ಈಗಂತೂ ಬಹುತೇಕ ಜನರು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಹೆಚ್ಚು ಜನರು ನೋಡಲಿ, ಅವುಗಳನ್ನು ಸಿಕ್ಕಾಪಟ್ಟೆ ವೈರಲ್ (Viral) ಮಾಡಲಿ ಎಂಬ ಕಾರಣಕ್ಕೆ ಅಸಾಧ್ಯವಾದುದು ಎಂದು ಹೇಳುವ ಎಲ್ಲಾ ಕೆಲಸಗಳನ್ನು ಯಾವುದೇ ಅಳುಕಿಲ್ಲದೆಯೇ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ರಸ್ತೆ ಬದಿಯಲ್ಲಿ ಚಿಕ್ಕ ಹೋಟೆಲ್ (Hotel) ಇರಿಸಿಕೊಂಡು ಮತ್ತು ತಳ್ಳು ಗಾಡಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುವವರಿಂದ ಹಿಡಿದು ದೊಡ್ಡ ದೊಡ್ಡ ಬೇಕರಿ, ಹೊಟೇಲ್ ಮತ್ತು ರೆಸ್ಟೋರೆಂಟ್ಗಳಲ್ಲಿರುವ (Restaurant) ಈ ಬಾಣಸಿಗರಲ್ಲಿ ಏನಾದರೊಂದು ಹೊಸತನವನ್ನು ಪ್ರಯತ್ನ ಮಾಡಬೇಕೆಂಬ ಹಂಬಲ ಮತ್ತು ತುಡಿತ ಇರುವುದಂತೂ ನಿಜ ಎಂದು ಹೇಳಬಹುದು.
ಅದರಲ್ಲೂ ನೀವು ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಅನ್ನು ಪ್ರತಿದಿನ, ಪ್ರತಿಕ್ಷಣ ತಪ್ಪದೆ ವೀಕ್ಷಿಸುತ್ತಿದ್ದರೆ, ನೀವು ವಿಶೇಷವಾಗಿ ಈ ಚಾಕೊಲೇಟ್ಗಳನ್ನು ಇಷ್ಟ ಪಡುತ್ತಿದ್ದರೆ, ಇಲ್ಲಿರುವ ಚಾಕೊಲೇಟ್ ವಿಡಿಯೋಗಳಿಗೆ ಹೆಚ್ಚಿನ ಒಲವು ಹೊಂದಿರುವುದಂತೂ ಗ್ಯಾರಂಟಿ. ನಿಮಗಾಗಿ ಇಲ್ಲಿ ಒಂದು ಹೊಸ ವಿಡಿಯೋ ಇದೆ ನೋಡಿ.
ಕಾಳಿಂಗ ಸರ್ಪ ಏನು ಮಾಡುತ್ತಿದೆ
ಇದನ್ನು ನೋಡಿ ನೀವು ಒಂದು ಕ್ಷಣ ಗಾಬರಿಯಾಗುವುದಂತೂ ನಿಜ, ಏಕೆಂದರೆ ಅರೆರೆ ಈ ಚಾಕೊಲೇಟ್ ವಿಡಿಯೋದಲ್ಲಿ ಈ ಕಾಳಿಂಗ ಸರ್ಪ ಏನು ಮಾಡುತ್ತಿದೆ, ಇದೇಕೆ ಹೀಗೆ ತನ್ನ ಹೆಡೆಯನ್ನು ಎತ್ತಿಕೊಂಡು ನೇರವಾಗಿ ಕುಳಿತಿದೆ ಎಂದು ನಿಮ್ಮಲ್ಲಿ ಪ್ರಶ್ನೆಯೊಂದು ಮೂಡಬಹುದು.
ಅಬ್ಬಾ ಭಯವಾಗುವಂತಿದೆ ಈ ಸರ್ಪ
ಆದರೆ ಅಮೌರಿ ಗುಯಿಚೊನ್ ಎನ್ನುವ ವ್ಯಕ್ತಿಯೊಬ್ಬ ಈ ಕಾಳಿಂಗ ಸರ್ಪವನ್ನು ಚಾಕೊಲೇಟ್ನಿಂದ ತಯಾರಿಸಿದ್ದಾರೆ ಮತ್ತು ಇದನ್ನು ಹೇಗೆ ತಯಾರಿಸಿದ್ದಾರೆ ಎಂದು ತೋರಿಸುವ ವಿಡಿಯೋವನ್ನು ಅವರು ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ನೋಡಿ.
ಇದನ್ನೂ ಓದಿ: Viral Video: ಅಜ್ಜನ ಮನೆಯಿಂದ ಹೊರಡೋಕೆ ಮನಸಿಲ್ಲ, ಈ ಪುಟ್ಟ ಮೊಮ್ಮಗಳ ಮುಖ ಹೇಗಾಗಿದೆ ನೋಡಿ
ಅಮೌರಿ ಗುಯಿಚೊನ್ ತನ್ನ ಚಾಕೊಲೇಟ್ ರಚನೆಗಳು ಮತ್ತು ಪೇಸ್ಟ್ರಿ ವಿನ್ಯಾಸಗಳಿಗಾಗಿ ಗುರುತಿಸಲ್ಪಟ್ಟ ಸ್ವಿಸ್-ಫ್ರೆಂಚ್ ಪೇಸ್ಟ್ರಿ ಬಾಣಸಿಗ ಎಂದು ಹೇಳಲಾಗುತ್ತದೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 7.3 ಮಿಲಿಯನ್ ಫಾಲೋವರ್ಗಳನ್ನು ಹೊಂದಿದ್ದಾರೆ.
ಅವರು ಇತ್ತೀಚೆಗೆ ಚಾಕೊಲೇಟ್ ಬಳಸಿಕೊಂಡು ಒಂದು ಉದ್ದನೆಯ ಕಾಳಿಂಗ ಸರ್ಪದ ವಿನ್ಯಾಸವನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಾವಿನ ಪ್ರತಿಯೊಂದು ಸಣ್ಣ ಸಣ್ಣ ವಿವರವನ್ನು ಎಷ್ಟು ನಿಖರತೆ ಮತ್ತು ಸಾಮರ್ಥ್ಯದೊಂದಿಗೆ ರಚಿಸಲಾಗಿದೆಯೆಂದರೆ, ವಿಡಿಯೋ ನೋಡಿದ ಬಹುತೇಕರಿಗೆ ಇದು ತುಂಬಾನೇ ಇಷ್ಟವಾಗಿದೆ.
ಚಾಕೊಲೇಟ್ ಕಿಂಗ್ ಕೋಬ್ರಾ!
"ಚಾಕೊಲೇಟ್ ಕಿಂಗ್ ಕೋಬ್ರಾ! ಇದನ್ನು ಚಾಕೊಲೇಟ್ನಿಂದ ತಯಾರಿಸಲು ಸುಮಾರು 8 ಗಂಟೆಗಳ ಸಮಯವನ್ನು ನಾನು ತೆಗೆದುಕೊಂಡೆನು" ಎಂದು ಅಮೌರಿ ಗುಯಿಚೊನ್ ಈ ಇನ್ಸ್ಟಾಗ್ರಾಮ್ ವಿಡಿಯೋ ಜೊತೆಯಲ್ಲಿ ಹಂಚಿಕೊಂಡ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ಶೀರ್ಷಿಕೆಯಲ್ಲಿ ಅಮೌರಿ ಗುಯಿಚೊನ್, ಚಾಕೊಲೇಟ್ ಮತ್ತು ಕೋಬ್ರಾನಂತಹ ಕೆಲವು ಹ್ಯಾಶ್ ಟ್ಯಾಗ್ಗಳೊಂದಿಗೆ ಪೂರ್ಣಗೊಂಡಿದೆ. ಹಾಗೂ, ಅವರು ಹಾವಿನ ಎಮೋಜಿಯನ್ನು ಸಹ ಬಳಸಿದ್ದಾರೆ.
ಈ ವಿಡಿಯೋವನ್ನು 16 ಗಂಟೆಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ ಇಲ್ಲಿಯವರೆಗೆ ಬಾಣಸಿಗ ಅಮೌರಿ ಗುಯಿಚೊನ್ ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್ಗಳನ್ನು ಸಂಗ್ರಹಿಸಲಾಗಿದೆ. ಇದು ಇಲ್ಲಿಯವರೆಗೆ 4.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 5 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಗಳನ್ನು ಸಹ ಗಳಿಸಿದೆ ಎಂದು ಹೇಳಬಹುದು.
ಇದನ್ನೂ ಓದಿ: Viral Video: ಈ ಬಾಲಕಿಯ ತಲೆ ತುಂಬಾ ಸಾವಿರಾರು ಹೇನುಗಳು: ಕೇಶವಿನ್ಯಾಸಕಿ ನೀಡಿದ ಚಿಕಿತ್ಸೆಯ ವಿಡಿಯೋ ವೈರಲ್
ಇದನ್ನು ನೋಡಿದ ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು "ನೀವು ತುಂಬಾ ಪ್ರತಿಭಾವಂತರು ಮತ್ತು ನೀವು ಇಡೀ ದಿನ ನನ್ನ ನೆಚ್ಚಿನ ಆಹಾರದೊಂದಿಗೆ ಆಟ ಆಡುತ್ತೀರಿ. ನೀವು ಒಳ್ಳೆಯ ಜೀವನವನ್ನು ನಡೆಸುತ್ತಿದ್ದೀರಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ದೇವರೇ, ನೀವು ಅದ್ಭುತವಾಗಿದ್ದೀರಿ" ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ಕಾಮೆಂಟ್ "ಇದು ತುಂಬಾ ಪರಿಪೂರ್ಣವಾಗಿದೆ" ಎಂದು ಹೇಳುತ್ತಾ ಅದರೊಂದಿಗೆ ಚಪ್ಪಾಳೆ ತಟ್ಟುವ ಕೈಗಳ ಕೆಲವು ಎಮೋಜಿಗಳನ್ನು ಸಹ ಕಾಮೆಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ