ಆಡುಗೆ ಮಾಡುವಾಗ ಈರುಳ್ಳಿ (Onion) ಬಳಸುತ್ತೇವೆ. ಅದರಲ್ಲೂ ಮಾಂಸಾಹಾರದ (Non-Veg) ಅಡುಗೆಗೆ ಈರುಳ್ಳಿ ಬೇಕೇ ಬೇಕು. ಹಾಗಂತ ತರಕಾರಿ (Veg) ಉಪಯೋಗಿಸಿ ಮಾಡುವ ಸಾಂಬರಿಗೆ ಈರುಳ್ಳಿ ಹಾಕುವುದಿಲ್ಲವಂತಲ್ಲ. ಭಾರತದಲ್ಲಂತೂ ಈರುಳ್ಳಿ ಬಳಸದೇ ಅಡುಗೆ ಮಾಡುವುದು ಕಡಿಮೆ. ಅದರಲ್ಲೂ ಕೆಲವರು ನೀರುಳ್ಳಿ ಹಾಕದೇ ಅಡುಗೆ ಮಾಡುವವರಿದ್ದಾರೆ. ಈರುಳ್ಳಿ ಕತ್ತರಿಸಲು ಬಹುತೇಕ ಅಡುಗೆ ಭಟ್ಟರು ಹಿಂದೇ ಸರಿಯುತ್ತಾರೆ. ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು (Tears) ತಾನಾಗಿಯೇ ಬರುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿನ ಹೆಣ್ಣು ಮಕ್ಕಳು (Females) ಈರುಳ್ಳಿ ಕತ್ತರಿಸುವುದಿದ್ದರೆ ಅದನ್ನು ಗಂಡು ಮಕ್ಕಳಲ್ಲಿ (Males) ಮಾಡಿಸುತ್ತಾರೆ. ಆದರೀಗ ಅಚ್ಚರಿ ವಿವಾರವೆಂದರೆ ಮಾರುಕಟ್ಟೆಗೆ ಹೊಸ ತಳಿಯ ಈರುಳ್ಳಿ ಬಂದಿದೆ. ಇದನ್ನು ಕತ್ತರಿಸಿದಾಗ ಕಣ್ಣೀರು ಬರುವುದಿಲ್ಲವಂತೆ. ಇದು ಸಿಹಿ ನೀರುಳ್ಳಿಯಾಗಿದೆ.
ಯುನೈಟೆಡ್ ಕಿಂಗ್ಡಂನಲ್ಲಿ ಸಿಹಿ ಈರುಳ್ಳಿ ಮಾರಾಟಕ್ಕೆ ಸಿದ್ಧವಾಗಿದೆ. ವೈಟ್ರೋಸ್ ಸೂಪರ್ ಮಾರ್ಕೆಟ್ನಲ್ಲಿ ಈ ಈರುಳ್ಳಿಯನ್ನು Sunions® ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ.
ಅಂದಹಾಗೆಯೇ Sunions® ಈರುಳ್ಳಿಯನ್ನು ಅಮೆರಿಕದಲ್ಲಿ ಬೆಳೆಯಲಾಗುತ್ತದೆ. ಇದು ಸಿಹಿ ಈರುಳ್ಳಿಯಾಗಿದೆ. ಕಣ್ಣಿನ ಬಗ್ಗೆ ಹೆಚಚು ಜಾಗೃತೆ ಮಾಡುವವರು, ಈರುಳ್ಳಿ ಎಂದರೆ ಹಿಂದೆ ಸರಿಯುವ ಹೆಂಗಸರಿಗೆ ಈ ಈರುಳ್ಳಿ ಸೂಕ್ತವಾಗಿದೆ.
ಮಾಹಿತಿಯಂತೆಯೇ, ಈ ಈರುಳ್ಳಿ ಸೌಮ್ಯವಾದ ರುಚಿಯನ್ನು ಹೊಂದಿದೆ. ಎಲ್ಲಾ ಅಡುಗೆಗಳಿಗೂ ಬಳಸಬಹುದಾಗಿದೆ. ಮಾತ್ರವಲ್ಲದೆ ಅಡುಗೆ ಜೊತೆಗೆ ಸಲಾಡ್ಗೂ ಬಳಸಬಹುದು.
ಜನವರಿ 18 ರಿಂದ ಮಾರಾಟ ಪ್ರಾರಂಭವಾಗಲಿದೆ
ಈರುಳ್ಳಿ ಖರೀದಿದಾರ ಪೌಲ್ ಬಿಡ್ವೆಲ್ ಅವರು ಜನವರಿ 18 ರಿಂದ ಸನ್ನಿಯನ್ಸ್ ವೈಟ್ರೋಸ್ನ ಆಯ್ದ ಮಳಿಗೆಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಇದನ್ನು Waitrose.com ಮೂಲಕವೂ ಮಾರಾಟ ನಡೆಸಲಾಗುವುದು ಎಂದಿದ್ದಾರೆ. ಕತ್ತರಿಸುವಾಗ ಕಣ್ಣೀರು ಬರುವ ಈರುಳ್ಳಿಗಿಂತ ಈ Sunions® ಈರುಳ್ಳಿ ಗ್ರಾಹಕರಿಗೆ ಸಾಕಷ್ಟು ನೆರವಾಗಲಿದೆ.
Sunions® ಹೆಸರಿನ ಹೊಸ ಈರುಳ್ಳಿಯನ್ನು ಜೆನೆಟಿಕ್ ಮಾರ್ಪಾಡು ಮಾಡಿ ತಯಾರಿಸಲಾಗಿಲ್ಲ. ಕಡಿಮೆ ಕಟುವಾದ ಈರುಳ್ಳಿಗಳ ಅಡ್ಡ-ಸಂತಾನೋತ್ಪತ್ತಿಯಿಂದ ಇದನ್ನು ತಯಾರಿಸಲಾಗಿದೆ.
ಇದನ್ನು ಓದಿ: Fathers Album: ತಂದೆಯ ಅಗಲಿಕೆ ನಂತರ ಅವರ ಛಾಯಾಚಿತ್ರ ಕೌಶಲ್ಯ ನೋಡಿ ಮಂತ್ರಮುಗ್ಧಳಾದ ಮಗಳು..!
ಅಂದಹಾಗೆಯೇ ಈರುಳ್ಳಿಯಿಂದ ಬರುವ ಕಣ್ಣೀರಿನ ಬಗ್ಗೆ 2017 ರಲ್ಲಿ ಅಧ್ಯಯನವನ್ನು ಮಾಡಲಾಗಿದೆ. ಈ ಮೂಲಕ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಲು ಸಲ್ಫೆನಿಕ್ ಆಸಿಡ್ ರಚನೆಯಾಗಿದ್ದು, ಇದರಿಂದ ಕಣ್ಣಿನಲ್ಲಿ ಕಿರಿಕಿರಿ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ತಾಂತ್ರಿಕವಾಗಿ ಹೇಳುವುದಾದರೆ, ಈರುಳ್ಳಿಯು ಸಿನ್-ಪ್ರೊಪನೆಥೈಲ್-ಎಸ್-ಆಕ್ಸೈಡ್ ಎಂಬ ರಾಸಾಯನಿಕ ಉದ್ರೇಕಕಾರಿಯನ್ನು ಉತ್ಪಾದಿಸುತ್ತದೆ, ಇದು ಕಣ್ಣಿನಲ್ಲಿರುವ ಲ್ಯಾಕ್ರಿಮಲ್ ಗ್ರಂಥಿಗಳು ಕಣ್ಣೀರನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಹಾಗಾಗಿ ಈ ರಾಸಾಯನಿಕವು ಕಣ್ಣುಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ,
ಆದರೆ ಈರುಳ್ಳಿ ಕತ್ತರಿಸುವಾ್ ಬರುವ ಕಣ್ಣೀರು ಯಾವುದೇ ಶಾಶ್ವತ ಹಾನಿಯನ್ನು ಉಂಟುಮಾಡುವುದಿಲ್ಲ. ಮಾತ್ರವಲ್ಲದೆ, ಸನ್ಯಾನ್ಗಳು ಲ್ಯಾಕ್ರಿಮೇಟರಿ-ಫ್ಯಾಕ್ಟರ್ ಸಿಂಥೇಸ್ ಅನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುವುದಿಲ್ಲ.
ಇದನ್ನು ಓದಿ: Conversion Therapy: ಲಿಂಗ ಪರಿವರ್ತನೆ ನಿಷೇಧಿಸಿದ ಕೆನಡಾ! ಪರಿವರ್ತನೆ ಮಾಡಿ ಸಿಕ್ಕಿಬಿದ್ರೆ ಶಿಕ್ಷೆ ಏನು ಗೊತ್ತಾ?
Sunions® ಈರುಳ್ಳಿ ಬೆಳೆಯಲು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಉತ್ಪನ್ನದ ವೆಬ್ಸೈಟ್ ಹೇಳುತ್ತದೆ. ಅದರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಯಿತು. ಅದೇ ಸಮಯದಲ್ಲಿ, ಎಚ್ಚರಿಕೆಯಿಂದ ಕೃಷಿ ಮತ್ತು ಶ್ರಮದಾಯಕ ಕೆಲಸವನ್ನೂ ಮಾಡಲಾಯಿತು. ಇದರ ಪರಿಣಾಮವಾಗಿ ಇಂದು ಮಾರುಕಟ್ಟೆಗೆ ಕತ್ತರಿಸುವಾಗ ಕಣ್ಣೀರು ಬರದ ಈರುಳ್ಳಿ ಮಾರುಕಟ್ಟೆಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ