Viral Post: ಈ ವ್ಯಕ್ತಿಗೆ ಶೌಚಾಲಯ ಕಂಡ್ರೆ ಭಯವಂತೆ! ಇದಕ್ಕೆ ಕಾರಣನೂ ಇದೆ ನೋಡಿ

ಬರೀ ಹಲ್ಲಿ ಮತ್ತು ಜಿರಳೆಗೆ ನಾವು ಇಷ್ಟೆಲ್ಲಾ ಭಯ ಪಟ್ಟರೆ, ಇಲ್ಲೊಬ್ಬ ವ್ಯಕ್ತಿ ಶೌಚಾಲಯಕ್ಕೆ ಹೋಗುವುದನ್ನೇ ನಿಲ್ಲಿಸಬೇಕಾಗುತ್ತದೆ ಅಷ್ಟೇ. ಏಕೆ ಅಂತೀರಾ.. ಒಂದು ವರ್ಷದಲ್ಲಿ ಈ ವ್ಯಕ್ತಿ ತನ್ನ ಶೌಚಾಲಯದಲ್ಲಿರುವಂತಹ ಕೊಮೋಡ್ ನಲ್ಲಿ ಒಂದಲ್ಲ, ಎರಡಲ್ಲ ಮೂರು ಬಾರಿ ಇಗುವಾನಾ ಎಂದರೆ ಉಡ ಇರುವುದು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದು ಆ ಕೊಮೋಡ್ ನ ಮುಚ್ಚಳವನ್ನು ಮುಚ್ಚಿ ಶೌಚಾಲಯದಿಂದ ಹೊರ ಬಂದಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಕೆಲವರು ತಮ್ಮ ಮನೆಯಲ್ಲಿರುವ ಶೌಚಾಲಯಕ್ಕೆ (Toilet) ಹೋಗುವ ಮುಂಚೆ ನಿಧಾನವಾಗಿ ಬಾಗಿಲು ತೆರೆದು ಒಂದು ಕಾಲು ಒಳಕ್ಕೆ ಇರಿಸಿ ಮೇಲೆ ಕೆಳಗೆ ಕಿಟಕಿ (Window) ಹತ್ತಿರವೆಲ್ಲಾ ಒಮ್ಮೆ ನೋಡಿಕೊಂಡು ಒಳಗೆ ಹೋಗುತ್ತಾರೆ. ಹೀಗೇಕೆ ಮಾಡುತ್ತಾರೆ ಅಂತ ನೀವು ಆಶ್ಚರ್ಯ ಪಡಬಹುದು. ಇದಕ್ಕೆ ಕಾರಣ ನಾವು ಹೇಳುತ್ತೇವೆ ಕೇಳಿ.. ಶೌಚಾಲಯದಲ್ಲಿ ಹೆಚ್ಚಾಗಿ ಓಡಾಡುವ ಹಲ್ಲಿಗಳನ್ನು (Lizard) ಮತ್ತು ದೊಡ್ಡ ದೊಡ್ಡ ಜಿರಳೆಗಳನ್ನು ಕಂಡರೆ ಅನೇಕರಿಗೆ ಭಯವಾಗುತ್ತದೆ. ಕೆಲವರಂತೂ ಈ ಭಯಕ್ಕೆ ಒಳಗಡೆ ಹಲ್ಲಿ ಮತ್ತು ಜಿರಳೆ ಇರುವುದನ್ನು ನೋಡಿದರಂತೂ ಮುಗಿದೇ ಹೋಯ್ತು, ಅದು ಕಿಟಕಿಯಿಂದ ಆಚೆ ಹೋಗುವವರೆಗೂ ಅವರು ಒಳಗೆ ಹೋಗುವುದಿಲ್ಲ. ಆದರೂ ಸಹ ಅವರು ಶೌಚಾಲಯದಲ್ಲಿ ಇರುವಷ್ಟು ಸಮಯ ಅವರ ಎಲ್ಲಾ ಗಮನ ಆ ಹಲ್ಲಿ ಮತ್ತು ಜಿರಳೆಗಳ (Cockroach) ಮೇಲೆಯೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಶೌಚಾಲಯದಲ್ಲಿರುವಂತಹ ಕೊಮೋಡ್ ನಲ್ಲಿ ಮೂರು ಇಗುವಾನಾ
ಬರೀ ಹಲ್ಲಿ ಮತ್ತು ಜಿರಳೆಗೆ ನಾವು ಇಷ್ಟೆಲ್ಲಾ ಭಯ ಪಟ್ಟರೆ, ಇಲ್ಲೊಬ್ಬ ಫ್ಲೋರಿಡಾ ವ್ಯಕ್ತಿ ಶೌಚಾಲಯಕ್ಕೆ ಹೋಗುವುದನ್ನೇ ನಿಲ್ಲಿಸಬೇಕಾಗುತ್ತದೆ ಅಷ್ಟೇ. ಏಕೆ ಅಂತೀರಾ.. ಒಂದು ವರ್ಷದಲ್ಲಿ ಈ ವ್ಯಕ್ತಿ ತನ್ನ ಶೌಚಾಲಯದಲ್ಲಿರುವಂತಹ ಕೊಮೋಡ್ ನಲ್ಲಿ ಒಂದಲ್ಲ, ಎರಡಲ್ಲ ಮೂರು ಬಾರಿ ಇಗುವಾನಾ ಎಂದರೆ ಉಡ ಇರುವುದು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದು ಆ ಕೊಮೋಡ್ ನ ಮುಚ್ಚಳವನ್ನು ಮುಚ್ಚಿ ಶೌಚಾಲಯದಿಂದ ಹೊರ ಬಂದಿದ್ದಾರೆ.ಫ್ಲೋರಿಡಾದ ಪೂರ್ವ ಕರಾವಳಿಯ ಒಂದು ನಗರದಲ್ಲಿ ವಾಸವಾಗಿರುವ ಬ್ರೂಸ್ ಬ್ಲೇಯರ್ ಅವರ ಮನೆಯ ಶೌಚಾಲಯದಲ್ಲಿ ಒಂದು ವರ್ಷದಲ್ಲಿ ಮೂರು ಬಾರಿ ಇಗುವಾನಾ ಎಂದರೆ ದೊಡ್ಡ ಉಡ ಬಂದು ಕುಳಿತಿತ್ತು. ನಂತರದಲ್ಲಿ ಅದನ್ನು ಹಿಡಿದುಕೊಂಡು ಹೋಗಲು ಸಂಬಂಧಪಟ್ಟವರಿಗೆ ಕರೆ ಮಾಡಿ ಕರೆಯಿಸಲಾಯಿತು.ಉಡ ನೋಡಿದ ವ್ಯಕ್ತಿ ಹೇಳಿದ್ದು ಹೀಗೆ 
"ನಾನು ಪ್ರತಿಬಾರಿಯೂ ಶೌಚಾಲಯಕ್ಕೆ ಕಾಲಿಟ್ಟಾಗ, ಪ್ರತಿ ಬಾರಿಯೂ ನಾನು ಆತಂಕದಿಂದ ಆ ಕೊಮೋಡ್ ನ ಮುಚ್ಚಳವನ್ನು ತೆರೆಯುತ್ತೇನೆ" ಎಂದು ಬ್ರೂಸ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. "ಇದು ಕಳೆದ ವಾರದಲ್ಲಿ ಎರಡು ಇಂತಹ ದೊಡ್ಡ ಉಡಗಳನ್ನು ನೋಡಿದೆ, ಆದ್ದರಿಂದ ಈ ಶೌಚಾಲಯ ಎಂದರೆ ಭಯ ಹುಟ್ಟಿದೆ" ಎಂದು ಇವರು ಹೇಳಿದರು.

ಇದನ್ನೂ ಓದಿ: Viral Video: ಬರೀ ಮನುಷ್ಯರಷ್ಟೇ ಅಲ್ಲ ಮಂಗಗಳಿಗೂ ಸೋಶಿಯಲ್ ಮೀಡಿಯಾ ಕ್ರೇಜ್, ಇದೆಂಥಾ ಕಾಲ ಬಂದ್ಬಿಡ್ತು!

"ಈ ಕೊಮೋಡ್ ನಲ್ಲಿ ಉಡವನ್ನು ನೋಡಿದಾಗ ತಮಾಷೆ ಅನ್ನಿಸಿತ್ತು, ಎರಡನೆಯ ಬಾರಿ ಉಡವನ್ನು ನೋಡಿದಾಗ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಏನಾದರೂ ಮಾಡಬೇಕಲ್ಲ ಅಂತ ಅನ್ನಿಸಿತ್ತು ಮತ್ತು ಈಗ ಮೂರನೇ ಬಾರಿ" ಎಂದು ಆಕ್ರಮಣಕಾರಿಯಾದ ಉಡವನ್ನು ಹಿಡಿಯುವವರಾದ ಹರೋಲ್ಡ್ ರೋಂಡನ್ ಅವರು ಹೇಳಿದರು. “ಮುಂದೆ ಎಂದೂ ಈ ಉಡಗಳು ಶೌಚಾಲಯಕ್ಕೆ ಬರದಂತೆ ಎಲ್ಲಾ ದಾರಿಗಳನ್ನು ಮುಚ್ಚಿದರೂ ಸಹ ಹೀಗೆ ಬರುತ್ತಿವೆ” ಎಂದು ರೋಂಡನ್ ಹೇಳಿದರು. "ಇದು ಚಿಕ್ಕ ರಂಧ್ರಗಳಿಂದ ಒಳಗೆ ಬರುತ್ತಿಲ್ಲ ಎಂದು ನಮಗೆ ತಿಳಿದಿದೆ" ಎಂದು ಅವರು ಹೇಳಿದರು. "ನಾವು ಮನೆಯ ಸುತ್ತಲೂ ಯಾವುದಾದರೂ ಸಣ್ಣ ತೆರೆದ ಚರಂಡಿ ಮಾರ್ಗವಿದೆಯೇ ಅಂತ ಹುಡುಕಿದೆವು. ಹಾಗೇನಾದರೂ ಇದ್ದರೆ ನಾವು ಅದನ್ನು ಶೀಘ್ರದಲ್ಲಿಯೇ ಕಂಡು ಹಿಡಿಯಬೇಕಾಗಿದೆ" ಎಂದು ರೋಂಡನ್ ಹೇಳಿದರು.

ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಇರುತ್ತವೆ ವಾಸಿಸುವ ಸರಿಸೃಪಗಳು
"ಮೊದಲ ಬಾರಿಗೆ ನಾನು ಅದನ್ನು ಕೊಮೋಡ್ ನಲ್ಲಿ ನೋಡಿದಾಗ, ಮುಂದಿನ ಬಾರಿ ಕೊಮೋಡ್ ಮೇಲೆ ಕುಳಿತುಕೊಳ್ಳುವಾಗ ಒಂದಲ್ಲ ಎರಡು ಬಾರಿ ನೋಡಿ ಕುಳಿತುಕೊಳ್ಳಬೇಕು ಅಂತ ಅಂದುಕೊಂಡೆ. ಎರಡನೇ ಬಾರಿ ಉಡವನ್ನು ನೋಡಿದಾಗಲೂ ಸಹ ಹಾಗೆ ಅಂದುಕೊಂಡೆ. ಮೂರನೇ ಬಾರಿ ನೋಡಿ ನನಗೆ ಇನ್ಮುಂದೆ ಅದರ ಮೇಲೆ ಕುಳಿತುಕೊಳ್ಳಲು ನಾನು ಧೈರ್ಯ ಮಾಡುತ್ತೇನೆ ಅಂತ ನನಗಂತೂ ಅನ್ನಿಸುತ್ತಿಲ್ಲ” ಎಂದು ಬ್ಲೇಯರ್ ಹೇಳಿದರು.

ಇದನ್ನೂ ಓದಿ:  Viral Video: ಉಕ್ಕಿ ಹರಿಯುತ್ತಿರುವ ನದಿ ದಾಟಿದ ಜಾಣ ಆಡುಗಳು! ನೋಡಿ ಕಲೀರಪ್ಪಾ ಎಂದ ನೆಟ್ಟಿಗರು

ಮೊದಲಿಗೆ ಈ ಉಡಗಳನ್ನು ಫ್ಲೋರಿಡಾಕ್ಕೆ ಸಾಕುಪ್ರಾಣಿಗಳಾಗಿ ಪರಿಚಯಿಸಲಾಯಿತು, ಆದರೆ ಅವು ಕಾಡಿಗೆ ತಪ್ಪಿಸಿಕೊಂಡು ಓಡಿ ಹೋದವು ಎಂದು ಸಿದ್ಧಾಂತಿಸಲಾಗಿದೆ. ಈ ಸರೀಸೃಪಗಳು ಎತ್ತರವನ್ನು ಸುಲಭವಾಗಿ ಹತ್ತಬಲ್ಲವು ಮತ್ತು ಇವು ಹೆಚ್ಚಾಗಿ ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಇರುತ್ತವೆ. ಆದ್ದರಿಂದ, ಇವುಗಳು ಈ ಮರಗಳು ಮತ್ತು ಕಟ್ಟಡಗಳನ್ನು ಹತ್ತುವುದು ದೊಡ್ಡ ಕೆಲಸವೇನಲ್ಲ ಮತ್ತು ಅವುಗಳು ಕಿಟಕಿಯ ಮೂಲಕ ಪೈಪ್ ಗಳಲ್ಲಿ ಬಂದು ಶೌಚಾಲಯ ಸೇರುವುದು ಅಸಾಮಾನ್ಯವೇನಲ್ಲ.
Published by:Ashwini Prabhu
First published: