Viral Video: ಆನೆಯ ಜೊತೆ ತುಂಟಾಟ ಮಾಡುವ ಅಸ್ಸಾಂನ ಪೋರಿ

Toddler Girl Drinks Milk from Elephant: ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ. ಇಲ್ಲಿ ಮೂರು ವರ್ಷದ ಅಸ್ಸಾಂ ಹೆಣ್ಣು ಮಗುವೊಂದು ಅವರ ಮನೆಯಲ್ಲಿ ಈ ಆನೆಯ ಜೊತೆಯಲ್ಲಿ ಫುಟ್ಬಾಲ್ ಆಟ ಆಡುವುದರ ಜೊತೆಗೆ ಏನೆಲ್ಲಾ ಮಾಡುತ್ತಾಳೆ ನೋಡಿ.

ವಿಡಿಯೋದ ದೃಶ್ಯ

ವಿಡಿಯೋದ ದೃಶ್ಯ

  • Share this:
ನಾವೆಲ್ಲರೂ ಸಾಮಾನ್ಯವಾಗಿ ಸರ್ಕಸ್‌ನಲ್ಲಿ (circus) ಆನೆಗಳು (Elephant) ಫುಟ್ಬಾಲ್ ಮತ್ತು ಕ್ರಿಕೆಟ್ (Cricket) ಆಟ ಆಡುವುದನ್ನು ನೋಡಿ ತುಂಬಾನೇ ಖುಷಿ ಪಟ್ಟಿರುತ್ತವೆ ಅಲ್ಲವೇ..? ಹೀಗೆ ಆನೆಗಳು ನೋಡಲು ದೈತ್ಯವಾದ ಪ್ರಾಣಿಯಾದರೂ ಸಹ ಮಕ್ಕಳನ್ನು (Kids) ಕಂಡಾಗ ಚಿಕ್ಕ ಮಗುವಂತೆ ಅವರ ಜೊತೆಗೆ ಆಟವಾಡುವ ಮೂಲಕ ನಮ್ಮನ್ನು ರಂಜಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಇಂತಹ ಆನೆಯ ಜೊತೆಗೆ ಮಕ್ಕಳು ಆಟವಾಡುವ ಅನೇಕ ವಿಡಿಯೋ (Video)  ತುಣುಕುಗಳನ್ನು ನಾವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ (social Media) ನೋಡಿರುತ್ತೇವೆ.

ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ. ಇಲ್ಲಿ ಮೂರು ವರ್ಷದ ಅಸ್ಸಾಂ ಹೆಣ್ಣು ಮಗುವೊಂದು ಅವರ ಮನೆಯಲ್ಲಿ ಈ ಆನೆಯ ಜೊತೆಯಲ್ಲಿ ಫುಟ್ಬಾಲ್ ಆಟ ಆಡುವುದರ ಜೊತೆಗೆ ಏನೆಲ್ಲಾ ಮಾಡುತ್ತಾಳೆ ನೋಡಿ.

ಮಕ್ಕಳು ಸಾಮಾನ್ಯವಾಗಿ ಹಸುಗಳು, ಆಡುಗಳು ಮತ್ತು ಎಮ್ಮೆಗಳಂತಹ ಸಾಕು ಪ್ರಾಣಿಗಳ ಹಾಲನ್ನು ಸೇವಿಸುತ್ತಾರೆ. ಆದರೆ ಈ ಅಸ್ಸಾಂನ ಮೂರು ವರ್ಷದ ಹೆಣ್ಣು ಮಗು ಗೊಲಾಘಾಟ್ ಜಿಲ್ಲೆಯಲ್ಲಿ ತನ್ನ ಮನೆಯಲ್ಲಿರುವ ಆನೆಯ ಹಾಲು ಕುಡಿಯುತ್ತಾಳೆ, ಇದು ಪ್ರಾಣಿ ಮತ್ತು ಮಾನವನ ನಡುವಿನ ಪ್ರೀತಿಯ ಅದ್ಭುತ ಬಂಧಕ್ಕೆ ಒಂದು ಉದಾಹರಣೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆದ ವಿಡಿಯೋದಲ್ಲಿ ಆ ಪುಟ್ಟ ಹೆಣ್ಣು ಮಗು ಹರ್ಷಿತಾ ಬೋರಾ ಆನೆಯ ಜೊತೆ ಮೊದಲಿಗೆ ಫುಟ್ಬಾಲ್ ಆಟವನ್ನು ಆಡುವುದರ ಮೂಲಕ ಸಮಯ ಕಳೆಯುತ್ತಿದ್ದಾಳೆ ಮತ್ತು ಅನಂತರ ಆನೆಯ ಕಾಲುಗಳ ಮಧ್ಯೆ ಹೋಗಿ ನಿಂತು ಆ ಆನೆಯ ಹಾಲನ್ನು ಕುಡಿಯಲು ಪ್ರಯತ್ನಿಸುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ:Gas Stoveಗಳಿಂದ ಹೆಚ್ಚಾಗ್ತಿದೆಯಂತೆ ಜಾಗತಿಕ ತಾಪಮಾನ -ಅಧ್ಯಯನದಲ್ಲಿ ಬಹಿರಂಗ

ಆ ಪುಟ್ಟ ಹುಡುಗಿಯ ಹಿರಿಯ ಸಹೋದರಿ ಮತ್ತು ಅವಳ ಇತರ ಕುಟುಂಬ ಸದಸ್ಯರು ಈ ಘಟನೆಗಳನ್ನು ಕಣ್ಣಾರೆ ನೋಡುತ್ತಾ ಮತ್ತು ಆ ಪುಟ್ಟ ಹುಡುಗಿಯನ್ನು ಆನೆಯ ಜೊತೆಗೆ ಚೆನ್ನಾಗಿ ಆಟವಾಡಲು ಪ್ರೋತ್ಸಾಹಿಸುತ್ತಿರುವುದನ್ನು ಈ ವೈರಲ್ ಆದ ವಿಡಿಯೋದಲ್ಲಿ ನಾವು ನೋಡಬಹುದಾಗಿದೆ. ನೆರೆ ಹೊರೆಯವರ ಪ್ರಕಾರ, ಹರ್ಷಿತ ಆನೆಯನ್ನು 'ಬಿನು' ಎಂದು ಕರೆಯುತ್ತಾಳೆ ಮತ್ತು ಬಿನುಗೆ ಬಾಳೆಹಣ್ಣು ತಿನ್ನುವುದು ಎಂದರೆ ತುಂಬಾನೇ ಇಷ್ಟವಂತೆ. ಇವಳು ಆಗಾಗ್ಗೆ ತನ್ನ ಬಿಡುವಿನ ಸಮಯವನ್ನು ಅದರೊಂದಿಗೆ ಆಟ ಆಡುತ್ತಾ ಕಳೆಯುತ್ತಾಳೆ ಎಂದು ಹೇಳಿದರು.

ಈ ಮೂರು ನಿಮಿಷದ ವೈರಲ್ ವಿಡಿಯೋದಲ್ಲಿ ಆ ಪುಟ್ಟ ಬಾಲಕಿ ತನ್ನ ಮನೆಯಲ್ಲಿರುವ ಆನೆಯನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದು ಅದರ ಸುತ್ತಮುತ್ತಲೂ ಅಡ್ಡಾಡುತ್ತಾ ಆನೆಯ ಮೇಲೆ ಮುನಿಸಿಕೊಳ್ಳುತ್ತಾ ಇರುವುದನ್ನು ನೋಡಬಹುದಾಗಿದೆ.

ಈ ವಿಡಿಯೋದಲ್ಲಿ ಇನ್ನು ಅನೇಕ ಹೃದಯಸ್ಪರ್ಶಿ ದೃಶ್ಯಗಳನ್ನು ನಾವು ನೋಡಬಹುದಾಗಿದೆ. ಈ ಪುಟ್ಟ ಹುಡುಗಿ ದೈತ್ಯ ಆನೆಯ ಸುತ್ತಲೂ ಆಟವಾಡುತ್ತಾ, ಅದರ ಸೊಂಡಿಲನ್ನು ತಬ್ಬಿಕೊಂಡು ಚುಂಬಿಸುತ್ತಿದ್ದಳು. ಆನೆಯು ತನ್ನ ಸೊಂಡಿಲನ್ನು ಅವಳ ಮೇಲೆ ತೂಗುವ ಮೂಲಕ ಮಗುವಿನ ಜೊತೆ ಆಟವಾಡುವುದನ್ನು ಇದರಲ್ಲಿ ನೋಡಬಹುದಾಗಿದೆ.

ಇಂತಹ ದೈತ್ಯ ಪ್ರಾಣಿಗಳು ಕಾಡುಗಳು, ಹೊಲಗಳು ಮತ್ತು ಚಹಾ ತೋಟಗಳಲ್ಲಿ ತಿರುಗಾಡುತ್ತಾ ಎಲ್ಲವನ್ನೂ ಛಿದ್ರಗೊಳಿಸಿದಾಗ ಮಾನವ ಮತ್ತು ಆನೆಯ ನಡುವೆ ಸಂಘರ್ಷ ಹೆಚ್ಚುತ್ತಿರುವ ಸಮಯದಲ್ಲಿ ಇಂತಹ ಅಪರೂಪದ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋಗಳು ಹೊರ ಬಂದಿದೆ ಎಂದು ಹೇಳಬಹುದು.

ಇದನ್ನೂ ಓದಿ: ಬಾಯಿ ಇದ್ರೂ ಸಹ ಬಾಯಿಯಿಂದ ನೀರು ಕುಡಿಯಲ್ಲ! ಈ ಜೀವಿ ಬಗ್ಗೆ ಗೊತ್ತಾ?

ಅಧಿಕೃತ ದಾಖಲೆಯ ಪ್ರಕಾರ, 2021ರಲ್ಲಿ ಆನೆಗಳ ದಾಳಿಯಿಂದ 100ಕ್ಕೂ ಹೆಚ್ಚು ಜನರು ಸತ್ತರೆ, ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ವಿದ್ಯುದಾಘಾತ, ವಿಷ ಆಹಾರ ಸೇವನೆ, ವೇಗವಾಗಿ ಚಲಿಸುವ ರೈಲಿಗೆ ಡಿಕ್ಕಿ ಹೊಡೆಯುವುದು ಮತ್ತು ಕೊಳಗಳು ಮತ್ತು ಕಂದಕಗಳಲ್ಲಿ ಧುಮುಕುವುದು ಅಥವಾ ಗುಡುಗು ಮಿಂಚಿಗೆ ಮತ್ತು ಆಕಸ್ಮಿಕ ಸಾವುಗಳು ಸೇರಿದಂತೆ ಹೀಗೆ ಅನೇಕ ಕಾರಣಗಳಿಂದಾಗಿ 71 ಆನೆಗಳು ಸತ್ತಿವೆ ಎಂದು ಹೇಳಲಾಗುತ್ತಿದೆ.
Published by:Sandhya M
First published: