Viral Story: ನೀವೂ ನಂಬಲೇ ಬೇಕು! ಈ ಮಹಿಳೆಯ ಜೀವ ಉಳಿಸಿದ್ದು Puma ಚಪ್ಪಲಿಯಂತೆ!

ಈ ಘಟನೆ ಸಂಭಂವಿಸಿದ  ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೆರ್ರಿ ಟಾಟರ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಅದೃಷ್ಟ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಕೆರ್ರಿ ಟಾಟರ್ ಸ್ಲೈ

ಕೆರ್ರಿ ಟಾಟರ್ ಸ್ಲೈ

  • Share this:
    ಜೀವನದಲ್ಲಿ  ಹಲವು ಭಾರಿ ಅನಿರೀಕ್ಷಿತ ಘಟನೆಗಳನ್ನು ಎದುರಿಸುತ್ತೇವೆ. ಕೆಲವೊಂದು ಘಟನೆಗಳನ್ನು ನಮ್ಮನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಇನ್ನು ಕೆಲವು ಘಟನೆಗಳು ಮನದ ಮೂಲೆಯಲಲಿ ಯಾವಾಗಲೂ ಇರುತ್ತದೆ. ಮುಖ್ಯವಾಗಿ ಮಳೆಗಾಲದಲ್ಲಿ ಕರೆಂಟ್‌ನಿಂದ (Electricity) ಅನೇಕ ಅಪಘಾತಗಳು (Accidents) ಸಂಭವಿಸುತ್ತವೆ. ಮಳೆಗಾಲದಲ್ಲಿ ಎಷ್ಟೇ ಎಚ್ಚರ ವಹಿಸಿದರೂ, ಗಾಳಿ ಮಳೆಗೆ ತಂತಿ ತುಂಡಾಗಿ ಬಿದ್ದಿರುವುದು ಗೊತ್ತಾಗುವುದೇ ಇಲ್ಲ. ಆದರೆ ಅಪ್ಪಿ-ತಪ್ಪಿ ಕರೆಂಟ್​ ತಂತಿಗಳಿಗೆ ತುಳಿದರೆ ಸಾಕು ಸಾವು ಸಂಭವಿಸಲು ಹೆಚ್ಚೇನು ಸಮಯ ತೆಗೆದುಕೊಳ್ಳುವ ಇಲ್ಲ. ಇನ್ನು ಕರೆಂಟ್ ಕಂಬಗಳಿಗೂ ಅರ್ಥಿಂಗ್ ಮೆಟೀರಿಯಲ್ ಇರುತ್ತದೆ. ಕೆಲವು ಸಂದರ್ಭಗಳಲ್ಲಿ, ಜನರು ವಿದ್ಯುತ್ ಸ್ಪರ್ಶಕ್ಕೆ (Electric touch) ಒಳಗಾಗುತ್ತಾರೆ ಮತ್ತು ಸಾಯುತ್ತಾರೆ. ಆದರೆ ಕೆಲವರು ಕರೆಂಟ್ ಕೆಲಸ ಮಾಡುವಾಗ ರಬ್ಬರ್ ಚಪ್ಪಲಿ (Rubber Slipper) ಮತ್ತು ಕೋಲು ಹಿಡಿದುಕೊಳ್ಳುತ್ತಾರೆ. ಈ ವೇಳೆ ಕರೆಂಟ್ ಶಾಕ್ ಆಗುವುದಿಲ್ಲ. ಒಣ ಕಡ್ಡಿಗಳು ಮತ್ತು ರಬ್ಬರ್ ಮೂಲಕ ಕರೆಂಟ್ ಹರಿಯುವುದಿಲ್ಲ. ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ಬಳಸುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ (women) ಕರೆಂಟ್​ ಶಾಕ್​ನಿಂದ ಬದುಕುಳಿದಿದ್ದಾಳೆ. ಆದರೆ ಆಕೆ ಬದುಕುಳಿಯಲು ತನ್ನ ಬ್ರ್ಯಾಂಡೆಡ್​ ಚಪ್ಪಲಿ ಕಾರಣ ಎಂದು ಹೇಳಿದ್ದಾಳೆ.

    ಯುಎಸ್‌ನ ಕೆರ್ರಿ ಟಾಟರ್ ಸ್ಲೈ ಎಂಬ ಮಹಿಳೆ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಹಿತ್ತಲಲ್ಲಿ ಇದ್ದ ಕರೆಂಟ್ ಬಟನ್ ಗಳನ್ನು ಆಫ್ ಮಾಡಲು ಹೋಗುತ್ತಾಳೆ. ವಿದೇಶಿಗರು ಮನೆಯಲ್ಲಿ ಚಪ್ಪಳಿಗಳನ್ನು ಧರಿಸುತ್ತಾರೆ. ಅದರಂತೆಯೇ ಆಕೆ ಕೂಡ ಪೂಮಾ ಚಪ್ಪಲಿ ಧರಿಸಿದ್ದಳು. ಆದರೆ ಆಕೆ ಸ್ವಿಚ್​ ಬೋರ್ಡ್ ಮುಟ್ಟಿದ ತಕ್ಕಣ ಆಕೆಗೆ ಕರೆಂಟ್​ ಶಾಕ್​ ಹೊಡೆದಿದೆ. ಆಕೆ ಮಾರುದ್ದ ಹೋಗಿ ಬಿದ್ದಿದ್ದಾಳೆ.

    ಈ ಘಟನೆ ಸಂಭಂವಿಸಿದ  ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೆರ್ರಿ ಟಾಟರ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಅದೃಷ್ಟ ಚೆನ್ನಾಗಿದೆ ಎಂದು ಹೇಳಿದ್ದಾರೆ. ಆಕೆ ಧರಿಸಿದ್ದ ಪೂಮಾ ಚಪ್ಪಲ್ ನಿಂದಾಗಿ ಬದುಕುಳಿದಿದ್ದಾಳೆ ಎನ್ನಲಾಗಿದೆ. ಚಪ್ಪಲಿ ಹಾಕಿಕೊಂಡಿದ್ದರಿಂದ ಆಕೆಯ ದೇಹಕ್ಕೆ ವಿದ್ಯುತ್ ಪೂರೈಕೆಯಾಗಿಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ಮಹಿಳೆ ತಾನು ತೆಗೆದುಕೊಂಡಿದ್ದ ಪೂಮಾ ಚಪ್ಪಲ್ ಅನ್ನು ರೂ. 2,800 ಆಗಿದ್ದು, ಕೆಯ ಜೀವ ಉಳಿಸಿದೆ. ಇದೀಗ ಈ ಘಟನೆ ವೈರಲ್ ಆಗಿದೆ.‘

    ಇದನ್ನೂ ಓದಿ: Karan Johar: ನನಗೆ ರಣವೀರ್​ ಮೇಲೆ ಲವ್​ ಆಗಿದೆ ಎಂದ ಕರಣ್​ ಜೋಹರ್​! ಇದೇನು ಗುರು ಹಿಂಗದ್ರು!

    ಮಳೆಗಾಲದಲ್ಲಿ ಎಚ್ಚರ!

    ಸಾಮಾನ್ಯವಾಗಿ ಮಳೆಗಾಲದಲ್ಲಿ ಇಂತಹ ಘಟನೆ ನಡೆಯುವುದು ಸಾಮಾನ್ಯ. ಗಾಳಿ ಮಳೆಗೆ ಮರದ ಕೊಂಬೆಗಳು ಕರೆಂಟ್​ ಕಂಬಗಳ ಅಥವಾ ವೈರ್​ಗಳ ಮೇಲೆ ಬಿದ್ದು ಅನಾಹುತ ಸಂಭಂವಿಸುತ್ತದೆ. ಆದರೆ ಇಂತಹ ಸಮಸ್ಯೆಗಳು ಬಂದಾಗ ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕಿದೆ. ಏಕೆಂದರೆ ಕರೆಂಟ್​ ಶಾಕ್​ನಿಂದ ಪ್ರಾಣ ಹೋದ ಅನೇಕ ಘಟನೆಗಳು ಬೆಳಗಿಗೆ ಬರುತ್ತಿರುತ್ತವೆ.

    ಮಳೆಗಾಲದ ಸಮಯದಲ್ಲಿ ಮರದ ಬಳಿ ಅಥವಾ ಕರೆಂಟ್​ ಕಂಬದ ಬಳಿ ನಿಲ್ಲುವುದು ಅಪಾಯ. ಏಕೆಂದರೆ ಈ ಪ್ರದೇಶಲ್ಲಿ ಅನಾಹುತ ಸಂಭವಿಸುವುದೇ ಹೆಚ್ಚು. ಹಾಗಾಗಿ ಜಾಗರೂಕರಾಗಿ ಇರುವುದು ಒಳಿತು. ರಾತ್ರಿ ವೇಳೆ ಟಾರ್ಚ್​ ಇಲ್ಲದೆ ಓಡಾಡುವುದು ಕೂಡ ತಪ್ಪು.

    ಇದನ್ನೂ ಓದಿ: Alto K10: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಹೊಸ ಆಲ್ಟೊ K10 ಫೋಟೋಗಳು! ವಿನ್ಯಾಸ ನೋಡಿದ್ರಾ?

    ಇನ್ನು ಕರೆಂಟ್​ ನೀರಿನಲ್ಲಿ ಹರಿಯುತ್ತದೆ. ಹಾಗಾಗಿ ಕರೆಂಟ್​ ವೈರ್​ ನೀರಿಗೆ ತಾಗಿದರೂ ಅಪಾಯವೇ ಸರಿ. ಈ ವೇಳೆ ಜಾಗರೂಕರಾಗಿರಬೇಕು. ನೀರಿನಲ್ಲಿ ಕರೆಂಟ್​ ವೇಗವಾಗಿ ಹರಿಯುವುದರಿಂದ ಸಮಸ್ಯೆ ಎದುರಾಗಬಹುದು. ಸಾಮಾನ್ಯವಾಗಿ ರಬ್ಬರ್​ ವಸ್ತುಗಳಲ್ಲಿ ಕರೆಂಟ್​ ಬೇಗನೆ ಹರಿಯುವುದಿಲ್ಲ. ಮತ್ತು ಅದನ್ನು ತಡೆಯುತ್ತದೆ. ಹಾಗಾಗಿ ರಬ್ಬರ್​ ಗ್ಲೌಸ್​ ಬಳಸಿದರೆ ಉತ್ತಮ.
    Published by:Harshith AS
    First published: