ವಿಡಿಯೋ ವೈರಲ್​: ಭಾರತ-ಪಾಕ್​ ನಡುವೆ ಸಾಮರಸ್ಯ ತರಲು ರ‍್ಯಾಪ್ ಸಾಂಗ್​​ ಬಿಡುಗಡೆ

ಎರಡು ದೇಶಗಳ ನಡುವಣ ಸಾಮರಸ್ಯ ತರುವ ಆಲೋಚನೆಯಿಂದ ಪಾಕಿಸ್ತಾನಿ ನೀಲಂ ಅಹ್ಮದ್​​ ಬಶೀರ್​ ಈ ರ‍್ಯಾಪ್​ ವಿಡಿಯೋ ಸಾಂಗ್​ ತಯಾರಿಸಿದ್ದಾರೆ. ಅಹ್ಮದ್ ಬಶೀರ್​ ಬಿಡುಗಡೆ ಮಾಡಿದ ಈ ವಿಡಿಯೋಗೆ ‘ಹಮ್​ಸಾಯೇ ಮಾ ಜಾಯೇ‘ (ಒಂದೇ ಮಣ್ಣಿನ ಮಕ್ಕಳು) ಎಂದು ಹೆಸರಿಡಲಾಗಿದೆ.

news18
Updated:April 10, 2019, 9:12 PM IST
ವಿಡಿಯೋ ವೈರಲ್​: ಭಾರತ-ಪಾಕ್​ ನಡುವೆ ಸಾಮರಸ್ಯ ತರಲು ರ‍್ಯಾಪ್ ಸಾಂಗ್​​ ಬಿಡುಗಡೆ
‘ಹಮ್​ಸಾಯೇ ಮಾ ಜಾಯೇ‘ ರ‍್ಯಾಪ್​ ಸಾಂಗ್
  • News18
  • Last Updated: April 10, 2019, 9:12 PM IST
  • Share this:
ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನ ದೇಶದ ನಡುವಿನ ಸಂಬಂಧವು ಏರುಪೇರಾಗಿರುವು ಗೊತ್ತೇ ಇದೆ. ಈ ಕುರಿತಾಗಿ ಏರಡು ದೇಶಗಳ ನಡುವೆ ಶಾಂತಿ ನೆಲೆಸಬೇಕೆಂದು ಪಾಕ್​ ನಟಿಯರಿಬ್ಬರು ರ‍್ಯಾಪ್​ ಸಾಂಗ್​ಗೆ ನೃತ್ಯ ಮಾಡಿದ್ದಾರೆ. ಇದೀಗ ನಟಿಯರ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು,  ವೀಕ್ಷಕರ ಸಂಖ್ಯೆಯನ್ನು ಹೆಚ್ಚಾಗುತ್ತಿದೆ.

ಎರಡು ದೇಶಗಳ ನಡುವಣ ಸಾಮರಸ್ಯ ತರುವ ಆಲೋಚನೆಯಿಂದ ಪಾಕಿಸ್ತಾನಿ ನೀಲಂ ಅಹ್ಮದ್​​ ಬಶೀರ್​ ಈ ರ‍್ಯಾಪ್​ ವಿಡಿಯೋ ಸಾಂಗ್​ ತಯಾರಿಸಿದ್ದಾರೆ. ಅಹ್ಮದ್ ಬಶೀರ್​ ಬಿಡುಗಡೆ ಮಾಡಿದ ಈ ವಿಡಿಯೋಗೆ ‘ಹಮ್​ಸಾಯೇ ಮಾ ಜಾಯೇ‘ (ಒಂದೇ ಮಣ್ಣಿನ ಮಕ್ಕಳು) ಎಂದು ಹೆಸರಿಡಲಾಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಇಬ್ಬರು ಹಿರಿಯ ನಟಿಯರಾದ ಬುಶ್ರಾ ಅನ್ಸಾರಿ​ ಮತ್ತು ಆಸ್ಮಾ ಅಬ್ಬಾಸ್​ ನಟಿಸಿದ್ದಾರೆ. ಪಂಜಾಬಿ ಶೈಲಿಯಲ್ಲಿರುವ ಈ ರ‍್ಯಾಪ್​ ಸಾಂಗ್​ನಲ್ಲಿ ನಟಿಯರಿಬ್ಬರು ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದ ಮನೆಯ ಮಹಿಳೆಯರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಲೀದ್ದೀರಿ ಪಿ.ಸಿ. ಮೋಹನ್?: ಚುನಾವಣೆ ಸಂದರ್ಭದಲ್ಲೂ ಜನರ ಕೈಗೆ ಸಿಗದಿದ್ದರೆ ಹೇಗೆ? ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪ್ರಶ್ನೆ

ಅಹ್ಮದ್​​ ಬಶೀರ್​ ಬರೆದಿರುವ ಈ ರ‍್ಯಾಪ್​ ಹಾಡಿನಲ್ಲಿ ಏರಡೂ ದೇಶಗಳು ಯುದ್ಧ ಮಾಡೋಕೆ ಮುಂದಾಗಿರೋದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದೆಲ್ಲಾ ರಾಜಕಾರಣಿಗಳ ರಾಜಕೀಯ ಆಟ, ನಾವು ಬೇರೆ ಏನಾದ್ರೂ ಮಾತೋಡೋಣ ಎಂದು ಮಹಿಳೆಯರಿಬ್ಬರು ಮಾತನಾಡುವ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ವಿಡಿಯೋದಲ್ಲಿ ಒಂದೇ ನೆಲ, ಒಂದೇ ಆಕಾಶ, ಒಂದೇ ಚಂದ್ರನನ್ನು ನೊಡ್ತಾ ಇದ್ದೇವೆ. ಆದರೆ ಟಿವಿಗಳಲ್ಲಿ ನೀವು ನಮ್ಮ ಶತ್ರುಗಳಂತೆ ಎಂದು ತೋರಿಸುತ್ತಿದ್ದಾರೆ. ನಿಮ್ಮ ಬಳಿ ಆಟಂ ಬಾಂಬ್​ ಇದೆಯಾ..? ಎಂದು ಮಹಿಳೆಯರಿಬ್ಬರು ಮಾತನಾಡಿಕೊಳ್ಳುತ್ತಾರೆ.

ಇದನ್ನೂ ಓದಿ:ಮಗು ಮಾಡಿದ ಎಡವಟ್ಟು; ಐಪ್ಯಾಡ್ ಅನ್​ಲಾಕ್​ ಆಗಲು ಬೇಕು 48 ವರ್ಷ

ಆದರೆ ನಾವಿಬ್ಬರು ಭೇಟಿಯಾಗಬೇಕೆಂದರೆ ಗೋಡೆ ಮೇಲಿನ ಗಾಜಿನ ಚೂರುಗಳಿವೆ. ಅದನ್ನು ಯಾರಾದ್ರೂ ತೆಗೆದರೆ ಭೇಟಿಯಾಗಬಹುದು ಎಂದು ಮಹಿಳೆಯರು ಮಾತನಾಡುವ ಈ ವಿಡಿಯೋ ಸಾಕಷ್ಟು ಜನರ ಮನಸ್ಸು ಗೆಲ್ಲುತ್ತಿದೆ.
First published:April 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ