Bath: ಬಿಹಾರದ ಈ ವ್ಯಕ್ತಿ 22 ವರ್ಷಗಳಿಂದ ಸ್ನಾನನೇ ಮಾಡಿಲ್ವಂತೆ! ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ

ಕೆಲವರು ತಮ್ಮ ಬಹುದಿನದ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮ ಮೇಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡು, ಅವರ ಬೇಡಿಕೆಗಳನ್ನು ಈಡೇರಿಸದೆ ಇದ್ದಾಗ ಪ್ರತಿಭಟನೆಗೆ ಇಳಿಯುವುದನ್ನು ನಾವು ನೋಡುತ್ತೇವೆ ಮತ್ತು ಕೆಲವರು ಒಂದು ತುತ್ತು ಅನ್ನ ಸಹ ಬಾಯಿಗೆ ಇಡದೆ ದಿನಗಳಗಟ್ಟಲೆ ಉಪವಾಸ ಸತ್ಯಾಗ್ರಹ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ಒಂದು ವಿಷಯಕ್ಕೆ ಪಣ ತೊಟ್ಟು ಒಂದಲ್ಲ, ಎರಡಲ್ಲ ಬರೋಬ್ಬರಿ 2 ದಶಕಗಳಿಂದ ಸ್ನಾನವನ್ನೇ ಮಾಡಿಲ್ವಂತೆ.

ಧರ್ಮದೇವ್ ರಾಮ್

ಧರ್ಮದೇವ್ ರಾಮ್

  • Share this:
ಕೆಲವರು ತಮ್ಮ ಬಹುದಿನದ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮ ಮೇಲಾಧಿಕಾರಿಗಳಲ್ಲಿ ಮನವಿ (Request) ಮಾಡಿಕೊಂಡು, ಅವರ ಬೇಡಿಕೆಗಳನ್ನು (Demand) ಈಡೇರಿಸದೆ ಇದ್ದಾಗ ಪ್ರತಿಭಟನೆಗೆ (Protest) ಇಳಿಯುವುದನ್ನು ನಾವು ನೋಡುತ್ತೇವೆ ಮತ್ತು ಕೆಲವರು ಒಂದು ತುತ್ತು ಅನ್ನ ಸಹ ಬಾಯಿಗೆ ಇಡದೆ ದಿನಗಳಗಟ್ಟಲೆ ಉಪವಾಸ ಸತ್ಯಾಗ್ರಹ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ (Person) ಹೀಗೆ ಒಂದು ವಿಷಯಕ್ಕೆ ಪಣ ತೊಟ್ಟು ಒಂದಲ್ಲ, ಎರಡಲ್ಲ ಬರೋಬ್ಬರಿ 2 ದಶಕಗಳಿಂದ ಸ್ನಾನವನ್ನೇ (Bath) ಮಾಡಿಲ್ವಂತೆ. ಹೌದು.. ಬಿಹಾರದ ಈ ವ್ಯಕ್ತಿ ಸುಮಾರು 22 ವರ್ಷಗಳಿಂದ ಸ್ನಾನ ಮಾಡದೇ ಇರುವ ವಿಲಕ್ಷಣ ಘಟನೆ ನಡೆದಿದೆ.

ಒಂದೊಳ್ಳೆ ಉದ್ದೇಶಕ್ಕಾಗಿಯೇ ಇವರು ಸ್ನಾನ ಮಾಡದೆ ಇರುವುದಂತೆ
ಧರ್ಮದೇವ್ ರಾಮ್ ಅವರು ಗೋಪಾಲ್ ಗಂಜ್ ಜಿಲ್ಲೆಯ ಮಾಂಜಾ ಕರಿಯರ ಬೈಕುಂತ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರು ಎರಡು ದಶಕಗಳಿಂದ ಸ್ನಾನ ಏಕೆ ಮಾಡಿಲ್ಲ ಅಂತ ನೀವು ಕೇಳಬಹುದು. ಈ ವ್ಯಕ್ತಿ ಮಹಿಳೆಯರ ವಿರುದ್ಧದ ಅಪರಾಧಗಳು, ಭೂ ವಿವಾದಗಳು ಮತ್ತು ಮುಗ್ಧ ಪ್ರಾಣಿಗಳ ಹತ್ಯೆ ಸಂಪೂರ್ಣವಾಗಿ ನಿಲ್ಲುವವರೆಗೆ ಸ್ನಾನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಧರ್ಮದೇವ್ 22 ವರ್ಷಗಳ ಹಿಂದೆ ಸ್ನಾನ ಮಾಡುವುದನ್ನು ನಿಲ್ಲಿಸಿದರು ಮತ್ತು ಇಂದಿಗೂ ತಮ್ಮ ಪ್ರತಿಜ್ಞೆಯನ್ನು ಹಾಗೆಯೇ ಕಟ್ಟುನಿಟ್ಟಾಗಿ ಮುಂದುವರಿಸಿದ್ದಾರೆ. ಈ ಅವಧಿಯಲ್ಲಿ, ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಬಂದವು. ಆದರೆ ಅವರು ತಮ್ಮ ಆ ಪ್ರತಿಜ್ಞೆಯನ್ನು ಮುರಿಯಲಿಲ್ಲ. ತಮ್ಮ ಮಗ ಮತ್ತು ಹೆಂಡತಿಯ ಮರಣದ ನಂತರವೂ ಒಂದು ಹನಿ ನೀರು ಸಹ ತನ್ನ ದೇಹವನ್ನು ಸ್ಪರ್ಶಿಸಲು ಅವರು ಬಿಡಲಿಲ್ಲ. ಅನೇಕ ಜನರು ಅನೇಕ ರೀತಿಯ ಮಾತುಗಳನ್ನಾಡಿದರೂ ಸಹ ಅವರ ಪ್ರತಿಜ್ಞೆಗೆ ಅವರು ಬದ್ಧರಾಗಿದ್ದರು ಎಂದು ಹೇಳಬಹುದು.

ಹಾಗಿದ್ರೆ ಇವರಿಗೆ ಯಾವುದೇ ಕಾಯಿಲೆಗಳು ಬಂದಿಲ್ವಾ?
ಅನೇಕ ಜನರಿಗೆ ಆಶ್ಚರ್ಯವನ್ನುಂಟು ಮಾಡುವ ಸಂಗತಿಯೆಂದರೆ, ಅವರು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಹೊಂದಿಲ್ಲ, ಅಂದರೆ, ಅವರಿಗೆ ಎರಡು ದಶಕಗಳಿಂದ ಸ್ನಾನ ಮಾಡದೆ ಇರುವುದರಿಂದ ಯಾವುದೇ ಕಾಯಿಲೆಗಳು ಬರಲಿಲ್ಲ ಮತ್ತು ಬದಲಾಗಿ ಅವರ ದೇಹವು ಮೊದಲಿನಂತೆ ಚೆನ್ನಾಗಿಯೇ ಕಾಣುತ್ತದೆ.

ಇದನ್ನೂ ಓದಿ: Vampire Queen: ಇವಳು ರಾಣಿಯಲ್ಲ, ರಾಕ್ಷಸಿ! ಬರೋಬ್ಬರಿ 600ಕ್ಕೂ ಹೆಚ್ಚು ಹುಡುಗಿಯರನ್ನು ಕೊಂದು ಅವರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದಳು!

ಸಂದರ್ಶನವೊಂದರಲ್ಲಿ ಇವರು ಹೇಳಿದ್ದೇನು?
ಮಾಧ್ಯಮವೊಂದಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಧರ್ಮದೇವ್ ರಾಮ್ ಅವರು "1975 ರಲ್ಲಿ ನಾನು ಬಂಗಾಳದ ಜಗದಲ್ ನ ಕಾರ್ಖಾನೆಯಲ್ಲಿ ಕೆಲಸ ಮಾಡಿದೆ ಮತ್ತು 1978 ರಲ್ಲಿ ಮದುವೆಯಾಗಿದ್ದೆ ಮತ್ತು ಬಹುತೇಕರು ನಡೆಸುವಂತೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದೆ. ಆದರೆ 1987ರಲ್ಲಿ ಇದ್ದಕ್ಕಿದ್ದಂತೆ ಭೂ ವಿವಾದಗಳು, ಪ್ರಾಣಿಗಳ ಹತ್ಯೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಸಮಾಜದಲ್ಲಿ ಹೆಚ್ಚಾಗ ತೊಡಗಿದವು ಎಂದು ನನಗೆ ಅರಿವಾಯಿತು. ಆದ್ದರಿಂದ, ಉತ್ತರವನ್ನು ಹುಡುಕುತ್ತಾ, ನಾನು ಒಬ್ಬ 'ಗುರು' ವನ್ನು ಸಂಪರ್ಕಿಸಿದೆ, ಅವರು ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ನನ್ನನ್ನು ಪ್ರೇರೇಪಿಸಿದರು. ಅಂದಿನಿಂದ, ನಾನು ಭಕ್ತಿಯ ಹಾದಿಯಲ್ಲಿ ಸಾಗಿದೆ ಮತ್ತು ಭಗವಾನ್ ರಾಮನಿಗಾಗಿ ಧ್ಯಾನ ಮಾಡಲು ಪ್ರಾರಂಭಿಸಿದೆ" ಎಂದು ಹೇಳಿದರು.

ಕುಟುಂಬ, ಕೆಲಸ ಕಳೆದುಕೊಂಡರೂ ಪ್ರತಿಜ್ಞೆ ಮಾತ್ರ ಬಿಡಲಿಲ್ಲವಂತೆ 
ಧರ್ಮದೇವ್ ರಾಮ್ ಕೆಲಸದ ಸ್ಥಳಕ್ಕೆ ರಾಜೀನಾಮೆ ನೀಡಿ 2000ನೇ ಇಸವಿಯಲ್ಲಿ ಮನೆಗೆ ಬಂದರು, ಆದರೆ ಕುಟುಂಬದ ಒತ್ತಡದಿಂದಾಗಿ ಅವರು ಕಾರ್ಖಾನೆಗೆ ಮತ್ತೆ ಕೆಲಸಕ್ಕೆ ಮರಳಿದರು. ಫ್ಯಾಕ್ಟರಿ ಮ್ಯಾನೇಜರ್ ಊಟ ಮತ್ತು ಸ್ನಾನವನ್ನು ತ್ಯಜಿಸುವ ನಿರ್ಧಾರದ ಬಗ್ಗೆ ತಿಳಿದಾಗ, ಅವರು ಅವನನ್ನು ಕೆಲಸದಿಂದ ತೆಗೆದು ಹಾಕಿದರು ಮತ್ತು ಅವರನ್ನು ಮನೆಗೆ ಕಳುಹಿಸಿದರು.

ಇದನ್ನೂ ಓದಿ: Viral Story: ನೀರು ಉಳಿಸೋಕೆ ಏನ್ ಐಡಿಯಾ ಗುರು! ತಿಂಗಳಲ್ಲಿ 3 ಬಾರಿ ಸ್ನಾನ ಮಾಡೋದಂತೆ ಈಕೆ

ಏತನ್ಮಧ್ಯೆ, ಅವರ ಪತ್ನಿ ಮಾಯಾದೇವಿ ಅವರು 2003 ರಲ್ಲಿ ನಿಧನರಾದರು ಮತ್ತು ಆಗಲೂ ಅವರು ಸ್ನಾನ ಮಾಡಲು ನಿರಾಕರಿಸಿದರು. ಧರ್ಮದೇವ್ ತನ್ನ ಒಬ್ಬ ಮಗ ತೀರಿಕೊಂಡ ನಂತರವೂ ಸಹ ತಮ್ಮ ಪ್ರತಿಜ್ಞೆಯನ್ನು ಮುರಿಯಲಿಲ್ಲ. ಧರ್ಮದೇವ್ ಅವರ ಮತ್ತೊಬ್ಬ ಮಗ ಜುಲೈ 7, 2022 ರಂದು ಸಾವನ್ನಪ್ಪಿದರು, ಆದರೆ ಅವರು ಇನ್ನೂ ಸ್ನಾನ ಮಾಡದೇ ಹಾಗೆಯೇ ಬದುಕುತ್ತಿದ್ದಾರೆ.
Published by:Ashwini Prabhu
First published: