Kitchen Hacks: ಪನ್ನೀರ್ ಸಸ್ಯಾಹಾರಿ ಮತ್ತು ಮಾಂಸಾಹಾರಿ - ಇಬ್ಬರಿಗೂ ಅಚ್ಚು ಮೆಚ್ಚು. ಪನ್ನೀರ್ ಸಾಮಾನ್ಯವಾಗಿ ಮೆನುವಿನಲ್ಲಿ ಮೊದಲ ಸ್ಥಾನದಲ್ಲಿರುತ್ತದೆ.ಇದನ್ನು ಡೀಪ್ ಫ್ರೈ, ಮತ್ತು ಗ್ರಿಲ್ಡ್ ಇತ್ಯಾದಿ ಆಹಾರಗಳಲ್ಲಿ ಬಳಸಲಾಗುತ್ತದೆ. ಇದು ಎಲ್ಲಾ ಆಹಾರದೊಂದಿಗೆ ಹೊಂದಿಕೊಳ್ಳುತ್ತದೆ. ಪನ್ನೀರ್ ಅನ್ನು ಫ್ರೈ ಮಾಡಿದಾಗ ಅದು ಗಟ್ಟಿ ಹಾಗೂ ರಬ್ಬರ್ ರೀತಿ ಆಗುವುದು ಸಹಜ. ಆದರೆ, ಚೆಫ್ ಸರನ್ಶ್ ಗೋಯಿಲಾ ತನ್ನ ಸಮಾಜಿಕ ತಾಣದಲ್ಲಿ ಗಟ್ಟಿ ಹಾಗೂ ರಬ್ಬರ್ ರೀತಿ ಆಗುವ ಪನ್ನೀರ್ ಕುರಿತು ಚಿಂತೆ ಬೇಡ. ನಮ್ಮ ತಾಯಿ ಈ ಸಮಸ್ಯೆಗೆ ಪರಿಪೂರ್ಣ ಹ್ಯಾಕ್ ಅನ್ನು ಹೊಂದಿದರೆ ಅದು ಪನ್ನೀರ್ ಅನ್ನು ‘ಸೂಪರ್ ಸಾಫ್ಟ್ ಮತ್ತು ಸ್ಪಾಂಜಿ’ ಮಾಡುತ್ತದೆ ಎಂದು ಹೇಳುವ ಮೂಲಕ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರೆ.
“ಅವಳ ಫ್ರೈ ಪನ್ನೀರ್ ಯಾವಾಗಲೂ ಮೋಡಿ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಕೆಲವು ಹೆಚ್ಚುವರಿ ಎಣ್ಣೆಯನ್ನು ನೀಗಿಸುತ್ತದೆ” ಎಂದು ಚೆಫ್ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. #kitchenhacks ರಾಣಿ ನನ್ನ ತಾಯಿ! ಅವಳ ಫ್ರೈ ಪನ್ನೀರ್ ಯಾವಾಗಲೂ ಆಕರ್ಷಕವಾಗಿರುತ್ತದೆ, ಏಕೆಂದರೆ ಪನ್ನೀರ್ ಅದರ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುತ್ತದೆ. ಆದರೆ ತುಂಬಾ ಮೃದುವಾಗಿರುತ್ತದೆ. ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಕೆಲವು ಹೆಚ್ಚುವರಿ ಎಣ್ಣೆಯನ್ನು ಸಹ ತೆಗೆದುಹಾಕಬಹುದು! ಬೆಚ್ಚಗಿನ ನೀರಿನಲ್ಲಿ ನೆನೆಸಿದ ನಂತರ ಅದು ಗಟ್ಟಿಯಾದರೆ, ನೀವು ತಾಜಾ ಪನ್ನೀರ್ ಅನ್ನು ನೆನೆಸಿ ದೊಡ್ಡ ವ್ಯತ್ಯಾಸವನ್ನು ನೀವು ನೋಡಬಹುದು! ಈ ರೀತಿಯಿಂದ ಮಾಡಿದ ನನ್ನ ಪಾಲಕ್ ಚೋಲ್ ಪನ್ನೀರ್ ಚವಾಲ್ ಊಟವನ್ನು ನಾನು ಇಷ್ಟಪಟ್ಟೆ. ನೀವು ಈ ಸಂಯೋಜನೆಯನ್ನು ಪ್ರಯತ್ನಿಸಿದ್ದೀರಾ? ಇದು ಶುದ್ಧ ಪ್ರತಿಭೆ, ಇದರ ಜೊತೆ ಚಾಂದನಿ ಚೌಕ್ನ ಗೋಲ್ ಹಟ್ಟಿ ಉತ್ತಮ ಜೋಡಿ ಎಂದು ತಮ್ಮ ತಾಯಿ ಹಾಗೂ ಅವರ ಪನೀರ್ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಪನ್ನೀರ್ ಅನ್ನು ಮೃದು ಮತ್ತು ಸ್ಪಂಜಿಯಾಗಿ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ:
ಮಾಡುವ ವಿಧಾನ:
“ಬೆಚ್ಚಗಿನ ನೀರಿನಲ್ಲಿ ಫ್ರೈ ಮಾಡಿದ ಪನ್ನೀರ್ ಅನ್ನು ನೆನೆಸಿದ ನಂತರ ಅದು ಗಟ್ಟಿ ಅನುಭವನ್ನು ನೀಡಿದರೆ ನಿಮ್ಮ ತಾಜಾ ಪನ್ನೀರ್ ನೆನೆಸಿ ನೋಡಿ.ಹಾಗೂ ನೀವು ಇವೇ ಎರಡರ ವ್ಯತ್ಯಾಸವನ್ನು ನೋಡಬಹುದು,” ಎಂದು ಅವರು ಹೇಳುತ್ತಾರೆ.
ನೀವು ಪನ್ನೀರ್ನಿಂದ ಪಾಲಕ್ ಪನ್ನೀರ್, ಮಾತಾರ್ ಪನ್ನೀರ್, ಕಡಾಯ್ ಪನ್ನೀರ್, ಪನ್ನೀರ್ ಟಿಕ್ಕಾ ಮತ್ತು ಚೆಫ್ ನೆಚ್ಚಿನ ಪಾಲಕ್ ಚೋಲ್ ಪನ್ನೀರ್ ಚವಾಲ್ ನಿಂದ ವಿವಿಧ ಆಹಾರಗಳನ್ನು ತಯಾರಿಸಬಹುದು. ಇದನ್ನು ಉಪ್ಪಿನಕಾಯಿ, ಈರುಳ್ಳಿ ಮತ್ತು ಮೂಲಂಗಿಯೊಂದಿಗೆ ಬಡಿಸಬಹುದು. ಹಾಗೇ ನಿಮಗೆ ತಿಳಿದಿರಲಿ ಪನ್ನೀರ್ ಅನ್ನು ಸುಲಭ ರೀತಿಯಲ್ಲಿ ಮನೆಯಲ್ಲಿ ತಯಾರಿಕೊಳ್ಳಬಹುದು ಮತ್ತು ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಯ್ಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ