Viral Video: ಹಸುಗಳಿಗೂ ಪ್ರತ್ಯೇಕ ರೂಂ, ಹಾಸಿಗೆ ವ್ಯವಸ್ಥೆ.. ಗಂಜಲ-ಸಗಣಿ ಕಥೆ ಏನು?
Cow Pet: ಗೋವನ್ನು ಮಾತೆ ಎಂದು ಪೂಜಿಸುವ ಈಗ ಕುಟುಂಬ ಗೋಪಿ ಗಂಗಾ ಹಾಗೂ ಪೃಥ್ವಿ ಎಂದು ಹೆಸರಿಡಲಾಗಿದ್ದು ಮನೆಯಲ್ಲಿ ಕುಟುಂಬದ ಸದಸ್ಯರಂತೆಯೇ ಅವುಗಳನ್ನು ನೋಡಿಕೊಳ್ಳುತ್ತಿದ್ದಾರೆ ಅಲ್ಲದೇ ಅವುಗಳಿಗೆ ಯಾವುದೇ ರೀತಿಯ ತೊಂದರೆ ಬಾರದಂತೆ ನೋಡಿಕೊಳ್ಳುತ್ತಿರುವ ಈ ಕುಟುಂಬದ ಸದಸ್ಯರು ಅವುಗಳನ್ನು ಎಲ್ಲರಂತೆ ಮಲಗುವ ಕೋಣೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ
ಗೋವಿಲ್ಲದೇ(Cow) ನಮ್ಮ ವೇದ ಇತಿಹಾಸಗಳೇ(History) ಇಲ್ಲ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದಿಗೂ ವೇದ, ಪುರಾಣ(Mythology) ಮತ್ತು ಉಪನಿಷತ್ತುಗಳಲ್ಲಿ ಗೋ ಸಂಬಂಧಿ ವಿವರಗಳು ವಿಫುಲವಾಗಿ ಕಾಣ ಸಿಗುತ್ತವೆ. ಒಟ್ಟಾರೆಯಾಗಿ ಸಂಪೂರ್ಣ ವೇದಗಳನ್ನು ಅವಲೋಕಿಸಿದಾಗ ವೇದಗಳು(Veda) ‘ಗೋ’ಮಯವಾದರೆ, ಗೋವು ಸರ್ವದೇವ ಮಯವಾಗಿದೆ. ಇನ್ನು ಹಿಂದೂ ಧರ್ಮದಲ್ಲಿ(Hindu Religion) ಗೋವಿಗೆ ಮಹತ್ವದ ಸ್ಥಾನವಿದೆ. ಗೋವಿನ ಪೂಜೆಯನ್ನು ಪ್ರತಿನಿತ್ಯ ಮಾಡುವುದು, ಗೋಗ್ರಾಸ ಕೊಡುವುದು ಇವು ಸದಾಚಾರಿಗಳು ಮಾಡುವ ನಿತ್ಯ ಕರ್ಮಗಳಾಗಿವೆ. ಅಷ್ಟೇ ಅಲ್ಲದೆ ಗೋವಿಗೆ ಮಾತೆಯ ಸ್ಥಾನ ಕೊಟ್ಟಿದ್ದೇವೆ.ತನಕ ಮಾತ್ರ ತಾನು ಸ್ತನ್ಯಪಾನ ಮಾಡಿಸಿ ಹಾಲು ಕೊಡುತ್ತಾಳೆ. ಆದರೆ ಜೀವನವಿಡೀ ನಮಗೆ ಹಾಲು ಕೊಡುವುದು ಹಸು. ಅದಕ್ಕಾಗಿಯೇ ಮನೆ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರು. ಹಸು ನೀಡುವ ಹಾಲು, ಅದರಿಂದ ಆಗುವ ಮೊಸರು, ಕಡೆದಾಗ ಬರುವ ಬೆಣ್ಣೆ, ಕಾಯಿಸಿದಾಗ ಬರುವ ತುಪ್ಪ ಇವೆಲ್ಲವೂ ಭಗವಂತನಿಗೆ ನಿತ್ಯ ಮಾಡುವ ಪಂಚಾಮೃತದ ಅಭಿಷೇಕದ ವಸ್ತುಗಳು. ದೇಹ ಶುದ್ಧಿಗಾಗಿ ಬಳಸುವ ಪಂಚಗವ್ಯಕ್ಕೆ ಗೋವಿನ ಮೂತ್ರ ಹಾಗೂ ಗೋವಿನ ಸಗಣಿಯನ್ನು ಬಳಸುತ್ತೇವೆ. ಮನೆಯಲ್ಲಿ ಶುದ್ಧ ಮಾಡಲು ಗೋಮಯ ಮಾಡುತ್ತೇವೆ.
ತೀರ್ಥಗಳಲ್ಲಿ ಗಂಗಾ, ಮಂತ್ರಗಳಲ್ಲಿ ಗಾಯತ್ರಿ, ನಾಮಸ್ಮರಣೆಯಲ್ಲಿ ಗೋವಿಂದ, ಶಾಸ್ತ್ರಗಳಲ್ಲಿ ಗೀತಾ, ಪ್ರಾಣಿಗಳಲ್ಲಿ ಪೂಜ್ಯತೆಯನ್ನು ಪಡೆದಿರುವುದು ಗೋವುಗಳು. ಆದ್ರೆ ಅನಾದಿ ಕಾಲದಿಂದಲೂ ದೇವರಂತೆ ಪೂಜಿಸುತ್ತಾ ಬರುತ್ತಿರುವ ಗೋವನ್ನು ಇಂದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಗೋಹತ್ಯಾ ಮಾಡಬೇಡಿ ಎಂದು ದೇಶದೆಲ್ಲೆಡೆ ಗೋರಕ್ಷಣಾ ಅಭಿಯಾನ ಮಾಡಿದರೂ, ಗೋವಿನ ಬಗ್ಗೆ ಮಹತ್ವ ಸಾರಿದರೂ ಅದನ್ನು ಲೆಕ್ಕಿಸದೆ ಗೋವನ್ನು ಅಕ್ರಮವಾಗಿ ಕೊಂಡೊಯ್ದು ಹತ್ಯೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕುಟುಂಬವೊಂದು ಗೋವಿಗೆ ಮಕ್ಕಳಂತೆ ಇಲ್ಲ ಅದನ್ನು ಪಾಲನೆ ಮಾಡಿ ಮನೆಯ ಸದಸ್ಯರಂತೆ ಸಾಕಿ ಸಲಹುತ್ತಿದೆ..
ಮನುಷ್ಯರಂತೆಯೇ ಮನೆಯಲ್ಲಿ ವಾಸ ಮಾಡುತ್ತಿವೆ ಗೋವುಗಳು
ಸಾಮಾನ್ಯವಾಗಿ ನಾವು ಮನೆಯಲ್ಲಿ ನಾಯಿಗಳನ್ನು ಸಾಕಿ-ಸಲಹಿದ ವಾಹನಗಳಿಗೆ ಪ್ರತಿನಿತ್ಯ ಸ್ನಾನ ಮಾಡಿಸುವುದು ಅವುಗಳಿಗೆ ನೆಚ್ಚಿನ ಆಹಾರ ತಿನ್ನಿಸುವುದು, ನಾಯಿಗಳಿಗೆ ಎಂದೇ ಪ್ರತ್ಯೇಕವಾದ ಹಾಸಿಗೆ ಹೊದಿಕೆ ತಂದಿಡುವುದು ಎಲ್ಲಾ ಸರ್ವೇಸಾಮಾನ್ಯ.. ನಮ್ಮ ಕುಟುಂಬದ ಒಬ್ಬ ಸದಸ್ಯರಿಗೆ ಎನ್ನುವಂತೆ ನಾವು ಶ್ವಾನಗಳನ್ನು ಬೆಳೆಸಿ ಸಾಕಿ ಸಲಹುತ್ತಿವೆ.. ಆದರೆ ರಾಜಸ್ಥಾನದ ಜೋಧ್ ಪುರ್ ನಲ್ಲಿ ಮಾತ್ರ ಕುಟುಂಬವೊಂದು ನಾವು ತಾಯಿಯೆಂದು ಪೂಜಿಸುವ ಗೋವುಗಳನ್ನು ನಿಜವಾಗಿಯೂ ಮಕ್ಕಳಂತೆ ಲಾಲನೆ-ಪಾಲನೆ ಮಾಡುತ್ತಿದೆ.
ಹೌದು ರಾಜಸ್ಥಾನದ ಜೋಧ್ ಪುರದ ಕುಟುಂಬವೊಂದರಲ್ಲಿ ಹಸುಗಳನ್ನು ಮನುಷ್ಯರಂತೆಯೇ ಸಾಕಲಾಗುತ್ತಿದೆ ಹೇಗೆ ಮನೆಯಲ್ಲಿ ನಾವು ಶ್ವಾನಗಳನ್ನು ಹಾಕಿದಾಗ ಅವುಗಳ ಲಾಲನೆ ಪಾಲನೆ ಮಾಡುತ್ತೇವೆ ಅದೇ ರೀತಿ ಕುಟುಂಬದಲ್ಲಿ ಹಸುಗಳಿಗೆ ಮಹತ್ತರವಾದ ಸ್ಥಾನ ನೀಡಿ ಅವುಗಳನ್ನು ಸಾಕಿ ಸಲಹಲಾಗುತ್ತಿದೆ.ವಿಶೇಷ ಅಂದ್ರೆ ಈ ಮನೆಯಲ್ಲಿ ಸಾಕಿರುವ ಗುರುಗಳು ಎಲ್ಲರಂತೆಯೇ ರೂಮುಗಳಲ್ಲಿ ಹಾಸಿಗೆಗಳ ಮೇಲೆ ಮಲಗಿ ನಿದ್ರೆ ಮಾಡುತ್ತವೆ.
ಗೋವನ್ನು ಮಾತೆ ಎಂದು ಪೂಜಿಸುವ ಈಗ ಕುಟುಂಬ ಗೋಪಿ ಗಂಗಾ ಹಾಗೂ ಪೃಥ್ವಿ ಎಂದು ಹೆಸರಿಡಲಾಗಿದ್ದು ಮನೆಯಲ್ಲಿ ಕುಟುಂಬದ ಸದಸ್ಯರಂತೆಯೇ ಅವುಗಳನ್ನು ನೋಡಿಕೊಳ್ಳುತ್ತಿದ್ದಾರೆ ಅಲ್ಲದೇ ಅವುಗಳಿಗೆ ಯಾವುದೇ ರೀತಿಯ ತೊಂದರೆ ಬಾರದಂತೆ ನೋಡಿಕೊಳ್ಳುತ್ತಿರುವ ಈ ಕುಟುಂಬದ ಸದಸ್ಯರು ಅವುಗಳನ್ನು ಎಲ್ಲರಂತೆ ಮಲಗುವ ಕೋಣೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕುಟುಂಬ ನೋಡಿಕೊಳ್ಳುತ್ತಿರುವ ಗೋವುಗಳು ಕಂಬಳಿ ಹೊದ್ದು ಹಾಸಿಗೆಯಮೇಲೆ ಬೆಚ್ಚಗೆ ಮಲಗಿ ಜೀವನ ಸಾಗಿಸುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮುದ್ದಾದ ಗೋವುಗಳ ವಿಡಿಯೋವನ್ನು ಈ ಕುಟುಂಬವು ಇನ್ಸ್ಟಾಗ್ರಾಮ್ ಹ್ಯಾಂಡಲ್ 'ಕೌಸ್ಬ್ಲೈಕ್' ನಲ್ಲಿ ಹಂಚಿಕೊಂಡಿದೆ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊ ಈಗಾಗಲೇ 54,00,000 ಲೈಕ್ಗಳು ಬಂದಿದ್ರೆ ಸಾವಿರಾರು ಸಂಖ್ಯೆಯ ಜನ ಕಾಮೆಂಟ್ ಮಾಡುವ ಮೂಲಕ ಕುಟುಂಬದ ಪ್ರೀತಿಗೆ ಮಾರುಹೋಗಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ