ನಗರ ಭೌಗೋಳಿಕವಾಗಿ, ಪ್ರಾದೇಶಿಕವಾಗಿ ಸಾಕಷ್ಟು ವೈವಿಧ್ಯತೆ ಹೊಂದಿರುತ್ತದೆ. ಈ ವೈವಿಧ್ಯತೆಗೆ ಅನುಗುಣವಾಗಿ ಅಲ್ಲಿನ ಜನರು ಬದುಕುತ್ತಿರುತ್ತಾರೆ. ಆದರೆ ಎಲ್ಲ ವರ್ಗದವರು ಇರುವ ತಾಣದಲ್ಲಿ ಆಹಾರ (Food) ವಿಷಯದಲ್ಲಿ ನಿಷೇಧ ಹೇರಿದರೆ ಹೇಗಿರುತ್ತದೆ. ಆದರೆ ಇಲ್ಲಿನ ಜನ ಮಾಂಸಾಹಾರ ಬೇಡ ಸಸ್ಯಹಾರವನ್ನೇ ತಿನ್ನಬೇಕು ಎಂಬ ಆದೇಶವನ್ನು ಚಾಚುತಪ್ಪದೇ ಪಾಲಿಸುತ್ತಿದ್ದಾರೆ. ಸಾಮಾನ್ಯವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿ ಹೋಟೆಲ್‌ಗಳಿರುತ್ತವೆ. ಜನರ ಅಭಿರುಚಿಗೆ ಅನುಗುಣವಾಗಿ ಹೋಟೆಲ್‌ಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತದೆ. ಏಕೆಂದರೆ ಅಲ್ಲಿ ಎಲ್ಲ ರೀತಿಯ ಆಹಾರ ವರ್ಗದವರು ವಾಸಿಸುತ್ತಿರುತ್ತಾರೆ. ಆದ ಕಾರಣ ಸಸ್ಯಹಾರಿ (Vegetarian), ಮಾಂಸಾಹಾರಿ, ಈ ಎರಡು ಇರುವ ಹೋಟೆಲ್‌ಗಳು (Hotel) ಎಲ್ಲೆಡೆಯೂ ಕಾಣಸಿಗುತ್ತದೆ.
ಆದರೆ ಇಲ್ಲೊಂದೆಡೆ ಮಾಂಸಾಹಾರದ ಹೋಟೆಲ್‌ಗಳೇ ಇಲ್ಲ. ಆ ನಗರಕ್ಕೆ ನೀವು ಹೋದರೆ ಕೇವಲ ಸಸ್ಯಹಾರವನ್ನೇ ಸೇವಿಸಬೇಕಾಗುತ್ತದೆ. ಇಸ್ರೇಲಿನ ಟೆಲ್ ಅವಿವ್ ನಗರವನ್ನು ಪ್ರಪಂಚದ ಸಸ್ಯಹಾರಿ ರಾಜಧಾನಿ ಎಂದು ಕರೆಯಲಾಗುತ್ತದೆ. ಇಂತಹದ್ದೇ ಖ್ಯಾತಿ ಹೊಂದಿರುವ ನಗರ ನಮ್ಮ ಭಾರತದಲ್ಲಿಯೂ ಇದೆ.
ಪ್ರಪಂಚದಲ್ಲಿ ಇದೊಂದೇ ಸಸ್ಯಹಾರಿ ನಗರ!
ಹೌದು ಆ ನಗರವನ್ನು ಪ್ರಪಂಚದ ಮೊದಲ ಸಸ್ಯಹಾರಿ ನಗರ ಎಂದು ಕರೆಯಲಾಗುತ್ತಿದೆ. ಇದುವೇ ಗುಜರಾತಿನ ಪಾಲಿಟನ್. ಈ ನಗರದಲ್ಲಿ ಯಾವುದೇ ಮಾಂಸಾಹಾರಿ ಹೋಟೆಲ್‌ಗಳಿಲ್ಲ. ಇಲ್ಲಿ ನಿಮಗೆ ಸಿಗುವುದು ಮಾತ್ರ ಸಸ್ಯಹಾರ ಮಾತ್ರ. ಏಕೆಂದರೆ ಈ ನಗರದಲ್ಲಿ ಮಾಂಸ, ಮೊಟ್ಟೆ ಸೇರಿದಂತೆ ಪ್ರಾಣಿ ವಧೆ ಮಾಡುವ ಎಲ್ಲ ರೀತಿಯ ಆಹಾರಗಳ ಮೇಲೆ ನಿಷೇಧ ಹೇರಲಾಗಿದೆ.
ಇದು ಸಸ್ಯಹಾರಿ ನಗರವಾಗಿ ಮಾರ್ಪಾಡಾಗಿದ್ದು ಹೇಗೆ?
ಈ ನಿರ್ಣಯಕ್ಕೆ ಸುಮಾರು 8 ವರ್ಷಗಳ ಹಿಂದಿನ ಇತಿಹಾಸವಿದೆ. ಹೌದು ಇದು 2014ರ ಮೊದಲೇ ಸಂಪೂರ್ಣವಾಗಿ ಸಸ್ಯಹಾರಿ ನಗರವಾಗಿ ಮಾರ್ಪಾಟ್ಟಿತ್ತು. ಆ ವರ್ಷದಲ್ಲಿ, 200 ಜೈನ ಮುನಿಗಳು 250 ಮಾಂಸದ ಅಂಗಡಿಗಳನ್ನು ನಿಷೇಧಿಸಲು ಮತ್ತು ನಗರವನ್ನು ಮಾಂಸ-ಮುಕ್ತ ವಲಯವೆಂದು ಘೋಷಿಸಲು ಉಪವಾಸ ಸತ್ಯಾಗ್ರಹ ನಡೆಸಿದರು.
ಜೈನ ಧರ್ಮದ ಪವಿತ್ರ ಸ್ಥಳ
ಜೈನ ಧರ್ಮ ಅಹಿಂಸಾ ಧರ್ಮ, ಪ್ರಾಣಿ ವಧೆ ಹಿಂಸೆಯ ಪ್ರತೀಕ ಎಂದು ತಿಳಿದಿರುವ ಧರ್ಮ. ಪಾಲಿಟಾನ್ ನಗರು ಜೈನ ಧರ್ಮದ ಪವಿತ್ರ ಸ್ಥಳವೆಂದು ಪ್ರಖ್ಯಾತಿ ಹೊಂದಿದೆ. ಜೈನ ಧರ್ಮೀಯರ ಪೂಜನೀಯ ಸ್ಥಳವಾಗಿಯೂ ಮಾರ್ಪಟ್ಟಿದೆ. ಜೊತೆಗೆ ಇದು ನೂರಾರು ದೇವಾಲಯಗಳ ತಾಣ. ಜೈನ ಧರ್ಮದ ಆದಿನಾಥ ತೀರ್ಥಂಕರರು ಪಾಲಿಟಾನ್ ನಗರದ ಬೆಟ್ಟಗಳ ಮೇಲೆ ಓಡಾಡಿದ್ದಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಅವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬಾರದೆಂಬ ಕಾರಣಕ್ಕೆ, ಅಲ್ಲಿನ ಜನರ ಬೇಡಿಕೆಗೆ ಅನುಸಾರವಾಗಿ ಇಡೀ ನಗರದಲ್ಲಿ ಮಾಂಸಾಹಾರದ ಮೇಲೆ ನಿಷೇಧ ಹೇರಿ ಸಸ್ಯಹಾರ ನಗರವೆಂದು ಘೋಷಿಸಿತು.
ಮಾಂಸ ಮಾರಾಟ ಮಾಡುವಂತಿಲ್ಲ
ನಗರದಲ್ಲಿ ಯಾವುದೇ ಮಾಂಸ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡಲಾಗುವುದಿಲ್ಲ ಅಥವಾ ಸೇವಿಸುವುದಿಲ್ಲ, ಹಾಲು, ತುಪ್ಪ ಮತ್ತು ಬೆಣ್ಣೆಯಂತಹ ಡೈರಿ ಉತ್ಪನ್ನಗಳು ಮಾರಾಟ ಮತ್ತು ಸೇವಿಸುವುದಕ್ಕೆ ಮಾತ್ರ ಅವಕಾಶವಿದೆ ಎಂದು ಹೇಳಿತು. ಅಂದಿನಿAದ ಇಂದಿನವರೆಗೂ ಪಾಲಿಟಾನ್ ಸಸ್ಯಹಾರಿ ನಗರವಾಗಿ ಮುಂದುವರೆದಿರುವುದು ನಿಜಕ್ಕೂ ಸೋಜಿಗದ ಸಂಗತಿ.
ದೇವಾಲಯಗಳ ಬೆಟ್ಟ
ಪಾಲಿಟಾನ್ ನಗರ ಆಧ್ಯಾತ್ಮಿಕತೆಯ ತವರೂರು. ನಗರವು ಸುಮಾರು 900ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿರುವ ವಿಶ್ವದ ಏಕೈಕ ಪರ್ವತವನ್ನು ಹೊಂದಿದೆ. ಇದು ಜೈನ ಧರ್ಮೀಯರ ಪವಿತ್ರ ಯಾತ್ರಾ ಸ್ಥಳವೂ ಕೂಡ ಹೌದು. ಅಲ್ಲದೇ ಅಧಿಕ ದೇವಾಲಯಗಳನ್ನು ಹೊಂದಿರುವ ಸಂಕೀರ್ಣವೂ ಹೌದು. ಈ ಪಾಲಿಟಾನ್ ಬೆಟ್ಟವನ್ನು ಏರಲು, ಬೆಟ್ಟದ ಮೇಲಿರುವ ದೇವಾಲಯಗಳನ್ನು ವೀಕ್ಷಣೆ ಮಾಡಲು ಸರಿಸುಮಾರು ಒಂದೆರಡು ಗಂಟೆಗಳ ಕಾಲ ನಡೆಯಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ