Love for Kannada: ಅವರು ಮೂಲತಃ ಜಪಾನ್ ದೇಶದವರು (Citizen of Japan). ಓದು ಅರಸಿ ಬಂದವರೀಗ ಕನ್ನಡ ಎಂದರೆ ನಮ್ಮ ಸಂಗಡ ಎನ್ನುತ್ತಿದ್ದಾರೆ. ಇವರ ಕನ್ನಡಾಭಿಮಾನ ನಿಜಕ್ಕೂ ಸ್ಫೂರ್ತಿ. ದೇಶದ ಗಡಿಗೂ ಮೀರಿ ಮೋಡಿ ಮಾಡಿರುವ ಕನ್ನಡ ಎಂದರೆ ಇವರಿಗೆ ಅದೆಲ್ಲಲ್ಲಿದ ಪ್ರೇಮ. ಓ ಕರ್ನಾಟಕ ಹೃದಯ ಶಿವ.. ಮೆಗುಮಿ ಬದುಕಲ್ಲೀಗ ಕನ್ನಡ ಕಲರವ...ಇವರ ಹೆಸರು ಮೆಗುಮಿ. ಮೂಲತಃ ಜಪಾನ್ ದೇಶದವರು. ಹತ್ತು ವರ್ಷಗಳ ಹಿಂದೆ ಓದು ನಿಮಿತ್ತ ರಾಜಧಾನಿ ಬೆಂಗಳೂರಿಗೆ (Education) ಬಂದಿದ್ದ ಮೆಗುಮಿ ಕನ್ನಡ ಪ್ರೇಮ ನಿಜಕ್ಕೂ ಅಧ್ಬುತ. ನಗರದ ಚಿತ್ರಕಲಾ ಪರಿಷತ್ (Karnataka Chitrakala Parishath) ನಲ್ಲಿ ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಜಪಾನ್ ನಿಂದ ಬಂದ ಮೆಗುಮಿ ಈಗ ಕನ್ನಡದ ಮಗಳು ನಾನೆಂದು ಬೀಗಿ ಹೇಳುತ್ತಿದ್ದಾರೆ. ಚಿತ್ರಕಲಾ ಪರಿಷತ್ ನಲ್ಲಿ ಓದಿನ ವೇಳೆ ಪರಿಚಯವಾದ ಗೆಳಯ ದೀಪಕ್ ಜೊತೆಗಿನ ಪ್ರೀತಿಯ ನಂಟು ಇಬ್ಬರನ್ನೂ ಸಪ್ತಪದಿ ತುಳಿಯುವಂತೆ ಮಾಡಿತು. ಬರೋಬ್ಬರಿ ಹತ್ತು ವರ್ಷದ ಈ ಸಂಸಾರದ ಬಂಡಿಗೆ ಮೂರು ಮಕ್ಕಳು (3 children) ಸಾಕ್ಷಿಯೀಗ. ದೀಪಕ್ ಜೊತೆಗಿನ ಒಡನಾಟದಿಂದ ಕನ್ನಡ ಕಲಿತ ಮೆಗುಮಿಗೆ ಕನ್ನಡ ಪ್ರೇಮ ಹುಟ್ಟಿದ್ದೇ ಒಂದು ರೋಚಕ ಕತೆ.
ಹತ್ತು ವರ್ಷದ ಕನ್ನಡದ ನಂಟು.. ಮೆಗುಮಿಗೆ ಕನ್ನಡವೆಂದರೆ ಪಂಚಪ್ರಾಣ.!!
ಜಪಾನ್ ನ ಟೋಕಿಯೋದಲ್ಲಿ ಕೇರಳ ಮೂಲದವರೊಬ್ಬರ ರೆಸ್ಟೋರೆಂಟ್ ವೊಂದರಲ್ಲಿ ಮೊದ ಮೊದಲಿಗೆ ಕನ್ನಡ, ಕಸ್ತೂರಿಯಂತೆ ಮೆಗುಮಿಗೆ ಕಂಡಿದ್ದು. ಆ ರೆಸ್ಟೋರೆಂಟ್ ನಲ್ಲಿ ಮಂಗಳೂರಿಗರು ಕೆಲಸಕ್ಕಿದ್ದರು. ಅವರ ಮಾತು ಮೆಗುಮಿಗೆ ಕನ್ನಡದ ಒಲವಿಗೆ ಸೇತುವಾಯಿತು. ಅಲ್ಲಿಂದ ಶುರುವಾದ ಕನ್ನಡದ ಮೇಲಿನ ಪ್ರೀತಿ ಉನ್ನತ ಶಿಕ್ಷಣವನ್ನು ಕರ್ನಾಟಕದಲ್ಲಿ ಮಾಡುವಂತೆ ಪ್ರೇರೇಪಿಸಿತು. ಹಾಗೆ ಹುಟ್ಟಿದ ಕನ್ನಡ ಪ್ರೇಮ ದೀಪಕ್ ಎಂಬ ಕನ್ನಡದ ಹುಡುಗನ ಜೊತೆಗೆ ಬದುಕು ಕಟ್ಟಿಕೊಳ್ಳುವಂತೆ ಮಾಡಿತು.
ಪುನೀತ್ ಕಂಡು ಕ್ಲೀನ್ ಬೋಲ್ಡ್ ಆಗಿದ್ದ ಮೆಗುಮಿ
ಕನ್ನಡ ಪ್ರೇಮಿ ಮೆಗುಮಿ ಹಾಗೂ ದೀಪಕ್ ದಂಪತಿಗಳಿಗೆ ಒಟ್ಟು ಮೂರು ಮಕ್ಕಳು. ದೀಪಿಕಾ, ಮೋಕ್ಷಿತ್ ಮತ್ತು ಮಯೂರ. ಹಿಂದೊಮ್ಮೆ ಮೂರನೇ ಮಗ ಹೊಟ್ಟೆಯೊಳಗಿದ್ದಾಗ ಗರ್ಭಿಣಿ ಮಗುಮಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಭೇಟಿಯಾಗಿದ್ದರಂತೆ. ಆಗ ಪುನೀತ್ ಮಾತು ಹಾಗೂ ಸಭ್ಯತೆ ಕಂಡು ಬೆರಗಾಗಿ ಅವರ ಮೇಲಿನ ಅಭಿಮಾನಕ್ಕೆ ಅಣ್ಣಾವ್ರ ಮಯೂರ ಸಿನೆಮಾದ ಹೆಸರನ್ನೇ ತನ್ನ ಮಗನಿಗೂ ಇಟ್ಟು ಬಿಟ್ಟರು.
ಇದನ್ನೂ ಓದಿ: Puneeth Rajkumar: ಆ ಕಾರ್ಯಕ್ರಮದಲ್ಲಿ Jeff Bezos ಇದ್ರೂ ಅಪ್ಪು ಮಾತ್ರ ಇನ್ಯಾರನ್ನೋ ಹುಡುಕ್ತಾ ಇದ್ರಂತೆ, ಯಾರದು?
ಈಕೆಯದ್ದು ಅಚ್ಚ ಕನ್ನಡದ ಉಚ್ಛಾರ
ಕನ್ನಡಕ್ಕೆ ಇಂಗ್ಲೀಷ್ ಬೆರೆಸಿ ಕಂಗ್ಲೀಷ್ ಮಾತನಾಡು ಕನ್ನಡಗಿರ ನಡುವೆ ಗೊತ್ತು ಗುರಿಯಿಲ್ಲದೆ ಕಲಿತ ಭಾಷೆಯೊಂದನ್ನು ಮೆಗುಮಿ ಜೀವದಷ್ಟೇ ಪ್ರೀತಿಸುತ್ತಿದ್ದಾರೆ. ಅಪ್ಪಟ ಕನ್ನಡತಿಯೆಂತೆ ವೇಷ ಧರಿಸುವ ಮೆಗುಮಿಯ ಕನ್ನಡವೂ ಅಷ್ಟೇ ಸೊಗಸು. ತಮ್ಮ ಮಕ್ಕಳಿಗೂ ಕನ್ನಡ ಭಾಷೆಯನ್ನೇ ಕಲಿಸುವ ಇರಾದೆಯಂತೆ ಮೆಗುಮಿ ಮನೆಯಲ್ಲಿ ಮಕ್ಕಳಿಗೆ ಕನ್ನಡ ಹಾಡು, ಪದಮಾಲೆಗಳನ್ನೆಲ್ಲ ಬೋಧಿಸುತ್ತಾರೆ.
ಇದನ್ನೂ ಓದಿ: Puneeth Rajkumar: ನವೆಂಬರ್ 1ರಂದು ಅಪ್ಪು ಘೋಷಣೆ ಮಾಡೋಕೆ ಹೊರಟಿದ್ದೇನು? ಅವರ ಕೊನೆಯ ಪೋಸ್ಟ್ ಹಿಂದಿನ ಕತೆ
ಒಟ್ಟಾರೆ ಕನ್ನಡ ಎಂದರೆ ನಮ್ಮ ಸಂಗಡ ಎನ್ನುತ್ತಿರುವ ಮೆಗುಮಿ ಎಂಬ ಈ ಜಪಾನಿ ಮಹಿಳೆಯ ಕನ್ನಡ ಪ್ರೇಮ ನಿಜಕ್ಕೂ ಹಲವರಿಗಿಲ್ಲಿ ಸ್ಫೂರ್ತಿ. ಜಪಾನಿ ಜೊತೆ ಕನ್ನಡದ ಕಸ್ತೂರಿ ತುಂಬಿರುವ ಮೆಗುಮಿ ಹೃದಯ ಕನ್ನಡಕ್ಕಾಗಿ ಮಿಡಿಯುತ್ತಿದೆ. ಕನ್ನಡದ ಜೊತೆಗಿನ ಹತ್ತು ವರ್ಷದ ಒಡನಾಟ ಈಗ ಮೆಗುಮಿಯನ್ನು ಕನ್ನಡದಲ್ಲೇ ಬದುಕುವಂತೆ ಮಾಡಿದ್ದು ವಿಶೇಷ. ಮೆಗುಮಿಯ ಕನ್ನಡ ಪ್ರೇಮಕ್ಕೆ ನಮ್ಮದೊಂದು ಸಲಾಂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ