Vegetables: ನಿಮ್ಮ ಮಕ್ಕಳಿಗೆ ತರಕಾರಿ ತಿನ್ನಿಸೋದು ಕಷ್ಟವಾಗಿದ್ರೆ; ಈಕೆಯ ಸಿಂಪಲ್ ಟ್ರಿಕ್ಸ್​ ಬಳಸಿ

ಆ್ಯಮಿ ಎನ್ನುವ ತಾಯಿಯೊಬ್ಬಳು ತನ್ನ ಮಕ್ಕಳಿಗೆ ಹೇಗೆ ಮಕ್ಕಳಿಗೆ ಗೊತ್ತಾಗದಂತೆ ಆರೋಗ್ಯಕರ ತರಕಾರಿಗಳನ್ನು ತಿನ್ನಿಸಿದ್ದಾಳೆ ಎಂಬುದನ್ನು ಗಮನಾರ್ಹ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗಂತೂ ಮಕ್ಕಳು ತರಕಾರಿಗಳನ್ನು(Vegetables) ಹಾಕಿದ ಆಹಾರ ಎಂದರೆ ತಾಯಂದಿರಿಂದ ಒಂದು ಮೈಲಿ ದೂರ ಓಡಿ ಹೋಗುತ್ತವೆ ಮತ್ತು ಅವರ ಹಿಂದೆ ತಾಯಂದಿರು (Mothers) ಸಹ ಓಡಾಡಬೇಕಾದ ಪರಿಸ್ಥಿತಿ ಇರುವುದನ್ನು ನಾವೆಲ್ಲಾರೂ ನಮ್ಮ ಮನೆಯಲ್ಲಿಯೇ (Home) ನೋಡಿರುತ್ತೇವೆ.ಕೆಲವು ಮಕ್ಕಳು (Children) ಕೈಗೆ ಸಿಕ್ಕಿದ್ದೆಲ್ಲವನ್ನೂ ತಾಯಂದಿರು ನೋಡು ನೋಡುವಷ್ಟರಲ್ಲಿಯೇ ತಮ್ಮ ಬಾಯಿಗೆ ಹಾಕಿಕೊಳ್ಳುತ್ತವೆ. ಆದರೆ ಇನ್ನೂ ಕೆಲವು ಮಕ್ಕಳು ಇರುತ್ತಾರೆ, ಅವರ ಹಿಂದೆ ತಾಯಂದಿರು ಬಿಸಿ ಅನ್ನ(Hot Rice) ಮತ್ತು ತುಪ್ಪವನ್ನು ಕಲಿಸಿದ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಅವರಿಗೆ ತಿನ್ನಿಸಲು ಹರಸಾಹಸವೇ ಪಡಬೇಕಾಗುತ್ತದೆ.

ಜಂಕ್ ಪುಡ್ ವ್ಯಾಯಾಮ
ಇಂತಹ ಮಕ್ಕಳಿಗೆ ಊಟ ಮಾಡಿಸುವುದು ತಾಯಂದಿರಿಗೆ ಒಂದು ದೊಡ್ಡ ಕೆಲಸವಾಗಿರುತ್ತದೆ ಮತ್ತು ಅನ್ನ ತಿನ್ನಲು ಇಷ್ಟೊಂದು ಕಷ್ಟ ಕೊಡುವ ಮಕ್ಕಳು ಇನ್ನೂ ಅನೇಕ ಪೌಷ್ಟಿಕಾಂಶಗಳಿರುವ ತರಕಾರಿಗಳನ್ನು ಅವರ ಆಹಾರದಲ್ಲಿ ಸೇರಿಸಿದರೆ ಮುಗಿದೇ ಹೋಯಿತು. ಬಹುತೇಕ ಮಕ್ಕಳು ತರಕಾರಿಯನ್ನು ತಿನ್ನುವುದೇ ಇಲ್ಲ ಅಂತ ಹಟ ಮಾಡುವುದನ್ನು ನಾವೆಲ್ಲಾರೂ ನೋಡಿರುತ್ತೇವೆ. ಅದೇ ತರಕಾರಿಗಳನ್ನು ಇಷ್ಟಪಡದ ಮಕ್ಕಳು ಜಂಕ್ ಪುಡ್ ಮತ್ತು ಕರಿದಂತಹ ಪದಾರ್ಥಗಳನ್ನು ತಿನ್ನಲು ಅಷ್ಟೇ ಆಸಕ್ತಿಯನ್ನು ತೋರಿಸುತ್ತಾರೆ.

ಅನೇಕ ತಾಯಂದಿರು ತಮ್ಮ ಪುಟ್ಟ ಮಕ್ಕಳು ತರಕಾರಿಗಳಿರುವ ಆರೋಗ್ಯಕರ ಆಹಾರವನ್ನು ತಿನ್ನುವಂತೆ ಮಾಡಲು ತುಂಬಾನೇ ಕಷ್ಟಪಡುತ್ತಾರೆ. ಅವರು ತಮ್ಮ ಮಕ್ಕಳನ್ನು ಎಲ್ಲಾ ರೀತಿಯ ಜಂಕ್ ಫುಡ್ ಬದಲಿಗೆ ತರಕಾರಿಗಳನ್ನು ತಿನ್ನುವಂತೆ ಪ್ರೇರೇಪಿಸಲು ಅನೇಕ ವಿಧ ವಿಧವಾದ ತಂತ್ರಗಳನ್ನು ಅನುಸರಿಸುತ್ತಾರೆ. ಇಲ್ನೋಡಿ ಒಬ್ಬ ತಾಯಿ ತನ್ನ ಮಕ್ಕಳಿಗೆ ತರಕಾರಿಗಳನ್ನು ತಿನ್ನುವಂತೆ ಮನವೊಲಿಸಲು ಬಳಸಿದ ಸರಳ ತಂತ್ರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಸಹಾಯವಾಗಬಹುದು ನೋಡಿ.

ಇದನ್ನೂ ಓದಿ: Health Benefits: ಈ 6 ಸೊಪ್ಪುಗಳಲ್ಲಿದೆ ನಿಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ

ಆರೋಗ್ಯಕರ ತರಕಾರಿ
ಆ್ಯಮಿ ಎನ್ನುವ ತಾಯಿಯೊಬ್ಬಳು ತನ್ನ ಮಕ್ಕಳಿಗೆ ಹೇಗೆ ಮಕ್ಕಳಿಗೆ ಗೊತ್ತಾಗದಂತೆ ಆರೋಗ್ಯಕರ ತರಕಾರಿಗಳನ್ನು ತಿನ್ನಿಸಿದ್ದಾಳೆ ಎಂಬುದನ್ನು ನೋಡಿ. ಎಲ್ಲಾ ತಾಯಂದಿರಂತೆ ಆ್ಯಮಿ ಅವರು ಮಕ್ಕಳ ಹಿಂದೆ ಊಟವನ್ನು ಹಿಡಿದುಕೊಂಡು ಅಡ್ಡಾಡುವುದಿಲ್ಲ ಮತ್ತು ತಿನ್ನು ತಿನ್ನು ಅಂತ ಹೇಳಿ ಮಕ್ಕಳನ್ನು ಪದೇ ಪದೇ ಕೇಳುವುದಿಲ್ಲ. ಅವಳು ಅವರ ಮುಂದೆ ಕುಳಿತು ಅವಳಿಗೆ ಬೇಕಾದ ತರಕಾರಿಗಳನ್ನು ತಿನ್ನುತ್ತಾಳೆ.

ಇವರು ಹಂಚಿಕೊಂಡ ಒಂದು ಟಿಕ್‌ಟಾಕ್ ವಿಡಿಯೋದಲ್ಲಿ ಆ್ಯಮಿ ತನ್ನ ವಿಧಾನವು ಎಷ್ಟು ಸರಳ ಮತ್ತು ಪರಿಣಾಮಕಾರಿ ಎಂಬುದನ್ನು ತೋರಿಸಿದ್ದಾಳೆ. ಅವಳು ತನ್ನ ಮಗನ ಬಳಿಗೆ ಹೋಗಿ ಸೋಫಾದ ಮೇಲೆ ಒಂದು ಕೈಯಲ್ಲಿ ಬೆಲ್ ಪೆಪ್ಪರ್‌ನೊಂದಿಗೆ ಕುಳಿತು ಕೊಳ್ಳುತ್ತಾಳೆ ಮತ್ತು ಅವನು ಮೊಬೈಲ್‌ನಲ್ಲಿ ಆಡುತ್ತಿರುವ ಆಟದ ಬಗ್ಗೆ  ಅವನನ್ನು ಕೇಳುತ್ತಾಳೆ ಮತ್ತು ಆಕೆಯ ಕೈಯಲ್ಲಿರುವ ಮೆಣಸು ತುಂಡನ್ನು ತಿನ್ನಲು ಪ್ರಾರಂಭಿಸುತ್ತಾಳೆ. ಅವಳು ತನ್ನ ಮಗನಿಗೆ ಅದರಲ್ಲಿ ಸ್ವಲ್ಪ ನೀಡುತ್ತಾಳೆ, ಅವನು ಅದನ್ನು ನೋಡದೆ ಆಟದ ಕಡೆಗೆ ಗಮನವಿರುವುದರಿಂದ ತಾಯಿ ನೀಡಿದ ಮೆಣಸು ತುಂಡನ್ನು ಹಾಗೆಯೇ ಬಾಯಿಗೆ ಹಾಕಿಕೊಂಡು ತಿನ್ನುತ್ತಾನೆ.

ಇದನ್ನೂ ಓದಿ: Vegetables: ತಲೆಹೊಟ್ಟು ನಿವಾರಣೆಗೆ ಬೆಂಡೆಕಾಯಿ ಮದ್ದು, ತೂಕ ಇಳಿಕೆಗೂ ಸೈ ಈ ತರಕಾರಿ

ಒಳ್ಳೆಯ ವಿಧಾನ
ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಹ ಇದೇ ರೀತಿಯ ವಿಧಾನವನ್ನು ಪುನರಾವರ್ತಿಸುತ್ತಾಳೆ. ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸುವುದು ಎಷ್ಟೊಂದು ಸುಲಭದ ಕೆಲಸವಲ್ಲವೇ? ಈ ವಿಡಿಯೋ ನೋಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆಯಾಗಿ "ಆಹಾರವು ನಿಮ್ಮ ತಾಯಿಯ ಕೈಯಿಂದ ಅಥವಾ ಅವಳ ತಟ್ಟೆಯಿಂದ ತಿಂದರೆ ಅದು ಇನ್ನೂ ರುಚಿಯಾಗಿರುತ್ತದೆ ಎಂಬುದು ವೈಜ್ಞಾನಿಕ ಸಂಗತಿಯಾಗಿದೆ" ಎಂದು ಹೇಳಿದ್ದಾರೆ. ಇನ್ನೊಬ್ಬರು "ಒಬ್ಬ ಆಹಾರ ತಜ್ಞನಾಗಿ ಈ ವಿಧಾನ ತುಂಬಾನೇ ಒಳ್ಳೆಯ ವಿಧಾನವಾಗಿದೆ" ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು "ಮಕ್ಕಳು ತರಕಾರಿಗಳನ್ನು ತಿನ್ನಬೇಕು ಎಂದರೆ ಮೊದಲಿಗೆ ನೀವು ಅವರ ಮುಂದೆ ಕುಳಿತು ಅದನ್ನು ತಿನ್ನಬೇಕು, ಹೀಗೆ ನನ್ನ ತಾಯಿಯೂ ನನಗೆ ತರಕಾರಿ ತಿನ್ನಿಸಿರಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.
Published by:vanithasanjevani vanithasanjevani
First published: