ಕೆಲವರಿಗೆ ಪ್ರಾಣಿಗಳೇ(Animals) ಪ್ರಪಂಚ. ಅವಗಳ ಲಾಲನೆ-ಪಾಲನೆ, ಅವುಗಳ ಮೇಲಿಟ್ಟಿರುವ ಪೀತಿಯನ್ನು(Love) ವ್ಯಕ್ತಪಡಿಸಲು ಸಾಧ್ಯವಿರುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನಗಿರುವ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವಿಶೇಷವಾಗಿ ಹೊರಹಾಕಿದ್ದಾರೆ. ಜಪಾನಿನ ವ್ಯಕ್ತಿಯೊಬ್ಬರಿಗೆ(Japan Man) ನಾಯಿ ಜಾತಿಗೆ ಸೇರಿದ, ಕೋರೆಹಲ್ಲಿರುವ, ನಸುಕಂದು ಬಣ್ಣದಲ್ಲಿರುವ ತೋಳಗಳು(Wolf) ಎಂದರೆ ಅಚ್ಚುಮೆಚ್ಚಂತೆ. ಹೀಗಾಗಿ ತೋಳವನ್ನೇ ಹೋಲುವ ಹಾಗೆ ತಮ್ಮನ್ನು ತಾವು ವಿಶೇಷವಾಗಿ ಮರುರೂಪಿಸಿಕೊಂಡಿದ್ದಾರೆ, ಹೇಗೆ ಅಂತೀರಾ ಮುಂದೆ ಓದಿ.
ತೋಳದಂತೆ ಕಾಣುವ ಹೆಬ್ಬಯಕೆ ಈ ಜಪಾನಿ ವ್ಯಕ್ತಿಗೆ
ಜಪಾನಿನ ವ್ಯಕ್ತಿಯೊಬ್ಬರಿಗೆ ಈ ತೋಳುಗಳು ಎಂದರೆ ಪ್ರೀತಿಯಂತೆ. ಅವರ ತೋಳದ ಮೇಲಿನ ಪ್ರೀತಿಯು ತಾನು ಸಹ ಅದರಂತೆ ಕಾಣುವ ಹಾಗೆ ಬದಲಾಗಲು ಪ್ರೇರೇಪಿಸಿತು. ಅದಕ್ಕಾಗಿ ಜಪಾನಿನ ಈ ವ್ಯಕ್ತಿ ಲಕ್ಷ-ಲಕ್ಷ ವ್ಯಯ ಮಾಡಿ ತೋಳದಂತೆ ಕಾಣುವ ಬಟ್ಟೆಯನ್ನು ಸಿದ್ಧ ಪಡಿಸಿಕೊಂಡಿದ್ದಾನೆ.
ತೋಳದ ಕಾಸ್ಟ್ಯೂಮ್ಗೆ ರೂ. 18.5 ಲಕ್ಷ ವ್ಯಯ
ಹಿಂಗಾಲುಗಳ ಮೇಲೆ ನಡೆಯುವ ನಿಜವಾದ ತೋಳದಂತೆ ಕಾಣುವಂತೆ ರೂಪಾಂತರಗೊಳ್ಳಲು ಹೆಸರು ಹೇಳಲು ಇಚ್ಛಿಸದ ಜಪಾನಿನ ವ್ಯಕ್ತಿ ಝೆಪ್ಪೆಟ್ ಎಂಬ ಕಂಪನಿಯ ಮೊರೆ ಹೋದರು.
ಇದನ್ನೂ ಓದಿ: Surprise: ವಧುವಿನ ಮುಂದೆ ಆಕೆಯ ಚಿತ್ರ ಬಿಡಿಸಿ ಭೇಷ್ ಎನಿಸಿಕೊಂಡ ವರ; ನೀವು ನೆಕ್ಸ್ಟ್ ಲೆವೆಲ್ ಎಂದು ಕೊಂಡಾಡಿದ ನೆಟ್ಟಿಗರು
ತೋಳದಂತೆ ಕಾಣುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ ಅವರು ತೋಳವನ್ನು ಹೋಲುವ ಕಸ್ಟ್ಮೈಸ್ಡ್ ಬಟ್ಟೆಯನ್ನು ಸಿದ್ಧ ಮಾಡಿಕೊಡುವಂತೆ ಕೇಳಿಕೊಂಡರು. ಹೀಗೆ ಆ ವ್ಯಕ್ತಿ ಬರೋಬ್ಬರಿ ರೂ. 18.5 ಲಕ್ಷಗಳು (3,000,000 ಯೆನ್) ಖರ್ಚು ಮಾಡಿ ತೋಳವನ್ನು ಹೋಲುವ ಕಾಸ್ಟ್ಯೂಮ್ ತಯಾರಿಸಿಕೊಂಡಿದ್ದಾರೆ.
ನನಸಾಯ್ತು ಬಾಲ್ಯದ ಕನಸು
ಈ ಬಗ್ಗೆ ಮಾತನಾಡಿದ ತೋಳ ಪ್ರಿಯ "ನನಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಟಿವಿಯಲ್ಲಿ ನೈಜ ಪ್ರಾಣಿಗಳ ಸೂಟ್ಗಳನ್ನು ನೋಡಿದಾಗಲೆಲ್ಲಾ ನಾನು ಒಮ್ಮೆ ಹೀಗೆ ಒಂದು ದಿನ ಕಾಣಿಸಿಕೊಳ್ಳಬೇಕು ಎಂದು ಕನಸು ಕಂಡಿದ್ದೆ.
ಪ್ರಸ್ತುತ ಆ ಕನಸು ಈಡೇರಿದ್ದು, ತೋಳವನ್ನೇ ಹೋಲುವ ಬಟ್ಟೆಯನ್ನು ಝೆಪ್ಪೆಟ್ ಕಂಪನಿ ತಯಾರು ಮಾಡಿಕೊಟ್ಟಿದೆ" ಎಂದು ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಐವತ್ತು ದಿನಗಳಲ್ಲಿ ತೋಳದ ಉಡುಪು ರೆಡಿ
ವ್ಯಕ್ತಿ, ತನ್ನ ಡ್ರೆಸ್ ರೆಡಿಯಾಗುವವರೆಗೂ ಹಲವಾರು ಬಾರಿ ಸ್ಟುಡಿಯೋಗೆ ಭೇಟಿ ನೀಡಿದ್ದರಂತೆ. ಝೆಪ್ಪೆಟ್ ಈ ಬಗ್ಗೆ ಮಾತನಾಡಿ ಹಲವು ಬಾರಿ ಈ ಕಾಸ್ಟ್ಯೂಮ್ ತಯಾರಿಸಲು ತೋಳ ವೀಕ್ಷಣೆಗೆ ಸಹ ಹೋಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಹೀಗೆ ಸುಮಾರು ಈ ಉಡುಪನ್ನು ತಯಾರು ಮಾಡಲು ಐವತ್ತು ದಿನಗಳನ್ನು ತೆಗೆದುಕೊಂಡ ಕಂಪನಿ ವಿಶೇಷವಾಗಿ ತನ್ನ ಗ್ರಾಹಕರಿಗೆ ಥೇಟ್ ತೋಳವನ್ನೇ ಹೋಲುವ ಬಟ್ಟೆ ಸಿದ್ಧ ಮಾಡಿಕೊಟ್ಟಿದೆ.
"ಝೆಪ್ಪೆಟ್ ಅತ್ಯುತ್ತಮವಾಗಿ ಡ್ರೆಸ್ ಅನ್ನು ಸಿದ್ಧ ಮಾಡಿದೆ"
ಅಂತಿಮವಾಗಿ ಝೆಪ್ಪೆಟ್ ತಯಾರಿಸಿದ ಉಡುಪನ್ನು ಹಾಕಿ ನೋಡಿದ ತೋಳ ಪ್ರಿಯ ಜಪಾನಿನ ವ್ಯಕ್ತಿ, ನಾನು ಅಂದುಕೊಂಡ ಹಾಗೇ ಈ ಬಟ್ಟೆ ಬಂದಿದೆ. ಅಂತೂ ತನ್ನ ಬಾಲ್ಯದ ಕನಸು ನಿಜವಾಗಿದೆ.
ಕನ್ನಡಿಯಲ್ಲಿ ನನಗೇ ನನ್ನನ್ನು ನೋಡಿಕೊಂಡು ಆಶ್ಚರ್ಯವಾಯಿತು. ನಿಜಕ್ಕೂ ಕಂಪನಿಗೆ ನಾನು ನೀಡಿದ ಆರ್ಡರ್ ಹುಚ್ಚುತನವಾಗಿತ್ತು ಆದರೂ ಸಹ ಅವರು ಅತ್ಯಂತ ಕಾಳಜಿವಹಿಸಿ ನನ್ನಿಷ್ಟದ ಉಡುಗೆಯನ್ನು ಪರಿಪೂರ್ಣವಾಗಿ ಸಿದ್ಧ ಪಡಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಇನ್ನೂ ಜಪಾನಿನ ಆ ವ್ಯಕ್ತಿಗೆ ತೋಳದ ಡ್ರೆಸ್ ಹಾಕಿಕೊಳ್ಳಲು ಸುಲಭವಾಗುವಂತೆ ಡಿಸೈನರ್ ಕಂಪನಿ ಸೈಡ್ ಸ್ಲಿಟ್ ಅನ್ನು ಸಹ ಇಟ್ಟಿದೆ.
ಇದನ್ನೂ ಓದಿ: Wedding Vibe: ಹೆಂಡತಿಯನ್ನು ಎತ್ತಲಾಗದೇ ಗಂಡನ ಫಜೀತಿ! ಮದ್ವೆ ಮಂಟಪದ ಮುಗ್ಗರಿಸಿ ಬಿದ್ದ ನವ ದಂಪತಿ!
ನಾಯಿಯ ಉಡುಪನ್ನು ತಯಾರಿಸಿದ್ದ ಝೆಪ್ಪೆಟ್
ಝೆಪ್ಪೆಟ್ ಕಂಪನಿ ನಾಯಿಜಾತಿಗೆ ಸೇರಿದ, ನಸುಕಂದು ಬಣ್ಣ ಹೊಂದಿರುವ ತೋಳದ ವೇಷಭೂಷಣವನ್ನು ವಿನ್ಯಾಸಗೊಳಿಸಿದ್ದು ಇದೇ ಮೊದಲಲ್ಲ. ಈ ಹಿಂದೆ, ಕಂಪನಿ ಟೋಕೊ ಎಂಬ ವ್ಯಕ್ತಿಗೆ ನಾಯಿಯಂತೆ ಕಾಣುವ ಉಡುಪನ್ನು ರೆಡಿ ಮಾಡಿದ್ದರು. ಇದಕ್ಕಾಗಿ ಕಂಪನಿ 12 ಲಕ್ಷ ರೂಗಳನ್ನು ತೆಗೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ