Friendship: ಜೀವಕ್ಕೆ ಜೀವ ಕೊಡ್ತಾರೆ ಇವ್ರು, ಜೀವಕ್ಕಿಂತ ಜಾಸ್ತಿ ಇವರ ಸ್ನೇಹ! ಇಬ್ಬರು ಅಪರೂಪದ ಗೆಳೆಯರ ಕಥೆಯಿದು!

ಪ್ರೀತಿ-ಪ್ರೇಮಕ್ಕಿಂತ ಸ್ನೇಹನೇ ದೊಡ್ಡದು ಎಂದು ಹಲವರು ನಂಬುತ್ತಾರೆ. ಜಗತ್ತಲ್ಲಿ ರಕ್ತಸಂಬಂಧಗಳಲ್ಲದ ಪವಿತ್ರ ಬಂಧವೆಂದರೆ ಸ್ನೇಹ ಎನ್ನಲಾಗುತ್ತದೆ. ಸ್ನೇಹಕ್ಕೆ ಮೌಲ್ಯ, ಬೆಲೆ ಕೊಡುವ ಸಾಕಷ್ಟು ಜನ ಇದ್ದಾರೆ. ಇಂತಹ ಪವಿತ್ರ ಸ್ನೇಹಕ್ಕೆ ಬೆಲೆ ಕೊಡುವ ಇಬ್ಬರು ಅಪರೂಪದ ವ್ಯಕ್ತಿಗಳನ್ನು ನಾವಿಲ್ಲಿ ನೋಡೋಣ.

ಸಾರಾ ಮತ್ತು ಈಟಾನ್

ಸಾರಾ ಮತ್ತು ಈಟಾನ್

  • Share this:
ಪ್ರೀತಿ-ಪ್ರೇಮಕ್ಕಿಂತ ಸ್ನೇಹನೇ (Friendship) ದೊಡ್ಡದು ಎಂದು ಹಲವರು ನಂಬುತ್ತಾರೆ. ಜಗತ್ತಲ್ಲಿ ರಕ್ತಸಂಬಂಧಗಳಲ್ಲದ ಪವಿತ್ರ ಬಂಧವೆಂದರೆ ಸ್ನೇಹ ಎನ್ನಲಾಗುತ್ತದೆ. ಸ್ನೇಹಕ್ಕೆ ಮೌಲ್ಯ, ಬೆಲೆ ಕೊಡುವ ಸಾಕಷ್ಟು ಜನ (People) ಇದ್ದಾರೆ. ಇಂತಹ ಪವಿತ್ರ ಸ್ನೇಹಕ್ಕೆ ಬೆಲೆ ಕೊಡುವ ಇಬ್ಬರು ಅಪರೂಪದ ವ್ಯಕ್ತಿಗಳನ್ನು (rare persons) ನಾವಿಲ್ಲಿ ನೋಡೋಣ. ಸಾರಾ (Sara) ಮತ್ತು ಈಟಾನ್ (Ethan) ಇಬ್ಬರು ಹಲವು ವರ್ಷಗಳಿಂದ ಸ್ನೇಹಿತರು. ಒಬ್ಬರಿಗೊಬ್ಬರು ಹೆಗಲಾಗಿ ಸ್ನೇಹಕ್ಕೆ ಬೆಲೆ ಕೊಡುತ್ತಾರೆ. ಸಾರಾಳಿಗೆ ಮದುವೆ ಇಷ್ಟ ಇಲ್ಲದ ಸಂದರ್ಭದಲ್ಲಿ ಮದುವೆ (marriage) ಹಿಂದಿನ ರಾತ್ರಿ ಸಾರಾಳಿಗೆ ಅಲ್ಲಿಂದ ಓಡಿ ಹೋಗಲು ಹೇಳಿದ್ದರಂತೆ ಈಟಾನ್. ಈ ಸಂದರ್ಭವನ್ನು ನೆನಸಿಕೊಂಡು ತಮ್ಮ ಸ್ನೇಹದ ಬಗ್ಗೆ ಹೇಳಿದ್ದಾರೆ ಮಹಿಳೆ ಸಾರಾ.

ನಾವು ಮದುವೆ ವಾರ್ಷಿಕೋತ್ಸವದಂತಹ ಸಮಾರಂಭಗಳನ್ನು ಮಾತ್ರ ಆಚರಿಸುತ್ತೇವೆ. ಆದರೆ ಏಕೆ ನಾವು ಸ್ನೇಹದ ವಾರ್ಷಿಕೋತ್ಸವಗಳನ್ನು ಆಚರಿಸುವುದಿಲ್ಲ ಎಂದು ಸಾರಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಆಕೆ ನನ್ನ ಸ್ನೇಹಿತರು ನನ್ನ ಜೀವನದ ಯಾವುದೇ ಪ್ರಣಯ ಪಾಲುದಾರರಿಗಿಂತ ಹೆಚ್ಚು ಎಂದು ಹೇಳುತ್ತಾರೆ. ನನ್ನ ಮದುವೆ ಸಂಬಂಧ ಒಂದು ವರ್ಷವೂ ಉಳಿದಿಲ್ಲ ಆದರೆ ನನ್ನ ಪ್ರಾಣ ಸ್ನೇಹಿತನೊಬ್ಬ ನನ್ನ ಜೊತೆ ಇದ್ದಾನೆ, ಅವನ ನನ್ನ ಸ್ನೇಹ 36 ವರ್ಷಗಳಿಂದ ಇದೆ, ನನಗೆ ಇತರೆ ಸಂಬಂಧಗಳಿಗಿಂತ ಸ್ನೇಹದಲ್ಲಿನ ನಂಬಿಕೆಯನ್ನು ಗಟ್ಟಿ ಮಾಡಿದವ ಈತ ಎಂದು ಸಾರಾ 36 ವರ್ಷಗಳಿಂದ ಜೊತೆಗಿರುವ ಈಟಾನ್ ಬಗ್ಗೆ ಹಾಡಿ ಹೊಗಳುತ್ತಾಳೆ.

“16ನೇ ವರ್ಷದಲ್ಲಿ ನಮಿಬ್ಬರ ಭೇಟಿ”
ನಾವು ಭೇಟಿಯಾದಾಗ ಈಟಾನ್ ಮತ್ತು ನಾನು 16 ವರ್ಷ ವಯಸ್ಸಿನವರಾಗಿದ್ದೆವು. ನಾನು ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೆ, ಅವನು ಲಂಡನ್‌ನಲ್ಲಿ ಇದ್ದ. ಹೀಗೆ ಇಬ್ಬರು ಇಸ್ರೇಲಿನಲ್ಲಿ ಬೇಸಿಗೆ ಶಿಬಿರವೊಂದರಲ್ಲಿ ಭಾಗವಹಿಸಿದ್ದೆವು. ಅಲ್ಲಿಂದ ನಮ್ಮ ಪರಿಚಯವಾಗಿ ಸ್ನೇಹ ಬೆಳೆಯಿತು. ಇಲ್ಲಿಂದ ಶುರುವಾದ ನಮ್ಮ ಸ್ನೇಹ ಇನ್ನೂ ಇದೆ. ಬೇಸಿಗೆ ಶಿಬಿರದಿಂದ ದೂರವಾದ ಬಳಿಕ ನಾವು ಅಂಚೆ ಮೂಲಕ ಸಂವಹನ ನಡೆಸುತ್ತಿದ್ದೆವು. ನಮ್ಮ ಪತ್ರಗಳೂ ನಮ್ಮಿಬ್ಬರ ನಡುವಿನ ಸ್ನೇಹಕ್ಕೆ ಸಾಕ್ಷಿಯಾಗಿವೆ ಎಂದಿದ್ದಾರೆ ಸಾರಾ.

ಇದನ್ನೂ ಓದಿ:   Viral Story: ಮಲಮಗನಿಂದ ಗರ್ಭಿಣಿಯಾಗಿ ಮಗು ಪಡೆದ ತಾಯಿ! ಇದು ಕಲಿಗಾಲವಯ್ಯಾ

ನಂತರ ನಾವು ನ್ಯೂಯಾರ್ಕ್‌ನಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸಿಸ ತೊಡಗಿದವು. ನಂತರ ಇಬ್ಬರೂ ಒಟ್ಟಿಗೆ ಭೇಟಿ ಮಾಡಲು, ವಾಕಿಂಗ್ ಹೋಗಲು, ಕೆಫೆ ಅಂತಾ ಎಲ್ಲಾ ಕಡೆ ಸುತ್ತಾಡಿದೆವು. ನಾವು ಸ್ಥಳೀಯ ಕೆಫೆಗೆ ಹೋದರೆ ನಮಗೆ ಏನು ಬೇಕೋ ಅದನ್ನು ಆರ್ಡರ್ ಮಾಡುವ ಅವಶ್ಯಕತೆಯೇ ಇರಲಿಲ್ಲ, ಅಲ್ಲಿನ ಸಿಬ್ಬಂದಿಗೆ ನಮ್ಮ ಬಗ್ಗೆ ಚೆನ್ನಾಗಿ ತಿಳಿದಿತ್ತು, ಅಷ್ಟರ ಮಟ್ಟಿಗೆ ನಾವಿಬ್ಬರು ಕಾಲ ಕಳೆಯುತ್ತಿದ್ದೆವು ಎಂದಿದ್ದಾರೆ ಸಾರಾ.

“ಮದುವೆ ನನಗೆ ಆತಂಕ ತಂದಿತ್ತು”
ಹೀಗೆ ನನಗೆ ಒಬ್ಬ ಹುಡುಗನ ಜೊತೆ ಮದುವೆ ನಿಶ್ಚಯವಾಯಿತು, ಆದರೆ ಮದುವೆ ಇಷ್ಟವಿಲ್ಲದ ನನಗೆ ನಮ್ಮ ಮದುವೆ ಸಮೀಪಿಸುತ್ತಿದ್ದಂತೆ, ಆತಂಕವಾಗುತ್ತಿತ್ತು. ಪ್ರತಿದಿನ ಸಂಜೆ ನಾನು ಈಟಾನ್‌ನ ಅಪಾರ್ಟ್ಮೆಂಟಿಗೆ ಹೋಗಿ ಅಳುತ್ತಿದೆ. ಈಟಾನ್ ಕೂಡ ನನ್ನನ್ನು ಕೇಳುತ್ತಿದ್ದ, "ಸಾರಾ, ನಾನು ನಿನ್ನನ್ನು 16 ವರ್ಷದಿಂದ ನೋಡಿದ್ದೇನೆ, ನಿನ್ನ ಮನಸ್ಸು ನನಗೆ ಅರ್ಥವಾಗುತ್ತದೆ. ಏಕೆ ಇತ್ತಿಚಿನ ದಿನಗಳಲ್ಲಿ ಹೆಚ್ಚು ಅಳುತ್ತಿದ್ದೀಯಾ” ಎಂದು ಕೇಳಿದನು. ನಾನು ಕೂಡ ಮದುವೆಯ ಇಷ್ಟ-ಕಷ್ಟದ ಬಗ್ಗೆ ಹೇಳಿಕೊಂಡೆ. ಆದರೆ ಮದುವೆ ನಡೆದೇ ಹೋಯಿತು ಎನ್ನುತ್ತಾಳೆ ಸಾರಾ.

ಮದುವೆಯ ಹಿಂದಿನ ದಿನವೂ ಓಡಿಹೋಗುವಂತೆ ಸಲಹೆ ನೀಡಿದ್ದ ಈಟಾನ್
ನಮ್ಮ ಮದುವೆ ಹಿಂದಿನ ರಾತ್ರಿ ಸಮಾರಂಭದಲ್ಲಿ ಈಟಾನ್ ನನಗೆ ಮದುವೆ ಇಷ್ಟವಿಲ್ಲದಿದ್ದರೆ ಇಲ್ಲಿಂದ ಹೊರಟು ಬಿಡು. ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದ. ನನ್ನ ಕೈ ಹಿಡಿದು ಹೋಗೋಣ ಎಂದು ಸಹ ಹೇಳಿದ್ದ. ನನ್ನ ಸ್ನೇಹಿತ ನನಗೆ ಅಷ್ಟು ಹೇಳಿದರೂ ನಾನು ಮದುವೆಯಾದೆ. ಆದರೆ ನನ್ನ ಮದುವೆ ಹೆಚ್ಚು ವರ್ಷ ಉಳಿಯಲಿಲ್ಲ, ಆದರೆ ನನ್ನ ಸ್ನೇಹ ಮಾತ್ರ ಇನ್ನೂ ಇದೆ. ಒಂದು ವಾರದ ನಂತರ, ನನ್ನ ಹನಿಮೂನ್‌ನಲ್ಲಿ, ನನ್ನ ಪತಿ ಮತ್ತು ನಾನು ಜಗಳವಾಡಿದ್ದೆವು, ಈ ಜಗಳ ನಮ್ಮಿಬ್ಬರ ಮೊದಲ ಬಿರುಕಾಯಿತು. ಆಗ ನನ್ನ ಸ್ನೇಹಿತನಿಗೆ ನಾನು ಇಮೇಲ್ ಮಾಡಿ "ನೀವು ಹೇಳಿದ್ದು ಸರಿ, ನಾನು ನಿನ್ನ ಮಾತು ಕೇಳಬೇಕಿತ್ತು” ಎಂದು ಈಟಾನ್ ಗೆ ಮೇಲ್ ಮಾಡಿದ್ದರಂತೆ.

ಇದನ್ನೂ ಓದಿ:Two Marriage: ಒಂದಲ್ಲಾ, ಎರಡು ಮದುವೆ ಆಗಲೇಬೇಕು! ಇಲ್ಲಾ ಅಂದ್ರೆ ಈ ದೇಶದಲ್ಲಿ ಜೈಲಿಗೆ ಹಾಕ್ತಾರೆ

ಇದಾದ ಆರು ವರ್ಷಗಳ ನಂತರ ಸಾರಾ ಮತ್ತು ದಂಪತಿ ಬೇರೆಯಾದರು. ವಿಚ್ಛೇದನದ ನಂತರ ಈಟಾನ್ ಮತ್ತು ನಾನು ಇಬ್ಬರೂ ಹತ್ತಿರವಾದೆವು. ಇಷ್ಟು ವರ್ಷಗಳ ನಂತರ, ನನ್ನ ಮದುವೆ ಅಥವಾ ನನ್ನ ಮಾಜಿ ಪತಿಯೊಂದಿಗೆ ದೋಷಾರೋಪಣೆ ಮಾಡಿದ ವರ್ಷಗಳು ನನಗೆ ನೆನಪಿಲ್ಲ. ಉಳಿದುಕೊಂಡಿರುವುದು ಕೇವಲ ಈಟನ್‌ನ ಸ್ನೇಹ. ಪ್ರಸ್ತುತ ನಾನು ಏನು ಮಾಡಬೇಕು ಎಂಬುದರ ಬಗ್ಗೆ ಅವನ ಅಭಿಪ್ರಾಯ ಕೇಳುತ್ತೇನೆ ಎಂದು ಪ್ರಾಣ ಸ್ನೇಹಿತ ಬಗ್ಗೆ ಹೇಳಿದ್ದಾರೆ ಸಾರಾ. ಬೇರೆ ಸಂಬಂಧಗಳಿಗಿಂತ ಸ್ನೇಹ ಸಂಬಂಧ ಹೆಚ್ಚು ಎನ್ನುವ ಸಾರಾ ಮತ್ತು ಈಟಾನ್ ಸ್ನೇಹಕ್ಕೆ ನಿಜಕ್ಕೂ ಬೆಲೆ ಕಟ್ಟಲಾಗದು. ಇಬ್ಬರ ಸ್ನೇಹ ಇನ್ನೂ ಹಾಗೆ ಇರಲಿ ಎಂಬುವುದು ನಮ್ಮ ಆಶಯ ಕೂಡ.
Published by:Ashwini Prabhu
First published: