‘Menopause‘ ಪದ ಬಳಸಿ ಮಹಿಳಾ ಉದ್ಯೋಗಿಯ ನಿಂದನೆ, 20 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ

ಲೈಂಗಿಕತೆಗೆ ಸಂಬಂಧಿಸಿದ ಟೀಕೆಗಳನ್ನು ಮಾಡಿದ್ದಾನೆಂದು ಗಮನಿಸಿ ಡೇವಿಡ್ ವಿರುದ್ಧ ಕ್ರಮ ಕೈಗೊಂಡು ಆಕೆಗೆ 20 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಯುಕೆಯಲ್ಲಿ(UK) ಮಹಿಳಾ ಉದ್ಯೋಗಿ(Woman Employee) ಮೇಲೆ  'ಋತುಬಂಧ'/ಮೆನೋಪಾಸ್ (Menopause) ಪದ ಬಳಕೆ ಮಾಡಿ ಕೂಗಾಡಿದ ಬಾಸ್ ಗೆ(Boss) ಅಲ್ಲಿನ ನ್ಯಾಯಮಂಡಳಿ ತಕ್ಕ ಶಾಸ್ತಿ ಮಾಡಿ ನಂತರ ರೂ 20 ಲಕ್ಷ ಪರಿಹಾರ(Compensation) ನೀಡುವಂತೆ ಆದೇಶ ನೀಡಿದೆ.

ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಬಾಸ್

ಲೇಘ್ ಬೆಸ್ಟ್ ಎಂಬ ಮಹಿಳೆ ಯುಕೆ ಮೂಲದ ಎಂಬಾರ್ಕ್ ಆನ್ ರಾ ಎಂಬಲ್ಲಿ ಕೆಲಸ ಮಾಡುತ್ತಿರುತ್ತಾರೆ. ಎಸೆಕ್ಸ್ ಸಾಕುಪ್ರಾಣಿಗಳಿಗೆ ತಯಾರಾಗುವ ಆಹಾರ ಸಂಸ್ಥೆಯಾಗಿದೆ. ಬಾಸ್ ಮತ್ತು ಬೆಸ್ಟ್ ನಡುವೆ ವಾಗ್ವಾದ ನಡೆದ ಸಮಯದಲ್ಲಿ ಮಹಿಳೆಯ ಮೇಲಾಧಿಕಾರಿ ಬೆಸ್ಟ್ ಋತುಬಂಧದಲ್ಲಿರಬೇಕು ಎಂದು ಬೇರೆ ನೌಕರರ ಮುಂದೆ ಮಹಿಳೆಯ ಮೇಲೆ ರೇಗಾಡಿ ಬೇಸ್ಟ್ ಅವರನ್ನು ಅವಮಾನಿಸಿದ್ದ. ಈ ಪ್ರಕರಣವು ನ್ಯಾಯಮಂಡಳಿಯಲ್ಲಿ ವಿಚಾರಣೆಗೊಳಗಾಗಿ ನಂತರ ನ್ಯಾಯಮಂಡಳಿಯು ಲೇಘ್ ಬೆಸ್ಟ್ ಮಹಿಳೆಗೆ ಅವರ ಮೇಲಾಧಿಕಾರಿ ರೂ. 20ಲಕ್ಷ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

ಬಾಸ್-ಮಹಿಳಾ ಉದ್ಯೋಗಿಯ ನಡುವೆ ವಾಗ್ವಾದ

ಸುದ್ದಿ ಮಾಧ್ಯಮಗಳ ವರದಿ ಪ್ರಕಾರ 52 ವರ್ಷದ ಲೇಘ್ ಬೆಸ್ಟ್ ಎಂಬಾರ್ಕ್ ಆನ್ ರಾ ಎಂಬ ಪಿಇಟಿ ಆಹಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 2020ರಿಂದ ಮಹಿಳೆ ಕಂಪನಿಯಲ್ಲಿ ಮಾರಾಟ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಬೆಸ್ಟ್ ಮತ್ತು ಬಾಸ್ ಡೇವಿಡ್ ಫ್ಲೆಚರ್ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರ ವಾಗ್ವಾದ ಅತಿರೇಕಕ್ಕೆ ಹೋಗಿದ್ದು, ಬಾಸ್ ಡೇವಿಡ್ ಫ್ಲೆಚರ್ ಕೆಲಸದ ಸ್ಥಳದಲ್ಲಿ ಬೆಸ್ಟ್ ಋತುಬಂಧವನ್ನು ಹೊಂದಿರಬೇಕು ಎಂದು ಘೋಷಿಸುವ ಮೂಲಕ ಮಹಿಳೆಯನ್ನು ಅವಮಾನಿಸುತ್ತಾನೆ.

ಇದನ್ನೂ ಓದಿ: Woman Gets Laptop: ಟಿಕ್​ಟಾಕ್​ನಲ್ಲಿ ನೋವು ತೋಡಿಕೊಂಡ ಮಹಿಳೆಗೆ ಸಿಕ್ತು ಜಾಬ್, ಲ್ಯಾಪ್​ಟಾಪ್

ಮೆನೋಪಾಸ್/ಋತುಬಂಧ ಎಂದರೇನು?

ಮೆನೋಪಾಸ್(Menopause) ಅಥವಾ ಋತುಬಂಧ ಎಂಬುದು ಮಹಿಳೆಯ ಋತುಚಕ್ರವು ಕೊನೆಗೊಳ್ಳುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ 51 ಅಥವಾ ನಂತರದ ವಯಸ್ಸಿನ ಮಹಿಳೆಯರಲ್ಲಿ ಋತುಬಂಧವು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದ್ದು ಇದೊಂದು ಸಹಜ ಶಾರೀರಿಕ ಪ್ರಕ್ರಿಯೆಯಾಗಿದೆ.

ಮಹಿಳೆಗೆ ಅವಮಾನ ಮಾಡಿದ ಬಾಸ್

ಮಹಿಳೆಯನ್ನು ಅವಮಾನಿಸುವುದನ್ನು ಮುಂದುವರೆಸಿದ ಡೇವಿಡ್ ಗ್ರಾಹಕರ ಮುಂದೆಯೂ ಆಕೆಯನ್ನು ತುಚ್ಛವಾಗಿ ಕಾಣುತ್ತಾನೆ. ಗ್ರಾಹಕರೂ ಈಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಬೆಸ್ಟ್ ತನ್ನ ಕಿವಿಗಳನ್ನು ಮುಚ್ಚಿಕೊಂಡು ಅಲ್ಲಿಂದ ಹೊರಡುತ್ತಾಳೆ. ಈ ಎಲ್ಲಾ ಘಟನೆಯನ್ನು ತಿಳಿದ ನ್ಯಾಯಮಂಡಳಿ ಬಾಸ್ ಡೇವಿಡ್ ಫ್ಲೆಚರ್ ವಿರುದ್ಧ ಕ್ರಮಕ್ಕೆ ಮುಂದಾಗಿ, ಬೆಸ್ಟ್ ಗೆ 20 ಲಕ್ಷ ನೀಡುವಂತೆ ಹೇಳಿದೆ.

ಡೇವಿಡ್​ನ ಹೆಂಡತಿಯಿಂದಲೂ ಅವಮಾನ

ಆದಾಗ್ಯೂ, ಗ್ರಾಹಕರು ಹೊರಟುಹೋದ ನಂತರವೂ ಡೇವಿಡ್ ವಿಷಯವನ್ನು ಚರ್ಚಿಸುವುದನ್ನು ಮುಂದುವರೆಸಿದರು. ಹೀಗಾಗಿ ಘಟನೆಯ ನಂತರ, ಬೆಸ್ಟ್, ಡೇವಿಡ್ ಅವರ ಹೆಂಡತಿಗೆ ದೂರು ನೀಡಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ವರದಿಯ ಪ್ರಕಾರ, ಡೇವಿಡ್‌ನ ಹೆಂಡತಿ ಆಂಡ್ರಿಯಾ ಪತಿ ಡೇವಿಡ್‌ನ ವರ್ತನೆಯನ್ನು ಕ್ಷಮಿಸಿದಳು ಮತ್ತು ಬೆಸ್ಟ್‌ನನ್ನು ಕೆಲಸದಿಂದ ವಜಾ ಮಾಡುವುದಾಗಿ ಆಕೆಗೆ ಬೆದರಿಕೆ ಹಾಕಿದಳು ಎನ್ನಲಾಗಿದೆ. ಆಂಡ್ರಿಯಾ, ಬೆಸ್ಟ್‌ಗೆ ಅಳುವುದನ್ನು ನಿಲ್ಲಿಸಬೇಕು ಮತ್ತು ಜನರೊಂದಿಗೆ, ಗ್ರಾಹಕರೊಂದಿಗೆ ಗೌರವದಿಂದ ಮಾತನಾಡಲು ಕಲಿಯಬೇಕು ಎಂದು ಮತ್ತೆ ಅವಮಾನಿಸಿದಳು.

ಅಸರ್ಭಯ ವರ್ತನೆಯ ಕಾರಣ ನೀಡಿ ಕೆಲಸದಿಂದ ವಜಾ

ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಬೆಸ್ಟ್ ಒಮ್ಮೆ ತನ್ನ ಬಾಸ್‌ನೊಂದಿಗೆ ಉದ್ಯೋಗಿಗಳ ಸುರಕ್ಷತೆಯ ಕಾಳಜಿ ಬಗ್ಗೆ ಧ್ವನಿ ಎತ್ತಿದ್ದರು. ಉದ್ಯೋಗಿಗಳು COVID-19 ಪ್ರೋಟೋಕಾಲ್‌ಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ, ನೀವು ಸರಿಯಾದ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಳು. ಆದರೆ ಬೆಸ್ಟ್ ಮಾತನ್ನು ಗಣನೆಗೆ ತೆಗೆದುಕೊಳ್ಳದ ಡೇವಿಡ್ ಆ ಕಠಿಣ ಸಮಯದಲ್ಲಿ ವ್ಯವಸ್ಥಾಪಕರೊಂದಿಗೆ ಅಸಭ್ಯ ವರ್ತನೆಯ ಕಾರಣ ನೀಡಿ ಬೆಸ್ಟ್ ನ ಸಹೋದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನು.

ಇದನ್ನೂ ಓದಿ: Viral Story: ಬಾಯ್​ಫ್ರೆಂಡ್​ BMW ಕಾರು ಖರೀದಿಸಿಲ್ಲವೆಂದು ಟೆಸ್ಲಾ ಕಾರು ಮಾಲೀಕನೊಂದಿಗೆ ಓಡಿ ಹೋದ ಪ್ರಿಯತಮೆ!

20 ಲಕ್ಷ ಪರಿಹಾರ ನೀಡುವಂತೆ ಕೋರ್ಟ್​ ಆದೇಶ

ಡೇವಿಡ್ ಅವರ ಋತುಬಂಧದ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಮಂಡಳಿ, ಅವರು ಅನುಚಿತ ಮತ್ತು ಆಕೆಯ ವಯಸ್ಸಿನ ಬಗ್ಗೆ ಅವಹೇಳನಕಾರಿ ಹೇಳಿಕೆಗಳು, ಲೈಂಗಿಕತೆಗೆ ಸಂಬಂಧಿಸಿದ ಟೀಕೆಗಳನ್ನು ಮಾಡಿದ್ದಾನೆಂದು ಗಮನಿಸಿ ಡೇವಿಡ್ ವಿರುದ್ಧ ಕ್ರಮ ಕೈಗೊಂಡು ಆಕೆಗೆ 20 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು.
Published by:Latha CG
First published: