Pink Sauce: ಇದೇನಿದು 'ಪಿಂಕ್ ಸಾಸ್'? ಈ ವೈರಲ್ ವಿಡಿಯೋ ಒಮ್ಮೆ ನೋಡಿ

ಟಿಕ್‌ಟಾಕ್ ಬಳಕೆದಾರನೊಬ್ಬ ಈಗ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾನೆ ನೋಡಿ. ಅದರಲ್ಲಿ ತನ್ನ ಬರ್ಗರ್ ಮತ್ತು ಇತರ ಆಹಾರ ಪದಾರ್ಥಗಳೊಂದಿಗೆ "ಪಿಂಕ್ ಸಾಸ್" ಅನ್ನು ಬಳಸುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡ ನಂತರ ಈ ನಿಗೂಢ ಕಾಂಡಿಮೆಂಟ್ ಅನ್ನು ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದೆ ಮಾಡಿದ್ದು.

ಪಿಂಕ್ ಸಾಸ್

ಪಿಂಕ್ ಸಾಸ್

  • Share this:
ಈಗಂತೂ ಚಿತ್ರ-ವಿಚಿತ್ರವಾದ ಅಡುಗೆಗಳನ್ನು ಮಾಡಿ ಅದರ ವಿಡಿಯೋವನ್ನು (Video) ಈ ಇಂಟರ್ನೆಟ್ ನಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ರೀತಿಯ ಆಹಾರ ಪದಾರ್ಥಗಳನ್ನು ನೋಡಿ ಕೆಲವು ನೆಟ್ಟಿಗರು ಕೋಪ ಮಾಡಿಕೊಂಡರೆ, ಇನ್ನೂ ಕೆಲವರು ‘ಸಾಕಪ್ಪಾ ಸಾಕು ಎರಡು ಮೂರು ಪದಾರ್ಥಗಳನ್ನು ಸೇರಿಸಿ ಮಾಡುತ್ತಿರುವ ಈ ವಿಚಿತ್ರ ಅಡುಗೆಗಳನ್ನು (Cooking) ನೋಡಲು ಹೆದರಿಕೆ’ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಟಿಕ್‌ಟಾಕ್ (TikTok) ಬಳಕೆದಾರನೊಬ್ಬ ಈಗ ಇಂತಹದೇ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾನೆ ನೋಡಿ. ಅದರಲ್ಲಿ ತನ್ನ ಬರ್ಗರ್ ಮತ್ತು ಇತರ ಆಹಾರ ಪದಾರ್ಥಗಳೊಂದಿಗೆ "ಪಿಂಕ್ ಸಾಸ್" (Pink Sauce) ಅನ್ನು ಬಳಸುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡ ನಂತರ ಈ ನಿಗೂಢ ಕಾಂಡಿಮೆಂಟ್ ಅನ್ನು ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದೆ ಮಾಡಿದ್ದು.

ಈ ಪಿಂಕ್ ಸಾಸ್ ಶೀಘ್ರದಲ್ಲಿಯೇ ಟ್ರೆಂಡಿಂಗ್ ಆಗಲು ಪ್ರಾರಂಭಿಸಿತು, ಇದನ್ನು ನೋಡಿದವರು ಅನೇಕ ರೀತಿಯ ಮೆಮೆಗಳನ್ನು ಸಹ ಇಂಟರ್ನೆಟ್ ನಲ್ಲಿ ಹಾಕಿದರು. ಅನೇಕ ಜನರು ಈ ಸಾಸ್ ಹೇಗಿದೆ, ತಿಂದರೆ ಏನು ಆಗೋದಿಲ್ವಾ ಅಂತ ಸುರಕ್ಷತೆಯನ್ನು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ. ಆದರೆ ಅವರೆಲ್ಲರೂ "ಪಿಂಕ್ ಸಾಸ್" ನ ಕಥೆ ಏನು ಮತ್ತು ಅದು ಹೇಗೆ ಜನಪ್ರಿಯವಾಯಿತು ಎಂದು ತಿಳಿಯಲು ಬಯಸಿದ್ದರು. ಈ ವಿಷಯದ ವಿಡಿಯೋಗಳು ಈಗ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ನಂತಹ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಕಾಣಿಸಿಕೊಂಡಿವೆ.

ಹೌದು.. ಇಷ್ಟಕ್ಕೂ ಏನಿದು ಪಿಂಕ್ ಸಾಸ್?
ಈ ಪಿಂಕ್ ಸಾಸ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಇಲ್ಲ. ಮಿಯಾಮಿ ಮೂಲದ ಟಿಕ್ಟಾಕರ್ ಚೆಫ್ ಪೈ ಈ ಸಾಸ್ ಅನ್ನು ತಯಾರಿಸಿದ್ದು, ಜುಲೈ 1 ರಿಂದ ಅದನ್ನು ಮಾರಾಟ ಮಾಡುತ್ತಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಟ್ಯಾಕೋಸ್, ಗೈರೋಸ್ ಮತ್ತು ಚಿಕನ್ ಟೆಂಡರ್ ಗಳನ್ನು ಗುಲಾಬಿ ಸ್ಲಿಮಿ ಸ್ಟಫ್ ನಲ್ಲಿ ಅದ್ದಿಕೊಂಡು ತಿನ್ನುತ್ತಿರುವ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.ಈ ಸಾಸ್ ನ ಮೊದಲ ವಿಡಿಯೋವನ್ನು ಪೋಸ್ಟ್ ಮಾಡಿದ ಜೂನ್ ತಿಂಗಳಿಂದ ಹಿಡಿದು ಇಲ್ಲಿಯವರೆಗೆ ಅದರ ಬಣ್ಣ ಮತ್ತು ಸ್ಥಿರತೆಯಲ್ಲಿ ಅನೇಕ ರೀತಿಯ ಬದಲಾವಣೆಗಳಿಗೆ ಒಳಗಾಗಿದೆ ಎಂದು ಇಂಡಿಪೆಂಡೆಂಟ್ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ:  “No Poo” movement: ಶ್ಯಾಂಪೂಗೆ ಗುಡ್‌ ಬೈ ಹೇಳಿ, ಸಾಂಪ್ರದಾಯಿಕ ಪದಾರ್ಥಗಳಿಗೆ ಜೈ ಅನ್ನಿ!

ತಿನ್ನೋದಕ್ಕೆ ಈ ಸಾಸ್ ನ ರುಚಿ ಹೇಗಿರುತ್ತೆ?
ದುರದೃಷ್ಟವಶಾತ್, ಆ ಮಾಹಿತಿಯು ಸಹ ಲಭ್ಯವಿಲ್ಲ, ಏಕೆಂದರೆ ಚೆಫ್ ಪೈ ಗುಲಾಬಿ ಸಾಸ್ ರುಚಿ ಹೇಗಿದೆ ಅಂತ ಎಲ್ಲಿಯೂ ಹಂಚಿಕೊಂಡಿಲ್ಲ. ಟಿಕ್‌ಟಾಕ್ ಬಳಕೆದಾರರು ಇದನ್ನು 20 ಡಾಲರ್ ಗೆ ಎಂದರೆ ಸುಮಾರು 1,600 ರೂಪಾಯಿಗೆ ಮಾರಾಟ ಮಾಡುತ್ತಾರೆ. "ಇದು ತನ್ನದೇ ಆದ ರುಚಿಯನ್ನು ಹೊಂದಿದೆ, ನೀವು ಅದನ್ನು ಸವಿಯಲು ಬಯಸಿದರೆ, ಅದನ್ನು ಖರೀದಿಸಿ" ಎಂದು ಅವರು ವಿಡಿಯೋದಲ್ಲಿ ಹೇಳಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಸಾಸ್ ಯಾವುದರಿಂದ ತಯಾರಿಸಲಾಗುತ್ತದೆ?
ಪಿಂಕ್ ಸಾಸ್ ನ ಅಧಿಕೃತ ವೆಬ್‌ಸೈಟ್ ಇದೆ, ಅದರಲ್ಲಿ ಚೆಫ್ ಪೈ ಪದಾರ್ಥಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಡ್ರ್ಯಾಗನ್ ಫ್ರೂಟ್, ಸೂರ್ಯಕಾಂತಿ ಬೀಜದ ಎಣ್ಣೆ, ಜೇನುತುಪ್ಪ, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಬಳಸಿ ಪಿಂಕ್ ಸಾಸ್ ಅನ್ನು ತಯಾರಿಸಲಾಗುತ್ತದೆ ಎಂದು ಇದರಲ್ಲಿ ತಿಳಿಸಿದ್ದಾರೆ. ಈ ವೆಬ್‌ಸೈಟ್ ನಲ್ಲಿ ಪೋಸ್ಟ್ ಮಾಡಲಾದ "ರಹಸ್ಯ ಸಾಸ್" ನ ಪೌಷ್ಠಿಕಾಂಶದ ಮೌಲ್ಯದ ಸ್ಕ್ರೀನ್ಶಾಟ್ ಪ್ರಕಾರ, ಪ್ರೋಟೀನ್ ಅಥವಾ ಕೊಲೆಸ್ಟ್ರಾಲ್ ಆದರೆ ಹೆಚ್ಚಿನ ಮಟ್ಟದ ವಿಟಮಿನ್ ಸಿ ಸಹ ಇದರಲ್ಲಿದೆಯಂತೆ.

ಇದನ್ನೂ ಓದಿ: Chicken biryani ಅಂದ್ರೆ ಈ ದೇವರಿಗೆ ಇಷ್ಟ! ಭಾರತದಲ್ಲಿ ನಾನ್ ವೆಜ್ ಪ್ರಸಾದ ನೀಡುವ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಈ ಪಿಂಕ್ ಸಾಸ್ ಗೆ ಸಿಕ್ಕ ಪ್ರತಿಕ್ರಿಯೆಗಳನ್ನು ನೋಡಿ
ಅನೇಕ ಟ್ವಿಟ್ಟರ್ ಬಳಕೆದಾರರು ಬಾಟಲಿಗಳನ್ನು ರೆಫ್ರಿಜರೇಟೆಡ್ ನಲ್ಲಿ ಇಡದೆ ಅವರಿಗೆ ಮೇಲ್ ಮಾಡಲಾಗಿದೆ ಎಂದು ಹೇಳಿದ್ದಾರೆ, ಕೆಲವರು ಪ್ಯಾಕೇಜಿಂಗ್ ಅನ್ನು ತೆಗೆದು ನೋಡಿದಾಗ ಅವರಿಗೆ ಏನೋ ಕೊಳೆತ ವಾಸನೆ ಬರುತ್ತಿದೆ ಎಂದು ಹೇಳಿದರು. "ಈ ಪಿಂಕ್ ಸಾಸ್ ವಿಷಯವು ನಿಜವಾಗಿಯೂ ನನ್ನ ಕನಸುಗಳನ್ನು ಮುಂದುವರಿಸಲು ನನ್ನನ್ನು ಪ್ರೇರೇಪಿಸುತ್ತಿದೆ, ಏಕೆಂದರೆ ನೀವು ಏನು ಬೇಕಾದರೂ ಮಾಡುತ್ತೀರಿ ಮತ್ತು ಖರೀದಿಸುತ್ತೀರಿ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
Published by:Ashwini Prabhu
First published: