾ ಶರ್ಮಾ, (Ravi Bala Sharma)ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ. ಅವರ ಹೊಸ ಇನ್‍ಸ್ಟಾ ಡ್ಯಾನ್ಸ್ ರೀಲ್ “ಯೇ ಜವಾನಿ ಹೇ ದಿವಾನಿ” ಸಿಕ್ಕಾಪಟ್ಟೆ ವೈರಲ್ ಆಗಿದೆ.
Published by:Anitha E
First published: