Niro: ಗೋವಾದ ಋತುಮಾನಾಧಾರಿತ ಅಮೃತವಿದ್ದಂತೆ ಈ ನೀರೋ! ಏನಿದು? ಇಲ್ಲಿದೆ ನೋಡಿ

ನೀರೋ ಎಂಬುದು ಸಿಹಿಯಾದ, ಫರ್ಮೆಂಟ್ ಮಾಡಲಾರದ ಗೋಡಂಬಿಯ ಜ್ಯೂಸ್ ಆಗಿದೆ. ನೀವು ಬಹು ಬಾರಿ ಗೋವಾಗೆ ಭೇಟಿ ನೀಡಿದ್ದರೂ ಈ ಬಗ್ಗೆ ಕೇಳಿಲ್ಲವೆಂದರೆ ಖಂಡಿತ ಅದು ನಿಮ್ಮ ತಪ್ಪಲ್ಲ ಬಿಡಿ. ಏಕೆಂದರೆ, ಈ ಪೇಯವನ್ನು ಮಾಡುವುದು ಕಷ್ಟ ಹಾಗೂ ದೀರ್ಘಾವಧಿಯವರೆಗೆ ಇದನ್ನು ಸಂಗ್ರಹಿಸಿಟ್ಟುಕೊಳ್ಳುವುದೂ ಸಹ ಅಸಾಧ್ಯ. ಹಾಗಾದರೆ ಈ ಜ್ಯೂಸ್ ಅನ್ನು ಹೇಗೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತೆ?

ನೀರೋ

ನೀರೋ

  • Share this:
ಗೋವಾ (Goa) ಎಂದರೆ ಸಾಕು ಎಲ್ಲರಿಗೂ ಎಲ್ಲಿಲ್ಲದ ಒಂದು ಉತ್ಸಾಹ ಮನದಲ್ಲಿ ಮೂಡುತ್ತದೆ. ಇದಕ್ಕೆ ಕಾರಣ ಇಲ್ಲದಿಲ್ಲ, ಏಕೆಂದರೆ ಪಾರ್ಟಿಗಳ ತಾಣ, ಮೋಜು ಮಸ್ತಿಗಳಿಗೆ ಹೆಸರುವಾಸಿಯಾದ ಸ್ಥಳವೇ ಗೋವಾ. ಸ್ನೇಹಿತರೊಡನೆಯಾಗಲಿ (Friends) ಅಥವಾ ಕುಟುಂಬ (Family) ಸಮೇತರಾಗಲಿ ಭೇಟಿ ನೀಡಲು ಪ್ರಶಸ್ತ ಪ್ರವಾಸಿ ಸ್ಥಳ. ಇನ್ನು ಗೋವಾದಲ್ಲಿ ಖಾದ್ಯ/ಪಾನೀಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಲ್ಲಿ ಸಾಂಪ್ರದಾಯವಾಗಿ ಕಂಡುಬರುವ ಫೆನಿಯಾಗಲಿ ಅಥವಾ ಅರಕ್ ಆಗಲಿ ತುಂಬ ಹೆಸರುವಾಸಿ. ಆದರೆ, ನಿಮಗೆ ಇವೆರಡರ ಹೊರತಾಗಿಯೂ ಗೋವಾದಲ್ಲಿ ಮತ್ತೊಂದು ಪಾನೀಯ (Drinks) ಅದ್ಭುತವಾಗಿದೆ ಹಾಗೂ ಅದನ್ನೇ ನೀರೋ ಎನ್ನುತಾರೆ. ಇದು ಋತುಮಾನಾಧಾರಿತ ಪಾನೀಯವಾಗಿದೆ ಎಂಬುದು ಗಮನದಲ್ಲಿರಲಿ.

ನೀರೋ ಎಂದರೇನು
ನೀರೋ ಎಂಬುದು ಸಿಹಿಯಾದ, ಫರ್ಮೆಂಟ್ ಮಾಡಲಾರದ ಗೋಡಂಬಿಯ ಜ್ಯೂಸ್ ಆಗಿದೆ. ನೀವು ಬಹು ಬಾರಿ ಗೋವಾಗೆ ಭೇಟಿ ನೀಡಿದ್ದರೂ ಈ ಬಗ್ಗೆ ಕೇಳಿಲ್ಲವೆಂದರೆ ಖಂಡಿತ ಅದು ನಿಮ್ಮ ತಪ್ಪಲ್ಲ ಬಿಡಿ. ಏಕೆಂದರೆ, ಈ ಪೇಯವನ್ನು ಮಾಡುವುದು ಕಷ್ಟ ಹಾಗೂ ದೀರ್ಘಾವಧಿಯವರೆಗೆ ಇದನ್ನು ಸಂಗ್ರಹಿಸಿಟ್ಟುಕೊಳ್ಳುವುದೂ ಸಹ ಅಸಾಧ್ಯ. ಹಾಗಾದರೆ ಈ ಜ್ಯೂಸ್ ಅನ್ನು ಹೇಗೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತೆ?

ಮೊದಲಿಗೆ ಗೋಡಂಬಿ ಹತ್ತಿಕೊಂಡಿರುವ ಕೆಂಪು ಹಣ್ಣುಗಳಿಂದ ಜ್ಯೂಸ್ ಅನ್ನು ಅರಕ್ ಮತ್ತು ಫೆನಿ ತಯಾರಿಸಲು ಹೊರತೆಗೆಯಲಾಗುತ್ತದೆ. ಅನಂತರ ಆ ಹಣ್ಣುಗಳ ಮೇಲೆ ಭಾರವೊಂದನ್ನು ಇಡಲಾಗುತ್ತದೆ. ಆ ಭಾರಕ್ಕೆ ಒಂದು ದಾರವನ್ನು ಕಟ್ಟಲಾಗಿರುತ್ತದೆ ಹಾಗೂ ಆ ದಾರದಲ್ಲಿ ಆ ಹಣ್ಣಿನ ಪಲ್ಪಿನಲ್ಲಿ ಉಳಿದ ಎಲ್ಲ ಸಾರವು ಶೇಖರಿಸಲ್ಪಡುತ್ತದೆ. ಹೀಗೆ ಸ್ಪಷ್ಟವಾಗಿರುವ ಪಾರದರ್ಶಕ ದ್ರವವೇ ನೀರೋ ಆಗಿರುತ್ತದೆ.

ನೀವು ಮುಂದಿನ ಬಾರಿ ಬೇಸಿಗೆಯಲ್ಲಿ ಗೋವಾಗೇನಾದರೂ ಭೇಟಿ ನೀಡಿದರೆ ಪಣಜಿಯಲ್ಲಿರುವ ನೂರು ವರ್ಷಗಳಷ್ಟು ಹಳೆಯದಾದ ಬೇಕರ್ ಎಂಬ ಬೇಕರಿಯಲ್ಲಿ ಸಿಗುವ ಈ ನೀರೋದ ಒಂದು ಬಾಟಲಿ ಖರೀದಿಸಬಹುದು ಇಲ್ಲವೆ ದಕ್ಷಿಣ ಗೋವಾದಲ್ಲಿ ಕಂಡುಬರುವ ಕ್ಯಾಶಿವ್ ತೋಟಗಳಲ್ಲೂ ಇದನ್ನು ಪಡೆಯಬಹುದು. ಗೋವಾದ ಹಲವು ಬಾರುಗಳು ತಾವು ತಯಾರಿಸುವ ಕಾಕ್ ಟೇಲ್ ಪಾನೀಯಗಳಲ್ಲೂ ಈ ನೀರೋ ಅನ್ನು ಬಳಸುತ್ತಾರೆ.

ಬೇಸಿಗೆಯ ಪಾನೀಯ
ನೀರೋ ಒಂದು ಬೇಸಿಗೆಯಲ್ಲಿ ಸೇವಿಸಬಹುದಾದ ಪಾನೀಯವಾಗಿದೆ. ಇದು ಸಾಮಾನ್ಯವಾಗಿ ಫರ್ಮೆಂಟ್ ಬಹು ಬೇಗವಾಗುವುದರಿಂದ ಇದರ ಶೆಲ್ಫ್ ಲೈಫ್ ತುಂಬಾನೇ ಕಡಿಮೆಯಿರುತ್ತದೆ ಹಾಗೂ ಜನರು ಇದನ್ನು ತಾಜಾ ಆಗಿಯೇ ಸೇವಿಸಬಯಸುತ್ತಾರೆ. ಹಾಗಾಗಿ ನೀವು ಗೋವಾದ ಗೋಡಂಬಿ ತೋಟಗಳ ಬಳಿ ಇದ್ದರೆ ಈ ಸಾಂಪ್ರದಾಯಿಕ ಪಾನೀಯವನ್ನು ಖರೀದಿಸಿ ತಂಪು ಮಾಡಿ ಕುಡಿಯಬಹುದು. ಇದು ರುಚಿಕರವಾಗಿರುತ್ತದೆ, ಆರೋಗ್ಯಕ್ಕೂ ಉಪಯುಕ್ತವಾಗಿರುತ್ತದೆ, ನಿಮ್ಮನ್ನು ಉತ್ಸಾಹಭರಿತರನ್ನಾಗಿಯೂ ಮಾಡುತ್ತದೆ. ಹಾಗಾಗಿ ನಿಯಮಿತ ಸಮಯದಲ್ಲಿ ಮಾತ್ರವೇ ಇದನ್ನು ಸೇವಿಸಬೇಕಾಗುತ್ತದೆ. ಇದು ಫರ್ಮೆಂಟ್ ಬೇಗನೆ ಆಗುವುದರಿಂದ ಇದನ್ನು ಶೇಖರಿಸಿ ಸಂರಕ್ಷಿಸಿ ಬಹು ಕಾಲದವರೆಗೆ ಇಡಲು ಸಾಧ್ಯವಿಲ್ಲ.

ಇದನ್ನೂ ಓದಿ:  Viral Video: ದೆಹಲಿಗೆ ಬಂದು ಮುಂಬೈ ಸ್ಟೈಲ್ ಪಾನಿಪುರಿ ಕೇಳಿದ್ರೆ ಹೇಗೆ? ಈ ವಿಡಿಯೋ ನೋಡಿ

ಗೋವಾದ ಕ್ಯಾಜುಲೊ ಪ್ರೀಮಿಯಂ ಫೆನಿ ಸಂಸ್ಥೆಯ ಸಂಸ್ಥಾಪಕರಾದ ಹಾನ್ಸೆಲ್ ವಾಜ್ ಅವರು ಹೇಳುತ್ತಾರೆ, "ಇದೊಂದು ಸಾಂಪ್ರದಾಯಿಕ ಪಾನೀಯವಾಗಿದ್ದು ಕ್ಯಾಶಿವ್ ತೋಟದ ಕೆಲಸಗಾರರು ಇದನ್ನು ಮನೆ ಬಳಕೆಗೆ ಮಾತ್ರವೇ ಬಳಸುತ್ತಾರೆ. ಏಕೆಂದರೆ ಇದು ಬಹು ಬೇಗನೆ ಫರ್ಮೆಂಟ್ ಆಗುವುದರಿಂದ ಇದನ್ನು ಪ್ಯಾಕೆಟ್ ನಲ್ಲಿ ಇರಿಸಿ ಮಾರಲಾಗದು. ಅಲ್ಲದೆ ಕ್ಯಾಶಿವ್ ಹಣ್ಣುಗಳ ಜ್ಯೂಸ್ ಫೆನಿ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸಲ್ಪಡುವ ಕಚ್ಚಾ ವಸ್ತು ಆಗಿದೆ. ಆದರೆ, ನೀರೋ ಫರ್ಮೆಂಟ್ ಆಗಿಲ್ಲದೆ ಇರುವ ಸಂದರ್ಭದಲ್ಲಿ ಅದ್ಭುತ ಆರೋಗ್ಯವರ್ಧಕ ಪಾನೀಯವಾಗಿ ಬಳಸಲ್ಪಡುತ್ತದೆ."

ಅಷ್ಟೊಂದು ಜನಪ್ರೀಯವಾಗಿಲ್ಲ
ಫೆನಿ ಹಾಗೂ ಅರಕ್ ನಂತೆ ನೀರೋ ಇನ್ನು ಮುಖ್ಯವಾಹಿನಿಗೆ ಬಂದಿಲ್ಲ. ವಾಜ್ ಅವರ ಪ್ರಕಾರ, ಒಂದೊಮ್ಮೆ ಜನರಿಗೆ ನೀರೋದ ರುಚಿ ಅಭ್ಯಾಸವಾಗಿಬಿಟ್ಟರೆ ಮುಂದೆ ಫೆನಿ ತಯಾರಿಸಲು ಗೋಡಂಬಿಗಳು ಕಡಿಮೆ ಬೀಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದಾಗ್ಯೂ, ಈಗ ಕೆಲ ರೈತರು ಈ ನೀರೋವನ್ನು ತಯಾರಿಸಿ ಬಾಟಲಿಯಲ್ಲಿ ಸಂರಕ್ಷಿಸಿಡುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಹೆಚ್ಚಿನ ಶಕ್ತಿ ಹಾಗೂ ಸಮಯ ತೊಡಗಿಸುತ್ತಿದ್ದಾರೆ.

ಇದನ್ನೂ ಓದಿ:  Street Food: ಇನ್ನೂ ಏನೇನ್ ಮಾಡ್ತಾರಪ್ಪಾ! ಚೀಸ್ ಚಾಕೊಲೇಟ್ ಸ್ಯಾಂಡ್ವಿಚ್ ಎಲ್ಲಾದ್ರೂ ನೋಡಿದ್ದೀರಾ?

ನೀರೋವನ್ನು ತಾಜಾ ಆಗಿ ಶೇಖರಿಸಿಡುವಂತೆ ಹಲವು ಪ್ರಯೋಗಗಳನ್ನು ನಡೆಸುತ್ತಿರುವ ಅಲಿಶಾ ಎಂಬುವವರು ಹೇಳುತ್ತಾರೆ, "ನಾವು ಈಗಾಗಲೇ ಗೋಡಂಬಿ ಹಣ್ಣುಗಳಿಂದ ನೀರೋ ಹೊರತೆಗೆದು ಅವು ಸಹಜವಾಗಿ ಯೀಸ್ಟ್ ಉತ್ಪತ್ತಿಯಿಂದ ಫರ್ಮೆಂಟ್ ಆಗಲಾರದಂತೆ ತಡೆಯಲು ಹಲವು ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಸಾಮಾನ್ಯವಾಗಿ ನೀರೋದ ಶೆಲ್ಫ್ ಲೈಫ್ ಕೇವಲ 24 ಗಂಟೆಗಳಷ್ಟಾಗಿರುತ್ತದೆ, ಆದರೆ ನಾವು ಅದನ್ನು ಅಭಿವೃದ್ಧಿಪಡಿಸಿದ ವಿಧಾನಗಳ ಮೂಲಕ ಅದರ ಶೆಲ್ಫ್ ಲೈಫ್ ಒಂದು ವಾರದವರೆಗೆ ವಿಸ್ತರಿಸುವತ್ತ ಕೆಲಸ ಮಾಡುತ್ತಿದ್ದೇವೆ".

ಆರೋಗ್ಯ ಲಾಭಗಳು
ಉತ್ಸಾಹ, ಚೈತನ್ಯವನ್ನು ನೀಡುವುದರ ಜೊತೆಗೆ ನೀರೋ ನಮ್ಮ ದೇಹದಲ್ಲಿರುವ ಗಟ್ ಭಾಗದ ಆರೋಗ್ಯಕ್ಕೂ ತುಂಬಾನೇ ಉಪಯುಕ್ತವಾಗಿದೆ ಎಂದು ಆಯುರ್ವೇದವನ್ನು ಅಭ್ಯಸಿಸುತ್ತಿರುವ ಮರ್ಯಾನೆ ಲೊಬೊ ಹೇಳುತ್ತಾರೆ. ಏಕೆಂದರೆ ಇದು ಪ್ರೋಬಯೋಟಿಕ್ ಮೌಲ್ಯವನ್ನು ಹೊಂದಿದೆ. ಇನ್ನು ಕ್ಲಿನಿಕಲ್ ಪೋಷಕತತ್ವಗಳ ತಜ್ಞರಾದ ಅಫೊನ್ಸೊ ಡಿಸೋಜಾ ಅವರ ಪ್ರಕಾರ, ಇದು ಸಾಕಷ್ಟು ಶಕ್ತಿ ನೀಡುವ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ ಹಾಗೂ ಕೆಲವು ಪ್ರಮಾಣದಲ್ಲಿ ವಿಟಮಿನ್ ಸಿ ಸಹ ನೀರೋದಲ್ಲಿ ಲಭ್ಯವಿರುತ್ತದೆ. ಆದರೆ, ಇದರ ಸಂಪೂರ್ಣ ಲಾಭ ಪಡೆಯಲು ಇದನ್ನು ಫರ್ಮೆಂಟ್ ಆಗುವ ಮುಂಚೆಯೇ ಸೇವಿಸಬೇಕು ಎನ್ನುತ್ತಾರೆ.
Published by:Ashwini Prabhu
First published: