ಈಗ ಎಲ್ಲವೂ ಡಿಜಿಟಲ್ಮಯ(Digital), ಭಿಕ್ಷಾಟನೆ(Begging) ಕೂಡ. ಏನು ಭಿಕ್ಷೆಯನ್ನು ಆನ್ಲೈನ್(Online) ಮೂಲಕವ ಸ್ವೀಕರಿಸುವ ಕಾಲ ಬಂತೇ ಎನ್ನುತ್ತೀರಾ? ಹೌದು, ಉದಾಹರಣೆಗೆ ಈ ಬಿಹಾರದ ಭಿಕ್ಷುಕ ರಾಜು ಪಟೇಲ್ನ ಕಥೆ ಕೇಳಿ. ಬೆಟ್ಟಿಯಾ ರೈಲು ನಿಲ್ದಾಣದಲ್ಲಿ(Railway Station) ಭಿಕ್ಷೆ ಬೇಡುವ ರಾಜು, ಈಗ ಫೋನ್ ಪೇ(Phone Pe) ಮೂಲಕ ಭಿಕ್ಷೆ ಸ್ವೀಕರಿಸುತ್ತಿದ್ದಾನೆ. ಆತನಿಗೆ ಭಿಕ್ಷೆ ನೀಡ ಬಯಸುವವರು, ಅವನ ಕುತ್ತಿಗೆಯಲ್ಲಿ ನೇತು ಹಾಕಿಕೊಂಡಿರುವ ಕ್ಯೂಆರ್ ಕೋಡ್(QR Code) ಅನ್ನು ಸ್ಕ್ಯಾನ್(Scan) ಮಾಡಿದರಾಯಿತು, ಭಿಕ್ಷೆ ಅವನ ಖಾತೆಗೆ ಜಮಾ ಆಗುತ್ತದೆ! “ನಾನು ಡಿಜಿಟಲ್ ಪಾವತಿಗಳನ್ನು(Digital Payment) ಸ್ವೀಕರಿಸುತ್ತೇನೆ, ಇದು ಕೆಲಸ ಮುಗಿಸಲು ಮತ್ತು ನನ್ನ ಹೊಟ್ಟೆಯನ್ನು ತುಂಬಿಸಲು ಸಾಕು” ಎಂದು ರಾಜು ಪಟೇಲ್ ಎಎನ್ಐ(ANI) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
ಕೊರೊನಾ ಸಾಂಕ್ರಾಮಿಕ ಕಾರಣದಿಂದ ನಾವೆಲ್ಲರೂ ನಗದು ರಹಿತ ಅಂದರೆ ಆನ್ಲೈನ್ನಲ್ಲೇ ಹಣಕಾಸಿನ ವ್ಯವಹಾರ ಮಾಡುವ ಪರಿಸ್ಥಿತಿಗೆ ಮೊರೆ ಹೋಗಿರುವುದರಿಂದ, ರಾಜು ಕೂಡ ಅದನ್ನೇ ಅನುಸರಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಡಿಜಿಟಲ್ ಆರ್ಥಿಕತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರಾಜು ಪಟೇಲ್ ಅನುಸರಿಸುತ್ತಿರುವ ಈ ವಿಧಾನವು ವಿಲಕ್ಷಣವಾಗಿರಬಾರದು, ಬದಲಿಗೆ ಪ್ರಾಯೋಗಿಕವಾಗಿರಬೇಕು. ಟ್ವಿಟ್ಟರ್ ಬಳಕೆದಾರರು ಈ ಸಂಗತಿಯ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ರಾಜು ಪಟೇಲನ ಭಿಕ್ಷಾಟನೆಯ ವಿಧಾನ ಜಾಣತನದಿಂದ ಕೂಡಿದೆ ಎಂದರೆ, ಇನ್ನು ಕೆಲವರು ಅವರು ಭಿಕ್ಷೆ ಬೇಡುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ:Inspire: ಕಾರ್ಪೊರೇಟ್ ಹುದ್ದೆಗೆ ಗುಡ್ಬೈ ಹೇಳಿ, 70 ಜನರಿಗೆ ಉದ್ಯೋಗ ಕೊಟ್ಟ ಯಶಸ್ವಿ ಮಹಿಳೆ; ಇದೆಲ್ಲಾ ಸಾಧ್ಯವಾಗಿದ್ದು ಹೇಗೆ?
“ ಭಿಕ್ಷುಕ ಬುದ್ಧಿವಂತ, ನೀವು 50ಕ್ಕಿಂತಲೂ ಹೆಚ್ಚು ಕ್ಯಾಶ್ ಬ್ಯಾಕ್ ಪಡೆಯುತ್ತೀರಿ. ಆದ್ದರಿಂದ ಡಿಜಿಟಲ್ಗೆ ಬದಲಾಗಿರುವುದು ಅವರ ಪಾಲಿಗೆ ಲಾಭದಾಯಕ ತಂತ್ರ” ಎಂದು ಒಬ್ಬರು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
“ಇದು ಒಳ್ಳೆಯದು ಮತ್ತು ಕೆಟ್ಟದ್ದು ಕೂಡ. ಡಿಜಿಟೈಸೇಶನ್ ಜನಸಾಮಾನ್ಯರನ್ನು ತಲುಪಿದೆ ಎಂಬುವುದು ಒಳ್ಳೆಯದು. ಕೆಟ್ಟದು ಯಾವುದೆಂದರೆ, ಸರಕಾರ ಭಿಕ್ಷಾಟನೆ ಕಡಿಮೆ ಮಾಡಲು , ಉದ್ಯೋಗಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಮತ್ತು ಈ ಮಂದಿ ಸ್ವತಃ ಭಿಕ್ಷಾಟನೆಯಲ್ಲಿ ತೃಪ್ತರಾಗಿದ್ದಾರೆ ಹಾಗೂ ಅದರಿಂದ ಹೊರ ಬರಲು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಏನನ್ನೂ ಮಾಡದಿರುವುದು ಕೆಟ್ಟ ಸಂಗತಿ” ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಇದು 5 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ನಡೆಯುತ್ತಿದೆ. ಶನಿವಾರದಂದು ಐಐಟಿ ಸಿಗ್ನಲ್ಗೆ ಹೋಗಿ- ಕಾರಿನ ಬಳಿ ಪೇಟಿಎಂನ ಕ್ಯೂಆರ್ ಕೋಡ್ ತೋರಿಸುವ ಹಲವು ಜನರನ್ನು ನೀವು ಕಾಣಬಹುದು- ಎಂದು ಶ್ರೀಧರ್ ರಾಮಮೂರ್ತಿ ಎಂಬವರು ಬರೆದಿದ್ದಾರೆ.
ವಾರಾಣಸಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವೀಧರೆ ಭಿಕ್ಷುಕಿ..!
ಕಳೆದ ವರ್ಷ ನವೆಂಬರ್ನಲ್ಲಿ ವಾರಾಣಸಿಯ ಅಸ್ಸಿ ಘಾಟ್ನಲ್ಲಿ ಮಹಿಳೆಯೊಬ್ಬಳು ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿತ್ತು. ಆದರೆ ಆ ಭಿಕ್ಷುಕಿ ಇತರ ಭಿಕ್ಷುಕರಿಗಿಂತ ಭಿನ್ನವಾಗಿದ್ದಳು. ಅವಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು ಮತ್ತು ತಾನು ಒಬ್ಬ ಕಂಪ್ಯೂಟರ್ ಸೈನ್ಸ್ ಪದವೀಧರೆ ಎಂದು ಹೇಳಿಕೊಂಡಿದ್ದಳು. ಅವಳು ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿದ್ದರೆ, ಭಿಕ್ಷಾಟನೆಯ ಸ್ಥಿತಿಗೆ ಬರಲು ಕಾರಣವೇನು?
ಪದವೀಧರೆ ಭಿಕ್ಷುಕಿಯಾಗಿದ್ದು ಹೇಗೆ?
ಆ ಭಿಕ್ಷುಕಿಯ ಹೆಸರು ಸ್ವಾತಿ. ಆಕೆ ವ್ಯಕ್ತಿಯೊಬ್ಬರಿಗೆ ಹೇಳಿರುವ ಪ್ರಕಾರ, ತಾನು ದಕ್ಷಿಣ ಭಾರತದವಳಾಗಿದ್ದು, ತನ್ನ ಕುಟುಂಬ ಹಾಗೂ ಪತಿಯೊಂದಿಗೆ ಉತ್ತಮವಾದ ಜೀವನವನ್ನು ನಡೆಸುತ್ತಿದ್ದಳು. ಆದರೆ, ಆಕೆ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ, ಆಕೆಯ ದೇಹದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು ಮತ್ತು ಆಕೆಯ ಜೀವನ ದುರಂತದ ಕಡೆಗೆ ವಾಲಲು ತೊಡಗಿತು. ಅವಳನ್ನು ಬಲವಂತವಾಗಿ ಮನೆಯಿಂದ ಹೊರ ಹಾಕಲಾಯಿತು. ಕೊನೆಗೆ ಆಕೆ ವಾರಾಣಸಿಗೆ ಬಂದು ತಲುಪಿದಳು. ಸ್ವಾತಿ ಕಳೆದ ಮೂರು ವರ್ಷಗಳಿಂದ ವಾರಾಣಸಿಯಲ್ಲಿ ಬದುಕುತ್ತಿದ್ದಾಳೆ.
ಇದನ್ನೂ ಓದಿ: Ukraine: ನಿಮ್ಮ ಮೊಬೈಲ್ನಲ್ಲಿರುವ ಬಹುತೇಕ ಆ್ಯಪ್ಗಳ ಸೃಷ್ಟಿಕರ್ತ ಉಕ್ರೇನ್! ತಂತ್ರಜ್ಞಾನ ಕ್ಷೇತ್ರಕ್ಕೆ ಅದರ ಕೊಡುಗೆ ಅಪಾರ
ದಾರಿಹೋಕರು ಹಾಕುವ ಭಿಕ್ಷೆಯೇ ಅವಳ ಜೀವನಕ್ಕೆ ಏಕೈಕ ಆಧಾರವಾಗಿದೆ. ಸ್ವಾತಿಗೆ ಭಿಕ್ಷಾಟನೆಯನ್ನು ಬಿಟ್ಟು ಕೆಲಸ ಮಾಡಲು ಆಸಕ್ತಿ ಇದೆ ಎಂಬುದನ್ನು ಅರಿತ, ಸ್ವಾತಿಯ ಕಥೆಯನ್ನು ಕೇಳಿದ ವ್ಯಕ್ತಿ, ಅಸ್ಸಿ ಘಾಟ್ಗೆ ಭೇಟಿ ನೀಡುವ ಜನರಿಗೆ ಆಕೆಯ ವಿದ್ಯಾರ್ಹತೆಯನ್ನು ಎತ್ತಿ ತೋರಿಸಿ, ಉದ್ಯೋಗ ಹುಡುಕಲು ಸಹಾಯ ಮಾಡುವಂತೆ ಕೇಳಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ