ಮೊಲಗಳು ನೋಡಲು ಬಹಳ ಚಂದ, ಅವುಗಳ ಜೊತೆ ಆಟವಾಡುತ್ತಾ ಕುಳಿತರೆ ಸಮಯ ಹೋಗಿದ್ದೆ ತಿಳಿಯುವುದಿಲ್ಲ. ಇನ್ನು ಮೊಲ ಓಡುವುದರಲ್ಲಿ ಬಹಳ ಫೇಮಸ್, ಆದರೆ ಮೊಲ ಈಜುವುದನ್ನ ನೋಡಿದ್ದೀರಾ? ಹೌದು, ಮೊಲ ಬರೀ ಓಟದಲ್ಲಿ ಮಾತ್ರವಲ್ಲ ಈಜಾಟದಲ್ಲೂ ಪಳಗಿರುತ್ತವೆ. ಮೊಲ ಈಜಾಡುತ್ತಿರುವ ಅಪರೂಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
`ಮೊಲಗಳು ನೀರನ್ನು ಕಂಡರೆ ಹೆದರುತ್ತವೆ. ಹೀಗಾಗಿ, ಇವುಗಳು ಈಜಾಡುವುದಿಲ್ಲ, ಭಯಪಡುತ್ತವೆ ಎಂದು ಹೇಳುವುದನ್ನ ಕೇಳಿರುತ್ತೇವೆ. . ಆದರೆ, ವಿಡಿಯೋವೊಂದು ಈ ಮಾತುಗಳನ್ನು ಸುಳ್ಳಾಗಿಸಿದೆ. . ಮೊಲಗಳು ಬರೀ ಅಪಾಯದಲ್ಲಿದ್ದಾಗ ಮಾತ್ರ ಈಜುವುದಲ್ಲ, ಖುಷಿಯಾಗಿ ಇರುವಾಗಲೂ ಈಜಿ ಸಂತೋಷಪಡುತ್ತವೆ.
@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋದಲ್ಲಿ ಮೊಲವೊಂದು ಆನಂದದಿಂದ ಈಜುತ್ತಿದೆ. ನದಿಯ ದಡದಲ್ಲಿ ಕುಳಿತಿರುವ ಮೊಲವೊಂದು ನೀರಿಗಿಳಿದು ಈಜುವ ಈ 30 ಸೆಕೆಂಡುಗಳ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮೊಲಗಳೂ ವೇಗವಾಗಿ ಈಜಬಲ್ಲವು' ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಒದಿ: ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಮೆಕ್ಡೊನಾಲ್ಟ್ಸ್ಗೆ ಬಂದ ಕರು- ವಿಡಿಯೋ ವೈರಲ್
ಈ ವಿಡಿಯೋ ಈಗ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಮೊಲದ ಈ ಖುಷಿಯ ಕ್ಷಣವನ್ನು ಆನಂದದಿಂದ ಹಂಚಿಕೊಂಡಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಕೆಲವರು ಮೊಲದ ಈಜುವ ವೇಗ ಕಂಡು ಅಚ್ಚರಿಪಟ್ಟಿದ್ದಾರೆ. ಈಗಾಗಲೇ ವಿಡಿಯೋವನ್ನು ಹಲವಾರು ಜನರು ಹಂಚಿಕೊಂಡಿದ್ದು, ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.
Rabbits can swim fast.. 🐰 pic.twitter.com/e4VEgFH1Ce
— Buitengebieden (@buitengebieden_) August 28, 2021
ಇನ್ನು ಜೀವನದ ಬಗ್ಗೆ ನನ್ನ ದೃಷ್ಟಿಕೋನವು ಸಂಪೂರ್ಣವಾಗಿ ಬದಲಾಯಿತು. ಮೊಲಗಳು ಈಜುತ್ತದೆ ಎಂಬುದನ್ನ ತಿಳಿದುಕೊಂಡೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಮೊಲವನ್ನು ನೀರಿನಲ್ಲಿ ಆಟವಾಡುವಂತೆ ಎಂದಿಗೂ ಒತ್ತಾಯ ಮಾಡಬಾರದು. ಏಕೆಂದರೆ ಅದು ಅವರಿಗೆ ಬಹಳ ತೊಂದರೆ ಉಂಟುಮಾಡುತ್ತದೆ ಎಂದು ಅನೆಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸಾಕು ಮೊಲಗಳಿಗೆ ಪದೇ ಪದೇ ನೀರಿನಲ್ಲಿ ಸ್ನಾನ ಮಾಡಿಸುವುದಾಗಲಿ ಅಥವಾ ಈಜುಕೊಳದಲ್ಲಿ ಬಿಡುವುದಾಗಲಿ ಮಾಡಬಾರದು. ಇದು ಅವುಗಳಿಗೆ ಆಘಾತವನ್ನು ಉಂಡು ಮಾಡಿ, ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.
ಏನೇ ಆಗಲಿ, ಮೊಲ ಈಜುತ್ತಿರುವ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಹೆಚ್ಚಿನ ಜನರು ಆಶ್ಚರ್ಯ ಚಕಿತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ