• Home
  • »
  • News
  • »
  • trend
  • »
  • Pineapple: ಈ ಅನಾನಸ್​ ಹಣ್ಣಿನ ಬೆಲೆ ಬರೋಬ್ಬರಿ 1 ಲಕ್ಷ​ ರೂ-ಅಂತಹದ್ದೇನಿದೆ ಇದರಲ್ಲಿ?

Pineapple: ಈ ಅನಾನಸ್​ ಹಣ್ಣಿನ ಬೆಲೆ ಬರೋಬ್ಬರಿ 1 ಲಕ್ಷ​ ರೂ-ಅಂತಹದ್ದೇನಿದೆ ಇದರಲ್ಲಿ?

ಅನಾನಸ್ ಹಣ್ಣು

ಅನಾನಸ್ ಹಣ್ಣು

ಹುಳಿ ಸಿಹಿ ಮಿಶ್ರಿತ ಈ ಹಣ್ಣು ಆರೋಗ್ಯದ ವಿಷಯದಲ್ಲಿ ಅತ್ಯುತ್ತಮ ಹಣ್ಣು ಎಂದೆನಿಸಿದ್ದು ಮುಖ್ಯವಾಗಿ ಚಳಿಗಾಲದಲ್ಲಿ(Winter Season) ಈ ಹಣ್ಣಿನ ಬಳಕೆಯನ್ನು ಆದಷ್ಟು ಹೆಚ್ಚು ಮಾಡಿದಷ್ಟು ಉತ್ತಮ ಎಂಬುದು ಆರೋಗ್ಯ ಪರಿಣಿತರ ಮಾತಾಗಿದೆ.

  • Trending Desk
  • 5-MIN READ
  • Last Updated :
  • Share this:

ಮೈಯೆಲ್ಲಾ ಮುಳ್ಳುಗಳನ್ನು ಹೊಂದಿದ್ದರೂ ಒಳಭಾಗದಲ್ಲಿ ಸಿಹಿಯಾದ ರುಚಿಯನ್ನು ಉಣಬಡಿಸುವ ಅನನಾಸು(Pineapple) ವಿಟಮಿನ್ ಸಿ(Vitamin C), ಉತ್ಕರ್ಷಣ ನಿರೋಧಕಗಳು ಹಾಗೂ ಮ್ಯಾಂಗನೀಸ್(Manganese) ಅಂತೆಯೇ ಪೊಟ್ಯಾಸಿಯಮ್(Potassium)‌ನಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಹುಳಿ ಸಿಹಿ ಮಿಶ್ರಿತ ಈ ಹಣ್ಣು ಆರೋಗ್ಯದ ವಿಷಯದಲ್ಲಿ ಅತ್ಯುತ್ತಮ ಹಣ್ಣು ಎಂದೆನಿಸಿದ್ದು ಮುಖ್ಯವಾಗಿ ಚಳಿಗಾಲದಲ್ಲಿ(Winter Season) ಈ ಹಣ್ಣಿನ ಬಳಕೆಯನ್ನು ಆದಷ್ಟು ಹೆಚ್ಚು ಮಾಡಿದಷ್ಟು ಉತ್ತಮ ಎಂಬುದು ಆರೋಗ್ಯ ಪರಿಣಿತರ ಮಾತಾಗಿದೆ.


1 ಅನನಾಸಿನ ಬೆಲೆ ರೂ 1 ಲಕ್ಷ


ಆರೋಗ್ಯದ ಗಣಿಯಾಗಿರುವ ಅನನಾಸು ದುಬಾರಿ ಹಣ್ಣು ಹೌದು ಎಂದು ನಾವು ತಿಳಿಸಿದರೆ ನೀವು ಕುತೂಹಲಕ್ಕೆ ಒಳಗಾಗುವುದು ಖಂಡಿತ. ಬಿಬಿಸಿ ವರದಿ ಮಾಡಿರುವ ಪ್ರಕಾರ ಇಂಗ್ಲೆಂಡ್‌ನ ಕಾರ್ನ್‌ವಾಲ್‌ನಲ್ಲಿ ಬೆಳೆದ ಹೆಲಿಗಾನ್ ಅನನಾಸಿನ ಆರಂಭದ ಬೆಲೆ ಸುಮಾರು 1,000 ಪೌಂಡ್ ಸ್ಟರ್ಲಿಂಗ್ (ರೂ 1 ಲಕ್ಷ) ಎಂದರೆ ನೀವು ಹೌಹಾರುತ್ತೀರಿ. ರೂ 1 ಲಕ್ಷ ಬೆಲೆಯ ಈ ಅನನಾಸಿನ ಪ್ರತ್ಯೇಕತೆ ಅದನ್ನು ಬೆಳೆಸುವ ವಿಧಾನದಲ್ಲಿ ಅಡಗಿದೆ. ಈ ಹಣ್ಣಿನ ಬೆಳೆಗೂ ಕಾಲಾವಕಾಶ ತಗುಲುತ್ತದೆ ಅಂದರೆ ಬೆಳೆ ಕಟಾವಿಗೆ ಬರಲು ಸುಮಾರು ಎರಡರಿಂದ ಮೂರು ವರ್ಷಗಳು ಬೇಕು ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.


ಅನನಾಸು ಇಷ್ಟೊಂದು ದುಬಾರಿಯಾಗಲು ಕಾರಣವೇನು?


ಅತ್ಯಂತ ಉನ್ನತ ಹಣ್ಣುಗಳಿಗೆ ಮೀಸಲಾಗಿರುವ ವೆಬ್‌ಸೈಟ್ ಉಲ್ಲೇಖಿಸಿರುವಂತೆ ಈ ಅನನಾಸಿನ ತಳಿಯನ್ನು 1819 ರಲ್ಲಿ ಬ್ರಿಟನ್‌ಗೆ ತರಲಾಯಿತು. ತೋಟಗಾರಿಗಾ ತಜ್ಞರು ಈ ಅನನಾಸು ದೇಶದ ಹವಾಮಾನಕ್ಕೆ ಒಗ್ಗಿಕೊಳ್ಳುವುದಿಲ್ಲ ಎಂಬುದನ್ನು ಕಂಡುಕೊಂಡರು ಹಾಗಾಗಿ ಒಂದು ತಂತ್ರವನ್ನು ಅನುಸರಿಸಿದ ತಜ್ಞರು ವಿಶೇಷ ಮರದಿಂದ ಕುಳಿ ಇರುವ ಮಡಿಕೆಗಳನ್ನು ವಿನ್ಯಾಸಗೊಳಿಸಿದರು ಹಾಗೂ ಅನನಾಸಿನ ಪೋಷಣೆಗೆ ಕೊಳೆಯುವ ಗೊಬ್ಬರದ ತಾಜಾ ಪೂರೈಕೆಯನ್ನು ಮಾಡಿದರು ಹಾಗೂ ಹೀಟರ್ ವ್ಯವಸ್ಥೆಯನ್ನು ಮಾಡಿದರು. ದ್ವಾರಗಳ ಮೂಲಕ ಹೊಂಡಗಳಿಗೆ ಪ್ರವೇಶಿಸುವ ಗಾಳಿಯನ್ನು ಬೆಚ್ಚಗಾಗಿಸುತ್ತದೆ.


ಇದನ್ನೂ ಓದಿ: Viral Girl: ಸ್ಟ್ರೀಟ್​ಫುಡ್ ಮಾರುವ ಈ ಪಂಜಾಬಿ ಹುಡುಗಿ ವೈರಲ್ ಆಗಿದ್ದೇಕೆ? ನೀವ್ ನೋಡಿದ್ರಾ ವೀಡಿಯೋ?


ಅನನಾಸು ಕೃಷಿ ವೆಚ್ಚದಾಯಕ ಹಾಗೂ ಶ್ರಮದಾಯಕ ಹೇಗೆ?


ಅನನಾಸಿನ ಕೃಷಿ ಹೆಚ್ಚು ಶ್ರಮದಾಯಕವಾಗಿದೆ ಏಕೆಂದರೆ ಅನನಾಸಿನ ಪೋಷಣೆ, ಸಾಗಣೆ ವೆಚ್ಚ, ಅನನಾಸ್ ಹೊಂಡಗಳ ನಿರ್ವಹಣೆ ಹೀಗೆ ಹಣ್ಣಿನ ಆರೈಕೆಗೆ ಮಾನವರಿಗೆ ಗಂಟೆಗಳ ಕಾಲಾವಕಾಶ ಬೇಕು. ಪ್ರತಿ ಅನನಾಸಿನ ನಿರ್ವಹಣೆಗೆ ಸುಮಾರು 1,000 ಪೌಂಡ್‌ಗಳ ವೆಚ್ಚ ತಗುಲುತ್ತದೆ ಎಂದು ಹೆಲಿಗನ್‌ನ ವಕ್ತಾರರು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.


ಬೆಳೆ ಲಾಭದಾಯಕವಾಗಿದೆ


ಅನನಾಸು ಕೃಷಿಗೆ ಸೂಕ್ತವಾಗಿರುವ ತಂತ್ರಗಾರಿಕೆಗಳನ್ನು ಪ್ರತಿಯೊಬ್ಬ ಕೃಷಿಕರು ಕಲಿತುಕೊಂಡಿದ್ದು ತೋಟಗಾರರು ಹಾಗೂ ಸಂದರ್ಶಕರಿಗೆ ಲಾಭದಾಯಕ ಪ್ರಕ್ರಿಯೆ ಎಂದೆನಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವಿಕ್ಟೋರಿಯನ್ ಗ್ರೀನ್ ಹೌಸ್‌ನಲ್ಲಿ ಬೆಳೆದ ಎರಡನೇ ಅನನಾಸನ್ನು ರಾಜಿ ಎಲಿಜಬೆತ್ II ಗೆ ಉಡುಗೊರೆಯಾಗಿ ನೀಡಲಾಯಿತು ಎಂದು ಹೆಲಿಗಾನ್ ವೆಬ್‌ಸೈಟ್ ಉಲ್ಲೇಖಿಸಿದೆ.


ಹರಾಜಿಗೆ ಹಾಕಿದಾಗ ಪ್ರತಿ ಅನನಾಸು ಬೆಲೆ ರೂ 10 ಲಕ್ಷ


ಈ ಅನನಾಸುಗಳನ್ನು ಕ್ಯೂ ಗಾರ್ಡನ್ಸ್‌ನಿಂದ ಹೆಲಿಗಾನ್‌ಗೆ ಉಡುಗೊರೆಯಾಗಿ ನೀಡಲಾದ ಸಸ್ಯಗಳ ಸಾರಯುಕ್ತ ಮಿಶ್ರಣವಾಗಿದೆ ಹಾಗೂ ಕೆರಿಬಿಯನ್‌ನಿಂದ ಸ್ವಾಧೀನಪಡಿಸಿಕೊಂಡ ಅಪರೂಪದ ತಳಿಗಳು ಎಂದು ವೆಬ್‌ಸೈಟ್ ತಿಳಿಸಿದೆ. ಈ ಹಣ್ಣನ್ನು ಹರಾಜು ಹಾಕಿದರೆ ಪ್ರತಿ ಅನನಾಸ್‌ಗೆ ರೂ 10 ಲಕ್ಷದವರೆಗೆ ಮೌಲ್ಯವಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಹಣ್ಣುಗಳ ಪಟ್ಟಿಯಲ್ಲಿ ಈ ಅನನಾಸು ಸ್ಥಾನ ಗಿಟ್ಟಿಸಿಕೊಂಡಿದ್ದು ಈ ಹಣ್ಣನ್ನು ಬೆಳೆಯಲು ತಗುಲುವ ವೆಚ್ಚ, ಶ್ರಮ ಹಾಗೂ ನಿರ್ವಹಣೆಗೆ ಅಗತ್ಯವಾಗಿರುವ ಮೂಲ ಉತ್ಪನ್ನಗಳು ಒಳಗೊಂಡಂತೆ ಪ್ರತಿ ಅನನಾಸಿಗೆ ರೂ 1 ಲಕ್ಷವನ್ನು ನಿಗದಿಮಾಡಲಾಗಿದೆ ಎಂದು ತಿಳಿಸಲಾಗಿದೆ. ತೋಟಗಾರಿಕಾ ತಜ್ಞರು ವಿಕ್ಟೋರಿಯನ್ ಹಸಿರುಮನೆಗಳಲ್ಲಿ ಅನಾನಸ್ ಬೆಳೆಯಲು ಏಳು ವರ್ಷಗಳು ಮತ್ತು ಸಾವಿರಾರು ಗಂಟೆಗಳ ಕಾಲಾವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ.

Published by:Latha CG
First published: