Viral Photo: ಪೇಸ್ಟ್ರಿ ಬಾಕ್ಸ್​ನಲ್ಲಿ ರೆಸ್ಯೂಮ್ ಕಳುಹಿಸಿದ ಯುವಕ! ಕಂಪನಿ ಹೇಳಿದ್ದೇನು?

ಖಂಡೇಲ್ವಾಲ್ ಅವರು ಜೊಮ್ಯಾಟೋ ಸಮವಸ್ತ್ರ ಧರಿಸಿ ಪೇಸ್ಟ್ರಿಗಳ ಬಾಕ್ಸ್ ಅನ್ನು ಹಿಡಿದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಜೋಮ್ಯಾಟೊ ಡೆಲಿವರಿ ಹುಡುಗನ ವೇಷ ಧರಿಸಿ ನನ್ನ ರೆಸ್ಯೂಮ್ ಅನ್ನು ಪೇಸ್ಟ್ರಿ ಪೆಟ್ಟಿಗೆಯಲ್ಲಿ ತಲುಪಿಸಿದೆ. ಅದನ್ನು ಬೆಂಗಳೂರಿನ ಸ್ಟಾರ್ಟ್ ಅಪ್ ಗಳ ಒಂದು ಗುಂಪಿಗೆ ತಲುಪಿಸಲಾಯಿತು" ಎಂದು ಖಂಡೇಲ್ವಾಲ್ ಟ್ವೀಟ್ ಮಾಡಿದ್ದಾರೆ.

ಪೇಸ್ಟ್ರಿ ಬಾಕ್ಸ್ ನಲ್ಲಿರಿಸಿ ಕಳುಹಿಸಿದ ಉದ್ಯೋಗಾಕಾಂಕ್ಷಿ

ಪೇಸ್ಟ್ರಿ ಬಾಕ್ಸ್ ನಲ್ಲಿರಿಸಿ ಕಳುಹಿಸಿದ ಉದ್ಯೋಗಾಕಾಂಕ್ಷಿ

  • Share this:
ಎಷ್ಟೋ ಬಾರಿ ನಾವು ಕೆಲಸ ಹುಡುಕುವಾಗ ಕಂಪನಿಗಳ (Company) ಇ-ಮೇಲ್ ಐಡಿ ಗೆ ನಮ್ಮ ರೆಸ್ಯೂಮ್ ಅನ್ನು (resume) ಕಳುಹಿಸಿ ಇರುತ್ತೇವೆ, ಆದರೆ ತಿಂಗಳುಗಳು ಕಳೆದರೂ ಆ ಕಡೆಯಿಂದ ನಮಗೆ ಯಾವುದೇ ಉತ್ತರ ಬರುವುದಿಲ್ಲ. ಹೌದು.. ಅನೇಕ ಬಾರಿ ನಾವು ಕಳುಹಿಸುವ ಇ-ಮೇಲ್ (E-mail) ಕಂಪನಿಯವರ ಕಣ್ಣಿಗೆ ಬಿದ್ದಿದೆಯೋ ಇಲ್ಲವೋ ಅಂತ ನಮಗೆ ಸಂದೇಹ ಬರುವುದಕ್ಕೆ ಶುರುವಾಗುತ್ತದೆ. ಆದ್ದರಿಂದಲೇ ಇತ್ತೀಚಿನ ಉದ್ಯೋಗಾಕಾಂಕ್ಷಿಗಳು (Job seekers) ತಮ್ಮ ನೇಮಕಾತಿದಾರರ (recruitment) ಗಮನವನ್ನು ಸೆಳೆಯುವುದು ಕಷ್ಟವಾಗಬಹುದು ಎಂದು ಅರಿತುಕೊಂಡು, ವಿನೂತನವಾದ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವಿನೂತನ ಶೈಲಿಯ ರೆಸ್ಯೂಮ್
ಒಂದು ವೈರಲ್ ವಿಡಿಯೋದಲ್ಲಿ ಒಬ್ಬರು ತಮ್ಮ ರೆಸ್ಯೂಮ್ ಅನ್ನು ಕಂಪನಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಎಲ್ಲಾ ಕಾರುಗಳ ಮೇಲೆ ತಮ್ಮ ರೆಸ್ಯೂಮ್ ಅನ್ನು ಇರಿಸಿ ಹೋಗಿದ್ದನ್ನು ನಾವು ನೋಡಿದ್ದೆವು.  ಇದೆಲ್ಲಾ ಕಸರತ್ತು ಮಾಡುವುದು ತಮ್ಮ ರೆಸ್ಯೂಮ್ ಕಂಪನಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಗಮನಕ್ಕೆ ಬರಲಿ ಅಂತ ಮಾಡುತ್ತಾರೆ. ಇಲ್ಲಿಯೂ ಒಬ್ಬ ಟ್ವಿಟರ್ ಬಳಕೆದಾರ ಅಮನ್ ಖಂಡೇಲ್ವಾಲ್ ಅವರು ಇಂತಹದೇ ಒಂದು ವಿನೂತನವಾಗಿ ತಮ್ಮ ರೆಸ್ಯೂಮ್ ಅನ್ನು ಕಳುಹಿಸಿದ್ದಾರೆ ನೋಡಿ ಮತ್ತು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪೇಸ್ಟ್ರಿ ಪೆಟ್ಟಿಗೆಯಲ್ಲಿ ರೆಸ್ಯೂಮ್ ಕಳುಹಿಸಿದ ವ್ಯಕ್ತಿ
ಖಂಡೇಲ್ವಾಲ್ ಅವರು ಜೊಮ್ಯಾಟೋ ಸಮವಸ್ತ್ರ ಧರಿಸಿ ಪೇಸ್ಟ್ರಿಗಳ ಬಾಕ್ಸ್ ಅನ್ನು ಹಿಡಿದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಜೋಮ್ಯಾಟೊ ಡೆಲಿವರಿ ಹುಡುಗನ ವೇಷ ಧರಿಸಿ ನನ್ನ ರೆಸ್ಯೂಮ್ ಅನ್ನು ಪೇಸ್ಟ್ರಿ ಪೆಟ್ಟಿಗೆಯಲ್ಲಿ ತಲುಪಿಸಿದೆ. ಅದನ್ನು ಬೆಂಗಳೂರಿನ ಸ್ಟಾರ್ಟ್ ಅಪ್ ಗಳ ಒಂದು ಗುಂಪಿಗೆ ತಲುಪಿಸಲಾಯಿತು" ಎಂದು ಖಂಡೇಲ್ವಾಲ್ ಟ್ವೀಟ್ ಮಾಡಿದ್ದಾರೆ. ಈ ಬಾಕ್ಸ್ ನಲ್ಲಿ "ಹೆಚ್ಚಿನ ರೆಸ್ಯೂಮ್ ಗಳು ಕಸದ ಬುಟ್ಟಿಗೆ ಹೋಗುತ್ತವೆ, ಆದರೆ ನನ್ನ ರೆಸ್ಯೂಮ್ ನಿಮ್ಮ ಹೊಟ್ಟೆಯಲ್ಲಿ ಸೇರಲಿ" ಅಂತ ಬರೆದು ಕಳುಹಿಸಿದ್ದಾರೆ.

ಇದನ್ನೂ ಓದಿ: Bride Entry: ಮಂಟಪಕ್ಕೆ ಕಾಲಿಡುತ್ತಲೇ ವರನ ನೋಡಿ ಜೋರಾಗಿ ಅತ್ತ ವಧು! ವಿಡಿಯೋ ವೈರಲ್

ಖಂಡೇಲ್ವಾಲ್ ಅವರು ಉತ್ತಮ ಸಂಸ್ಥೆಯೊಂದರಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಪಾತ್ರವನ್ನು ಹುಡುಕುತ್ತಿದ್ದಾರೆ ಎಂದು ಕಾಮೆಂಟ್ಸ್ ವಿಭಾಗದಲ್ಲಿ ಹೇಳಿದರು. ಅವರ ಲಿಂಕ್ಡ್ಇನ್ ಪ್ರೊಫೈಲ್ ಅವರು ಮಹತ್ವಾಕಾಂಕ್ಷಿ ಉತ್ಪನ್ನ ವ್ಯವಸ್ಥಾಪಕರಾಗಿದ್ದಾರೆ ಮತ್ತು ಪುಣೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ (ಐಎಂಡಿಆರ್) ನಿಂದ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ ಎಂದು ಹೇಳುತ್ತದೆ.

ಈ ಪ್ರಯೋಗಕ್ಕೆ ಜೊಮ್ಯಾಟೋ ಹೇಳಿದ್ದೇನು ನೋಡಿ
ಆದಾಗ್ಯೂ, ಖಂಡೇಲ್ವಾಲ್ ಅವರ ಟ್ವೀಟ್ ಜೊಮ್ಯಾಟೋವನ್ನು ಮೆಚ್ಚಿಸಲಿಲ್ಲ ಮತ್ತು ಅದು "ಈ ಯೋಚನೆ ಅಷ್ಟೊಂದು ಚೆನ್ನಾಗಿಲ್ಲ” ಎಂದು ಹೇಳಿದೆ. "ಹೇ ಅಮನ್, ನಿಮ್ಮ ಕೆಲಸ ಹುಡುಕುವ ಯೋಚನೆ ಅರ್ಥಪೂರ್ಣವಾಗಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದನ್ನು ಕಾರ್ಯಗತಗೊಳಿಸುವಿಕೆಗಾಗಿ ಈ ರೀತಿ ಮಾಡಿದ್ದು ಮತ್ತು ಅಲ್ಲಿ ನೀವು ಬರೆದ ಸಾಲುಗಳು ಅಷ್ಟೊಂದು ಚೆನ್ನಾಗಿಲ್ಲ" ಎಂದು ಕಾಮೆಂಟ್ಸ್ ವಿಭಾಗದಲ್ಲಿ ಜೋಮ್ಯಾಟೊ ಪ್ರತಿಕ್ರಿಯಿಸಿದೆ.ಆದರೆ ಡಿಜಿಟಲ್ ಗುರುಕುಲ ಮೆಟಾವರ್ಸಿಟಿ ಎಂಬ ಹೆಸರಿನ ಮ್ಯಾನೇಜ್ಮೆಂಟ್ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುವ ಆನ್ಲೈನ್ ಪ್ಲಾಟ್ಫಾರ್ಮ್ ಅವರು ಖಂಡೇಲ್ವಾಲ್ ಅವರ ಈ "ಮಾರ್ಕೆಟಿಂಗ್ ಕೌಶಲ್ಯ" ದಿಂದ ತುಂಬಾನೇ ಪ್ರಭಾವಿತರಾದರು ಮತ್ತು ತಕ್ಷಣವೇ ಅವರಿಗೆ ಇಂಟರ್ನ್ಶಿಪ್ ಅನ್ನು ನೀಡಿತು.

ಡಿಜಿಟಲ್ ಗುರುಕುಲ ಮೆಟಾವರ್ಸಿಟಿ ಟ್ವೀಟ್
"ನಿಮ್ಮ ಮಾರ್ಕೆಟಿಂಗ್ ಕೌಶಲ್ಯವನ್ನು ನೋಡಿ ನಾವು "ಡಿಜಿಟಲ್ ಸ್ಟಾರ್ಟ್ ಅಪ್" ನಲ್ಲಿ ನಮ್ಮ ಫ್ಲ್ಯಾಗ್ ಶಿಪ್ ಪ್ರೋಗ್ರಾಂ ಅನ್ನು ಇಂಟರ್ನ್ಶಿಪ್ ನೊಂದಿಗೆ ಉಚಿತವಾಗಿ ನೀಡಲು ಬಯಸುತ್ತೇವೆ. ಇದು ಖಂಡಿತವಾಗಿಯೂ ನಿಮ್ಮ ಮುಂದಿನ ವೃತ್ತಿಜೀವನಕ್ಕೆ ಒಂದು ಪರಿಪೂರ್ಣವಾದ ಆಕಾರವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಡಿಜಿಟಲ್ ಗುರುಕುಲ ಮೆಟಾವರ್ಸಿಟಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Father Cries: ಪ್ರತಿದಿನ ಮಗನಿಗೆ 1 ಗಂಟೆ ಟ್ಯೂಶನ್ ಕೊಟ್ಟ ತಂದೆ, ಮಾರ್ಕ್​ ಕಾರ್ಡ್​ ಬಂದಾಗ ಕಣ್ಣೀರಿಟ್ಟರು

ಖಂಡೇಲ್ವಾಲ್ ಅವರ ಟ್ವೀಟ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವರು ಅವನ ಈ ವರ್ತನೆಯಿಂದ ಪ್ರಭಾವಿತರಾದರೆ, ಇತರರು ಇದು ಸರಿಯಾದ ಮಾರ್ಗವಲ್ಲ ಎಂದು ಸೂಚಿಸಿದರು.
Published by:Ashwini Prabhu
First published: