• Home
  • »
  • News
  • »
  • trend
  • »
  • New Car: ಬರೀ 10 ರೂಪಾಯಿ ನಾಣ್ಯಗಳಿಂದ ಲಕ್ಷ ರೂಪಾಯಿ ಸೇರಿಸಿ ಕಾರು ಖರೀದಿ ಮಾಡಿದ ವ್ಯಕ್ತಿ!

New Car: ಬರೀ 10 ರೂಪಾಯಿ ನಾಣ್ಯಗಳಿಂದ ಲಕ್ಷ ರೂಪಾಯಿ ಸೇರಿಸಿ ಕಾರು ಖರೀದಿ ಮಾಡಿದ ವ್ಯಕ್ತಿ!

ಹತ್ತುರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ ಕಾರು ಖರೀದಿಸಿದ ವ್ಯಕ್ತಿ

ಹತ್ತುರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ ಕಾರು ಖರೀದಿಸಿದ ವ್ಯಕ್ತಿ

ತಮಿಳುನಾಡಿನ ವ್ಯಕ್ತಿಯೊಬ್ಬರು ಕೇವಲ 10 ರೂಪಾಯಿಯ ನಾಣ್ಯಗಳನ್ನು ಸೇರಿಸಿ ಅದರ ಮೊತ್ತವು 6 ಲಕ್ಷ ರೂಪಾಯಿ ಆದಾಗ ಹೊಸ ಕಾರೊಂದನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಏನಪ್ಪಾ ಈ ವ್ಯಕ್ತಿ ಕೇವಲ 10 ರೂಪಾಯಿಯ ನಾಣ್ಯಗಳನ್ನೇ ಏಕೆ ಸಂಗ್ರಹಿಸಿದ್ದಾರೆ ಅಂತ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಈಗ ಮಧ್ಯಮ ವರ್ಗದ ಜನರು ಹೊಸ ಕಾರೊಂದನ್ನು (Car) ಖರೀದಿಸಬೇಕಾದರೆ ತಮ್ಮ ಬಳಿ ಇರುವ ಅಲ್ಪ ಸ್ವಲ್ಪ ದುಡ್ಡನ್ನು ಕಾರಿನ ಶೋ ರೂಮ್ ಅವರಿಗೆ ನಗದು ನೀಡಿ, ಮಿಕ್ಕಿದ್ದನ್ನು ಅವರು ಬ್ಯಾಂಕಿನಿಂದ ಸಾಲ (Bank Loan) ತೆಗೆದುಕೊಳ್ಳುವುದನ್ನು ನಾವೆಲ್ಲಾ ಸುಮಾರು ಬಾರಿ ನೋಡಿರುತ್ತೇವೆ. ಕೆಲವರು ಕಾರು ತೆಗೆದುಕೊಳ್ಳಬೇಕು ಅಂತಾನೆ ಸುಮಾರು ವರ್ಷಗಳಿಂದ ಹಣವನ್ನು ಉಳಿಸಿಕೊಂಡು ಬಂದು ಕೊನೆಗೆ ಎಲ್ಲಾ ಹಣವನ್ನು ನಗದು ರೂಪದಲ್ಲಿ ನೀಡಿ ಹೊಸ ಕಾರನ್ನು ಖರೀದಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ (Person) ಹೇಗೆ ಹೊಸ ಕಾರು ಖರೀದಿಸಿದ್ದಾನೆ ಅಂತ ನೀವು ಕೇಳಿದರೆ ಆಶ್ಚರ್ಯವಾಗುವುದಂತೂ ನಿಜ.


10 ರೂಪಾಯಿಯ ನಾಣ್ಯಗಳನ್ನು ಸೇರಿಸಿ ಹೊಸ ಕಾರು ಖರೀದಿ
ತಮಿಳುನಾಡಿನ ವ್ಯಕ್ತಿಯೊಬ್ಬರು ಕೇವಲ 10 ರೂಪಾಯಿಯ ನಾಣ್ಯಗಳನ್ನು ಸೇರಿಸಿ ಅದರ ಮೊತ್ತವು 6 ಲಕ್ಷ ರೂಪಾಯಿ ಆದಾಗ ಹೊಸ ಕಾರೊಂದನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಏನಪ್ಪಾ ಈ ವ್ಯಕ್ತಿ ಕೇವಲ 10 ರೂಪಾಯಿಯ ನಾಣ್ಯಗಳನ್ನೇ ಏಕೆ ಸಂಗ್ರಹಿಸಿದ್ದಾರೆ ಅಂತ.


ಇದನ್ನೂ ಓದಿ: Dogs Chasing Bike: ಬೈಕ್​​​ ಸವಾರರೇ! ಬೀದಿ ನಾಯಿ ಅಟ್ಟಿಸಿಕೊಂಡು ಬಂದರೆ ಗಾಬರಿಯಾಗಬೇಡಿ, ಹೀಗೆ ಮಾಡಿ


ಅರೂರ್ ನಿವಾಸಿಯಾದ ವೆಟ್ರಿವೇಲ್ ಅವರ ತಾಯಿ ಊರಿನಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದು, ಅಲ್ಲಿ ಪ್ರತಿದಿನ ಬರುವಂತಹ ಗ್ರಾಹಕರು ತನ್ನ ತಾಯಿ ನೀಡುವ 10 ರೂಪಾಯಿಗಳ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ ಹಲವಾರು ಉದಾಹರಣೆಗಳನ್ನು ನೋಡಿದ್ದರು. ಇದನ್ನು ನೋಡಿ ಯಾಕಪ್ಪಾ ಜನರು ಈ 10 ರೂಪಾಯಿಯ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಎಂದು ತುಂಬಾನೇ ಯೋಚನೆ ಮಾಡಿದ್ದರಂತೆ. ನೋಡು ನೋಡುತ್ತಿದ್ದಂತೆಯೇ ಅಂಗಡಿಯಲ್ಲಿ 10 ರೂಪಾಯಿಗಳ ನಾಣ್ಯಗಳ ದೊಡ್ಡ ರಾಶಿಯೇ ಜಮೆ ಆಗಿತ್ತು.


ಈ ಆಲೋಚನೆ ಮೂಡಿದ್ದು ಹೇಗೆ
ಈ ಘಟನೆ ಅವರಿಗೆ ಕುತೂಹಲ ಮೂಡಿಸಿದ್ದಂತೂ ನಿಜ ಎಂದು ಹೇಳಬಹುದು, ಇದರಂತೆಯೇ ಮತ್ತೊಂದು ಘಟನೆಯನ್ನು ಹಂಚಿಕೊಂಡ ಈ ವ್ಯಕ್ತಿ, ಆ ಊರಿನಲ್ಲಿರುವ ಮಕ್ಕಳು ಈ 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಂಡು ಅವುಗಳು ನಿಷ್ಪ್ರಯೋಜಕ, ಯಾವುದೇ ಕೆಲಸಕ್ಕೆ ಬರುವುದೇ ಇಲ್ಲ ಎಂಬಂತೆ ಅದರ ಜೊತೆ ಆಟವಾಡುವುದನ್ನು ಸಹ ಇವರು ನೋಡಿದ್ದರಂತೆ ಎಂದು ಹೇಳಿದರು. ಇವೆರಡೂ ಘಟನೆಗಳನ್ನು ನೋಡಿದ ನಂತರ ಈ ವ್ಯಕ್ತಿ ಕೇವಲ 10 ರೂಪಾಯಿ ನಾಣ್ಯಗಳನ್ನು ಹೊಂದಿಸಿ ಹೊಸ ಕಾರನ್ನು ಖರೀದಿಸುವ ಮೂಲಕ ಜನರಲ್ಲಿ ಈ 10 ರೂಪಾಯಿ ನಾಣ್ಯದ ಚಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದರು.


ಮನೆಯಲ್ಲಿ 10 ರೂಪಾಯಿಯ ನಾಣ್ಯಗಳ ರಾಶಿ
"ನನ್ನ ತಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಜನರು 10 ರೂಪಾಯಿಗಳ ನಾಣ್ಯಗಳನ್ನು ಸ್ವೀಕರಿಸಲು ಬಯಸದ ಕಾರಣ, ನಮ್ಮ ಮನೆಯಲ್ಲಿ ಅದರ ದೊಡ್ಡ ರಾಶಿಯೇ ಜಮೆಯಾಗಿತ್ತು. ನಾಣ್ಯಗಳನ್ನು ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಬ್ಯಾಂಕುಗಳಲ್ಲಿಯೂ ಸಹ, ಅಧಿಕಾರಿಗಳು ಅವುಗಳನ್ನು ಬಳಸಲು ಹಿಂಜರಿಯುತ್ತಾರೆ. ನಾಣ್ಯಗಳನ್ನು ಎಣಿಸಲು ತಮ್ಮ ಬಳಿ ಸಮಯವಿಲ್ಲ ಎಂದು ಅವರು ಹೇಳುತ್ತಾರೆ" ಎಂದು ವೆಟ್ರಿವೇಲ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


"ಈ ನಾಣ್ಯಗಳು ನಿಷ್ಪ್ರಯೋಜಕ ಎಂದು ಆರ್‌ಬಿಐ ಹೇಳದಿರುವಾಗ, ಬ್ಯಾಂಕುಗಳು ಅವುಗಳನ್ನು ಏಕೆ ಸ್ವೀಕರಿಸುತ್ತಿಲ್ಲ? ನಾವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದರು. ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು, ವೆಟ್ರಿವೇಲ್ ಕಾರನ್ನು ಖರೀದಿಸಲು ಬೇಕಾದಂತಹ 6 ಲಕ್ಷ ರೂಪಾಯಿಗಳನ್ನು 10 ರೂಪಾಯಿಗಳ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ಸೇರಿಸಿದ್ದಾರೆ ಮತ್ತು ಇದಕ್ಕೆ ಸುಮಾರು ಒಂದು ತಿಂಗಳು ಸಮಯ ಬೇಕಾಯಿತು.


ಇದನ್ನೂ ಓದಿ: Viral Video: ರಸ್ತೆಯಲ್ಲಿದ್ದ ಕಲ್ಲುಗಳನ್ನು ತೆಗೆದ ಟ್ರಾಫಿಕ್ ಪೊಲೀಸ್, ಹೃದಯವಂತನಿಗೆ ನೆಟ್ಟಿಗರ ಶಹಬ್ಬಾಸ್


ಆರಂಭದಲ್ಲಿ, ಧರ್ಮಪುರಿಯಲ್ಲಿರುವ ಕಾರು ಡೀಲರ್ ಅವರು ಈ ವ್ಯವಹಾರವನ್ನು ಒಪ್ಪಿಕೊಳ್ಳಲು ಹಿಂಜರಿದರು, ಆದರೆ ವೆಟ್ರಿವೇಲ್ ಅವರ ದೃಢ ನಿರ್ಧಾರವನ್ನು ಪರಿಗಣಿಸಿ, ಅವರು ಈ ಹಣವನ್ನು ಸ್ವೀಕರಿಸಲು ಒಪ್ಪಿದಾಗ ವೆಟ್ರಿವೆಲ್ ಅವರು ತನ್ನ ಸಂಬಂಧಿಕರೊಂದಿಗೆ, 10 ರೂಪಾಯಿಗಳ ನಾಣ್ಯಗಳ ಮೂಟೆಗಳನ್ನು ಡೀಲರ್ ಶಿಪ್ ಗೆ ತೆಗೆದುಕೊಂಡು ಹೋಗಿ, ಅವೆಲ್ಲವನ್ನೂ ಎಣಿಸಿ ಅವರಿಗೆ ನೀಡಲಾಯಿತು. ಇದರ ನಂತರವೇ ಹೊಸ ಕಾರಿನ ಕೀಲಿಕೈಗಳನ್ನು ಅವರಿಗೆ ನೀಡಿದರು ಎಂದು ಹೇಳಲಾಗುತ್ತಿದೆ.

Published by:Ashwini Prabhu
First published: