ಲೈಂಗಿಕತೆ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಸಂಗತಿ. ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧ ಮಾನಸಿಕ ನೆಮ್ಮದಿಯೊಂದಿಗೆ ಬೆಸೆದುಕೊಂಡಿರುತ್ತದೆ. ದಾಂಪತ್ಯದಲ್ಲಿ ಸರಸ ಸಲ್ಲಾಪಗಳಿದ್ದರೆ ಮುನಿಸಿನ ಮಾತೇ ಇರುವುದಿಲ್ಲ. ಆದರೆ ಲೈಂಗಿಕ ಜೀವನ ಯಾವಗಲೂ ಒಂದೇ ರೀತಿ ಇರುವುದಿಲ್ಲ. ಹಾಸಿಗೆ ಮೇಲಿನ ಅಭಿವ್ಯಕ್ತಿ ನಿರಸವಾಯಿತು ಎಂದಾಕ್ಷಕ್ಕೆ ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿಲ್ಲ ಎಂದಲ್ಲ. ಖಾಸಗಿ ಕ್ಷಣಗಳಿಗೆ ಕಾಲಕ್ಕೆ ಅನುಸಾರವಾಗಿ ಹೊಸ ಜೀವ ತುಂಬ ಬೇಕಾಗುತ್ತದೆ. ಸೆಕ್ಸ್ ಜೀವನ ಚನ್ನಾಗಿರಲು , ಚನ್ನಾಗಿ ಇಟ್ಟುಕೊಳ್ಳಲು ಹಲವು ಮಾರ್ಗಗಳು ಇವೆ.
ಲೈಂಗಿಕತೆ ಬಗ್ಗೆ ವಿಶ್ವದಲ್ಲೇ ಮೊದಲ ಪುಸ್ತಕ ಕಾಮಸೂತ್ರವನ್ನು ಬರೆದವರು ಭಾರತೀಯರು. ಪುಸ್ತಕವನ್ನೇ ಬರೆದ ದೇಶದಲ್ಲಿ ಇಂದಿಗೂ ಲೈಂಗಿಕತೆ ಬಗ್ಗೆ ಮಡಿವಂತಿಕೆಗಳಿರುವುದು ಸೋಜಿಗ. ಅದೇನೇ ಇರಲಿ ನಮ್ಮ ಸಂಪ್ರದಾಯದಲ್ಲಿ ಲೈಂಗಿಕ ಜೀವನಕ್ಕೆ ಮತ್ತಷ್ಟು ಜೀವ ತುಂಬುವ ಕೆಲವೊಂದು ಮಾರ್ಗಗಳು, ಆಹಾರಗಳು, ಪದ್ಧತಿಗಳು ಇವೆ. ಅದರಲ್ಲಿ ಪುರಾತನ ಹಾಗೂ ಸಾಕಷ್ಟು ಗಮನ ಸೆಳೆಯುಯುವ ವಿಧಾನ ಪಾನ್ ಸೇವನೆ. ಊಟದ ನಂತರ ಎಲೆ-ಅಡಿಕೆ ಅಥವಾ ಪಾನ್ ತಿನ್ನುವುದು ನಮ್ಮಲ್ಲಿನ ರೂಢಿ. ಹಾಗಂತ ನಿತ್ಯ ಸಾಧಾರಣಾ ಪಾನ್ ತಿನ್ನುವುರದಿಂದ ನಿಮ್ಮ ಖಾಸಗಿ ಬದುಕಿನ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇದಕ್ಕಾಗಿಯೇ ಇರುವ ವಿಶೇಷ ಪಾನ್ ಆದ ಕೊಹಿನೂರ್ ಪಾನ್ ಸೇವಿಸಬೇಕು.
ಎಲ್ಲಿ ಸಿಗುತ್ತೆ ಕೊಹಿನೂರ್ ಪಾನ್?
ಮಹಾರಾಷ್ಟ್ರದ ಅರುಂಗಾಬಾದ್ನ ಕೊಹಿನೂರ್ ಪಾನ್ ತುಂಬಾನೇ ಫೇಮಸ್. ಇಲ್ಲಿನ ಮೊಮ್ಮಮದ್ ಸರ್ಫರುದ್ದೀನ್ ಸಿದ್ದಿಕಿ ಎಂಬುವರು ಕಳೆದ ಮೂರು ದಶಕಗಳಿಂದ ಪಾನ್ ಶಾಪ್ ನಡೆಸುತ್ತಿದ್ದಾರೆ. ಸಿದ್ದಿಕಿ ಶಾಪ್ನಲ್ಲಿ ತರಹೇವಾರಿ ಪಾನ್ಗಳನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಅತ್ಯಂತ ದುಬಾರಿ ಹಾಗೂ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಪಾನ್ ಎಂದರೆ ಕೊಹಿನೂರ್ ಪಾನ್. ಸಾಧಾರಣ ಪಾನ್ನ ಬೆಲೆ 10 ರೂಪಾಯಿಯಿಂದ ಶುರುವಾಗಿ 200 ರೂಪಾಯಿವರೆಗೂ ಇರುತ್ತೆ. ಆದರೆ ಈ ಕಿಂಗ್ ಕೊಹಿನೂರ್ ಪಾನ್ ಬೆಲೆ ಬರೋಬ್ಬರಿ 5 ಸಾವಿರ ರೂಪಾಯಿ.
ಕೊಹಿನೂರು ಪಾನ್ ಗುಟ್ಟೇನು?
ಅಬ್ಬಾ 5 ಸಾವಿರ ಹಣ ಕೊಟ್ಟು ತಿನ್ನುವಂತದ್ದು ಏನಿರುತ್ತೆ ಆ ಪಾನ್ನಲ್ಲಿ ಎಂದು ಅಂದುಕೊಳ್ಳುತ್ತಿದ್ದರೆ ಇಲ್ಲಿದೆ ಓದಿ ಅಸಲಿ ಸಂಗತಿ. 5 ಸಾವಿರ ರೂಪಾಯಿ ಬೆಲೆ ಬಾಳುವ ಕೊಹಿನೂರ್ ಪಾನ್ ಕಪಲ್ ಪಾನ್. ಅಂದರೆ ಇದರಲ್ಲಿ 2 ಪಾನ್ಗಳಿರುತ್ತವೆ. ಒಂದನ್ನು ಗಂಡು ತಿಂದರೆ ಮತ್ತೊಂದನ್ನು ಹೆಣ್ಣು ತಿನ್ನಬೇಕು. ಆಗಲೇ ಈ ಕೊಹಿನೂರ್ ಪಾನ್ ನಿಮ್ಮಲ್ಲಿನ ಲೈಂಗಿಕ ಆಸಕ್ತಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚಾಗಿ ಮದುವೆ ಸೀಸನ್ನಲ್ಲಿ ಈ ಪಾನ್ಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆಯಂತೆ.
ಕೇವಲ ಮಹಾರಾಷ್ಟ್ರ ಅರುಂಗಾಬಾದ್ನಲ್ಲಿ ಮಾತ್ರವನ್ನು ದೇಶದ ವಿವಿಧ ಭಾಗಗಳಿಂದಲೂ ಶ್ರೀಮಂತರು ಈ ಪಾನನ್ನು ತರಿಸಿಕೊಳ್ಳುತ್ತಾರೆ. ಖ್ಯಾತ ಸಿನಿಮಾ ತಾರೆಯರು ಇವರ ಗ್ರಾಹಕರ ಪಟ್ಟಿಯಲ್ಲಿದ್ದಾರಂತೆ. ಇನ್ನು ದುಬೈ, ಕುಬೈತ್ ದೇಶಗಳಿಗೂ ಈ ಪಾನನ್ನು ವಿಮಾನಗಳ ಮೂಲಕ ಕಳುಹಿಸಿಕೊಡಲಾಗುತ್ತೆ. ಇಷ್ಟೊಂದು ಖ್ಯಾತಿ ಗಳಿಸಿರುವ ಪಾನ್ ಬೇರೆಲ್ಲೂ ಸಿಗುವುದಿಲ್ಲ. ಈ ರಹಸ್ಯವನ್ನು ಮೊಮ್ಮಮದ್ ಸರ್ಫರುದ್ದೀನ್ ಸಿದ್ದಿಕಿ ಯಾರೊಂದಿಗೂ ಹಂಚಿಕೊಂಡಿಲ್ಲ. ಇವರ ಪಾನ್ ಶಾಪ್ನಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಕೊಹಿನೂರ್ ಪಾನನ್ನು ಸಿದ್ದಿಕಿ ಒಬ್ಬರೇ ಏಕಾಂಗಿಯಾಗಿ ತಯಾರಿಸುತ್ತಾರಂತೆ.
ಕೊಹಿನೂರ್ ಪಾನ್ ದುಬಾರಿ ಏಕೆ?
5 ಸಾವಿರ ಬೆಲೆ ಬಾಳುವ ಜೋಡಿ ಪಾನ್ ತಯಾರಿಕೆಯಲ್ಲಿ ಅನೇಕ ಬೆಲೆ ಬಾಳುವ ವಸ್ತುಗಳನ್ನು ಬಳಸಲಾಗುತ್ತದೆ. ಅತ್ಯಂತ ದುಬಾರಿ ಬೆಲೆಯ ಕಸ್ತೂರಿಯನ್ನು ಪಾನ್ನಲ್ಲಿ ಬಳಸಲಾಗುತ್ತದೆ. ಪಾನ್ಗೆ ಬಳಸುವ 1 ಕೆಜಿ ಕಸ್ತೂರಿ ಬೆಲೆ 7 ಲಕ್ಷ ರೂಪಾಯಿ. ಸುಗಂಧ ದ್ರವ್ಯವನ್ನು ಪಶ್ಚಿಮ ಬಂಗಾಳದಿಂದ 7 ಲಕ್ಷ ರೂಪಾಯಿ ಕೊಟ್ಟ ಖರೀದಿಸಲಾಗುತ್ತದೆ. ಇನ್ನು ಪಾನ್ನಲ್ಲಿ ಬಳಸುವ ಕೇಸರಿಯ ಬೆಲೆ 2 ಲಕ್ಷ ರೂಪಾಯಿ ಕೇವಲ ಒಂದು ಕೆಜಿಗೆ. 80 ಸಾವಿರ ಬೆಲೆಯ ಗುಲಾಬ್ ಸೇರಿದಂತೆ ಹಲವು ರಹಸ್ಯ ಪದಾರ್ಥಗಳನ್ನು ಪಾನ್ನಲ್ಲಿ ಬಳಸಲಾಗುತ್ತದೆ.
ಆ ಒಂದು ಕಂಡೀಷನ್ ಏನು?
ಕೊಹಿನೂರ್ ಪಾನ್ ಸರಿಯಾಗಿ ಕೆಲಸ ಮಾಡಬೇಕೆಂದರೆ ಜೋಡಿ ಹಾಸಿಗೆಗೆ ತೆರಳುವ 2 ಗಂಟೆಗಳ ಮುನ್ನ ಇದನ್ನು ತಿನ್ನಬೇಕು. ಪಾನನ್ನು ಯಾವುದೇ ಕಾರಣಕ್ಕೂ ಉಗಿಯದೇ ಸಂಪೂರ್ಣವಾಗಿ ಸೇವಿಸಬೇಕು. ಹೊಸ ದಾಂಪತ್ಯ ಆರಂಭಿಸುವ ನವಜೋಡಿಗೆ ಕೊಹಿನೂರು ಪಾನನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಮೊದಲ ರಾತ್ರಿಯಂದು ನವ ವರ-ವಧುವಿಗೆ ಈ ಪಾನನ್ನು ನೀಡಲಾಗುತ್ತದೆ. ಸಿದ್ದಿಕಿ ಅವರ ಶಾಪ್ನಲ್ಲಿ ಮೊದಲೇ ಬುಕ್ ಮಾಡಿ ಕೊಹಿನೂರ್ ಪಾನನ್ನು ಖರೀದಿಸಬಹುದು. ಆದರೆ ಸಿದ್ದಿಕಿ ಅವರು ಪಾನ್ ಮಾರಾಟಕ್ಕೂ ಮುನ್ನ ಒಂದೇ ಪ್ರಶ್ನೆ ಕೇಳುತ್ತಾರೆ. ಪಾನ್ ತಿನ್ನುವವರಿಗೆ ಮದುವೆ ಆಗಿದೆಯಾ? ಮದುವೆಯಾಗದ ಜೋಡಿಗೆ ಸಿದ್ದಿಕಿ ಅವರು ಪಾನ್ ಮಾರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ