• Home
  • »
  • News
  • »
  • trend
  • »
  • Marriages: ಅಬ್ಬಬ್ಬಾ! ಈತನ ಹೆಂಡ್ತೀರ ಸಂಖ್ಯೆಯೇ 53! ಈ ಸಾಹಸದ ಹಿಂದಿದೆ ವಿಚಿತ್ರ ಕಾರಣ

Marriages: ಅಬ್ಬಬ್ಬಾ! ಈತನ ಹೆಂಡ್ತೀರ ಸಂಖ್ಯೆಯೇ 53! ಈ ಸಾಹಸದ ಹಿಂದಿದೆ ವಿಚಿತ್ರ ಕಾರಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೊದಲ ಮದುವೆಯ ನಂತರ ಅವರು ಮುಂದಿನ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾಗಿದ್ದಾರೆ.

  • Share this:

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಎರಡು ಅಥವಾ ಅಬ್ಬಬ್ಬಾ ಎಂದರೆ ಮೂರು ಮಹಿಳೆಯರನ್ನ ಮದುವೆಯಾಗಬಹುದು (Marriage). ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ ನೋಡಿ, ಆತ ತನ್ನ ಜೀವನದಲ್ಲಿ ಸಂತೋಷವನ್ನು ಹುಡುಕುತ್ತಾ ಹೋಗಿ ತನ್ನ 63 ವರ್ಷ ವಯಸ್ಸಿನವರೆಗೆ ಸುಮಾರು 53 ಮಹಿಳೆಯರನ್ನು (Women's) ಮದುವೆಯಾಗಿದ್ದಾನೆ. ಸೌದಿ ಅರೇಬಿಯಾದ (Saudi Arabia) ನಿವಾಸಿ ಅಬು ಅಬ್ದುಲ್ಲಾ ಅಂತ ಅವರ ಹೆಸರು. "ಶತಮಾನದ ದೊಡ್ಡ ಬಹುಪತ್ನಿತ್ವವಾದಿ" ಎಂದು ಕರೆಯಲ್ಪಡುವ ಅಬು ಅಬ್ದುಲ್ಲಾ (Abu Abdullah) ಅವರು ತಮಗೆ ಮತ್ತು ತಮ್ಮ ಜೀವನಕ್ಕೆ ಪರಿಪೂರ್ಣವಾಗಿ ಹೊಂದಿಕೊಳ್ಳುವ ಸಂಗಾತಿಗಾಗಿ ಅನ್ವೇಷಣೆಯು ತಮ್ಮ 20ನೇ ವಯಸ್ಸಿನಲ್ಲಿಯೇ ಶುರು ಮಾಡಿ ಮೊದಲ ಬಾರಿಗೆ ಮದುವೆಯಾದರು ಅಂತ ಹೇಳಲಾಗುತ್ತಿದೆ.


ಮೊದಲ ಮದುವೆಯ ನಂತರ ಅವರು ಮುಂದಿನ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಅಬು ಅಬ್ದುಲ್ಲಾ "ಶತಮಾನದ ದೊಡ್ಡ ಬಹುಪತ್ನಿತ್ವವಾದಿ"
ಅನೇಕ ಬಾರಿ ಮದುವೆಯಾಗಿದ್ದರೂ, ಅಬು ಅಬ್ದುಲ್ಲಾ ತನ್ನ ಇಡೀ ಜೀವನವನ್ನು ಒಬ್ಬ ಮಹಿಳೆಯೊಂದಿಗೆ ಕಳೆಯಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಅವನು ತನ್ನ ವೈವಾಹಿಕ ಜೀವನದಲ್ಲಿ ಸ್ಥಿರತೆಯನ್ನು ಬಯಸಿರುವುದಾಗಿ ಹೇಳಿಕೊಳ್ಳುತ್ತಾನೆ. ಆ ಆದರ್ಶ ಸ್ತ್ರೀ ಸಂಗಾತಿಯನ್ನು ಹುಡುಕಿಕೊಂಡು ತಾನು ಅನೇಕ ಬಾರಿ ಮದುವೆಯಾಗಿದ್ದೇನೆ ಎಂದು ಅವನು ಹೇಳುತ್ತಾನೆ.


ಇತ್ತೀಚೆಗೆ ಸೌದಿ ಒಡೆತನದ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬು ತನ್ನ ಮದುವೆಯ ಯಾತ್ರೆಯ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.


ತಮ್ಮ ಮೊದಲನೇ ಮದುವೆಯ ಬಗ್ಗೆ ಏನ್ ಹೇಳ್ತಾರೆ ಅಬ್ದುಲ್ಲಾ?
"ನಾನು ಇಲ್ಲಿಯವರೆಗೂ ಸುಮಾರು 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ನನ್ನ ಮೊದಲ ಮದುವೆಯ ಸಮಯದಲ್ಲಿ ನನಗೆ 20 ವರ್ಷ ವಯಸ್ಸಾಗಿತ್ತು ಮತ್ತು ಮೊದಲ ಹೆಂಡತಿ ನನಗಿಂತ ಆರು ವರ್ಷ ದೊಡ್ಡವಳಾಗಿದ್ದಳು. ಮೊದಲ ಮದುವೆಯ ಸಮಯದಲ್ಲಿ ನಾನು ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವ ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ನಾನು ಅವಳೊಂದಿಗೆ ಆರಾಮವಾಗಿದ್ದೆ ಮತ್ತು ನಮಗೆ ಮಗು ಸಹ ಆಯಿತು" ಎಂದು ಅವರು ಹೇಳಿದರು.


ಇದನ್ನೂ ಓದಿ: Bitcoin: ಶಿಕ್ಷಣ ಮುಗಿಸಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಂಡ ಸೈನಿ! ಚಹಾದ ಅಂಗಡಿಯಿಂದ ಆರಂಭವಾದ ಉದ್ಯಮವಿದು


ಆದರೂ ಕೆಲವು ವರ್ಷಗಳ ನಂತರ, ಆ ಸಂಬಂಧದಲ್ಲಿ ಸಮಸ್ಯೆಗಳು ಶುರುವಾದವು, ಇದರಿಂದಾಗಿ ಅಬು ಅಬ್ದುಲ್ಲಾ ತನ್ನ 23ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದನು. ಆ ನಿರ್ಧಾರದ ಬಗ್ಗೆ ಅವರು ತಮ್ಮ ಮೊದಲ ಹೆಂಡತಿಗೆ ತಿಳಿಸಿದ್ದರು.


ಆದರೆ, ಎರಡನೇ ಮದುವೆಯ ಹೊರತಾಗಿಯೂ, ಅಬು ಅವರು ಹುಡುಕುತ್ತಿರುವ ಆ ಸಂತೋಷವನ್ನು ಕಂಡುಕೊಳ್ಳಲಿಲ್ಲ. ಮೊದಲ ಮತ್ತು ಎರಡನೆಯ ಹೆಂಡತಿಯರ ನಡುವೆ ಜಗಳ ಶುರುವಾಯಿತು. ಆ ಕಾರಣದಿಂದಾಗಿ, ಅಬು ಅಬ್ದುಲ್ಲಾ ಮೂರು ಮತ್ತು ನಾಲ್ಕನೇ ಬಾರಿ ಮದುವೆಯಾಗಲು ನಿರ್ಧರಿಸಿದನು. ನಂತರ ಅವನು ತನ್ನ ಮೊದಲ ಇಬ್ಬರು ಹೆಂಡತಿಯರಿಗೆ ವಿಚ್ಛೇದನ ನೀಡಿದನು.


ಹೀಗೆ ಒಂದಾದ ನಂತರ ಮತ್ತೊಂದು ಮದುವೆಯಾಗಿದ್ದು ಏಕೆ ಗೊತ್ತೇ?
ಅಬು ಅಬ್ದುಲ್ಲಾ ಅವರು ಅನೇಕ ವಿವಾಹಗಳನ್ನು ಮಾಡಿಕೊಳ್ಳಲು ಏಕೈಕ ಕಾರಣವೆಂದರೆ ತನ್ನನ್ನು ಸಂತೋಷವಾಗಿಡುವ ಮಹಿಳೆಯನ್ನು ಹುಡುಕುವುದು ಎಂದು ಹೇಳಿದರು. ಅನೇಕ ಮಹಿಳೆಯರನ್ನು ವಿವಾಹವಾದರೂ ಸಹ ತನ್ನ ಯಾವುದೇ ಹೆಂಡತಿಯರೊಂದಿಗೆ ಅನ್ಯಾಯವಾಗಿ ವರ್ತಿಸಲಿಲ್ಲ ಎಂದು ಅಬು ಹೇಳಿಕೊಂಡಿದ್ದಾನೆ. ಅವರ ಒಂದು ಮದುವೆ ಕೇವಲ ಒಂದೇ ಒಂದು ರಾತ್ರಿಯಲ್ಲಿ ಮುರಿದುಬಿತ್ತು ಎಂದು ಅವರು ಮಾಹಿತಿ ನೀಡಿದರು.


ಇದನ್ನೂ ಓದಿ:  Viral Story: ಗಂಡ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ ಪತ್ನಿ, ಒಂದೇ ಮನೆಯಲ್ಲಿ ಇರೋಕೂ ಒಪ್ಪಿಗೆ ಕೊಟ್ಟ ಹೆಂಡ್ತಿ!


ಅಬು ಹೆಚ್ಚಾಗಿ ಸೌದಿ ಮಹಿಳೆಯರನ್ನು ಮದುವೆಯಾಗಿದ್ದಾನೆ. ಆದರೂ ಅವರು ತಮ್ಮ ವಿದೇಶ ಪ್ರವಾಸಗಳ ಸಮಯದಲ್ಲಿ ಕೆಲವು ವಿದೇಶಿ ಮಹಿಳೆಯರನ್ನು ಸಹ ಮದುವೆಯಾಗಿದ್ದಾನೆ. "ನಾನು ಮೂರರಿಂದ ನಾಲ್ಕು ತಿಂಗಳು ವಿದೇಶದಲ್ಲಿದ್ದೆ. ಆದ್ದರಿಂದ ನಾನು ಪಾಪ ಮಾಡುವುದರಿಂದ ನನ್ನನ್ನು ರಕ್ಷಿಸಿಕೊಳ್ಳಲು ಮದುವೆಯಾಗಿದ್ದೇನೆ" ಎಂದು ಅವರು ಹೇಳಿದರು. ಅವರು ಮತ್ತೆ ಮದುವೆಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸಹ ಅವರು ಹೇಳಿದ್ದಾರೆ.

Published by:Ashwini Prabhu
First published: