Turkey Teeth: ಟರ್ಕಿ ಹಲ್ಲುಗಳಿಗಾಗಿ ಈ ವ್ಯಕ್ತಿ 8 ಲಕ್ಷ ರೂಪಾಯಿ ಖರ್ಚು ಮಾಡಿದ್ರಂತೆ; ಆದ್ರೂ ಟ್ರೊಲ್ ಆಗ್ತಿರೋದು ಯಾಕೆ?

ದಿನನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದೊಮ್ಮೆ ಕಣ್ಣಾಡಿಸಿದರೆ ಸಾಕು, ಯಾವುದಾದರೊಂದು ಅಚ್ಚರಿ ಅಥವಾ ವಿಚಿತ್ರ ಎನ್ನುವಂತಹ ಸುದ್ದಿಗಳು ಕಣ್ಣಿಗೆ ಬೀಳದೆ ಇರದು. ಅದರಲ್ಲೂ ವಿಶೇಷವಾಗಿ ಈ ಟಿಕ್ ಟಾಕ್ ಅನ್ನು ಅನುಸರಿಸುವ ಜನರಿಗೆ ಇತ್ತೀಚೆಗೆ ಟರ್ಕಿ ಹಲ್ಲುಗಳ ಬಗ್ಗೆ ವಿಡಿಯೋಗಳು ಟ್ರೆಂಡ್ ಆಗುತ್ತಿರುವುದು ಕಂಡು ಬಂದಿರಬಹುದು.

ಟರ್ಕಿ ದಂತಗಳು

ಟರ್ಕಿ ದಂತಗಳು

  • Share this:
ದಿನನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಒಂದೊಮ್ಮೆ ಕಣ್ಣಾಡಿಸಿದರೆ ಸಾಕು, ಯಾವುದಾದರೊಂದು ಅಚ್ಚರಿ ಅಥವಾ ವಿಚಿತ್ರ ಎನ್ನುವಂತಹ ಸುದ್ದಿಗಳು ಕಣ್ಣಿಗೆ ಬೀಳದೆ ಇರದು. ಅದರಲ್ಲೂ ವಿಶೇಷವಾಗಿ ಈ ಟಿಕ್-ಟಾಕ್ (Tiktok) ಅನ್ನು ಅನುಸರಿಸುವ ಜನರಿಗೆ ಇತ್ತೀಚೆಗೆ ಟರ್ಕಿ ಹಲ್ಲುಗಳ (Turkey Teeth) ಬಗ್ಗೆ ವಿಡಿಯೋಗಳು ಟ್ರೆಂಡ್ (Trend) ಆಗುತ್ತಿರುವುದು ಕಂಡು ಬಂದಿರಬಹುದು. ಹೌದು, ಈಗ ಈ ವೇದಿಕೆಯಲ್ಲಿ ಟರ್ಕಿ ದಂತಗಳು ಬಗ್ಗೆ ಮಾಡಲಾದ ವಿಡಿಯೋಗಳು (Video) ಸಾಕಷ್ಟು ಹರಿದಾಡುತ್ತಿವೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ (Western Countries) ದಂತ ಸಂಬಂಧಿ ಯಾವುದಾದರೂ ಚಿಕಿತ್ಸೆ (Treatment)  ಪಡೆಯಲು ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಏಕೆಂದರೆ ಅಲ್ಲಿ ದಂತ ಚಿಕಿತ್ಸೆಗಳು ಬಲು ದುಬಾರಿ.

ಟರ್ಕಿ ದೇಶದ ದಂತ ಚಿಕಿತ್ಸೆಯ ವಿಶೇಷತೆ ಏನು? 
ಟರ್ಕಿ ದೇಶದಲ್ಲಿ ಈ ದಂತ ಚಿಕಿತ್ಸೆಗಳು ಉತ್ತಮವಾಗಿರುವುದಲ್ಲದೆ ಬಲು ಅಗ್ಗವಾಗಿವೆ. ಹಾಗಾಗಿ ಹಲವು ಪಾಶ್ಚಿಮಾತ್ಯ ಜನರು ದಂತಗಳ ಮರುಜೋಡಣೆ ಅಥವಾ ಇತರೆ ಚಿಕಿತ್ಸೆಗೆಂದು ಟರ್ಕಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇತ್ತೀಚಿಗಂತೂ ಈ ಟರ್ಕಿ ಟೀತ್ ಎಂಬುದು ಸಾಕಷ್ಟು ಜನಪ್ರೀಯವಾಗಿದ್ದು ಟಿಕ್ ಟಾಕ್‍ನಲ್ಲಿ ಈ ಕುರಿತಾದ ವಿಡಿಯೋಗಳು ಟ್ರೆಂಡ್ ಆಗುತ್ತಿವೆ ಎನ್ನಬಹುದು.

ಆದರೆ ಈ ಟ್ರೆಂಡ್ ಅನ್ನು ಅನುಭವಿಸುತ್ತಿರುವವರೆಲ್ಲರೂ ಅದೃಷ್ಟವಂತರಲ್ಲ ಜಾಮಿ ಗ್ರಿಫಿತ್ ಅವರ ಹಾಗೆ ಎಂದು ಹೇಳಬಹುದು. ಜಾಮಿ ಅವರೂ ಸಹ ಟರ್ಕಿ ಟೀತ್ ಅಳವಡಿಸಿಕೊಂಡಿದ್ದು ಅದರ ಭವ್ಯ ಬೀಳಿ ಬಣ್ಣಕ್ಕಾಗಿ ಟ್ರೋಲ್ ಆಗಿದ್ದರು. ಅದಕ್ಕಾಗಿ ಅವರು ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆಂಬುದು ಮತ್ತೊಂದು ವಿಶೇಷ. ಆದರೆ, ಜಾಮಿ ತಮ್ಮನ್ನು ಟ್ರೋಲ್ ಮಾಡಿದರ ಬಗ್ಗೆ ಎದುರೇಟು ನೀಡಿ ಸುದ್ದಿಯಲ್ಲಿದ್ದಾರೆಂದರೆ ತಪ್ಪಾಗದು.

ಟರ್ಕಿ ಹಲ್ಲುಗಳ ಬಗ್ಗೆ ಜನ ಹೇಗೆ ವ್ಯಂಗ್ಯವಾಡಿದ್ದಾರೆ ನೋಡಿ
ಅಸಲಿಗೆ ಜಾಮಿ ಅವರು ಟರ್ಕಿ ದೇಶಕ್ಕೆ ತಮ್ಮ ದಂತಗಳಿಗೆ ಹೊಸತನವನ್ನು ತರುವ ಉದ್ದೇಶದಿಂದ ಭೇಟಿ ನೀಡಿದ್ದರು. ಹೀಗೆ ಟರ್ಕಿಗೆ ಬಂದಿಳಿದ ಜಾಮಿ ಅವರು "ಟರ್ಕಿ ಟೀತ್" ಬಗ್ಗೆ ಅಪಾರವಾಗಿ ಆಕರ್ಷಿತರಾದರು. ಇನ್ನೇನು ತಡ ಅವರು ಟರ್ಕಿ ಟೀತ್ ಅನ್ನು ಪಡೆದುಕೊಂಡೇ ಬಿಟ್ಟರು. ತದನಂತರ ಟಿಕ್‍ಟಾಕ್‍ನಲ್ಲಿ ಅವರ ಆ ಬಹು ಹೊಳಪಿನ ಶುಭ್ರ ಬೀಳಿ ಹಲ್ಲುಗಳ ಭವ್ಯತೆಯನ್ನು ತೋರಿಸುವ ಟಿಕ್ ಟಾಕ್ ವಿಡಿಯೋ ಹೊರ ಬಂದೇ ಬಿಟ್ಟಿತು. ಪಾಪ...ಅವರು ತಮ್ಮ ಪ್ರಕಾಶಮಾನವಾದ ಬೀಳಿ ದಂತಗಳ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನಾಡಬಹುದು ಎಂದು ತಿಳಿದಿದ್ದರೇನೋ ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಇದನ್ನು ವೀಕ್ಷಿಸಿದ ಹಲವು ಜನರು ಅವರ ಆ ಕಾಂತೀಯ ದಂತಗಳ ಬಗ್ಗೆ ವಿಡಂಬನೆ ಮಾಡಿದರು, ಅವರನ್ನು ಸಾಕಷ್ಟು ಟ್ರೋಲ್ ಕೂಡ ಮಾಡಲಾಯಿತು.

ಇದನ್ನೂ ಓದಿ:  Viral Video: ಯಾವುದೇ ಸಪೋರ್ಟ್ ಇಲ್ಲದೆ ಕಲ್ಲಿನ ಬೆಟ್ಟ ಹತ್ತಿದ ಭಿಕ್ಕು! ಅಬ್ಬಾ ಎನರ್ಜಿಯೇ, ನೆಟ್ಟಿಗರು ಫಿದಾ

ಹಲವು ಜನರು, ಅವರ ದಂತಗಳ ಬಗ್ಗೆ, "ನಿಮಗಿನ್ನು ಟಾರ್ಚ್ ಬಳಸುವ ಅವಶ್ಯಕತೆಯಿಲ್ಲ", "ನೀವು ಅದನ್ನು ಲಿಗೋ ಬಾಕ್ಸಿನಿಂದ ತಂದಿರುವಿರಾ?" ಇತ್ಯಾದಿ ಕಾಮೆಂಟ್ ಗಳ ಮೂಲಕ ಕಾಲೆಳೆದರು. ಆದರೆ ಜಾಮಿ ಅವರು ಇದಕ್ಕೆ ಪ್ರತ್ಯುತ್ತರ ನೀಡಬೇಕೆಂದು ನಿರ್ಧರಿಸಿ ಹಲವು ಜನರು ವೆನೀರ್ ಚಿಕಿತ್ಸೆ (ಟರ್ಕಿ ಟೀತ್ ಚಿಕಿತ್ಸೆ) ಬಗ್ಗೆ ಸಾಕಷ್ಟು ಟ್ರೋಲ್ ಮಾಡಿರುವುದನ್ನು ಗಮನಿಸಿ ಅದನ್ನು ತಾವು ಈಗ "ದ್ವೇಷಿಸುತ್ತಿರುವುದರಿಂದ" ಅದನ್ನು ತೆಗೆಯುವ ಚಿಕಿತ್ಸೆ ಪಡೆದಿದ್ದೇನೆ ಎಂದು ಹೇಳುತ್ತ ಆ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಅದರಲ್ಲಿ ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುವ ಮೂಲಕ ಅದನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:  First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

ಟ್ರೋಲ್ ಮಾಡುವ ಜನರಿಗೆ ಜಾಮಿ ಅವರು ಏನು ಹೇಳಿದ್ರು ಗೊತ್ತಾ?
ಆದರೆ, ವಾಸ್ತವದಲ್ಲಿ ಜಾಮಿ ಅವರು ವಿನೀರ್ಸ್ ತೆಗೆದು ಹಾಕುವ ಚಿಕಿತ್ಸೆ ಮಾಡಿಕೊಂಡಿಯೇ ಇರಲಿಲ್ಲ ಬದಲಾಗಿ ಅವರು ವಿನೀರ್ಸ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿಡಿಯೋ ಅನ್ನೇ ಪೋಸ್ಟ್ ಮಾಡಿದ್ದರು. ಇದು ಶೀಘ್ರದಲ್ಲಿಯೇ ಟ್ರೋಲ್ ಮಾಡಿರುವವರಿಗೆ ಗೊತ್ತಾಯಿತು. ಒಟ್ಟಿನಲ್ಲಿ ಜಾಮಿ ಅವರು ಟ್ರೋಲ್ ಮಾಡುವವರಿಗೆ ಸ್ವಲ್ಪ ಕಾಲ ಚಳ್ಳೆ ಹಣ್ಣು ತಿನ್ನಿಸುವ ಪ್ರಯತ್ನ ಮಾಡಿದರು ಎನ್ನಬಹುದು. ಟರ್ಕಿಯ ಸಾವಿರ ದಂತವೈದ್ಯರ ಪೈಕಿ 597 ವೈದ್ಯರು ಟರ್ಕಿಗೆ ಬಂದ ಬಹು ಜನರಿಗೆ ಅವರ ದಂತಗಳಿಗೆ ಸಂಬಂಧಿಸಿದಂತೆ ಕ್ರೌನ್ ಸಮಸ್ಯೆಗೆ ಚಿಕಿತ್ಸೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆಂದು ಈ ಮಧ್ಯೆ ಬಿಬಿಸಿ ಮಾಧ್ಯಮ ವರದಿ ಮಾಡಿದೆ. ಈ ಬಗ್ಗೆ ಪೋಲ್ ಕೈಗೊಂಡಾಗ ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿ ಐದು ಜನರಲ್ಲಿ ಒಬ್ಬರು ತಾವು ದಂತ ಸಂಬಂಧಿ ಚಿಕಿತ್ಸೆಗೆ ಐದು ಲಕ್ಷ ರೂಪಾಯಿಯವರೆಗೆ ವ್ಯಯಿಸಿರುವುದಾಗಿ ಹೇಳಿದ್ದಾರೆನ್ನಲಾಗಿದೆ.
Published by:Ashwini Prabhu
First published: