Video: ವಿಶ್ವದ ವಿಷಕಾರಿ ಪಕ್ಷಿ ಇದು! ಭಾರತದಲ್ಲಿದೆಯಾ ಈ ಡೇಂಜರಸ್​ ಹಕ್ಕಿ?

1190ರಲ್ಲಿ ಪಕ್ಷಿಶಾಸ್ತ್ರಜ್ಞ ಜ್ಯಾಕ್​​​ ಡಂಬಾಚರ್​​ ಪೆಸಿಫಿಕ್​​ ದ್ವೀಪದಲ್ಲಿ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಅದಕ್ಕಾಗಿ ಕಾಡುಗಳನ್ನು ಸುತ್ತುತ್ತಿದ್ದರು. ಮರಗಳನ್ನು ಏರಿ ಹಕ್ಕಿಗಳ ಚಲನ-ವಲನಗಳನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು.

ಹೂಡೆಡ್​​ ಪಿಟೊಹುಯಿ

ಹೂಡೆಡ್​​ ಪಿಟೊಹುಯಿ

  • Share this:
    ವಿಷಕಾರಿ ಹಾವಿನ ಬಗ್ಗೆ ಕೇಳಿರುತ್ತೀರಾ, ವಿಷಕಾರಿ ಜೇಡ, ವಿಷಕಾರಿ ಕಪ್ಪೆ ಬಗ್ಗೆಯೂ ಕೇಳಿರುತ್ತೀರಾ. ಆದರೆ, ವಿಷಕಾರಿ ಹಕ್ಕಿಯ (poisonous bird ) ಬಗ್ಗೆ ನೀವೂ ಕೇಳಿದ್ದೀರಾ? ಖಂಡಿತಾವಾಗಿಯೂ ಕೇಳಿರಲು ಸಾಧ್ಯವಿಲ್ಲ. ಆದರೆ ಸಂಶೋಧಕರ ತಂಡವೊಂದು ವಿಷಕಾರಿ ಪಕ್ಷಿಯೊಂದರ ಬಗ್ಗೆ ಅಧ್ಯಯನ ನಡೆಸಿ ನಿಜಾಂಶ ಹೊರಹಾಕಿದೆ. ಅಂದಹಾಗೆಯೇ, ಈ ವಿಷಕಾರಿ ಹಕ್ಕಿಯ ಹೆಸರು ಹೂಡೆಡ್​​ ಪಿಟೊಹುಯಿ (hooded pitohui). ಇದು ಪುಪುವಾ ನ್ಯೂ ಜಿನಿಯಾ (Papua New Guinea) ಪ್ರದೇಶದಲ್ಲಿ ಕಂಡುಬಂದಿರುವ ಪಕ್ಷಿಯಾಗಿದೆ. ಅಂದಹಾಗೆಯೇ ಇದು ವಿಶ್ವದ ಮತ್ತು ವೈಜ್ಞಾನಿಕವಾಗಿ ಪತ್ತೆಹಚ್ಚಲಾದ ವಿಷಕಾರಿ ಹಕ್ಕಿ ಎಂದು ತಿಳಿದುಬಂದಿದೆ.

    ಓಷ್ಯಾನಿಯಾ ಖಂಡದಲ್ಲಿ ಪುಪುವಾ ನ್ಯೂ ಜಿನಿಯಾ ಕಂಡುಬರುತ್ತದೆ. ಇಲ್ಲಿನ ಕಾಡುಗಳಲ್ಲಿ ಹೂಡೆಡ್​​ ಪಿಟೊಹುಯಿ ಹಕ್ಕಿ ಕಾಣಸಿಗುತ್ತದೆ. ಅಂದಹಾಗೆಯೇ, ವಿಷಕಾರಿ ಪಕ್ಷಿಗಳ ಬಗ್ಗೆ ಮೂರು ದಶಕಗಳ ಹಿಂದೆಯೇ ಕಂಡುಹಿಡಿಯಲಾಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಇದು ಆಕಸ್ಮಿಕವಾಗಿ ಬೆಳಕಿಗೆ ಬಂದಿದೆ.

    1190ರಲ್ಲಿ ಪಕ್ಷಿಶಾಸ್ತ್ರಜ್ಞ ಜ್ಯಾಕ್​​​ ಡಂಬಾಚರ್​​ ಪೆಸಿಫಿಕ್​​ ದ್ವೀಪದಲ್ಲಿ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಅದಕ್ಕಾಗಿ ಕಾಡುಗಳನ್ನು ಸುತ್ತುತ್ತಿದ್ದರು. ಮರಗಳನ್ನು ಏರಿ ಹಕ್ಕಿಗಳ ಚಲನ-ವಲನಗಳನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅವುಗಳನ್ನು ಹಿಡಿಯಲು ಮರಗಳ ನಡುವೆ ಸೂಕ್ಷ್ಮವಾದ ಬಲೆಯನ್ನು ಹಾಕುತ್ತಿದ್ದರು. ಈ ವೇಳೆ ಹೂಡೆಡ್​​ ಪಿಟೊಹುಯಿ ಪಕ್ಷಿ ಅವರ ಬಲೆಗೆ ಸಿಕ್ಕಿದೆ.

    ಜ್ಯಾಕ್​​​ ಡಂಬಾಚರ್ ಬಲೆಯಲ್ಲಿ ಸಿಕ್ಕಿದ ಹಕ್ಕಿಯನ್ನು ಬಿಡಿಸಲು ಮುಂದಾದಾಗ ಆ ಹಕ್ಕಿ ಅವರ ಕೈಬೆರಳಿನ ಮೇಲೆ ಕಚ್ಚಿತು. ರಕ್ತವು ಬರಲಾರಂಭಿಸಿತು. ಈ ವೇಳೆ ರಕ್ತ ಹೋರಹೋಗದಂತೆ ತಡೆಯಲು ಜ್ಯಾಕ್​​​ ಡಂಬಾಚರ್ ಅವರು ತನ್ನ ಕೈಬೆರಳುಗಳನ್ನು ಬಾಯಿಯ ಒಳಕ್ಕೆ ಹಾಕಿದರು. ಮರಗಟ್ಟುವಿಕೆಯನ್ನು ತಡೆಯಲು ಮತ್ತು ನೋವು ಮರುಕಳಿಸದಂತೆ ಮಾಡಲು ಹೀಗೆ ಮಾಡಿದರು. ಬಳಿಕ ಜ್ಯಾಕ್​ ಡಂಬಾಚರ್​ಗೆ​ ಇದೊಂದು ವಿಷಕಾರಿ ಪಕ್ಷಿ ಎಂಬುದು ತಿಳಿಯಿತು.

    ಇದನ್ನೂ ಓದಿ: Video: ಕೈಚಲಕದಿಂದ ಕಾಳಿಂಗ ಸರ್ಪವನ್ನು ಹಿಡಿದ ವ್ಯಕ್ತಿ! ದೃಶ್ಯ ನೋಡಿದ್ರೆ ಮೈ ಜುಂ ಅನ್ನುತ್ತೆ

    ವಿಕಿಪೀಡಿಯಾದ ವರದಿ ಪ್ರಕಾರ, ಪಪುವಾ ನ್ಯೂಜಿನಿಯಾದ ಜನರಿಗೆ ಇದೊಂದು ವಿಷಕಾರಿ ಹಕ್ಕಿ ಎಂದು ಮೊದಲೇ ತಿಳಿದಿತ್ತು. ಅಲ್ಲಿನ ಜನರು ಇದನ್ನು ‘‘ಕಸ ಪಕ್ಷಿ’’ ಎಂದು ಕರೆಯುತ್ತಿದ್ದರು. ಮಾತ್ರವಲ್ಲದೆ, ಇದನ್ನು ಆಹಾರಕ್ಕಾಗಿ ಹಿಡಿದು ಬೇಯಿಸಿದಾಗ ಅಹಿತಕರವಾದ ವಾಸನೆ ಬರುತ್ತದೆ. ಹಾಗಾಗಿ ಈ ಪಕ್ಷಿಯಲ್ಲಿನ ವಿಷಕಾರಿ ಅಂಶದ ಬಗ್ಗೆ ಅವರಿಗೆ ಗೊತ್ತಿತ್ತು.



    ಇದನ್ನೂ ಓದಿ: Halwa: ಹಲ್ವಾ ತಿನ್ನುವಾಗ ಹುಷಾರ್! ಆಸೆಯಿಂದ ತಿಂದ ಸ್ವೀಟ್ ಪ್ರಾಣವನ್ನೇ ತೆಗೆಯಿತು!

    ಜ್ಯಾಕ್​​​ ಡಂಬಾಚರ್ ಈ ಪಕ್ಷಯ ಬಗ್ಗೆ ಅಧ್ಯಯನನವನ್ನು ನಿಲ್ಲಿಸಿಲ್ಲ. ಪಕ್ಷಿಯ ಗರಿಯನ್ನು ಹಿಡಿದುಕೊಂಡು ಅಧ್ಯಯನ ಮಾಡಲು ಮುಂದಾದರು. ಅದರಕ್ಕಾಗಿ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಜಾನ್ ಡಬ್ಲ್ಯೂ ಡಾಲಿಗೆ ಕೆಲವು ಗರಿಗಳನ್ನು ಕಳುಹಿಸಿದರು, 1960 ರ ದಶಕದಲ್ಲಿ, ಅವರು ಕೊಲಂಬಿಯಾದ ವಿಷದ ಡಾರ್ಟ್ ಕಪ್ಪೆಗಳಲ್ಲಿ ಬ್ಯಾಟ್ರಾಚೋಟಾಕ್ಸಿನ್ ಅನ್ನು ಟಾಕ್ಸಿನ್ ಎಂದು ಗುರುತಿಸಿದರು. ಪಿಟೊಹುಯಿ ಪಕ್ಷಿಯ ಗರಿಗಳಲ್ಲಿ ಅದೇ ವಿಷವನ್ನು ಕಂಡುಕೊಂಡರು.



    ಅಂದಹಾಗೆಯೇ, ಹೂಡೆಡ್​​ ಪಿಟೊಹುಯಿ ಹಕ್ಕಿಯು ಚರ್ಮ ಮತ್ತು ಗರಿಗಳ ಮೇಲಿನ ವಿಷವನ್ನು ಒಳಗೊಂಡಿದೆಯಂತೆ. ಇದು ರಕ್ಷಣೆಯ ಸಮಯದಲ್ಲಿ ಬಳಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.
    Published by:Harshith AS
    First published: