Old Library: ಇಂದು ಪಂಜಾಬಿನ ಹಳೆಯ ಗ್ರಂಥಾಲಯ! ಇಲ್ಲಿಗೆ ಭೇಟಿ ನೀಡಿದರೆ ಸಾಕು ಎಂಥವರಿಗೂ ಓದಲು ಮನಸ್ಸಾಗುತ್ತಂತೆ

ಇಂದಿನ ಆಧುನಿಕ ಕಾಲದಲ್ಲಿ ಬೆರಳ ತುದಿಯಲ್ಲಿ ನಮಗೆ ಬೇಕಾಗಿರುವ ಪುಸ್ತಕವು ದೊರೆಯುತ್ತಿರಬೇಕಾದರೆ ಇದು ಯಾರಪ್ಪ ಇನ್ನು ಹಳೆ ಕಾಲದವರ ತರಹ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುತ್ತಿರುವವರು. ಅದರಲ್ಲೂ ಆ ಹಳೆ ಕಾಲದ ಗ್ರಂಥಾಲಯಕ್ಕೆ ಹೋಗಿ ಓದುತ್ತಿದ್ದಾರೆ.

ಪಂಜಾಬ್ ಗ್ರಾಮದ ಹಳೆ ಗ್ರಂಥಾಲಯ

ಪಂಜಾಬ್ ಗ್ರಾಮದ ಹಳೆ ಗ್ರಂಥಾಲಯ

  • Share this:
ಇಂದಿನ ಆಧುನಿಕ ಕಾಲದಲ್ಲಿ ಬೆರಳ ತುದಿಯಲ್ಲಿ ನಮಗೆ ಬೇಕಾಗಿರುವ ಪುಸ್ತಕವು (Books) ದೊರೆಯುತ್ತಿರಬೇಕಾದರೆ ಇದು ಯಾರಪ್ಪ ಇನ್ನು ಹಳೆ ಕಾಲದವರ ತರಹ ಗ್ರಂಥಾಲಯಕ್ಕೆ (Library) ಹೋಗಿ ಪುಸ್ತಕ ಓದುತ್ತಿರುವವರು. ಅದರಲ್ಲೂ ಆ ಹಳೆ ಕಾಲದ ಗ್ರಂಥಾಲಯಕ್ಕೆ ಹೋಗಿ ಓದುತ್ತಿದ್ದಾರೆ. ಅವರಿಗೆ ಈ ಡಿಜಿಟಲ್‌ಯುಗದ ಬಗ್ಗೆ ಸರಿಯಾಗಿ ಗೊತ್ತಿಲ್ಲವೇನೋ ಎಂದು ಸಂಶಯ ಬರುತ್ತಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ ಆಗಿರುತ್ತದೆ ಅಷ್ಟೆ. 1978ರ ಕಾಲಮಾನಗಳಲ್ಲಿ, ಪಂಜಾಬ್‌ನ (Panjab) ಹಳ್ಳಿಗಳಲ್ಲಿ ಗ್ರಂಥಾಲಯದ ಬಗ್ಗೆ ಮಾತನಾಡುವುದೇ ಒಂದು ಅಪರೂಪದ ಕೆಲಸವಾದಾಗ, ಬಟಿಂಡಾ ಜಿಲ್ಲೆಯ ಜೀದಾ ಎಂಬ ಹಳ್ಳಿಯ ನಿವಾಸಿಗಳು (Residents of the village) 100 ಚದರ ಮೀಟರ್‌ ಜಾಗದಲ್ಲಿ ಸಣ್ಣ ಗ್ರಂಥಾಲಯವನ್ನು ನಿರ್ಮಿಸಲು ನಿರ್ಧರಿಸಿದರು.

ಈ ಸ್ಥಳವು ಗ್ರಾಮದಲ್ಲಿ ಒಂದು ಭಾಗವಾಗಿತ್ತು ಮತ್ತು ಈ ಗ್ರಂಥಾಲಯವನ್ನು ತಮ್ಮ ಸ್ವಂತ ಹಣದಿಂದಲೇ ನಿರ್ಮಿಸಿದ್ದಾರೆ. ಈ ಗ್ರಂಥಾಲಯವು ಒಂದು ದೊಡ್ಡ ಸಭಾಂಗಣ ಮತ್ತು ಒಂದು ಕೋಣೆಯನ್ನು ಒಳಗೊಂಡಿದೆ.

ಅತ್ಯಂತ ಹಳೆಯ ಗ್ರಂಥಾಲಯ 
ಈ ಗ್ರಂಥಾಲಯವನ್ನು ನಾವು ಕಮ್ಯುನಿಸ್ಟ್ ಚಳವಳಿಯ ಕೆಲವು ಪುಸ್ತಕಗಳು, ಪಂಜಾಬಿ ಬರಹಗಾರರ ಕಾದಂಬರಿಗಳು ಮತ್ತು ನಾಲ್ಕೈದು ಪತ್ರಿಕೆಗಳೊಂದಿಗೆ ಪ್ರಾರಂಭಿಸಿದ್ದೇವೆ, ಇದರಿಂದ ಜನರಿಗೆ ದಿನಾಲು ಒಂದೇ ಸ್ಥಳದಲ್ಲಿ ಸೇರಲು ಮತ್ತು ಪುಸ್ತಕ ಓದುವ ಪ್ರೀತಿಯನ್ನು ಬೆಳೆಸಿಕೊಳ್ಳಲು ಇದು ಸಹಾಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಗ್ರಂಥಾಲಯವನ್ನು ಜನವರಿ 8, 1978 ರಂದು ಉದ್ಘಾಟಿಸಲಾಯಿತು, ಅನೇಕ ಗ್ರಾಮಸ್ಥರು ಈ ಪ್ರಯತ್ನದ ಭಾಗವಾಗಿದ್ದರು ಮತ್ತು ಕಾಲಕಾಲಕ್ಕೆ ಕೆಲವು ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ಸೇರಿಸಲಾಗಿದೆ.

20 ಲಕ್ಷ ರೂ ವೆಚ್ಚದಲ್ಲಿ ಗ್ರಂಥಾಲಯದ ಪುನರ್ನಿರ್ಮಾಣ
"ಸಮಯದೊಂದಿಗೆ, ಗ್ರಂಥಾಲಯವನ್ನು ಕೂಲಂಕುಷವಾಗಿ ಪರಿಶೀಲಿಸುವ ಅಗತ್ಯವಿತ್ತು ಮತ್ತು ಕೆಲವು ತಿಂಗಳ ಹಿಂದೆ, ಈ ಕಟ್ಟಡವನ್ನು ಕೆಡವಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಪುನರ್ನಿರ್ಮಿಸಲಾಯಿತು. ಹೊಸ ಕಟ್ಟಡವನ್ನು ಈಗ ಶಹೀದ್ ಭಗತ್ ಸಿಂಗ್ ಗ್ರಂಥಾಲಯ, ಜೀಡಾ ಗ್ರಾಮ ಎಂದು ಕರೆಯಲಾಗುತ್ತದೆ, ಇದನ್ನು ಮಾರ್ಚ್ 8 ರಂದು ಗ್ರಾಮಸ್ಥರು ಭಗತ್ ಸಿಂಗ್ ಅವರ ಸೋದರಳಿಯ ಪ್ರೊಫೆಸರ್ ಜಗಮೋಹನ್ ಸಿಂಗ್ ಮತ್ತು ಖ್ಯಾತ ಕಲಾವಿದ ಗುರುಪ್ರೀತ್ ಸಿಂಗ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು ”ಎಂದು ಗ್ರಂಥಾಲಯದ ಅಧ್ಯಕ್ಷ ಜಗ್ಮೆಲ್ ಸಿಂಗ್ ವಿವರಿಸುತ್ತಾರೆ.

ಇದನ್ನೂ ಓದಿ: Malleshwara: ಬೆಂಗಳೂರಿನ ಮಲ್ಲೇಶ್ವರಕ್ಕಿದೆ ಕುತೂಹಲಕರ ಇತಿಹಾಸ! ಜನರ ಜೊತೆಗಿದೆ ಅವಿನಾಭಾವ ಸಂಬಂಧ

ಗ್ರಂಥಾಲಯವು ಹೊಸ ರೂಪವನ್ನು ಪಡೆದಿದ್ದು ಮತ್ತು ಪುಸ್ತಕಗಳ ದೊಡ್ಡ ಸಂಗ್ರಹವನ್ನು ಹೊಂದಿದೆ, ಪುಸ್ತಕ ಪ್ರೇಮಿ ಮತ್ತು ನಿವೃತ್ತ ಸರ್ಕಾರಿ ಉದ್ಯೋಗಿ ಕೇವಲ್ ಕ್ರಿಶನ್ ಸಿಂಗ್ಲಾ ಅವರು ಗ್ರಂಥಾಲಯಕ್ಕೆ 15 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. "ಇವರು ಈ ಹಳ್ಳಿಗೆ ಸೇರಿದವರು, ಆದರೆ ಈಗ ಬಟಿಂಡಾದಲ್ಲಿ ವಾಸಿಸುತ್ತಿದ್ದಾರೆ. ಉಳಿದ ಹಣವನ್ನು ಗ್ರಾಮಸ್ಥರು ಮತ್ತು ಕೆಲವು ಎನ್‌ಆರ್‌ಐಗಳು ದೇಣಿಗೆ ನೀಡಿದ್ದಾರೆ ” ಎಂದು ಜಗ್ಮೆಲ್ ಹೇಳುತ್ತಾರೆ.

ಅಂಥದ್ದೇನಿದೆ ಈ ಗ್ರಂಥಾಲಯದಲ್ಲಿ 
ಈ ಗ್ರಾಮವು 5000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ಗ್ರಂಥಾಲಯದ ಕಾರ್ಯದರ್ಶಿ ಸರಬ್ಜೀತ್ ಸಿಂಗ್ ಪ್ರಕಾರ, ಯುವಕರಲ್ಲಿ ಓದುವ ಅಭ್ಯಾಸವನ್ನು ಮಾಡಿಸುವುದು ಉತ್ತಮ ಮಾರ್ಗವಾಗಿದೆ. ಈ ಗ್ರಾಮವು ಅನೇಕ ಕ್ರಾಂತಿಕಾರಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಗ್ರಾಮಸ್ಥರು ಪ್ರಜಾ ಮಂಡಲ, ಕಮ್ಯುನಿಸ್ಟ್ ಚಳುವಳಿಗಳು, ವಿದ್ಯಾರ್ಥಿ ಚಳುವಳಿಗಳಲ್ಲಿ ಭಾಗವಹಿಸುತ್ತಾರೆ.

"ನಮ್ಮಲ್ಲಿ ಅನೇಕರಿಗೆ ಈ ಪುಸ್ತಕ ಓದುವುದು ತುಂಬಾ ಇಷ್ಟವಾದ ಕೆಲಸ ಆಗಿದೆ. ಆದ್ದರಿಂದ ಈ ಗ್ರಂಥಾಲಯವು ಸುಮಾರು 500 ಪುಸ್ತಕಗಳೊಂದಿಗೆ ಪ್ರಾರಂಭವಾಯಿತು. ಈಗ, ಹೊಸ ಗ್ರಂಥಾಲಯದಲ್ಲಿ ನಾವು ಪ್ರತಿ ಪೀಳಿಗೆಗೆ ಸಂಬಂಧಿಸಿದ 2000 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದೇವೆ ಮತ್ತು ಇದು ಈ ಹಳ್ಳಿ ಮಾತ್ರವಲ್ಲದೆ ಎಲ್ಲೆಡೆಯಿಂದ ಹೆಚ್ಚು ಯುವಕರು ಮತ್ತು ಜನರನ್ನು ಆಕರ್ಷಿಸುತ್ತದೆ ಎಂದು ನಾವು ಭಾವಿಸುತ್ತೇವೆ ”ಎಂದು ಜಗ್ಮೆಲ್ ಹೇಳುತ್ತಾರೆ.

ಇದನ್ನೂ ಓದಿ: Cow Urine: ಈಗ ಸರ್ಕಾರವೇ ಖರೀದಿಸುತ್ತಂತೆ ಗೋಮೂತ್ರ! 1 ಲೀಟರ್‌ಗೆ ಬೆಲೆ ಎಷ್ಟು ಗೊತ್ತಾ?

ಏನೇ ಇರಲಿ ಆ ಗ್ರಂಥಾಲಯ ಆರಂಭಿಸಿ ಮೊಬೈಲ್‌ ಹಿಡಿದು ಕುಳಿತವರಲ್ಲಿ ಓದಿನ ಗೀಳು ಹಚ್ಚುತ್ತಿರುವ ಈ ಪಂಜಾಬ್‌ ಗ್ರಾಮದ ಜೀಡಾ ಹಳ್ಳಿಯ ಗ್ರಾಮಸ್ಥರಿಗೆ ಒಂದು ಸೆಲ್ಯೂಟ್‌ ಹೇಳಲೇ ಬೇಕಾಗುತ್ತದೆ.
Published by:Ashwini Prabhu
First published: