ವೋಟಿಗಾಗಿ ಕೊಳಚೆ ನೀರನ್ನೇ ಕುಡಿದ ಪಾಕ್​ ರಾಜಕಾರಣಿ

news18
Updated:July 2, 2018, 3:33 PM IST
ವೋಟಿಗಾಗಿ ಕೊಳಚೆ ನೀರನ್ನೇ ಕುಡಿದ ಪಾಕ್​ ರಾಜಕಾರಣಿ
news18
Updated: July 2, 2018, 3:33 PM IST
ವೋಟ್​ ಬ್ಯಾಂಕ್​ಗಾಗಿ ರಾಜಕಾರಣಿಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದರ ಕುರಿತು ನೀವು ಇತ್ತೀಚೆಗೆ ಬಿಡುಗಡೆಯಾಗಿದ್ದ ಹಂಬಲ್​ ಪೊಲಿಟೀಷಿಯನ್​ ನೊಗರಾಜ್​ ಸಿನಿಮಾದಲ್ಲಿ ಗಮನಿಸಿರಬಹುದು. ಅದು ಸಿನಿಮಾ ಆದರೆ ಪಾಕಿಸ್ತಾನದ ಈ ರಾಜಕಾರಣಿ ಇದೇ ರೀತಿ ತಮ್ಮ ವೋಟ್​ ಬ್ಯಾಂಕ್​ಗಾಗಿ ಬದುಕುತ್ತಿದ್ದಾರೆ.

ಕರಾಚಿಯ ಆಮ್​ ಆದ್ಮಿ ಪಾಕಿಸ್ತಾನದ ಸ್ವತಂತ್ರ ಅಭ್ಯರ್ಥಿ ಅಯಾಜ್​ ಮೆಮೋಮ್​ ಮೊತಿವಾಲ ಎಂಬವರು ತಮ್ಮ ಪ್ರದೇಶದಲ್ಲಿರುವ ನಾಗರಿಕ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಹೊಸ ಯತ್ನವನ್ನು ನಡೆಸಿದ್ದಾರೆ. ಅದೇನೆಂದರೆ ಕೊಳಚೆ ಪ್ರದೇಶದಲ್ಲಿ ಸ್ವತಃ ತಾವೇ ಹೋಗಿ ಅಲ್ಲಿ ಬಿದ್ದಿದ್ದ ಕೊಳಕು ನೀರನ್ನು ಕುಡಿದಿದ್ದಾರೆ. ಅಲ್ಲದೇ ತ್ಯಾಜ್ಯ ನಿರ್ವಹಣೆ ಅಸಮರ್ಪಕ ಎಂದು ತೋರಿಸಲು ಹೋಗಿ ಅದೇ ಪ್ರದೇಶದಲ್ಲಿ ಮಾಂಸದೂಟವನ್ನೂ ಸಹ ಮಾಡಿದ್ದಾರೆ.

ಇತ್ತೀಚೆಗೆ ಅವರು ಕೊಳಚೆ ಪ್ರದೇಶದಲ್ಲಿ ನೀರು ಕುಡಿದು ಮಾಡಿದ ಭಾಷಣ ಅಂತರ್ಜಾಲದಲ್ಲಿ ಭಾರೀ ವೈರಲ್​ ಆಗಿದೆ. ಈ ವೇಳೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಲೈವ್​ ಬಂದಿದ್ದ ಮೋತಿವಾಲ vಇಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ