Coffee Painting: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ಕಾಫಿ! ಏನಿದರ ಅಸಲಿ ಕಥೆ?

ಇತ್ತೀಚೆಗೆ ಆನ್‌ಲೈನ್‌ನಲ್ಲಿ (Online) ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್‌ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಂತ ತುಂಬಾನೇ ತಲೆ ಕೆಡಿಸಿಕೊಂಡಿದ್ದರು ಎಂದು ಹೇಳಬಹುದು.

ಕಾಫಿ ಚಿತ್ರ

ಕಾಫಿ ಚಿತ್ರ

  • Share this:
ಈಗಂತೂ ಯಾವುದು ನಿಜವಾದ ಪೇಂಟಿಂಗ್ (Painting) ಮತ್ತು ಯಾವುದು ಕಂಪ್ಯೂಟರ್‌ನಲ್ಲಿ ಗ್ರಾಫಿಕ್ಸ್ (Graphics) ಬಳಸಿಕೊಂಡು ಮಾಡಿದ್ದು ಅಂತ ಬೇಗ ಗೊತ್ತೇ ಆಗುವುದಿಲ್ಲ ನೋಡಿ. ಅದರಲ್ಲೂ ಇಂತಹ ಗೊಂದಲ ಉಂಟಾದಾಗ ನೆಟ್ಟಿಗರು ತಕ್ಷಣವೇ ಅದರ ರಹಸ್ಯವನ್ನು ಬಿಚ್ಚಿಡಲು ಶತ ಪ್ರಯತ್ನಗಳನ್ನು ಮಾಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ (Online) ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್‌ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಂತ ತುಂಬಾನೇ ತಲೆ ಕೆಡಿಸಿಕೊಂಡಿದ್ದರು ಎಂದು ಹೇಳಬಹುದು. ನಿಜವಾಗಿಯೂ ಹೇಳಬೇಕು ಎಂದರೆ ಇದೊಂದು ಛಾಯಾಚಿತ್ರವಲ್ಲ ಎಂದು ನಂಬಲು ತುಂಬಾ ಕಷ್ಟಕರ ಎನಿಸುವಂತಹ ವರ್ಣಚಿತ್ರವಾಗಿತ್ತು.

ಚೆನ್ನೈ ಮೂಲದ ಕಲಾವಿದೆ ಮತ್ತು ಛಾಯಾಗ್ರಾಹಕಿಯಾದ ವರುಣಾ ಶ್ರೀಧರ್ ಅವರು ವಿನಮ್ರ ಫಿಲ್ಟರ್ ಕಾಫಿಯ ವರ್ಣಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದರು ಎಂದು ಹೇಳಲಾಗುತ್ತಿದೆ.

ಏನಿದು ಫೋಟೋ?

ಒಂದು ಸಣ್ಣ ಲೋಟದಲ್ಲಿ ತುಂಬಿದ ಬಿಸಿಯಾದ ಕಾಫಿಯನ್ನು, ಅದನ್ನು ತಂಪಾಗಿಸಿಕೊಳ್ಳಲು ಕೆಳಗಡೆ ಒಂದು ಚಿಕ್ಕ ತಟ್ಟೆಯಂತಿರುವುದನ್ನು ನಾವು ಈ ಫೋಟೋದಲ್ಲಿ ನೋಡಬಹುದಾಗಿದೆ.

ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ್ದಾರಾ?

ಕಾಫಿಯ ಹತ್ತಿರ ಸ್ಥಳೀಯ ಭಾಷೆಯ ವೃತ್ತ ಪತ್ರಿಕೆಯನ್ನು ಇರಿಸಿದ್ದು, ಯಾರಾದರೂ ದೂರದಿಂದ ನೋಡಿದರೆ ಇದೊಂದು ನೈಜವಾದ ಫೋಟೋ ಅಂತೆಯೇ ಕಾಣುತ್ತದೆ. ಆದರೆ ತುಂಬಾ ಹತ್ತಿರದಿಂದ ಇದನ್ನು ನೋಡಿದಾಗ ಉತ್ತಮ ಕ್ಯಾಮೆರಾದಿಂದ ಸೆರೆ ಹಿಡಿಯಲಾದ ಛಾಯಾಚಿತ್ರದಂತೆ ಕಾಣುತ್ತದೆ. ಮರದ ಮೇಜಿನ ಮೇಲಿದ್ದ ಚದುರಿದ ಕಾಫಿ ಬೀಜಗಳು ಸಹ ನಿಜವಾದವುಗಳನ್ನು ಹೋಲುತ್ತಿವೆ ಮತ್ತು ಅವುಗಳನ್ನು ಚಿತ್ರಿಸಿದಂತೆ ಕಾಣಿಸುತ್ತಿಲ್ಲ.

ಫಿಲ್ಟರ್ ಕಾಫಿ ಫೊಟೊ

ಅನೇಕರು ಅಪನಂಬಿಕೆಯಲ್ಲಿ ಉಳಿದಂತೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಸರಳವಾದ ಫಿಲ್ಟರ್ ಕಾಫಿ ಫೋಟೋ ಏಕೆ ಅಷ್ಟೊಂದು ಗಮನ ಸೆಳೆಯುತ್ತಿದೆ ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದಂತೆ, ಯುವ ಕಲಾವಿದೆ ಗಮನಾರ್ಹ ವರ್ಣಚಿತ್ರವನ್ನು ತಾನು ಹೇಗೆ ಬಿಡಿಸಿದೆ ಎಂಬುದನ್ನು ಸಹ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು.

21 ವರ್ಷದ ಕಲಾವಿದೆ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡುತ್ತಾ “ನಾನು ಬಾಲ್ಯದಿಂದಲೂ ಚಿತ್ರಗಳನ್ನು ಬಿಡಿಸುತ್ತಿದ್ದೆ, ನಾನು ಎರಡು ವರ್ಷದವನಿದ್ದಾಗ ಚಿತ್ರ ಬಿಡಿಸುವುದನ್ನು ಶುರು ಮಾಡಿದೆ ಮತ್ತು ನಾಲ್ಕನೇ ವಯಸ್ಸಿನಲ್ಲಿ ನನ್ನ ಮೊದಲ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಕಲಾವಿದೆ ಈಗಾಗಲೇ ಒಂದು ಡಜನ್‌ಗಿಂತ ಹೆಚ್ಚು ಚಿತ್ರಕಲಾ ಪ್ರದರ್ಶನಗಳನ್ನು ಹೊಂದಿದ್ದರೂ ಸಹ, ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವುದು ಹೊಸ ಅನುಭವದಂತೆ ಕಾಣುತ್ತದೆ. "ನಾನು ಫಿಲ್ಟರ್ ಕಾಫಿ ಪೇಂಟಿಂಗ್ ಮಾಡಿದಾಗ, ಅದು ಇಷ್ಟೊಂದು ವೈರಲ್ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ” ಎಂದು ಹೇಳಿದರು.

ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ಸಂಕೀರ್ಣ ವಿವರಗಳ ಬಗ್ಗೆ ಮಾತನಾಡಿದ ಅವರು, "ನನ್ನ ಕಲೆಯಲ್ಲಿ ಇಂಪ್ರೆಷನಿಸಮ್‌ನೊಂದಿಗೆ ಹೈಪರ್‌ ರಿಯಲಿಸಂ ಅನ್ನು ಅಳವಡಿಸಿಕೊಳ್ಳಲು ನಾನು ಬಯಸುತ್ತೇನೆ, ಅದಕ್ಕಾಗಿಯೇ ಈ ವರ್ಣಚಿತ್ರದಲ್ಲಿ ವಿನ್ಯಾಸವನ್ನು ಹೀಗೆ ಚಿತ್ರಿಸಿದ್ದೇನೆ” ಎಂದು ವಿವರಿಸಿದರು.

ಇದನ್ನೂ ಓದಿ: Nalli Silk Sarees: ದರ್ಬಾರ್ ಬಾರ್ಡರ್, ಹನಿಮೂನ್ ಬಾರ್ಡರ್ ಫುಲ್ ಫೇಮಸ್; ’ನಲ್ಲಿ‘ ಸಿಲ್ಕ್ ಸೀರೆ ಹಿಂದಿನ ಕಥೆ

ಮೊದಲ ನೋಟದಲ್ಲಿ ಅನೇಕರು ಅವಳ ವರ್ಣಚಿತ್ರವನ್ನು ಛಾಯಾಚಿತ್ರ ಎಂದು ತಪ್ಪಾಗಿ ಭಾವಿಸಿದ್ದರಿಂದ, ವರುಣಾ ಅವರು ತಾನು ಅದನ್ನೇ ಗುರಿಯಾಗಿಸಿಕೊಂಡಿದ್ದೇನೆ ಎಂದು ಹೇಳಿದರು. "ಅದನ್ನು ಯಾರೇ ನೋಡಿದರೂ ಅವರಿಗೆ ಮೊದಲು ಒಂದು ಛಾಯಾಚಿತ್ರದಂತೆಯೇ ಕಾಣಬೇಕು. ಇದು ಉದ್ದೇಶಪೂರ್ವಕವಾಗಿತ್ತು, ಆದರೆ ನಿಜವಾಗಿಯೂ ನಾನು ಆನ್‌ಲೈನ್‌ನಲ್ಲಿ ನೋಡುಗರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿಲ್ಲ" ಎಂದು ಅವರು ತಮಗೆ ಬಂದ ಕೆಲವು ದ್ವೇಷದ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು.

ವಿಡಿಯೋಗೆ 58,000ಕ್ಕೂ ಹೆಚ್ಚು ಲೈಕ್

"ನನ್ನ ಉದ್ದೇಶ ಛಾಯಾಚಿತ್ರವನ್ನು ಪುನರಾವರ್ತಿಸುವುದು ಅಲ್ಲ. ಅದಕ್ಕಾಗಿ ಕ್ಯಾಮೆರಾಗಳು ಇವೆ, ನೀವು ತುಂಬಾ ಪ್ರೀತಿಸುವ ಯಾವುದನ್ನಾದರೂ ಹೋಲುವ ವರ್ಣಚಿತ್ರವನ್ನು ರಚಿಸಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು. ಟ್ವಿಟ್ಟರ್‌ನಲ್ಲಿ ಈ ವಿಡಿಯೋಗೆ 58,000ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಸಾವಿರಾರು ಕಾಮೆಂಟ್‌ಗಳು ಬಂದಿರುವ ಪೇಂಟಿಂಗ್ ಅನ್ನು ತೋರಿಸುವ ಟ್ವೀಟ್ ಆನ್‌ಲೈನ್‌ನಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತು. ಕಲಾವಿದೆಯ ಅಪರಿಮಿತ ಪ್ರತಿಭೆ ಮತ್ತು ಕೌಶಲ್ಯಗಳಿಗಾಗಿ ಅನೇಕರು ಅವರನ್ನು ತುಂಬಾನೇ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Shark Video: ಶಾರ್ಕ್ ಏನಾದ್ರೂ ನುಂಗಿದ್ರೆ ಬಾಯಿ ಒಳಗೆ ಹೇಗಿರುತ್ತೆ? ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

"ನೀವು ಹತ್ತಿರದಿಂದ ನೋಡಿದರೆ, ಕೆಲವು ನೊರೆ ಗುಳ್ಳೆಗಳು ಇರುವುದನ್ನು ನೋಡುತ್ತೀರಿ. ಇದು ಎಷ್ಟು ಅದ್ಭುತವಾಗಿದೆ ಮತ್ತು ನೈಜವಾಗಿದೆ” ಎಂದು ಸಾಮಾಜಿಕ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Divya D
First published: